ಬೆಂಗಳೂರು: ನಾನು‌ ಕೆಪಿಸಿಸಿಯ ಯಾವುದೇ ಸ್ಥಾನಮಾನದ ಆಕಾಂಕ್ಷಿ ಅಲ್ಲ. ನಾನು ಅಖಿಲ ಭಾರತ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸಿದಿನಿ. ಈಗ ಕೆಪಿಸಿಸಿ ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ ನನಗೆ ಬೇಡ. ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಅವರೇ ಲೋಕಸಭೆಯವರೆಗೆ ಅಧ್ಯಕ್ಷರಾಗಿರುತ್ತಾರೆ, ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ತಿಳಿಸಿದರು.


COMMERCIAL BREAK
SCROLL TO CONTINUE READING

ವಿಧಾನ ಪರಿಷತ್  ಸದಸ್ಯರಾದ ಬಿಕೆ ಹರಿಪ್ರಸಾದ್ ಅವರು ಇಂದು  ಪತ್ರಿಕಾಗೋಷ್ಠಿಯಲ್ಲಿ ಮಾತ್ನಾಡಿ,ನನಗೆ ಸಚಿವ ಸ್ಥಾನ ಕೊಡಲಿಲ್ಲ ಅಂತ ಅಸಮಾಧಾನ ಇಲ್ಲ. ನಾನು ಎಂದೂ ಸಚಿವ ಸ್ಥಾನ ಕೇಳಿಲ್ಲ. ನನಗೆ ಅಸಮಾಧಾನ ಇರುವುದು ಇರುವ ವ್ಯವಸ್ಥೆ ವಿರುದ್ಧ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಮೇಲ್ಮನೆ. ಅದನ್ನ ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ. ತನ್ನದೇ ಆದ ಚರಿತ್ರೆ ಮೇಲ್ಮೈನೆ ಸಭೆಗಿದೆ. ಅದು ಹಾಳಾಗಬಾರದು. 


ಇದನ್ನೂ ಓದಿ: ವಿಡಿಯೋ : ಕಬ್ಬು ಕೊಟ್ಟರೆನೇ ಈ ಆನೆ ಮುಂದಕ್ಕೆ ಹೋಗಳು ಬಿಡುವುದು


ನಮ್ಮ ನಾಯಕರಾದ  ರಾಹುಲ್ ಗಾಂಧಿ ಕುರಿತ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮಹಾತ್ಮ ಗಾಂಧಿಯವರ ತತ್ವ ಸಿದ್ದಾಂತಕ್ಕೆ ಸಿಕ್ಕ ಜಯ.ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ಮಾಡಿದ ಭಾಷಣದ ಆಧಾರದ ಮೇಲೆ ಗುಜರಾತ್ ಕೋರ್ಟ್ ತೀರ್ಪು ಕೊಟ್ಟಿತ್ತು.  ಶ್ರೀ ರಾಹುಲ್ ಗಾಂಧಿ ಅವರನ್ನು ತರಾತುರಿಯಲ್ಲಿ ಸಂಸದ ಸ್ಥಾನದಿಂದಲೂ ಕೈ ಬಿಡಲಾಗಿತ್ತು. ಎರಡು ವರ್ಷ ಜೈಲು ಶಿಕ್ಷೆ ನೀಡಿರುವುದರ ಹಿಂದೆ ದ್ವೇಷ ರಾಜಕಾರಣವಿತ್ತು.  ಇದರ ವಿರುದ್ಧ ಇಂದು  ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ತೀರ್ಪು ನೀಡಿರುವುದು ಸತ್ಯಕ್ಕೆ ಸಂದ ಜಯ.


ಬಿಜೆಪಿಯವರ ಸುಳ್ಳು ಮತ್ತು ಅಸತ್ಯದ ಸಿದ್ದಾಂತಕ್ಕೆ ಸೋಲಾಗಿದೆ. ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯ ಸಿದ್ದಾಂತ ಮತ್ತು ಸತ್ಯಕ್ಕೆ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ಅರ್ಥ, ಸುಳ್ಳು ತುಂಬಾ ದಿನ ಇರಲ್ಲ ಎನ್ನುವುದಕ್ಕೆ ಸಾಕ್ಷಿ. ಬಿಲ್ಕಿಸ್ ಭಾನು ಪ್ರಕರಣ ಗುಜರಾತ್ ಮಾದರಿಯದ್ದು, ರಾಹುಲ್ ಗಾಂಧಿ ಅವರನ್ನ ಅನರ್ಹ ಮಾಡಿದ್ದು ಕೂಡ ಗುಜರಾತ್ ಮಾದರಿ ರಾಜಕೀಯದ ಉದಾಹರಣೆಗಳು. 


ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವಕ್ಕಾಗಿ ಆಗ್ರಹ ಮಾಡುತ್ತೇವೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಒಳ್ಳೆಯ ಕ್ರಮ ವಹಿಸಲಿದ್ದಾರೆ ಅಂತ ಭಾವಿಸಿದ್ದೇವೆ. ಲೋಕಸಭೆ ಸ್ಪೀಕರ್ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದ್ದಾರೆ ನೋಡಬೇಕಿದೆ. 


ಇದನ್ನೂ ಓದಿ: Shakti Yojana: ಶಕ್ತಿ ಯೋಜನೆ ಇನ್ನೂ 10 ವರ್ಷ ಇರುತ್ತದೆ- ಸಚಿವ ರಾಮಲಿಂಗಾರೆಡ್ಡಿ


ಮಹಿಳೆಯರಿಗೆ ರಕ್ಷಣೆ ಕೊಡೋದ್ರಲ್ಲಿ ಪ್ರಧಾನಿ ಮೋದಿ ವಿಫಲ ಆಗಿದ್ದಾರೆ. ಮಣಿಪುರ ಘಟನೆ ಸೇರಿದಂತೆ ಅನೇಕ ತೀರ್ಪುಗಳು ಕೇಂದ್ರದ ವಿರುದ್ಧವೇ ಬರುತ್ತಿವೆ. ನಿರ್ಭಯ ಪ್ರಕರಣದಿಂದ ಅವರು ಒಳಗೆ ಬಂದು, ಮಣಿಪುರ ಪ್ರಕರಣದಿಂದ ಎಗ್ಸಿಟ್ ಆಗಿದ್ದು ನಿಜಾ. ಇಡೀ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಘನಘೋರ ದೌರ್ಜನ್ಯ ನಡೆಯುತ್ತಿದೆ. ಮಣಿಪುರವೇ ಹೊತ್ತಿ ಉರಿಯುತ್ತಿದೆ. ಪ್ರಧಾನಿಗಳು ಮಾತ್ರ ಮೌನವಾಗಿದ್ದಾರೆ. ಮನ್ ಕೀ ಬಾತ್ ಅಲ್ಲಿ ಮಾತಾಡುತ್ತಿದ್ದಾರೆ. ಇದೆಲ್ಲ ನೋಡಿದ್ರೆ ಮೌನಂ ಸಮ್ಮತಿ ಲಕ್ಷಣಂ ಅನ್ನುವಂತಿದೆ. ಇಂತಹ ಘಟನೆಗಳು ಯಾವ ರೀತಿ ಪರಿಣಾಮ ಬೀರಲಿದೆ ನೋಡಬೇಕು.


ಲೋಕಸಭೆ ಚುನಾವಣಾ ಕುರಿತು ನಿನ್ನೆ  ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ  ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯ ಮುಖಂಡರ ಸಭೆ ಗಂಭೀರವಾಗಿ ನಡೆದಿದೆ.ಸಾಕಷ್ಟು ತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸುವುದೇ ನಮ್ಮ‌ಗುರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.