ಪುತ್ರನಿಗೆ ಟಿಕೆಟ್ ಮಿಸ್: ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆ.ಎಸ್.ಈಶ್ವರಪ್ಪ ಆಕ್ರೋಶ!
KS Eshwarappa Slams BS Yeddyurappa: ಕರ್ನಾಟಕದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಕ್ಕಿಹಾಕಿಕೊಂಡಿದೆ. ಕುಟುಂಬದ ಕೈಯಿಂದ ಪಕ್ಷವನ್ನು ರಕ್ಷಿಸಬೇಕೆಂಬ ಒತ್ತಾಯವಿದೆ. ಕರ್ನಾಟಕದಲ್ಲಿ ಬೇರೆ ಯಾರು ಲಿಂಗಾಯತ ನಾಯಕರು ಇಲ್ವಾ? ಅಂತಾ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಬುಧವಾರ ೨ನೇ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಕೆಲವು ಹೊಸಬರಿಗೆ ಟಿಕೆಟ್ ಸಿಕಿದ್ದು ಅಚ್ಚರಿ ಮೂಡಿಸಿದೆ. ಆದರೆ ಬಿಜೆಪಿಯ ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರ ಮಗ ಕೆ.ಇ.ಕಾಂತೇಶ್ ಅವರಿಗೂ ಸಹ ಈ ಬಾರಿ ಟಿಕೆಟ್ ಮಿಸ್ ಆಗಿದೆ. ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಕೆ.ಎಸ್.ಈಶ್ವರಪ್ಪ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿರುವ ಈಶ್ವರಪ್ಪ, ʼಕರ್ನಾಟಕದಲ್ಲಿ ಕುಟುಂಬವೊಂದರ ಕೈಯಲ್ಲಿ ಪಕ್ಷವೊಂದು ಸಿಕ್ಕಾಕೊಂಡಿದೆ. ಅದನ್ನು ರಕ್ಷಿಸಬೇಕಿದೆ ಅಂತಾ ಪರೋಕ್ಷವಾಗಿ ಯಡಿಯೂರಪ್ಪರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೆ.ಎಸ್.ಈಶ್ವರಪ್ಪ ಆರೋಪ ವಿಚಾರವಾಗಿ ಪ್ರಹ್ಲಾದ್ ಜೋಶಿ ಹೇಳಿದ್ದೇನು?
ʼಕರ್ನಾಟಕದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಕ್ಕಿಹಾಕಿಕೊಂಡಿದೆ. ಕುಟುಂಬದ ಕೈಯಿಂದ ಪಕ್ಷವನ್ನು ರಕ್ಷಿಸಬೇಕೆಂಬ ಒತ್ತಾಯವಿದೆ. ಕರ್ನಾಟಕದಲ್ಲಿ ಬೇರೆ ಯಾರು ಲಿಂಗಾಯತ ನಾಯಕರು ಇಲ್ವಾ? ಅಂತಾ ಕಿಡಿಕಾರಿದ್ದಾರೆ.
ಯಡಿಯೂರಪ್ಪ ಪಟ್ಟು ಹಿಡಿದು ಶೋಭಾ ಕರಂದ್ಲಾಜೆ ಹಾಗೂ ಬಸವರಾಜ್ ಬೊಮ್ಮಾಯಿಗೆ ಟಿಕೆಟ್ ಕೊಡಿಸಿದ್ದಾರೆ. ನನ್ನ ಮಗ ಕಾಂತೇಶ್‌ಗೆ ಯಾಕೆ ಟಿಕೆಟ್ ಕೊಡಿಸಲಿಲ್ಲ? ನಾನು 40 ವರ್ಷ ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಸಿಟಿ ರವಿ, ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ನನಗೆ ಸೇರಿದಂತೆ ನನ್ನ ಪುತ್ರನಿಗೆ ಅನ್ಯಾಯವಾಗಿದೆ ಅಂತಾ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಅಭಿವೃದ್ಧಿ ಜಟಾಪಟಿ!
ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತಾ ಅಪೇಕ್ಷೆ ಪಡುವವರಲ್ಲಿ ನಾನೂ ಒಬ್ಬ. ನೀವು ಮತ್ತೆ ಮೋದಿಯವರಿಗೆ ಬೆಂಬಲ ಕೊಡಿ, ನಾವು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇವೆಂದು ನನ್ನ ಬೆಂಬಲಿಗರು ತಿಳಿಸಿದ್ದಾರೆ. ಮಾರ್ಚ್ 15ರ ಶುಕ್ರವಾರ ಸಂಜೆ 5ಗಂಟೆಗೆ ಶಿವಮೊಗ್ಗದ ಬಣಜಾರ ಭವನದಲ್ಲಿ ಎಲ್ಲಾ ಸಮಾಜದ ಪ್ರಮುಖರು, ಹಿರಿಯರು ಮತ್ತು ಹಿತೈಷಿಗಳು ಸಭೆ ಸೇರಲಿದ್ದಾರೆ. ಅವರೆಲ್ಲರ ಸಲಹೆ ಮೇಲೆ ನಾನು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.