ಬೆಂಗಳೂರು: ಕರ್ನಾಟಕ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳು ಕಳೆದ 3 ವರ್ಷಗಳಿಂದ 2,945.23 ರೂ. ನಷ್ಟದಲ್ಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು(B Sriramulu) ಹೇಳಿದ್ದಾರೆ. ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್(NA Haris) ಕೇಳಿದ ಸಾರಿಗೆ ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಕುರಿತ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇಲಾಖೆಯ ಪ್ರಕಾರ 2018-19ರಲ್ಲಿ 641.72 ರೂ., 2019-20ರಲ್ಲಿ 982.63 ರೂ. ಹಾಗೂ 2020-21ರಲ್ಲಿ 1,320.88 ಕೋಟಿ ರೂ. ನಷ್ಟ(KSRTC Suffers Losses)ವಾಗಿದೆ ಎಂದು ಇಲಾಖೆಯ ಅಂಕಿಅಂಶಗಳು ಹೇಳಿವೆ. ಇನ್ನು ಬಿಎಂಟಿಸಿ ಕೂಡ ನಷ್ಟಕ್ಕೆ ಸಿಲುಕಿದ್ದು, 2018-19ರಲ್ಲಿ 349.49 ಕೋಟಿ ರೂ., 2019-20ರಲ್ಲಿ 549.34 ರೂ. ಮತ್ತು 2020-21ರಲ್ಲಿ164.20 ಕೋಟಿ ರೂ. (ಪ್ರಾವಿಷನಲ್) ನಷ್ಟದಲ್ಲಿದೆ.


ಇದನ್ನೂ ಓದಿ: Rape Case: ಅಪ್ರಾಪ್ತೆಯ ಅತ್ಯಾಚಾರ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ


ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)2018-19ರಲ್ಲಿ 134.93 ಕೋಟಿ ರೂ., 2019-20ರಲ್ಲಿ 157.56 ಕೋಟಿ ರೂ. ಹಾಗೂ 2020-21ರಲ್ಲಿ  581.15 ಕೋಟಿ ರೂ. ನಷ್ಟ ಅನುಭಿಸುತ್ತಿದೆ ಎಂದು ಇಲಾಖೆ ತಿಳಿಸಿದೆ.


ಕೇಂದ್ರ ಸರ್ಕಾರ ಸಹಾಯದಿಂದ ಮಾತ್ರ ವಿದ್ಯುತ್ ಬಸ್ ಖರೀದಿ!


ವಿದ್ಯುತ್ ವಾಹನಗಳ ದರವು ಡೀಸೆಲ್ ವಾಹನಗಳ ದರಕ್ಕಿಂತ ಗಣನೀಯವಾಗಿ ಹೆಚ್ಚಾಗಿದ್ದು, ಪ್ರಸ್ತುತ ನಿಗಮದ ಆರ್ಥಿಕ ಸ್ಥಿತಿಗತಿ ಸರಿ ಇಲ್ಲದೆ ಇರುವ ಕಾರಣ ನಿಗಮದ ಆಂತರಿಕ ಸಂಪನ್ಮೂಲದಿಂದ ವಿದ್ಯುತ್ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಅನುದಾನ ಅಥವಾ ಸಬ್ಸಿಡಿ ಪಡೆದು ಬಸ್ಸು(EV Bus)ಗಳನ್ನು ಖರೀದಿ ಮಾಡಲು ಇಲಾಖೆ ನಿರ್ಧಾರ ಮಾಡಿದೆ.


ಇದನ್ನೂ ಓದಿ: Hijab Controversy: ಅಲ್ಪಸಂಖ್ಯಾತ ಸಮುದಾಯದ ಪರ ಕೈ ಬ್ಯಾಟಿಂಗ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.