ಹುಬ್ಬಳ್ಳಿ : ಪ್ರಭಲ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವುದು ಸರಿಯಲ್ಲ. ರಾಜ್ಯ ಬಿಜೆಪಿ ಸರ್ಕಾರದ ನಡೆ ಖಂಡನೀಯ ಎಂದು ಕುರುಬ ಸಮಾಜದ ಸ್ವಾಮೀಜಿಗಳು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ನಗರದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಲಬುರಗಿ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ, ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಸ್ವಾಮೀಜಿಗಳು, ಪಂಚಮಸಾಲಿ ಮತ್ತು ಕುರುಬ ಸಮುದಾಯದ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕಸುಬು ಆಧಾರಿತ ದುರ್ಬಲ ಜಾತಿಗಳನ್ನು ರಕ್ಷಣೆ ಮಾಡಬೇಕು. ಪ್ರಭಲ ಪಂಚಮಸಾಲಿ ಸಮಾಜವನ್ನು ಮೀಸಲಾತಿಗೆ ತಂದು ಹಿಂದುಳಿದವರ ಮೇಲೆ ಒತ್ತಡ ಹೇರಬಾರದು. ಸರ್ಕಾರ ಸಂವಿಧಾನದ ಆಶಯ ಈಡೇರಿಸುವ ಕೆಲಸ ಮಾಡಬೇಕು. ಮೀಸಲಾತಿ ಹೆಸರಲ್ಲಿ ಹಿಂದುಳಿದವರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿ, ಶಿಫಾರಸು ಇಲ್ಲದೆ ಪ್ರಭಲ ಸಮುದಾಯವನ್ನು 2ಎಗೆ ಸೇರಿಸಬಾರದು ಎಂದರು.  


ಇದನ್ನೂ ಓದಿ : Ramesh Jarkiholi : 'ಸಚಿವ ಸ್ಥಾನ ಸಿಗಲಿ ಬಿಡಲಿ, ನನಗೆ ಪಕ್ಷ ಸಂಘಟನೆ ಮುಖ್ಯ'


ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸದಂತೆ ಒತ್ತಡ ಹೇರಲು ಪ್ರತಿಭಟನೆ ಮಾಡಲಾಗುತ್ತದೆ. ಹಿಂದುಳಿದ ವರ್ಗಗಳ ಒಕ್ಕೂಟದಿಂದ ಬೆಳಗಾವಿ ಸುವರ್ಣ ಸೌಧದ ಎದುರು ಡಿಸೆಂಬರ್ 26ರಂದು ಪ್ರತಿಭಟನೆ ಮಾಡುತ್ತಿದ್ದೇವೆ. ಪಂಚಮಸಾಲಿಗಳನ್ನು 2ಎಗೆ ಸೇರಿಸುವ ಮೊದಲು ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಲು ಆಗ್ರಹಿಸಿ ಪ್ರತಿಭಟನೆ ಮಾಡುತ್ತವೆ. ಇದಕ್ಕೆ ಕರ್ನಾಟಕ ಪ್ರದೇಶ ಕುರುಬ ಸಂಘದಿಂದ ಸುವರ್ಣ ಸೌಧದ ಎದುರು ಡಿಸೆಂಬರ್ 27ರಂದು ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : ದಿವ್ಯಾಂಗರಿಗೆ 1 ಕೋಟಿ ವೆಚ್ಚದ ಸಾಧನ ಸಲಕರಣೆ ವಿತರಣೆ, ರಾಜ್ಯದಿಂದ ಚಾಮರಾಜನಗರ ಆಯ್ಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.