ಬೆಳಗಾವಿ: ಸತೀಶ ಜಾರಕಿಹೊಳಿಯವರ ಮೌನ ಮಿಸ್ ಯೂಸ್ ಆಗ್ತಿದೆ ಎಂಬ ವಿಚಾರ ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ವರ್ಗಾವಣೆ ಅದೊಂದು ದೊಡ್ಡ ಸಾಧನೆ ಅಲ್ಲ. ಯಾವ ಅಧಿಕಾರಿಗಳಿದ್ದರೂ ಕೆಲಸ ಮಾಡ್ತೇವೆ. ಯಾರೇ ಇದ್ದರೂ ಸರ್ಕಾರದ ಪರವಾಗಿ ಕೆಲಸ‌ ಮಾಡಬೇಕು ಎಂದರು.


COMMERCIAL BREAK
SCROLL TO CONTINUE READING

ವರ್ಗಾವಣೆ ವಿಚಾರದಲ್ಲಿ ನಾವು ಸಿರಿಯಸ್ ಆಗಿರಲ್ಲ. ನನ್ನ ಮೌನ ನನ್ನ ವೀಕ್ನೆಸ್ ಅಲ್ಲಾ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರದ ಕುರಿತು, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ನಮ್ದು ಏನೂ ಇಲ್ಲ. ಸುತ್ತಿಹಾಕಿ ಯಾಕೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ತೆಗೆದುಕೊಂಡು ಹೋಗ್ತೀರಾ ಎಂದು ಸತೀಶ ಪ್ರಶ್ನೆ ಮಾಡಿದರು. 


ಲಕ್ಷ್ಮೀ ಹೆಬ್ಬಾಳ್ಕರ್ ವಿರೋಧ ಮಾಡೊದಾದ್ರೆ ಎಂಎಲ್‌ಸಿ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ವಿರೋಧ ಮಾಡ್ತಿರಲಿಲ್ಲ. ಈಗಲೂ ಲಕ್ಷ್ಮೀ ಹೆಬ್ಬಾಳ್ಕರ್ ಗುಂಪು ನಮ್ಮ ಗುಂಪು ಬೇರೆ ಬೇರೆ ಇರಬಹುದು. ಚುನಾವಣೆ ಬಂದಾಗ ನಾವು ಒಂದಾಗುತ್ತೇವೆ. ನೇರವಾಗಿ ಹೆಬ್ಬಾಳ್ಕರ್ ಗುಂಪು ಬೇರೆ ತಮ್ಮ ಗುಂಪು ಬೇರೆ ಎಂದು ಸತೀಶ್ ಹೇಳಿದರು. ಸರ್ಕಾರದಲ್ಲಿ ಎಲ್ಲಾ ನಾವು ಹೇಳಿದ್ದು ಆಗಬೇಕು ಅಂತೇನಿಲ್ಲ. ಒಂದೊಂದು ಸಲ ಫೇಲ್ ಆಗುತ್ತೆ ಎಲ್ಲರ ಮಾತೂ ನಾಯಕರು ಕೇಳಬೇಕಾಗುತ್ತೆ ಎಂದು ಹೇಳಿದರು. 


ಇದನ್ನೂ ಓದಿ : ರಾಜ್ಯದ ರಸ್ತೆ ಸಾರಿಗೆ ನಿಗಮಗಳಿಗೆ 5600 ಬಸ್‌ ಖರೀದಿ : ಸಿಎಂ ಸೂಚನೆ  


ಬೆಳಗಾವಿಯಿಂದ ಸರ್ಕಾರ ಬೀಳುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ, ನಮ್ಮ ಸರ್ಕಾರ ಇದ್ದೆ ಇರುತ್ತೆ, ಯಾವುದೇ ಸಂದರ್ಭದಲ್ಲಿ ಸರ್ಕಾರ ಬೀಳಲ್ಲ. ಸ್ವಲ್ಪ ಗಾಳಿ ಅದೂ ಬಿಟ್ಟಾಗ ವಿಮಾನ ಅಲಗಾಡುತ್ತೆ. ಈಗ ಅಲುಗಾಡಿ ಶಾಂತವಾಗಿದೆ ರಾಜಕೀಯದಲ್ಲಿ ಎಲ್ಲವೂ ನಡೆಯುತ್ತೆ. ಅಧಿವೇಶನಕ್ಕೆ ಬಂದಾಗ ಶಾಸಕರು ಗೋವಾ, ಕೊಲ್ಹಾಪುರ ಸೇರಿದಂತೆ ಬೇರೆಕಡೆ ಹೋಗ್ತಾರೆ. ನಮ್ಮ ಜತೆಗೆ ಅವರು ಊಟಕ್ಕೆ ಬರ್ತಾರೆ ಅದೂ ಈಗ ಬೇರೆ ರೀತಿ ಅರ್ಥ ಆಗುತ್ತೆ. ಪಕ್ಷ ಅಂತ ಬಂದಾಗ ಎಲ್ಲರೂ ಒಂದೇ ಆಗ್ತಾರೆ ಅದೇ ರೀತಿ ನಮ್ಮದು ಇದೆ ಎಂದು ತಿಳಿಸಿದರು.


ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ : 


ಜಿಲ್ಲಾ ಕಾಂಗ್ರೆಸ್ ನಲ್ಲಿ ಸಣ್ಣ ಸಮಸ್ಯೆ ಕೂಡ ಇಲ್ಲ. ಬಹಳಷ್ಟು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ನನ್ನ ಮಧ್ಯೆ ಸತೀಶ್ ಮಧ್ಯೆ ಯಾವುದೇ ಸಮಸ್ಯೆ ಇಲ್ಲಾ ಎಂದು ಹೆಬ್ಬಾಳ್ಕರ್‌ ಹೇಳಿದ್ದಾರೆ. 


ಮೈಸೂರು ಹೋಗೊಕೆ ಸತೀಶ್ ಜಾರಕಿಹೊಳಿ ನನ್ನನ್ನು ಕರೆದಿದ್ದರು. ನನ್ನ ಟಿಕೆಟ್ ಕೂಡ ಬುಕ್ ಮಾಡಿದ್ರು. ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಮೈಸೂರು ಹೋಗಲು ಪ್ಲ್ಯಾನ್ ಮಾಡಿದ್ರು. ಸಕ್ಕರೆ ಕಾರ್ಖಾನೆ ಬಾಯ್ಲರ್ ಪೂಜೆ ಹಿನ್ನೆಲೆಯಲ್ಲಿ ನಾನು ಹೊಗಲಿಲ್ಲ. ಹೈಕಮಾಂಡ್ ಯಾಕೆ ತಡೆಯಿತು ಅನ್ನೋದನ್ನ ಸತೀಶ್ ಜಾರಕಿಹೊಳಿ ಅವರಿಗೆ ಕೇಳಿ. ನೆಕ್ಸ್ಟ್ ಎಪಿಸೋಡ್ ಸತೀಶ್ ಅವರನ್ನೇ ಕೇಳಿ ಎಂದರು. 


ಇದನ್ನೂ ಓದಿ : ಸದಸ್ಯನಿಂದ ಗ್ರಾಪಂ ಕಚೇರಿಗೆ ಬೀಗ..! ಪಂಚಾಯಿತಿ ಆಡಳಿತದ ಅವ್ಯವಹಾರ ಖಂಡಿಸಿ ಆಕ್ರೋಶ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.