ಚಿರತೆ ಸೆರೆ ಕಾರ್ಯಾಚರಣೆ: ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ನಾಲ್ವರಿಗೆ ಗಾಯ
ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ ರಸ್ತೆಯಲ್ಲಿ ರೈತರ ಜಮೀನಿನ ಪೊದೆಯಲ್ಲಿ ಅಡಗಿದ್ದ ಚಿರತೆ ಓಡಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಚಾಮರಾಜನಗರ: ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿಗೆ ಗುಂಡಿನ ಪದರಗಳು ನಾಟಿ ನಾಲ್ವರು ರೈತರು ಗಾಯಗೊಂಡ ಘಟನೆ ಯಳಂದೂರು ತಾಲೂಕಿನ ಮದ್ದೂರು- ಮಲ್ಲಿಗೆಹಳ್ಳಿ ನಡುವಿನ ಜಮೀನಿನಲ್ಲಿ ನಡೆದಿದೆ.
ಮದ್ದೂರು ಗ್ರಾಮದ ಮೂರ್ತಿ, ರವಿ, ಶಿವು ಹಾಗೂ ರಂಗಸ್ವಾಮಿ ಎಂಬವರು ಗಾಯಗೊಂಡು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮುಳ್ಳಿನ ಪೊದೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು.
ಇದನ್ನೂ ಓದಿ- ಚಿರತೆ ಹಾವಳಿಯ ನಕಲಿ ವಿಡಿಯೋ ಹರಿಬಿಟ್ಟಿ ಕಿಡಿಗೇಡಿಗಳು: ಭಯದ ವಾತಾವರಣದಲ್ಲಿ ಜನತೆ
ಕೂಡಲೇ ಅರಣ್ಯ ಇಲಾಖೆಗೆ ರೈತರು ಮಾಹಿತಿ ನೀಡಿದ್ದಾರೆ. ಯಳಂದೂರು ವಲಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಗುಂಡು ಹಾರಿಸಿದ ವೇಳೆ ಗುಂಡಿನ ಪದರಗಳು ನಾಲ್ವರಿಗೆ ತಗುಲಿ ಗಾಯಗಳಾಗಿದೆ.
ಇದನ್ನೂ ಓದಿ- ಜಮೀನಿನಲ್ಲಿ ಅವಿತು ಕುಳಿತ ಚಿರತೆ ಹಿಡಿಯಲು ನುರಿತ 50 ಜನರನ್ನು ಕರೆತಂದ ಅರಣ್ಯ ಇಲಾಖೆ!
ಇನ್ನು, ಚಿರತೆ ಕೂಡ ಅಸುನೀಗಿದ್ದು, ಆತ್ಮರಕ್ಷಣೆಗೆ ಕೆಲವರು ದೊಣ್ಣೆಯಿಂದ ಹೊಡೆದಾಗ ಸತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.