ಮಂಡ್ಯ: ರಾಜ್ಯದಲ್ಲಿ ಉಪ ಚುನಾವಣೆಯ ಕಣ ರಂಗೇರಿದೆ. ಅದರಲ್ಲೂ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರವನ್ನು ಹೈವೊಲ್ಟೆಜ್ ಕಣವೆಂದೇ ಪರಿಗಣಿಸಲಾಗಿದೆ. ಇದೀಗ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ(KR Pet Assembly constituency)ದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಅವರ ಬಹಿರಂಗ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.
 
ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಕ್ಷೇತ್ರದಲ್ಲಿ ಮತಭೇಟೆ ನಡುಸುವ ವೇಳೆ ನೋಡ್ರಮ್ಮಾ ಸೀರೆ ಕೊಟ್ರೂ ಇಸ್ಕೊಳಿ, ಬೇರೆ ಏನ್ ಕೊಟ್ರೂ ಇಸ್ಕೊಳಿ. ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಬಳಿ ಇಸ್ಕೊಂಡು ಸುಮಲತಾಗೆ ವೋಟ್ ಹಾಕಿದ್ರಲ್ಲಾ... ಈ ಉಪಚುನಾವಣೆಯಲ್ಲಿ ವೋಟ್ ಮಾತ್ರ ನನಗೇ ಹಾಕಿ ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಎರಡು ಬಾರಿ ಚುನಾವಣೆಯಲ್ಲಿ ಸೋತ ಬಳಿಕ ನನ್ನ ಬಳಿ ಏನೂ ಉಳಿದಿಲ್ಲ. ಹೀಗಾಗಿ ಬಿಜೆಪಿಯವರು, ಜೆಡಿಎಸ್ ನವರು ಯಾರು ಏನೇ ಕೊಟ್ರೂ ಇಸ್ಕೊಳಿ. ನಾದರೆ ನಿಮ್ಮ ಮತ ಮಾತ್ರ ನನಗೇ ಹಾಕಿ ಎಂದು ಮತದಾರರಲಿ ಮನವಿ ಮಾಡಿದ ಪ್ರಸಂಗ ನಡೆದಿದೆ.