Turuvekere Constituency : ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರ ಹಾಲಿ ಮಾಜಿ ಶಾಸಕರ ಜಿದ್ದಾಜಿದ್ದಿನ ರಣಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯ ಮಸಾಲೆ ಜಯರಾಂ ಈ ಬಾರಿ ಸೋಲು ಕಂಡಿದ್ದಾರೆ. ಜೆಡಿಎಸ್ ನ ಎಂ.ಟಿ.ಕೃಷ್ಣಪ್ಪ ಶಾಸಕರಾಗಿದ್ದಾರೆ.. ಇಬ್ಬರ ನಡುವೆ ಸದ್ಯ ಜಪಾಪಟಿಗೆ ಕಾರಣ ಆಗಿರೋದು ನಿವೇಶನಗಳು.. 


COMMERCIAL BREAK
SCROLL TO CONTINUE READING

ತುರುವೇಕೆರೆಯ ಶಾಸಕರಾಗಿದ್ದ ಮಸಲೆ ಜಯರಾಂ ವೇಳೆ ಬಿಜೆಪಿ ಸರ್ಕಾರ ಬಸವ ವಸತಿ ಹಾಗೂ ಡಾ.ಅಂಬೇಡ್ಕರ್ ವಸತಿ ಯೋಜನೆಯಡಿ ನೀಡಿದ್ದ 3375 ಮನೆಗಳನ್ನು ಮಾಜಿ ಶಾಸಕ ಮಸಾಲಾ ಜಯರಾಮ್ ದ್ವೇಷದ ರಾಜಕಾರಣದಿಂದ ಪಕ್ಕದ ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್  ಜೊತೆ ಶಾಮೀಲಾಗಿ ಇಲ್ಲಿಗೆ ಮಂಜೂರಾಗಿದ್ದ ಮನೆಗಳನ್ನು ಕುಣಿಗಲ್ ಗೆ ವರ್ಗಾವಣೆ ಮಾಡಿಸಿ ಕ್ಷೇತ್ರಕ್ಕೆ ದ್ರೋಹ ಬಗೆದಿದ್ದಾರೆಂದು ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಗುಡುಗಿದ್ದಾರೆ.


ಇದನ್ನೂ ಓದಿ-ಪಕ್ಕದ‌ ಮನೆ ಅಂಕಲ್ ಕಾಮದ ಕಣ್ಣಿಗೆ ಯುವತಿ ಬಲಿ : ಪಾದದ ಧೂಳಿನಿಂದ ಆರೋಪಿ ಪತ್ತೆ


ಮಾಜಿ ಶಾಸಕರು ಅಧಿಕಾರದಲ್ಲಿದ್ದಾಗ ಬಡಜನರಿಗೆ ಮನೆಗಳನ್ನು ನೀಡಲಿಲ್ಲ. ಅಂತಿಮ ದಿನಗಳಲ್ಲಿ ಬಿಜೆಪಿ ಸರ್ಕಾರ ಮಂಜೂರು ಮಾಡಿತ್ತು. ಆದರೆ ಅವುಗಳು ಕಾರ್ಯಗತವಾಗುವ ಸಂಧರ್ಭದಲ್ಲಿ ಮಾಜಿ ಶಾಸಕ ಮಸಾಲಾ ಜಯರಾಮ್ ಕುಣಿಗಲ್ ಗೆ ವರ್ಗಾವಣೆ ಮಾಡಿಸಿರುವುದನ್ನು ಖಂಡಿಸಿದ ಅವರು, ಈ ಕ್ಷೇತ್ರಕ್ಕೆ ಮಂಜೂರಾಗಿದ್ದ ಮನೆಗಳನ್ನು ಈ ಕ್ಷೇತ್ರಕ್ಕೇ ಪುನರ್ ವಿಂಗಡಣೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಮನವಿಯನ್ನು ಪುರಸ್ಕರಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಿ ಈ ಕ್ಷೇತ್ರದ ಜನತೆಗೆ ನ್ಯಾಯ ದೊರಕಿಸಿಕೊಡಲು ಹೋರಾಟದ ಮುಂಸೂಚನೆ ಕೊಟ್ಟಿದ್ದಾರೆ ಎಂ.ಟಿ.ಕೆ..


ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಜಲಜೀವನ್ ಮಿಷನ್  ಯೋಜನೆ ಕಾಮಗಾರಿಯ ಒಳಗುತ್ತಿಗೆ ತಮ್ಮ ಬಿಜೆಪಿ ಕಾರ್ಯಕರ್ತರಿಗೆ ನೀಡಿ ಚುನಾವಣೆಯಲ್ಲಿ ಸೋತ ನಂತರ ಕಾಮಗಾರಿಯಲ್ಲಿ ಲೋಪ ನಡೆದಿದೆ ಎಂದು ಸಂಸದ ಜಿ.ಎಸ್.ಬಸವರಾಜ್ ಮೂಲಕ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಿರುವ ಮಾಜಿ ಶಾಸಕರು ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ದ್ರೋಹ ಲೇವಡಿ ಮಾಡಿದ್ದಾರೆ.


ಅಲ್ಲದೆ ಕಾಂಗ್ರೆಸ್ ಮುಖಂಡ ಬೆಮೆಲ್ ಕಾಂತರಾಜು ವಿರುದ್ಧ ಹರಿಹಾಯ್ದಿರುವ ಅವರು, ತಮ್ಮ ಕಣ್ಣುಗಳನ್ನು ತೆರೆದು ನೋಡಲಿ. ನೂರಾರು ಶಾಶ್ವತ ಕಾಮಗಾರಿಗಳು ತಮ್ಮ ಅವಧಿಯಲ್ಲಿ ಮಾಡಿದ್ದೇನೆ. ಇದೇ  ಕಾರಣಕ್ಕೇ ಜನರು ತಮ್ಮನ್ನು ಪುನಃ ಗೆಲ್ಲಿಸಿದ್ದಾರೆ ತಿರುಗೇಟು ನೀಡಿದ್ದಾರೆ. 


ಇದನ್ನೂ ಓದಿ-ಬಿಬಿಎಂಪಿ ಗುಣನಿಯಂತ್ರಣ ಲ್ಯಾಬ್‌ನಲ್ಲಿ ಅಗ್ನಿ ಅವಘಡ : ಇಬ್ಬರು ಎಇಇ ಬಂಧನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.