ಬೆಂಗಳೂರು : ಗೊಂದಲ ಹಿನ್ನೆಲೆ ಗೃಹ ಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವೆಬ್ ಸೈಟ್‌ನಲ್ಲಿ ಮಾಡಿದ ಪೋಸ್ಟ್ ಅಚಾತುರ್ಯದಿಂದಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಮಜಾಯಿಶಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಇಂದು ಮಧ್ಯಾಹ್ನ ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿತ ಫಲಾನುಭವಿಗಳ ಖಾತೆಗೆ ರೂ.2000 ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದಿರಲೆಂದು, ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿ ಸಲಾಗಿದ್ದು, ಶೀಘ್ರವೇ ನೋಂದಣಿ ಪುನರಾರಂಭಗೊಳ್ಳಲಿದೆ ಎಂದು ಪ್ರಕಟಿಸಲಾಗಿತ್ತು. ಇಲಾಖೆಯ ಈ ಪ್ರಕಟಣೆ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. 


ಇದನ್ನೂ ಓದಿ: ನಟ ಪ್ರಕಾಶ್ ರಾಜ್ ಅಪ್ಪ-ಅಮ್ಮನಿಗೆ  ಹುಟ್ಟಿದ್ದಾನಾ ಅನ್ನೋದಕ್ಕೆ ಗ್ಯಾರಂಟಿ ಏನು?- ಮಾಜಿ ಸಚಿವ ಕೆ ಎಸ್ ಈಶ್ವರಪ್ಪ


ಸಂಬಂಧಿತರ ವಿರುದ್ಧ ಕ್ರಮ : ಈ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಲಾಖೆ ವೆಬ್ ಸೈಟ್ ನಲ್ಲಿ ಮಾಡಿರುವ ಪ್ರಕಟಣೆ ಬಗ್ಗೆ ನನಗೆ ಗೊತ್ತಾಗಿಲ್ಲ. ಈ ಬಗ್ಗೆ ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರ ಬಳಿ ಚರ್ಚೆ ನಡೆಸಿದ್ದೇನೆ. ಯಾಕೆ ಹೀಗೆ ಆಗಿದೆ ಎಂದು ಗೊತ್ತಾಗಿಲ್ಲ. ಕೂಡಲೇ ಆ ಪೋಸ್ಟ್ ನ್ನು ತೆಗಸಲಾಗಿದೆ‌. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ನಿನ್ನೆನೂ ಕೂಡ 10,000 ನೋಂದಣಿ ಆಗಿದೆ. ಮುಂಚೆ ಒಂದು ಲಕ್ಷ ದಿಂದ ಐದು ಲಕ್ಷದವರೆಗೆ ಅರ್ಜಿ ಬರುತ್ತಿತ್ತು. ಈಗ ಕಡಿಮೆಯಾಗಿದ್ದು, ದಿನಕ್ಕೆ ಸುಮಾರು 10 ಸಾವಿರ ಅರ್ಜಿ ಬರುತ್ತಿದೆ ಎಂದು ತಿಳಿಸಿದರು.


ವೆಬ್ ಸೈಟ್ ನಲ್ಲಿ ಈ ರೀತಿ ಹೋಗಿರುವುದು ಅಚಾತುರ್ಯದಿಂದ ಆಗಿದೆ. ಸಂಬಂಧ ಪಟ್ಟವರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಯಾರೂ ಗೊಂದಲಕ್ಕೀಡಾಗುವುದು ಬೇಡ. ಇದು ನಿರಂತರವಾಗಿ ನಡೆಯುವ ಯೋಜನೆ. ಈ ತರ ಮಾಡಿದವರಿಗೆ ನೋಟೀಸ್ ಜಾರಿ ಮಾಡಲು ತಿಳಿಸಲಾಗಿದೆ. ಇದು ಒಂದು ಸಣ್ಣ ವಿಚಾರವಲ್ಲ.‌ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಯಾರು ಇದನ್ನು ವೆಬ್ ಸೈಟ್ ನಲ್ಲಿ ಅಪ್‌ಲೋಡ್ ಮಾಡಿದ್ದಾರೆ‌. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.


ಇದನ್ನೂ ಓದಿ: ಕರ್ನಾಟಕ ಪ್ರಜ್ಞಾವಂತರ ನಾಡು: ಜಾತಿ ದೌರ್ಜನ್ಯಗಳಿಗೆ ಕಡಿವಾಣ ಅತ್ಯಗತ್ಯ: ಸಿಎಂ ಸಿದ್ದರಾಮಯ್ಯ


63 ಲಕ್ಷ ಯಜಮಾನಿಯರಿಗೆ ಹಣ ಜಮೆ : ಗೃಹ ಲಕ್ಷ್ಮಿ ಯೋಜನೆಯಡಿ ಈವರೆಗೆ 63 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ ಎಂದು ಇದೇ ವೇಳೆ ತಿಳಿಸಿದರು. ನಾವು ಈಗಾಗಲೇ 1.8 ಕೋಟಿ ವರೆಗೆ ಇಲಾಖೆಯಿಂದ ಹಣ ಕಳಿಸಿ ಬಿಟ್ಟಿದ್ದೇವೆ. 1.28 ಕೋಟಿ ಯಜಮಾನಿಯರಿಗೆ ಹಣ ಸಂದಾಯ ಮಾಡುವುದು ನಮ್ಮ ಗುರಿ. ಯಾರು ಹೊಸ ಪಡಿತರ ಚೀಟಿ ಮಾಡುತ್ತಾರೆ. ಅವರಿಗೂ ಗೃಹ ಲಕ್ಷ್ಮಿ ಲಾಭ ಸಿಗಲಿದೆ ಎಂದರು.


ಈಗಾಗಲೇ ಯೋಜನೆಯಡಿ 1.12 ನೋಂದಣಿಯಾಗಿದೆ.‌ 14 ಲಕ್ಷ ಯಜಮಾನಿಗಳ ಅಪ್ ಲೋಡ್ ಆಗಬೇಕಿದೆ. ಎಲ್ಲಿಯೂ ಗೊಂದಲ‌ ಇಲ್ಲ. ಈವರೆಗೆ 63 ಲಕ್ಷ ಫಲಾನುಭವಿಗಳಿಗೆ ಹಣ ಜಮೆಯಾಗಿದೆ. ಬ್ಯಾಂಕ್‌ನವರು ನಿತ್ಯ ಸ್ವಲ್ಪ ಸ್ವಲ್ಪವಾಹಿ ನಿಗದಿತ ಹಣವನ್ನು ಖಾತೆಗೆ ಜಮೆ ಮಾಡುತ್ತಿದ್ದಾರೆ. ನಮ್ಮ ಇಲಾಖೆ ಕಡೆಯಿಂದ ಹಣ ನೀಡಿದ್ದೇವೆ. ನಮ್ಮ‌ಕಡೆಯಿಂದ ಯಾವುದೇ ಸಮಸ್ಯೆ ಆಗಿಲ್ಲ. ದಿನಕ್ಕೆ 25 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತೆ ಎಂದು ಅಂದುಕೊಂಡಿದ್ದೇವೆ. ಅದರ ಪ್ರಕಾರ ಒಂದು ವಾರದಲ್ಲಿ ಎಲ್ಲರ ಖಾತೆಗೆ ಹಣ ಜಮೆಯಾಗಲಿದೆ. ಮುಂದಿನ ತಿಂಗಳಿಂದ 1.12 ಕೋಟಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.