ಬೆಂಗಳೂರು: ಚುನಾವಣೆನೂ ಬರಲಿ, ಕರ್ನಾಟಕಕ್ಕೇ ಮೋದಿನೂ ಬರಲಿ ನನಗೇನು ಭಯ ಇಲ್ಲ ಇಲ್ಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮೋದಿ ವಿರುದ್ಧ ತೊಡೆ ತಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೋದಿ ಗುಜರಾತ್ ನಲ್ಲಿ 5800 ಕೋಟಿ ತೂ ಹೈವೇ ಘೋಷಣೆ ಮಾಡಿದ್ದಾರೆ. ಕರ್ನಾಟಕಕ್ಕೇ ಏಕೆ ಇಂತಹ ಸೌಕರ್ಯಗಳನ್ನು ನೀಡುತ್ತಿಲ್ಲ? ಕರ್ನಾಟಕದ ಜನತೆ ತೆರಿಗೆ ಕತ್ತಲ್ವಾ? ಎಂದು ಮೋದಿ ವಿರುದ್ಧ ಗುಡುಗಿದರು.


ಇವರು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ ಎಂಬುದರ ಬಗ್ಗೆ ಯಾವುದೇ ಅನುಮಾನ ಇಲ್ಲ. ಚುನಾವಣೆಯಲ್ಲಿ ಮೋದಿ ಕರ್ನಾಟಕಕ್ಕೆ ಬರಲಿ, ನಾನು ನೋಡ್ತೀನಿ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ಎಚ್ಡಿಡಿ ಸವಾಲೆಸೆದಿದ್ದಾರೆ.