ಯಾದಗಿರಿ : ಕಾಂಗ್ರೇಸ್ ಪಕ್ಷದಲ್ಲಿ ದುಡ್ಡುಕೊಟ್ಟು ಜನ್ರು ಸೇರಿಸುವ ಪರಂಪರೆ ಇಲ್ಲಾ. ಬಿಜೆಪಿಯವರ ಬಗ್ಗೆ ಮಾತನಾಡುವಾಗಿನ ವಿಡಿಯೋ ಅದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ವಿಡಿಯೋ ವೈರಲ್ ಗೆ ಸಂಬಂಧಿಸಿದಂತೆ ಪ್ರಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಮುಗಂದಪೂರ ಗ್ರಾಮದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಮಾರ್ಚ್ 5ರಂದು ಜೆಡಿಎಸ್ ಶಾಸಕರೊಬ್ಬರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ. ನಂತರ ಹಂತ ಹಂತವಾಗಿ ಜೆಡಿಎಸ್ ಕೆಲವು ಶಾಸಕರು ಕಾಂಗ್ರೆಸ್ ಸೇರ್ತಾರೆ.ಕೆಪಿಸಿಸಿ ಅಧ್ಯಕ್ಷರು ಅವರ ಹೆಸರನ್ನು ಘೋಷಣೆ ಮಾಡುತ್ತಾರೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : ಪಕ್ಷಕ್ಕೆ ಎಲ್ಲರೂ ಬೇಕು, ಬಂದರೆ ಜೊತೆಯಾಗಿ- ಇಲ್ಲದಿದ್ದವರನ್ನು ಬಿಟ್ಟು ಹೋಗುತ್ತೇವೆ: ಸಚಿವೆ ಶೋಭಾ ಖಡಕ್ ಮಾತು


ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಸ್ ನಲ್ಲಿ 500 ರೂ. ಕೊಟ್ಟು ಸಮಾವೇಶಕ್ಕೆ ಜನರನ್ನು ಸೇರಿಸುವ ಸಿದ್ದರಾಮಯ್ಯ ಹೇಳಿಕೆ ವೈರಲ್ ವೀಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಪಕ್ಷದವರ ಕುರಿತು ಮಾತನಾಡುವ ಸಂದರ್ಭದಲ್ಲಿರುವ ಹೇಳಿರುವ ವೀಡಿಯೋ ಇರಬಹುದು. ನಮ್ಮವರು ಯಾರು ಕೂಡ ದುಡ್ಡು ಕೊಡುವ ಪ್ರಯತ್ನ ಮಾಡಿಲ್ಲ. ಗಾಡಿ ಕೊಡುತ್ತೇವೆ, ಊಟ ಕೊಡುತ್ತೇವೆ ಅದು ಸಾಮಾನ್ಯ. ದುಡ್ಡು ಕೊಡುವ ಪ್ರಶ್ನೆಯೇ ಇಲ್ಲಿ ಬರಲ್ಲ. ಶಿವಮೊಗ್ಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಕಿನ ವೀಡಿಯೋ ವೈರಲ್ ಆಗಿದೆ. ಬಿಜೆಪಿ‌ ಅವರು ದುಡ್ಡು ಕೊಟ್ಟಿಲ್ಲ‌ ಅಂತಾ ಬೇರೆ ಕಡೆ ಅದು ಕಂಪ್ಲೇಟ್ ಆಗಿದೆ. ಆದ್ದರಿಂದ ಕಾಂಗ್ರೆಸ್ ನಲ್ಲಿ ಆ ಪರಂಪರೆ ಇಲ್ಲ. ಬಿಜೆಪಿ ಅವ್ರದು ಮಾತನಾಡುವ ವೇಳೆಯಲ್ಲಿನ ಆ ವೀಡಿಯೋ ಇದು ಇರಬಹುದು ಎಂದು ಹೇಳಿದ್ದಾರೆ. 


ಇದನ್ನೂ ಓದಿ : ಬಿಜೆಪಿ ರಥಯಾತ್ರೆಗೆ ಜೆ.ಪಿ.ನಡ್ಡಾ ಚಾಲನೆ: ಅಸಮಾಧಾನದಿಂದ ಸಚಿವ ಸೋಮಣ್ಣ ಗೈರು!?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.