ಬೆಂಗಳೂರು: ನಿಯಮ 60 ರ ಅಡಿಯಲ್ಲಿ ಸರ್ಕಾರ 40% ಕಮಿಷನ್ ಪಡೆಯುತ್ತಿದೆ ಎಂಬ ಆರೋಪದ ಚರ್ಚೆ ಅವಕಾಶ ನೀಡಲು ಮನವಿ ಮಾಡುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಮಾತಿನ ಮಧ್ಯ ಪ್ರವೇಶಿಸಿ ಮಾತನ್ನಾಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ನಮ್ ಮನೆ ದೇವ್ರು ಹೆಸ್ರು ಇಟ್ಕಂಡಿದೀರಿ, ಹಿಂಗಾಡ್ತಿರಲ್ಲ ಎನ್ನುವ ಮೂಲಕ ಗಂಭೀರ ಚರ್ಚೆ ವೇಳೆ ಸದನ ನಗೆ ಗಡಲಿನಲ್ಲಿ ತೇಲಿತು.


COMMERCIAL BREAK
SCROLL TO CONTINUE READING

Ravindra Jadeja : ಒಂದು ವಾರದಲ್ಲಿ ನಂಬರ್-1 ಸ್ಥಾನ ಕಳೆದುಕೊಂಡ ರವೀಂದ್ರ ಜಡೇಜಾ!


ಮನೆದೇವ್ರು, ಊರ ಹೆಸರು, ಒಕ್ಕಲು ಎಲ್ಲೆಲ್ಲೂ ರಾಮ ರಾಮ ರಾಮ : ಸದನದಲ್ಲೊಂದು ಸ್ವಾರಸ್ಯಕರ ಚರ್ಚೆ!:


ಮಾಧುಸ್ವಾಮಿ : ಮ್ಯಾಟರ್ ಆಫ್ ಅರ್ಜೆನ್ಸ್ ಆಂಡ್ ಇಂಪಾರ್ಟೆನ್ಸ್ ಆಗಿದ್ದರೆ ಮಾತ್ರ...


( ಮಧ್ಯೆ ಪ್ರವೇಶಿಸಿ ಮಾತಾಡಲು ಎದ್ದು ನಿಂತ ಸಿದ್ದರಾಮಯ್ಯ) 


ಸಿದ್ದರಾಮಯ್ಯ : ಈಗ....


ಮಾಧುಸ್ವಾಮಿ : ಒಂದು ನಿಮಿಷ ಸಾರ್, ದೇವರಾಗಿ.. ನಮ್ ಮನೆ ದೇವ್ರು ಹೆಸ್ರು ಇಟ್ಕಂಡಿದೀರಿ, ಹಿಂಗಾಡ್ತಿರಲ್ಲ..


ಸುಧಾಕರ್: ನಿಮ್ ಮನೆ ದೇವ್ರು ಯಾವ್ದು?


ಮಾಧುಸ್ವಾಮಿ : ಸಿದ್ದರಾಮೇಶ್ವರ.. 


ಅಶೋಕ್ : ಮನೆ ದೇವರಂತೆ ಬಿಟ್ಬಿಡಿ ಸರ್


ಮಾಧುಸ್ವಾಮಿ : ನಮ್ ಮನೆ ದೇವ್ರು ಹೆಸ್ರು ಇಟ್ಕಂಡು ಹಿಂಗಾಡ್ತಾರಲ್ರೀ ಅಶೋಕ್ ಇವ್ರು


ಸಿದ್ದರಾಮಯ್ಯ : ನಮ್ ಮನೆ ದೇವ್ರು ಸಿದ್ದರಾಮೇಶ್ವರ, ನಮ್ ಅಪ್ಪನ್ ಹೆಸ್ರು ಸಿದ್ದರಾಮೇಗೌಡ, ನಮ್ ಊರ್ ಹೆಸ್ರು ಸಿದ್ದರಾಮನಹುಂಡಿ, ನಮ್ ಮನೆ ದೇವ್ರು ಸಿದ್ದರಾಮೇಶ್ವರ


ಮಾಧುಸ್ವಾಮಿ : ನಾವು ಸಿದ್ದರಾಮನ ಒಕ್ಲು ಕೂತ್ಕಳಿ


ಅಶೋಕ್ : ಎಲ್ಲಾ ರಾಮ.. ರಾಮ.. ರಾಮ.. ರಾಮ.. ರಾಮ..


(ನಗೆಗಡಲಲ್ಲಿ ತೇಲಿದ ಸದನ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.