ʼಬಿಜೆಪಿಗೆ ಕಾರ್ಯಕರ್ತರೆಂದರೆ ಹರಕೆಯ ಕುರಿಗಳುʼ : ಕಮಲಪಾಳಯದ ವಿರುದ್ಧ ʼಕೈʼ ಕಿಡಿ
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಬಳಿಕವೂ ಕಾಂಗ್ರೆಸ್ ಕಮಲಪಾಳಯದ ವಿರುದ್ಧ ವಾಕ್ ಸಮರ ಸಾರಿದ್ದು, ಕರಾವಳಿ ಭಾಗದಲ್ಲಿ ಕೊಲೆಯಾದ ಬಿಜೆಪಿಯದ್ದೇ ಕಾರ್ಯಕರ್ತನ ಮನೆಗೆ ಮೋದಿ ಭೇಟಿ ನೀಡಲಿಲ್ಲ ಎಂದು ಟೀಕೆ ಮಾಡಿದೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಬಳಿಕವೂ ಕಾಂಗ್ರೆಸ್ ಕಮಲಪಾಳಯದ ವಿರುದ್ಧ ವಾಕ್ ಸಮರ ಸಾರಿದ್ದು, ಕರಾವಳಿ ಭಾಗದಲ್ಲಿ ಕೊಲೆಯಾದ ಬಿಜೆಪಿಯದ್ದೇ ಕಾರ್ಯಕರ್ತನ ಮನೆಗೆ ಮೋದಿ ಭೇಟಿ ನೀಡಲಿಲ್ಲ ಎಂದು ಟೀಕೆ ಮಾಡಿದೆ.
ಈ ಕುರಿತು ಟ್ಟೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಕೆಲವೇ ದಿನಗಳ ಹಿಂದೆ ಕರಾವಳಿ ಭಾಗದಲ್ಲಿ ಬಿಜೆಪಿಯದ್ದೇ ಕಾರ್ಯಕರ್ತನ ಕೊಲೆಯಾಗಿತ್ತು, ಪ್ರಧಾನಿ ಆತನ ಸಾವಿನ ಬಗ್ಗೆ, ಕಾನೂನು ಅವ್ಯವಸ್ಥೆಯ ಬಗ್ಗೆ ಮಾತೇ ಆಡಲಿಲ್ಲ. ಜನ ಸೇರಿಸಲು ಸಕಲ ಪ್ರಯತ್ನ ಮಾಡಿದ ರಾಜ್ಯ ಬಿಜೆಪಿಗರಿಗೆ ಆತನ ಕುಟುಂಬಸ್ಥರಿಗೆ ಮಾತ್ರ ಪ್ರಧಾನಿ ಭೇಟಿ ಮಾಡಿಸಲಿಲ್ಲ. ಬಿಜೆಪಿಗೆ ಕಾರ್ಯಕರ್ತರೆಂದರೆ ಬಲಿ ಕೊಡುವ ಹರಕೆಯ ಕುರಿಗಳು ಎಂದು ದೂರಿದೆ.
2022-23ನೇ ಸಾಲಿನ 'ಉತ್ತಮ ಶಿಕ್ಷಕ ಪ್ರಶಸ್ತಿ' ಪ್ರಕಟ
ಇನ್ನು ನಿನ್ನೆ ರಾಜ್ಯಕ್ಕೆ ಬೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಬಿಜೆಪಿ ಕಾರ್ಯಕರ್ತರ ಹತ್ಯೆ ಕುರಿತು ಮಾತು ಅಥವಾ ಅವರ ಕುಟುಂಬಸ್ಥರ ಭೇಟಿ ಮಾಡುವ ಯಾವುದೇ ಕೆಲಸ ಮಾಡಿರಲಿಲ್ಲ. ಸದ್ಯ ಇದನ್ನೇ ಗುರಿಯಾಗಿಸಿಕೊಂಡಿರುವ ಕೆಪಿಸಿಸಿ ರಾಜ್ಯ ಬಿಜೆಪಿಗರ ವಿರುದ್ಧ ಹರಿಹಾಯ್ದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.