B Sriramulu : ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಶೇ.15 ರಷ್ಟು ವೇತನ ಹೆಚ್ಚಳ!
ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಇಂದು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15 ರಷ್ಟು ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಲಾಗಿದೆ. ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆ ರಾಜ್ಯ ಸರ್ಕಾರ ಮಾಡಿದೆ.
ಬೆಂಗಳೂರು : ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಇಂದು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15 ರಷ್ಟು ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಲಾಗಿದೆ. ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆ ರಾಜ್ಯ ಸರ್ಕಾರ ಮಾಡಿದೆ.
ಇದು ಸಾರಿಗೆ ನೌಕರರ ಬಹುದಿನಗಳ ಬೇಡಿಕೆಯಾಗಿದ್ದು, ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳು, ಕಾರ್ಮಿಕ ಮುಖಂಡರುಗಳೊಡನೆ ನಿರಂತರ ಸಭೆಗಳ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಮುಖ್ಯಮಂತ್ರಿಗಳು ಈ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಇಂದು ಈ ಕುರಿತು ಆದೇಶ ಹೊರಬೀಳಲಿದೆ.
ಇದನ್ನೂ ಓದಿ : Bizarre Names: ಗೂಗಲ್, ಬಸ್, ಟ್ರೈನ್, ಹೈ ಕೋರ್ಟ್, ಡಾಲರ್ ಇವು ಮನುಷ್ಯರ ಹೆಸರು ಅಂತ ಹೇಳಿದ್ರೆ ನೀವು ನಂಬ್ತೀರಾ?
ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸರ್ಕಾರವು ಶೇ.15% ವೇತನ ಪರಿಷ್ಕರಣೆಯ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು, ಸದಾ ಉತ್ತಮ ಜನಸೇವೆಗೆ ಹೆಸರು ಮಾಡಿರೋ ನಮ್ಮ ಸಿಬ್ಬಂದಿ, ತಾವು ನೀಡಿರುವ ಬಂದ್ ಕರೆ ಹಿಂಪಡೆದು ಎಂದಿನಂತೆ ಉತ್ತಮ ಸೇವೆಗಳನ್ನು ಯಾವುದೇ ವ್ಯತ್ಯಯ ಆಗದಂತೆ ಮುಂದುವರಿಸಲಿದ್ದಾರೆ ಎಂಬ ನಂಬಿಕೆ ಇದೆ.
ಈ ಸಂದರ್ಭದಲ್ಲಿ ಬಿ.ಎಂ.ಎಸ್ ನ ಪೂಂಜಾರವರು, ಕಾರ್ಮಿಕರ ಸಂಘಟನೆಯ ಹಿರಿಯ ಮುಖಂಡರಾದ ಅನಂತ ಸುಬ್ಬರಾವ್ ಸೇರಿದಂತೆ ಪ್ರಮುಖ ಸಾರಿಗೆ ಸಿಬ್ಬಂದಿ ಮುಖಂಡರು 2 ಘಂಟೆಗೆ ಸಭೆ ಸೇರುವ ಮಾಹಿತಿ ಇದೆ. ಈ ಸಭೇಲಿ ಅವರುಗಳು ಸಾಕಾರಾತ್ಮಕ ನಿರ್ಧಾರಕ್ಕೆ ಬರಲಿದ್ದಾರೆ ಅನ್ನೋ ನಂಬಿಕೆ ಇದೆ.
Bengaluru Weather: ಇಂದಿನಿಂದ ನಾಲ್ಕು ದಿನ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
ಸಾರಿಗೆ ನೌಕರರಿಗೆ ವೇತನ ಕಾಲ ಕಾಲಕ್ಕೆ ಪರಿಷ್ಕರಣೆಯಾಗುತ್ತಿದ್ದು, ಈ ಹಿಂದಿನ ವೇತನ ಪರಿಷ್ಕರಣೆಗಳ ವಿವರ:
1996 - 11%
2000 - 10%
2004 - 5%
2008 - 6%
2012 - 10%
2016 - 12.50%
ಪ್ರಸ್ತುತ ಘೋಷಣೆ 15%
ಈ ನಿರ್ಧಾರದಿಂದ ವಾರ್ಷಿಕ 4 ರಸ್ತೆ ಸಾರಿಗೆ ನಿಗಮಗಳಿಗೆ ಅಂದಾಜು 550 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಇಂದು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15 ರಷ್ಟು ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಿದ್ದೇವೆ. ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆ ನಮ್ಮ ಸರ್ಕಾರ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.