ಮೂಡಿಗೆರೆ: ವಿಧಾನ ಪರಿಷತ್‌ನಲ್ಲಿ ಮೊದಲ ಬಾರಿಗೆ ಸದಸ್ಯನಾದ ತನ್ನ ಹೆಸರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉಪಸಭಾಪತಿ ಹುದ್ದೆಗೆ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಘೋಷಿಸಿದರು. ಆಗ ಆ ಹುದ್ದೆಯ ನಿರೀಕ್ಷೆಯಲ್ಲೂ ಇರದ ತನಗೆ ಸಿಡಿಲು ಬಡಿದ ಅನುಭವ. ಈ ಘೋಷಣೆ ತನಗೆ ಕನಸು ಕಂಡಿರಬಹುದೆಂದು ಸುಮಾರು ಅರ್ಧ ಗಂಟೆ ತಾನು ಮೂಕವಿಸ್ಮಿತನಾಗಿದ್ದೆ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಹೇಳಿದರು.


COMMERCIAL BREAK
SCROLL TO CONTINUE READING

ಶುಕ್ರವಾರ ಸಂಜೆ ತಾ.ಪಂ. ವತಿಯಿಂದ ಪಂಡಿತ್‌ ದೀನ್‌ ದಯಾಳ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಪಸಭಾಪತಿ ಎಂ.ಕೆ.ಪ್ರಾಣೇಶ್(MK Pranesh)‌ ಹಾಗೂ ತಾಲೂಕಿನ 22 ಗ್ರಾ.ಪಂ.ಯ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮಗೆ ದೊರೆತ ಹುದ್ದೆಯ ಸಂದರ್ಭದ ಮೆಲುಕು ಹಾಕಿದರು.


BPL Card: ಟಿವಿ, ಫ್ರಿಡ್ಜ್, ಬೈಕ್ ಇದ್ದರೆ BPL ಕಾರ್ಡ್ ರದ್ದು: ಸ್ವಪಕ್ಷೀಯ ನಾಯಕರಿಂದಲೇ ವಿರೋಧ!


1984ರಿಂದ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಆರಂಭದಲ್ಲಿ ಗೋಣಿಬೀಡು ಕ್ಷೇತ್ರದಿಂದ ಜಿ.ಪಂ. ಸದಸ್ಯನಾಗಿ, ಜಿಲ್ಲಾ ಮತ್ತು ತಾಲೂಕು ಯುವ ಮೋರ್ಚಾದ ಅಧ್ಯಕ್ಷರಾಗಿ, 2 ಬಾರಿ ಬಿಜೆಪಿ(BJP) ಜಿಲ್ಲಾಧ್ಯಕ್ಷರಾಗಿ, ಒಮ್ಮೆ ಅರಣ್ಯ ವಸತಿ ವಿಹಾರಧಾಮ ನಿಗಮದ ಅಧ್ಯಕ್ಷರಾಗಿ, ಎಂಎಲ್‌ಸಿಯಾಗಿ ಕೊನೆಗೆ ಉಪ ಸಭಾಪತಿಯಂತಹ ಮಹತ್ವದ ಹುದ್ದೆ ತನ್ನ ಪಾಲಿಗೆ ಲಭಿಸಿದೆ. ಉಪಸಭಾಪತಿಯಾದ ಬಳಿಕ 5 ದಿನ ಪರಿಷತ್‌ ಸಭಾಪತಿ ಸ್ಥಾನ ಅಲಂಕರಿಸಿ ಆ ಹುದ್ದೆಯ ಅನುಭವ ಪಡೆದುಕೊಂಡಿದ್ದೇನೆ. ಎಲ್ಲರೊಂದಿಗೂ ಅನ್ಯೂನತೆಯಿಂದ ಉತ್ತಮ ಕೆಲಸ ನಿರ್ವಹಿಸುವುದಾಗಿ ಬದ್ದನಾಗಿರುವುದಾಗಿ ತಿಳಿಸಿದರು.


Fraud in Kisan Samman:ಕಿಸಾನ್ ಸಮ್ಮಾನ್ ಯೋಜನೆಯ 85 ಸಾವಿರ ಖಾತೆಗಳು ಬ್ಲಾಕ್..? ಕಾರಣ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.