ಬೆಂಗಳೂರು: ಯುವ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹಮದ್ ಅವರು ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ ಸಲೀಂ ಅಹಮದ್ 'ಯುವ‌ ಕಾಂಗ್ರೆಸ್  ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಸುಭದ್ರ ರಾಷ್ಟ್ರ ಹಾಗೂ ಜ್ಯಾತ್ಯಾತೀತ ಸಮಾಜ ಯುವಕರಿಂದ ಮಾತ್ರ ‌ಸಾಧ್ಯ. 60 ವರ್ಷಗಳ ಇತಿಹಾಸ‌ವಿರುವ‌ ಯುವ‌ ಕಾಂಗ್ರೆಸ್ ಪ್ರಪಂಚದ ಅತಿದೊಡ್ಡ  ಬಲಿಷ್ಠ ಯುವ ಸಂಘಟನೆಯಾಗಿದೆ. ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ ಎಂದರು.



ಯುವ‌ ಕಾಂಗ್ರೆಸ್ ಗೆ ದೊಡ್ಡ ಇತಿಹಾಸವಿದ್ದು ಹಲವಾರು ರಾಜ್ಯಗಳಲ್ಲಿ ಅನೇಕ ಮುಖ್ಯಮಂತ್ರಿಗಳನ್ನು,ಕೇಂದ್ರ ಪ್ರಮುಖ ‌ಸಚಿವರುಗಳನ್ನು  ಸಂಸದರುಗಳು, ಶಾಸಕರುಗಳು ನೀಡಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಯುವ ಕಾಂಗ್ರೆಸ್ ಕೆಲಸ ಮಾಡಿದೆ.ಉದಾಹರಣೆ ಅಖಿಲ ಭಾರತ ಯುವ ಕಾಂಗ್ರೆಸ್ ನ ಸ್ಥಾಪಕ ಮೊದಲ ಅಧ್ಯಕ್ಷರಾದ ದಿ ಎನ್ ಡಿ ತಿವಾರಿ, ಎ.ಕೆ ಅಂಟೋನಿ, ಕಮಲ್ ನಾಥ್, ದಿಗ್ವಿಜಯ ಸಿಂಗ್, ಅಶೋಕ್ ಗೆಲೋಟ್ ಇಂತಹ ಹಲವಾರು ನಾಯಕರು ಯುವ‌ ಕಾಂಗ್ರೆಸ್ಸಿನಂದ ಬಂದು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.



'ಕೆ.ಸಿ ವೇಣುಗೋಪಾಲ್ ಕೇರಳ ರಾಜ್ಯದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ಪ್ರಸ್ತುತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿ ಜವಾಬ್ದಾರಿ ವಹಿಸಿದ್ದಾರೆ. ರಾಜ್ಯದಲ್ಲೂ ಹಲವಾರು ಮುಖಂಡರು ಯುವ ಕಾಂಗ್ರೆಸ್ ನಿಂದ ಬಂದು ಹಲವಾರು ಹುದ್ದೆ ಅಲಂಕರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಅದೇ ರೀತಿ ನಾನು ಅಖಿಲ ಭಾರತ‌ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ ಎಂದು ಹೇಳಿದರು.


ಯುವ ಕಾಂಗ್ರೆಸ್ 60 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಮುಂಚೂಣಿ ಸಂಘಟನೆಯಾಗಿ ಕೆಲಸ‌ ಮಾಡುತ್ತಿದೆ.''ರಾಷ್ಟ್ರ ಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯವೆಂದು'' ರಾಹುಲ್ ಗಾಂಧಿ ಅವರ‌ ನಂಬಿಕೆ. ಯುವ‌ ಸಮುದಾಯ ರಾಹುಲ್ ಗಾಂಧಿಯವರು ಈ ದೇಶದ ಪ್ರಧಾನಮಂತ್ರಿಯನ್ನಾಗಿ ನೋಡಲು ಕಾತುರರಾಗಿದ್ದಾರೆ ಎಂದು ಸಲೀಂ ಅಹಮದ್ ತಿಳಿಸಿದರು.



ಇದೇ ವೇಳೆ ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಘಟಕ ಮುಂಬರುವ ದಿನಗಳಲ್ಲಿ ಯುವ ಕಾಂಗ್ರೆಸ್ ಗೆ ಪ್ರತ್ಯೇಕವಾದ ತರಬೇತಿ ನೀಡುವುದರ ಜೊತೆಗೆ  Each booth 5 Youth ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದರು.


ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಲೀಂ ಅಹಮದ್ ಅವರು 'ಸುಳ್ಳಿನ ಸರದಾರ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಪ್ರತಿವರ್ಷ 2 ಕೋಟಿ ಉದ್ಯೋಗ ನೀಡುತ್ತೇವೆಂದು ಭರವಸೆ ನೀಡಿದ್ದರು.ಕಳೆದ 6  ವರ್ಷಗಳಲ್ಲಿ 12 ಕೋಟಿ ಉದ್ಯೋಗ ನೀಡಬೇಕಾಗಿತ್ತು. ಕನಿಷ್ಠ 12 ಲಕ್ಷ ಉದ್ಯೋಗ ಕೂಡ ನೀಡಿಲ್ಲ. ಮೋದಿ ಸರ್ಕಾರ ಯುವಕರಿಗೆ ಸುಳ್ಳು ಅಶ್ವಾಸನೆ ನೀಡುವ ಮೂಲಕ ಯುವಕರಿಗೆ ಉದ್ಯೋಗ ನೀಡದೆ  ಪಕೋಡಮಾರಿ ಜೀವನ ಮಾಡಿ  ಹೇಳಿಕೆ ನೀಡಿ ಮೋಸ‌ ಮಾಡಿದ್ದಾರೆ' ಎಂದು ಕಿಡಿ ಕಾರಿದರು.


Online ಸದಸ್ಯರು ನೊಂದಣಿ ಅಭಿಯಾನಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ಶುಭಕೋರಿದರು.


ಈ ಸಂದರ್ಭದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಶ್ರೀ  ಅನಿಲ್ ಯಾದವ್, ಚುನಾವಣಾ ಪಿಆರ್ ಒ ಡಾ ರಾಮಾಜಿ ಉಪಸ್ಥಿತರಿದ್ದರು.