ಬೆಳಗಾವಿ: ವಿಧಾನ ಮಂಡಳದ ಇಡೀ ಸದನವೇ ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ಮುಳುಗಿದ ಸಂದರ್ಭದಲ್ಲಿ ಈ ರಾಜ್ಯದ ಬಡ ಮಕ್ಕಳಿಗೆ ಶೈಕ್ಷಣಿಕ ಶಕ್ತಿ ತುಂಬುವ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಮಹತ್ಕಾರ್ಯವನ್ನು ತಮ್ಮ ಇಲಾಖೆಯ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಡಿದ್ದಾರೆ. ರಾಜಕೀಯ ಏನೇ ಇರಲಿ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದ ಸಮಾಜಕ್ಕೆ ಸಿಕ್ಕಿರುವ ಅತ್ಯಂತ ಉಪಯುಕ್ತವಾದ ಉಲ್ಲೇಖನೀಯ ಯೋಜನೆ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ನಿರ್ಣಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಉಸಿರಿಲ್ಲದ, ಹಸಿದ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣವೆಂಬುದು ಮರೀಚಿಕೆ ಎನ್ನುತ್ತಿರುವ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. 


COMMERCIAL BREAK
SCROLL TO CONTINUE READING

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಕನಸಿನ ಯೋಜನೆ ಅಂಗನವಾಡಿಯನ್ನು ಆರಂಭಿಸಿದರು. ಕರ್ನಾಟಕದ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಮೊದಲ ಅಂಗನವಾಡಿ ಆರಂಭವಾಯಿತು. ಆರಂಭಿಕವಾಗಿ 100 ಇದ್ದ ಅಂಗನವಾಡಿಗಳ ಸಂಖ್ಯೆ ಈಗ 60 ಸಾವಿರಕ್ಕೂ ಅಧಿಕ. ಈಗ ಇಂದಿರಾ ಗಾಂಧಿಯವರಿಂದ ಆರಂಭವಾದ ಅದೇ ಯೋಜನೆಗೆ ಬಲ ತುಂಬುವ ಐತಿಹಾಸಿಕ ಕಾರ್ಯವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಡಿದ್ದಾರೆ. ಅಗನವಾಡಿ ಮೊದಲು ಆರಂಭವಾದ ಕರ್ನಾಟಕದಲ್ಲೇ ಅಂಗನವಾಡಿಗೆ ಸರ್ಕಾರಿ ಮಾಂಟೆಸ್ಸರಿ ಎಂದು ನಾಮಕರಣ ಮಾಡಿ ಉನ್ನತೀಕರಿಸುವ ಐತಿಹಾಸಿಕ ಕೆಲಸವನ್ನು ಮಾಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಅಂಗನವಾಡಿ ಕೇಂದ್ರದಲ್ಲಿ LKG ಮತ್ತು UKG ಪರಿಚಯಿಸುತ್ತಿರುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.


ಇದನ್ನೂ ಓದಿ: ನಟ ದರ್ಶನ್‌ ಜೊತೆ ರಾಜಿ ಆಗುತ್ತಾ ಚಿತ್ರದುರ್ಗದ ರೇಣುಕಾಸ್ವಾಮಿ ಫ್ಯಾಮಿಲಿ?


ಪೂರ್ವ ಪ್ರಾಥಮಿಕ ಶಿಕ್ಷಣ ಇಂದು ಎಷ್ಟು ಮಹತ್ವ ಪಡೆದುಕೊಂಡಿದೆ. ಸಮಾಜದಲ್ಲಿ ಅದೆಷ್ಟು ಪ್ರತಿಷ್ಠೆಯ ವಿಷಯವಾಗಿದೆ ಎನ್ನುವುದು ಯಾರಿಗೂ ತಿಳಿಯದ ವಿಷಯವಲ್ಲ. ಆರ್ಥಿಕವಾಗಿ ಸಬಲರಾಗಿರುವವರ ಜೊತೆಗೆ ಬಡ ಮತ್ತು ಮಧ್ಯಮ ವರ್ಗದ ಪಾಲಕರು ಪೈಪೋಟಿಗಿಳಿದು, ಸೋತು ಇನ್ನಷ್ಟು ಕುಗ್ಗಿ ಹೋಗುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ನೀಡಲು ತೆಗೆದುಕೊಂಡಿರುವ ಕ್ರಾಂತಿಕಾರಿ ಹೆಜ್ಜೆಯೇ ಈ ಸರ್ಕಾರಿ ಮಾಂಟೆಸ್ಸರಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ, ಸಮಾಜಕ್ಕಾಗಿ ಏನಾದರೊಂದು ಸಾಧನೆ ಮಾಡಲೇಬೇಕೆಂದು ಅಧಿಕಾರ ಸ್ವೀಕರಿಸಿದ ದಿನವೇ ತೆಗೆದುಕೊಂಡ ನಿರ್ಧಾರವನ್ನು ಲಕ್ಷ್ಮೀ ಹೆಬ್ಬಾಳಕರ್ ಸಾಧಿಸಿದ್ದಾರೆ.  


ಇಂದಿನ ವ್ಯವಸ್ಥೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ಇಂತಹ ಯೋಜನೆ ಜಾರಿಗೊಳಿಸುವುದು ಸುಲಭದ ಕೆಲಸವಲ್ಲ. ಆಗಲೇ ಶೈಕ್ಷಣಿಕ ವರ್ಷ ಆರಂಭವಾಗಿದ್ದರಿಂದ ಸಮಯಾವಕಾಶವೂ ಸಾಕಷ್ಟಿರಲಿಲ್ಲ. ಶುಭಸ್ಯ ಶೀಘ್ರಂ ಎನ್ನುವಂತೆ ಅತ್ಯಂತ ಕಡಿಮೆ ಅವಧಿಯಲ್ಲಿ ಜಾರಿಗೊಳಿಸಬೇಕಾದ ಸಂದರ್ಭದಲ್ಲಿ ಒಂದಿಷ್ಟು ಸಣ್ಣಪುಟ್ಟ ಲೋಪಗಳು ಉಳಿದುಕೊಂಡಿರಬಹುದು. ಮೊದಲ ವರ್ಷವೇ ಎಲ್ಲವೂ ಅಚ್ಚುಕಟ್ಟಾಗಿ ಆಗುತ್ತದೆ ಎನ್ನಲಾಗದು. ಆದರೆ ಒಳ್ಳೆಯ ಕೆಲಕ್ಕೆ ನಾಂದಿ ಹಾಡಿದ್ದಾರೆ. ಇಂತಹ ಇಚ್ಛಾಶಕ್ತಿಯನ್ನು ಸಚಿವರು ತೋರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಸ್ತಾವನೆ ಇಟ್ಟಾಗ, ಒಳ್ಳೆಯ ಕೆಲಸ, ಮೊದಲು ಮಾಡಮ್ಮ ಎಂದು ಹಾರೈಸಿ, ಶಕ್ತಿ ತುಂಬಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮಿಂದ ಎಲ್ಲಾ ರೀತಿಯ ಸಹಕಾರದ ಭರವಸೆ ನೀಡಿದರು. ಎಲ್ಲದರ ಪರಿಣಾಮ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಯಾಗಿದೆ.  


ಇದನ್ನೂ ಓದಿ: Karnataka Rains: ಕರ್ನಾಟಕಕ್ಕೆ ಜಲ ಕಂಟಕ.. ಈ ಜಿಲ್ಲೆಗಳಲ್ಲಿ ರಣಭೀಕರ ಮಳೆ, ಬಿರುಗಾಳಿ ಗುಡುಗು ಮಿಂಚು ಸಹಿತ ವರುಣಾರ್ಭಟದ ಎಚ್ಚರಿಕೆ!


ಈ ಬಗ್ಗೆ ಮಾತನಾಡಿರುವ ಲಕ್ಷ್ಮೀ ಹೆಬ್ಬಾಳಕರ್, ʼದೇಶದಲ್ಲಿಯೇ ಮೊದಲ ಬಾರಿಗೆ ಅಂಗನವಾಡಿಯಲ್ಲಿ LKG ಮತ್ತು UKG ತರಗತಿಗೆ ಚಾಲನೆ ನೀಡಿದ್ದು ನನ್ನ ಭಾಗ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರು ಈ ಯೋಜನೆಯ ಬಗ್ಗೆ ನಾನು ಪ್ರಸ್ತಾವನೆ ಇಟ್ಟಾಗ, ಒಳ್ಳೆಯ ಕೆಲಸ, ಮೊದಲು ಮಾಡಮ್ಮ ಎಂದು ಹಾರೈಸಿ, ಶಕ್ತಿ ತುಂಬಿದರು. ಸಾಂಕೇತಿಕವಾಗಿ 250 ಅಂಗನವಾಡಿಗಳಲ್ಲಿ LKG ಮತ್ತು UKG ತರಗತಿಗೆ ಚಾಲನೆ ನೀಡಲಾಗಿದೆ. ಪೌಷ್ಠಿಕ ಆಹಾರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದು ಪ್ರಮುಖವಾಗಿದೆ. ಆಧುನಿಕ ಯುಗದಲ್ಲಿ ಮಾರ್ಡನ್ ಶಿಕ್ಷಣ ನೀಡುವುದು ನಮ್ಮ ಇಲಾಖೆ ಹಾಗೂ ಸರ್ಕಾರದ ಗುರಿಯಾಗಿದೆ. ಮುಂದಿನ ಹಂತದಲ್ಲಿ ರಾಜ್ಯದಲ್ಲಿ 18 ಸಾವಿರ ಅಂಗನವಾಡಿಯಲ್ಲಿ LKG ಮತ್ತು UKG ಆರಂಭ ಮಾಡಲಾಗುತ್ತದೆʼ ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.