ಬೆಂಗಳೂರು : ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದೀರಿ, ಆದ್ರೆ ಈಗ ಸರ್ಕಾರಿ ನೌಕರಿಗಳು ಮಾರಾಟವಾಗುತ್ತಿವೆ. ಪ್ರಧಾನಿಗಳೇ ನೀವು ಆಡಿದ್ದ ಮಾತುಗಳನ್ನು ಕನ್ನಡಿಗರು ಮರೆತಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಗುಡುಗಿದೆ.


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಹಿನ್ನೆಲೆ ಸರಣಿ ಟ್ಟೀಟ್‌ ಮಾಡಿರುವ ಕೆಪಿಸಿಸಿ, ಚುನಾವಣೆಗೂ ಮೊದಲು ಭರ್ಜರಿ ಭಾಷಣಗಳು, ಭರಪೂರ ಭರವಸೆಗಳು. ಬೆಂಗಳೂರು ಸೇರಿದಂತೆ 7 ನಗರಗಳನ್ನು ಸ್ಮಾರ್ಟ್ ಸಿಟಿ ಮಾಡುತ್ತೇವೆ, 836 ಕೋಟಿ ಕೊಡುತ್ತೇವೆ ಎಂದಿದ್ದರು.
ಈಗ ಸ್ಮಾರ್ಟ್ ಸಿಟಿ ಬಿಡಿ, ಸಿಟಿಯೂ ಇಲ್ಲದ ಹಾಗೆ ಬಿಜೆಪಿ ಮುಳುಗಿಸಿದೆ. ನೀಡಿದ ಭರವಸೆಗಳು ಏನಾದವು ಪ್ರಧಾನಿಗಳೇ? ಎಂದು ಪ್ರಶ್ನಿಸಿದೆ.


ಕೌಶಲ್ಯಾಭಿವೃದ್ಧಿ ಮಾಡುತ್ತೇವೆ, ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದಿರಿ, ಆದರೆ ಈಗ ಸರ್ಕಾರಿ ಉದ್ಯೋಗಗಳು ಮಾರಾಟವಾಗುತ್ತಿವೆ, ನಿರುದ್ಯೋಗ ಮುಗಿಲು ಮುಟ್ಟಿದೆ. ನಿಮ್ಮ ಭರವಸೆಗಳು ಮಣ್ಣುಪಾಲಾಗಿದ್ದೇಕೆ ಪ್ರಧಾನಿಗಳೇ? ಎಂದು ಪ್ರಶ್ನಿಸಿದೆ.


ಮೋದಿ ಮೋಸಗಳ ಪಟ್ಟಿ ಮಾಡಿದರೆ ಆಕಾಶಕ್ಕೆ ಏಣಿಯಾಗುವಷ್ಟಿದೆ..!. ಗ್ಯಾಸ್ ಸಿಲಿಂಡರ್ ಸಂಪರ್ಕದ ಬಗ್ಗೆ ಟೆಲಿಪ್ರಾಂಪ್ಟರ್ ಓದಿಕೊಂಡು ಭಾಷಣ ಮಾಡಿದ್ದ ಪ್ರಧಾನಿ ನಂತರ ಅಡುಗೆ ಅನಿಲದ ಸಬ್ಸಿಡಿ ನಿಲ್ಲಿಸಿ, ಬೆಲೆ ಏರಿಸಿ ಬಡವರ ಮನೆಯ ಒಲೆಗಳನ್ನು ಆರಿಸಿದರು.  


ಬಿಜೆಪಿಗೆ ಬೇಕಿರುವುದು ರೈತರ ಮತ ಮಾತ್ರ, ರೈತರ ಹಿತವಲ್ಲ. ಪ್ರಣಾಳಿಕೆಯ ಭರವಸೆಗಳು ಎಲ್ಲಿ ಹೋದವು ಎಂದು ರೈತರು ಕೇಳುತ್ತಿದ್ದಾರೆ. ಗೊಬ್ಬರ ಕೇಳಿದವರಿಗೆ ಗುಂಡಿಟ್ಟಂತೆ ಉತ್ತರ ಕೇಳಿದವರಿಗೂ ಗುಂಡಿಕ್ಕಬೇಡಿ. ರಾಜ್ಯ ಸರಕಾರ ರೈತರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲವೇಕೆ ಎಂದು ಕೆಪಿಸಿಸಿ ಪ್ರಶ್ನಿಸಿದೆ. 


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.