ಮೈಸೂರು: ಕಾಂಗ್ರೆಸ್ ಪಕ್ಷ ಯಾವತ್ತೂ ಹೃದಯದಿಂದ ವಿಚಾರ ಮಾಡುವ ಪಕ್ಷ. ಗ್ಯಾರಂಟಿ ಯೋಜನೆಗಳ ಮೂಲಕ ಎಷ್ಟೊಂದು ಪುಣ್ಯದ ಕೆಲಸ ಮಾಡುತ್ತಿದ್ದೇವೆ. ಕೇವಲ ಚುನಾವಣೆಯಲ್ಲಿ ಗೆದ್ದು ಬರಲು ನಾವು ಘೋಷಣೆಗಳನ್ನು ಮಾಡಲಿಲ್ಲ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ, ಕೊರೊನಾ ಬಂದು ಹೋದ ಮೇಲೆ ಜನರ ಜೀವನ ಕಷ್ಟವಾಗಿದೆ ಎನ್ನುವುದನ್ನು ಅರಿತು ಇಂತಹ ಸಂದರ್ಭದಲ್ಲಿ ಏನಾದರೂ ಮಾಡಬೇಕು ಎಂದು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

'ಗೃಹಲಕ್ಷ್ಮಿ' ಯೋಜನೆಯ ಉದ್ಘಾಟನೆ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಶನಿವಾರ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸರಕಾರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರನ್ನು ತರಬೇಕೆಂದು ಬೆಳಗಾವಿಯಿಂದ ಮೈಸೂರಿಗೆ ಬಂದು ಈ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.


ನಮ್ಮ ಸರಕಾರ 5 ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಸರಕಾರ ಎನಿಸಿದೆ, ಸಿದ್ದರಾಮಯ್ಯ ಭಾಗ್ಯಗಳ ಸರದಾರ ಎನಿಸಿಕೊಂಡಿದ್ದಾರೆ. ಡಿಕೆ.ಶಿವಕುಮಾರ ಅವರು ಅಪ್ರತಿಮ ಸಂಘಟಕ ಎನಿಸಿಕೊಂಡಿದ್ದಾರೆ. ಕೇವಲ ಚುನಾವಣೆಯಲ್ಲಿ ಗೆದ್ದು ಬರಲು ನಾವು ಘೋಷಣೆಗಳನ್ನು ಮಾಡಲಿಲ್ಲ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ, ಕೊರೊನಾ ಬಂದು ಹೋದ ಮೇಲೆ ಜನರ ಜೀವನ ಕಷ್ಟವಾಗಿದೆ ಎನ್ನುವುದನ್ನು ಅರಿತು ಇಂತಹ ಸಂದರ್ಭದಲ್ಲಿ ಏನಾದರೂ ಮಾಡಬೇಕು ಎಂದು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಎಂದು ಹೆಬ್ಬಾಳಕರ್ ಹೇಳಿದರು.


ಇದನ್ನೂ ಓದಿ: ಅಶೋಕ್ ಅವರನ್ನು ಪ್ರಧಾನಿ ಕಚೇರಿ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ: ಡಿ.ಕೆ ಶಿವಕುಮಾರ್ ತಿರುಗೇಟು 


ಕಾಂಗ್ರೆಸ್ ಪಕ್ಷ ಹೃದಯದಿಂದ ವಿಚಾರ ಮಾಡುತ್ತದೆ. ಹಾಗಾಗಿಯೆ ಇಂದಿರಾ ಗಾಂಧಿ, ದೇವರಾಜ ಅರಸ ಅಂತವರನ್ನು ಇಂದಿಗೂ ಸ್ಮರಿಸುತ್ತೇವೆ. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ತತ್ವದಲ್ಲಿ ವಿಶ್ವಾಸವಿಟ್ಟು ನಾವು ನಡೆಯುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ 100 ದಿನದಲ್ಲಿ ಇಂತಹ ಒಳ್ಳೆಯ ಬಜೆಟ್ ಕೊಟ್ಟು ಯಾವುದೇ ಅಡಚಣೆ ಮಾಡದೆ ಬಹಳ ಚೆನ್ನಾಗಿ ನಿರ್ವಹಣೆ ಮಾಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದ್ದಾರೆ ಎಂದು ಹೇಳಿದರು.


1.28 ಕೋಟಿ ಕುಟುಂಬಗಳಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ತಲುಪುತ್ತದೆ. ಈಗಾಗಲೆ 1.10 ಕೋಟಿ ಕುಟುಂಬಗಳು ನೊಂದಾಯಿಸಿಕೊಂಡಿವೆ. ಇನ್ನೂ ಸುಮಾರು 18 ಲಕ್ಷ ಕುಟುಂಬಗಳ ರೇಶನ್ ಕಾರ್ಡ್ ತಾಂತ್ರಿಕ ಕಾರಣದಿಂದ ಅಪ್ ಗ್ರೇಡ್ ಆಗಿಲ್ಲ. ಆದಾದರೆ ಇನ್ನೂ 18 ಲಕ್ಷ ಕುಟುಂಬಗಳು ಲಾಭ ಪಡೆಯುತ್ತವೆ. ಇದಕ್ಕೆ ಸಮಯ ಮಿತಿಯ ಇಲ್ಲ. ಯಾವಾಗ ಬೇಕಾದರೂ ರಜಿಸ್ಟ್ರೇಶನ್ ಮಾಡಿಕೊಳ್ಳಬಹುದು ಎಂದು ಹೇಳಿದರು.


ರಾಜ್ಯದ ಮೂಲೆ ಮೂಲೆಯ ಮಹಿಳೆಯರ ಸಬಲೀಕರಣ ನಮ್ಮ ಉದ್ದೇಶವಾಗಿದೆ. ರಾಜ್ಯದ ಎಲ್ಲ ಭಾಗಗಳ ಮಹಿಳೆಯರ ಸಮಸ್ಯೆಗಳೂ ಒಂದೇ ಆಗಿದೆ. ತಿಂಗಳಿಡೀ ಪಾತ್ರೆ ತೊಳೆಯಲು ಹೋದರೂ 1,500 ರೂ ಕೊಡ್ತಾರೆ. ಉದ್ಯೋಗ ಖಾತ್ರಿಯಲ್ಲಿ 100 ದಿನ ಬೆವರು ಸುರಿಸಿ ಕೆಲಸ ಮಾಡಿದರೆ 30 ಸಾವಿರ ರೂ. ಸಿಗುತ್ತದೆ. ಕಾಂಗ್ರೆಸ್ ಉದ್ದೇಶ ತಿಂಗಳಿಗೆ 2 ಸಾವಿರ ರೂ, ವರ್ಷಕ್ಕೆ 24 ಸಾವಿರ ರೂ. ಕೊಡುವುದಾಗಿದೆ. ಎಷ್ಟೊಂದು ಪುಣ್ಯದ ಕೆಲಸ ಮಾಡುತ್ತಿದೆ ಕಾಂಗ್ರೆಸ್ ಪಕ್ಷ ಎಂದು ಅವರು ವಿವರಿಸಿದರು.


ಇದನ್ನೂ ಓದಿ: ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ?: ರಾಜ್ಯ ಬಿಜೆಪಿ ನಾಯಕರನ್ನು ಅಣಕಿಸಿದ ಕಾಂಗ್ರೆಸ್ 


ಶಾಲೆಯೊಂದರಲ್ಲಿ ಮಗುವಿಗೆ ಮೊಟ್ಟೆ ವಿತರಿಸಿದ ಭಾವನಾತ್ಮಕ ಸಂದರ್ಭವೊಂದನ್ನು ಸಚಿವರು ಈ ವೇಳೆ ಸ್ಮರಿಸಿದರು. ಮೊಟ್ಟೆ ಪಡೆದ ಮಗು ತನ್ನ ಅಜ್ಜಿಗೂ ಒಂದು ಮೊಟ್ಟೆ ಕೊಡಿ ಎಂದು ಕೇಳಿದ ಪ್ರಸಂಗವನ್ನು ಉಲ್ಲೇಖಿಸಿದರು.


ಬಿಜೆಪಿಯವರು ನಾಲ್ಕಾಣೆ ಕೋಳಿಗೆ ಹನ್ನೆರಡಣೆ ಮಸಾಲೆ ಅರೀತಾರ. ನಾವು ಹಾಗಲ್ಲ. ಮಹಿಳೆಯರಿಗೆ ಶಕ್ತಿ ಕೊಡಲು ಈ ಎಲ್ಲ ಯೋಜನೆಗಳನ್ನು ತಂದಿದ್ದೇವೆ. ಪುರುಷರು ತಮಗೆ ಸಿಗುತ್ತಿಲ್ಲ ಎಂದು ಗೊಣಗಬೇಡಿ. ನಾವು 5 ಸಾವಿರ ವರ್ಷದಿಂದ ಅನುಭವಿಸಿದ್ದೇವೆ. ಈ ಯೋಜನೆಗಳಿಂದ ಪುರುಷರ ಜೇಬಿನಲ್ಲಿರುವ ಹಣವೂ ಉಳಿಯುತ್ತವೆ. ನಿಮಗೂ ಲಾಭ ಸಿಗುತ್ತದೆ ಎಂದು ಹೇಳಿದರು.


ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲಿ ಈ ಕಾರ್ಯಕ್ರಕಮ ಮಾಡುವ ಅವಕಾಶ ಸಿಕ್ಕಿದೆ. ನನ್ನ ಪರಿಚಯವನ್ನು ಈ ಭಾಗದಲ್ಲೂ ಮಾಡಿಕೊಳ್ಳಲು ಸಿಕ್ಕಿರುವ ಅವಕಾಶ ಇದು. ನಾನು ಎಲ್ಲದರಲ್ಲೂ ಪೊಸಿಟಿವ್ ಹುಡುಕುವವನು. ಹಾಗಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ನಿಮ್ಮೆಲ್ಲರ ಸಹಕಾರವಿರಲಿ ಎಂದು ಹೆಬ್ಬಾಳಕರ್ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.