ಬಾಗಲಕೋಟೆ : ಆರು ತಿಂಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ಆಗಬಹುದು ಹೇಳಲಿಕ್ಕೆ ಆಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸುಳಿವು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ(Satish Jarkiholi), ಗುಜರಾತ್ ವಿಧಾನಸಭೆ ಚುನಾವಣೆ ಜೊತೆ, ಇಲ್ಲಿಯೂ ಚುನಾವಣೆ ಆಗಬಹುದು. ಆರು ತಿಂಗಳಾಗಬಹುದು, ಇಲ್ಲದಿದ್ರೆ ಮೇ ಫಸ್ಟ್.ಆರು ತಿಂಗಳಲ್ಲಿ ಚುನಾವಣೆ ಆಗೋ ಚಾನ್ಸ್ ಇದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಬುಡಕಟ್ಟು ಮಕ್ಕಳಿಗೆ ಸರ್ಕಾರ ಎಲ್ಲಾ ಸೌಲಭ್ಯ ನೀಡಲಿದೆ- ಸಚಿವ ಡಾ.ನಾರಾಯಣಗೌಡ


ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ(DK Shivakumar and Siddaramaiah) ಶೀತಲಸಮರಕ್ಕೆ ಬೇಸರಪಟ್ಟು ಕಾಂಗ್ರೆಸ್ ನಾಯಕರು ಪಕ್ಷ ಬಿಡ್ತಿರೋ ವಿಚಾರವಾಗಿ ಮಾತನಾಡಿದ ಅವರು, ಇಲ್ಲ ಆ ರೀತಿ ಆಗಲ್ಲ.ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ, ಯಾವುದೇ ಗೊಂದಲ ಇಲ್ಲ. ಇಬ್ಬರು ನಾಯಕರು ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.


ಶಾಸಕ ಜಮೀರ್ ದೇವೇಗೌಡರನ್ನ(HD Deve Gowda) ಭೇಟಿಯಾಗಿರೋ ವಿಚಾರ ಮಾತನಾಡಿದ ಸತೀಶ್ ಜಾರಕಿಹೊಳಿ, ಭೇಟಿ ಆಗೋರು ಭೇಟಿ ಆಗೋದ್ರಲ್ಲೇನಿದೆ, ಅದು ಅವರ ವೈಯಕ್ತಿಕ ವಿಚಾರ. ಅವರು ಮುಂಚೆ ಜೆಡಿಎಸ್ ನಲ್ಲೇ ಇದ್ದವರಲ್ವಾ, ಪರಿಚಯ ಇದ್ದಿದ್ರಿಂದ ಭೇಟಿಯಾಗಿರಬಹುದು. ಆದ್ರೆ ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದ ಸ್ಪಷ್ಟನೆ‌ ನೀಡಿದರು.


ಇದನ್ನೂ ಓದಿ : ಟಿಪ್ಪು, ಅಕ್ಬರ್, ಬಾಬರ್ ಪಠ್ಯದಲ್ಲಿ ವೈಭವೀಕರಣಕ್ಕೆ ಕಡಿವಾಣ: ಯತ್ನಾಳ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.