ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲಾ ವಿದ್ಯಾರ್ಥಿಗಳಿಂದ ಕೆರೆ ಸ್ವಚ್ಛತಾ ಆಂದೋಲನ
ವಿಶ್ವ ನದಿಗಳ ದಿನದ ಅಂಗವಾಗಿ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆ, ಬಿಟಿಎಂ ಲೇಔಟ್ ಶಾಖೆ ಹಾಗೂ ಅರಭಾವಿ ಫೌಂಡೇಶನ್ ನ ಸಹಭಾಗಿತ್ವದಲ್ಲಿ ಹುಳಿಮಾವು ಕೆರೆಯ ಆವರಣದಲ್ಲಿ ಸ್ವಚ್ಛತಾ ಚಟುವಟಿಕೆಯು ನಡೆಯಿತು.
ಬೆಂಗಳೂರು : ವಿಶ್ವ ನದಿಗಳ ದಿನದ ಅಂಗವಾಗಿ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆ, ಬಿಟಿಎಂ ಲೇಔಟ್ ಶಾಖೆ ಹಾಗೂ ಅರಭಾವಿ ಫೌಂಡೇಶನ್ ನ ಸಹಭಾಗಿತ್ವದಲ್ಲಿ ಹುಳಿಮಾವು ಕೆರೆಯ ಆವರಣದಲ್ಲಿ ಸ್ವಚ್ಛತಾ ಚಟುವಟಿಕೆಯು ನಡೆಯಿತು.
ಆರ್ಕಿಡ್ಸ್ ಸಂಸ್ಥೆಯ ಸುಮಾರು 30 ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಪಾಲ್ಗೊಂಡು 100 ಕೆಜಿಯಷ್ಟು ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ ಕೆರೆಗಳನ್ನು ಸಂರಕ್ಷಿಸುವಂತೆ ಕರೆಕೊಟ್ಟರು.ನಮ್ಮ ಸುತ್ತಲು ಇರುವ ಜಲಮೂಲಗಳನ್ನು ರಕ್ಷಿಸುವ ಸಲುವಾಗಿ ವಿಶ್ವ ನದಿಗಳ ದಿನದಂದು ಪ್ರಪಂಚಾದ್ಯಂತ ಸೆಪ್ಟೆಂಬರ್ 4ನೇ ಆದಿತ್ಯವಾರಂದು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಪರಿಸರ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಆರ್ಕಿಡ್ಸ್ ಸಂಸ್ಥೆ ಈ ಹಿಂದೆಯೂ ಹಲವು ಜಾಗೃತಿ ಅಭಿಯಾನಗಳನ್ನು ಕೈಗೊಂಡಿದೆ.
ಇದನ್ನೂ ಓದಿ: Astro Tips : ನಿಮ್ಮ ಅದೃಷ್ಟ ಬದಲಾಯಿಸುತ್ತದೆ ಈ ಹೂವು, ಹೀಗೆ ಬಳಸಿ; ಬಡತನ ತೊಲಗಿ ಧನ ಪ್ರಾಪ್ತಿಯಾಗುತ್ತದೆ
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸತೀಶ್ ಶೆಟ್ಟಿ, " ಬೆಂಗಳೂರಿನಲ್ಲಿ ಈ ಹಿಂದೆ ಸುಮಾರು 1300 ಕೆರೆಗಳು ಇದ್ದವು, ಅಭಿವೃದ್ಧಿಯ ನಾಗಾಲೋಟದಿಂದಾಗಿ ಹಲವು ಕೆರೆಗಳು ಕಣ್ಮರೆಯಾದವು. ಪರಿಸರದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಕೆರೆ ಹಾಗೂ ನದಿಯ ಮೂಲಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ" ಎಂದರು.ಅರಭಾವಿ ಫೌಂಡೇಶನ್ ನ ಮುಖ್ಯಸ್ಥ ಸಂತೋಷ್ ಅರಭಾವಿ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿ ವಂದನೆಗೈದರು.
ಕಾರ್ಯಕ್ರಮದಲ್ಲಿ ಅರೆಕೆರೆಯ ಮಾಜಿ ಕಾರ್ಪೊರೇಟರ್ ವಿಜಯಲಕ್ಷ್ಮಿ ಮುರಳಿ, ಕಾಂಗ್ರೆಸ್ ಕಾರ್ಯಕರ್ತ ಮಧು ಹಾಗೂ ಸ್ಥಳೀಯ ನಾಗರೀಕರು ಉಪಸ್ಥಿತರಿದ್ದು ಸ್ವಚ್ಚತಾ ಕೈಂಕರ್ಯದಲ್ಲಿ ಕೈ ಜೋಡಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.