ಬಿಜೆಪಿಯೊಳಗೆ ಎಲ್ಲ ಗೂಂಡಾಗಳಿದ್ದಾರೆ, ಇದೊಂದು ಜಂಗಲ್ ರಾಜ್ ರೀತಿ ಆಗಿದೆ: ರಾಮಲಿಂಗರೆಡ್ಡಿ
Ramalingareddy: ಸಿಎಂ ಇರುವ ಕಾರ್ಯಕ್ರಮದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಗೊತ್ತಾಗಲ್ಲವಾ? ಹೋಗರೋ, ಬನ್ರೋ ಎಂದು ಮಾತಾಡುತ್ತಾರೆ. ಒಬ್ಬ ಮಂತ್ರಿ ಆಡುವ ಮಾತಾ ಇದು? ಎಂದು ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಕಿಡಿಕಾರಿದ್ದಾರೆ.
ಬೆಂಗಳೂರು: ಬಿಜೆಪಿಯವರು (BJP) ಹೋರಾಟ ಮಾಡಲಿ ಬೇಡ ಎನ್ನಲ್ಲ. ಅಶ್ವತ್ಥ ನಾರಾಯಣ ಹಿಂದೆ ಡಿಸಿಎಂ ಆಗಿದ್ದರು. ಹಿಂದೆ ಮಂತ್ರಿ ಆಗಿದ್ದರು. ಈಗಲೂ ಮಂತ್ರಿ ಆಗಿದ್ದಾರೆ. ಒಬ್ಬ ಮಂತ್ರಿ ಆಡುವ ಮಾತಾ ಇದು? ಎಂದು ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ (Ramalingareddy) ಕಿಡಿಕಾರಿದ್ದಾರೆ.
ಸಿಎಂ ಇರುವ ಕಾರ್ಯಕ್ರಮದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಗೊತ್ತಾಗಲ್ಲವಾ? ಹೋಗರೋ, ಬನ್ರೋ ಎಂದು ಮಾತಾಡುತ್ತಾರೆ. ಸಿಎಂ ಬೊಮ್ಮಾಯಿ (CM Bommai) ಕೂಡಲೇ ಅಶ್ವತ್ಥ ನಾರಾಯಣ ಅವರನ್ನ ಕಿತ್ತು ಬಿಸಾಕಬೇಕಿತ್ತು ಎಂದಿದ್ದಾರೆ.
ಬಿಜೆಪಿಯೊಳಗೆ ಎಲ್ಲ ಗೂಂಡಾಗಳಿದ್ದಾರೆ. ಇದೊಂದು ಜಂಗಲ್ ರಾಜ್ ರೀತಿಯಲ್ಲಿ ಆಗಿದೆ. ಉತ್ತರ ಪ್ರದೇಶದಲ್ಲಿ ಇರುವ ರೀತಿಯಲ್ಲಿ ಜಂಗಲ್ ರಾಜ್ ರೀತಿಯಾಗಿದೆ. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇಲ್ಲ. ಅದಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅವರೊಬ್ಬರಿಗೆನಾ ಮಾತಾನಾಡಲು ಬರೋದು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈಗಾಗಲೇ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಠೇವಣಿ ಇಲ್ಲದಂಗೆ ಹೋಗ್ತಾರೆ. ಅಶ್ವತ್ಥ ನಾರಾಯಣ (Ashwathanarayan) ಏಕವಚನದಲ್ಲಿ ಮಾತನಾಡಿದ್ರು. ಏಕೆ ಅವರು ಮಾತನಾಡಬೇಕಾಗಿತ್ತು? ಹಾಗೇ ಮಾತನಾಡಿದರೆ ಸುಮ್ಮನೆ ಇರುತ್ತಾರಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರವೋಕ್ ಮಾಡಿದ್ದು ಯಾರು? ಅವರು ಸ್ಟ್ರೈಕ್ ಮಾಡಿದರೆ ನಾವು ಮಾಡ್ತಿವಿ. ಚುನಾವಣೆಯಲ್ಲಿ ಅವರಿಗೆ ಮಂಗಳಾರತಿ ಆಯ್ತಲ್ಲ. 2023 ರ ಚುನಾವಣೆಯಲ್ಲಿ ಎಲ್ಲಾ ಗೊತ್ತಾಗುತ್ತೆ. ಹೋಗ್ರೋ.. ಬನ್ರೋ.. ಅನ್ನೋ ರೀತಿ ಯಾರಾದರು ಮಾತನಾಡ್ತಾರಾ? ನಾಚಿಕೆ ಆಗಬೇಕು ಅವರಿಗೆ ಎಂದು ರಾಮಲಿಂಗರೆಡ್ಡಿ ಕಿಡಿಕಾರಿದ್ದಾರೆ.
ಸಚಿವರಾಗಿರೋರು ಹಾಗೆಲ್ಲ ಏಕ ವಚನದಲ್ಲಿ ಮಾತಾಡೋವಾಗ ನೋಡ್ಕೊಂಡು ಸುಮ್ನನೆ ಇರೋಕಾಗುತ್ತಾ? ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿ ಎಂಬ ಗಾಂಧಿ ತತ್ವ ಪಾಲಿಸೋಕೆ ಆಗುತ್ತಾ? ನೀವು ಅಶ್ವತ್ಥ ನಾರಾಯಣ ಯಾಕೆ ಹಾಗೆ ಮಾತಾಡಿದ್ರು ಅಂತ ಕೇಳಿ. ಎಂಪಿ ಮಾಡಿದ್ದು ಹೇಳ್ತಿರಲ್ಲ, ಸಚಿವರು ಮಾಡಿದ್ದು ಸರೀನಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನನ್ನ ರಾಜಕೀಯ ಆರಂಭ, ಅಂತ್ಯ ಬಿಜೆಪಿಯಲ್ಲೇ: ಶಾಸಕ ಎಂ.ಪಿ.ಕುಮಾರಸ್ವಾಮಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.