ಬೆಂಗಳೂರು: ಇವರು ಜೀವರಕ್ಷಕರು.. ತಮ್ಮ ಪ್ರಾಣವನ್ನೇ ಪಣಕ್ಕಿಡುವ ಸಿಬ್ಬಂದಿ.. ಉಸಿರು ಹೋಗುವ ಜೀವಗಳಿಗೆ ಮರುಜನ್ಮ ನೀಡುವ ಜೀವಗಳು.. ರಸ್ತೆಗಳಲ್ಲಿ ಸೈರನ್​​​ ಹಾಕಿ ಶರವೇಗದಲ್ಲಿ ಆಸ್ಪತ್ರೆಗೆ ಸಾಗಿಸುವ ಈ ರಕ್ಷಕರು, ಈಗ ತಮ್ಮದೇ ಬದುಕಿಗಾಗಿ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.. ಕಳೆದ ನಾಲ್ಕು ತಿಂಗಳಿನಿಂದ ಸಂಬಳವೇ ಸಿಗದೆ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ. 


COMMERCIAL BREAK
SCROLL TO CONTINUE READING

ಹೌದು, ಇದು ಪರರ ಜೀವಕ್ಕಾಗಿ ಹಾತೊರೆಯುವ ಪರಜೀವಿಗಳು.. ಸದ್ಯ ಸಂಬಳವಿಲ್ಲದೆ ಗೋಳಾಡ್ತಿದ್ದಾರೆ.. 108ರ ಆ್ಯಂಬುಲೆನ್ಸ್​​​ ಸಿಬ್ಬಂದಿ ಸಮಸ್ಯೆ ಸದ್ಯಕ್ಕೆ ಮುಗಿಯದ ಕಥೆ ಆಗಿದೆ.. ವೇತನವಿಲ್ಲದೆ, ಈ ಚೈತನ್ಯ ಜೀವಿಗಳು ಬದುಕು ಸವೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.. ಈ ವರ್ಷದ ಆರಂಭದಿಂದ ಇಂದಿನವರೆಗೂ ವೇತನವೇ ಪಾವತಿಯಾಗಿಲ್ಲ. ಹೀಗಾಗಿ ಅವರಿವರ ಬಳಿ ಸಾಲ ಕೇಳುವ ಸ್ಥಿತಿಯಲ್ಲಿ ಸಿಬ್ಬಂದಿಯಿದ್ದಾರೆ. 


ಜೀವರಕ್ಷಕರಿಗಿಲ್ಲ ಸಂಬಳ:


2023ರ ಆರಂಭದಿಂದ ಈವರೆಗೆ ವೇತನ ಪಾವತಿಯಾಗಿಲ್ಲ.ಸಂಬಳ ಆಗದೆ ಕುಟುಂಬ ನಿರ್ವಹಣಿಗೂ ಕಷ್ಟಪಡುತ್ತಿದ್ದಾರೆ.ರಾಜ್ಯದಲ್ಲಿ ಒಟ್ಟು 710 ಆಂಬುಲೆನ್ಸ್ ಕಾರ್ಯನಿರ್ವಹಿಸುತ್ತಿವೆ3,600 ಸಿಬ್ಬಂದಿ ಜಿವಿಕೆ ಎಂಬ ಸಂಸ್ಥೆಯಡಿ ಕೆಲಸ ಮಾಡ್ತಿದ್ದಾರೆ.ಕೋವಿಡ್ ನಂತರ ಹಲವು ಬಾರಿ ಸಂಬಳದ ಸಮಸ್ಯೆಯಾಗ್ತಿತ್ತು, 2022 ಸೆಪ್ಟೆಂಬರ್‌ನಲ್ಲಿ ಸಿಬ್ಬಂದಿ ಕೋರ್ಟ್​ ಮೊರೆ ಹೋಗಿದ್ದರು.ಕರ್ತವ್ಯ ನಿಲ್ಲಿಸಿ ಮುಷ್ಕರ ನಡೆಸಿದ ನಂತರ ಸಂಬಳವನ್ನ ನೀಡಿದ್ರು. ಮುಂದಿನ 2 ತಿಂಗಳು ಸರಿಯಾಗಿ ವೇತನ ಪಾವತಿಯಾಯಿತು ನಂತರ ಮತ್ತೆ ಸಂಬಳ ನೀಡದೆ ಸತಾಯಿಸುತ್ತಿದ್ದಾರಂತೆ.


ಇದನ್ನೂ ಓದಿ: ಹೊಸನಗರದಲ್ಲಿ ಕುಡಿಯುವ ನೀರಿಗೂ ಹಾಹಾಕಾರ.. ಸಗಣಿ ನೀರನ್ನ ಮೈಮೇಲೆ ಎರಚಿಕೊಂಡು ಪ್ರತಿಭಟನೆ


2023ರ ಆರಂಭದಿಂದ ಈವರೆಗೆ ಆಂಬುಲೆನ್ಸ್‌ನ ಚಾಲಕರು, ಇಎಂಟಿಗಳು ಅಂದ್ರೆ ದಾದಿಯರಿಗೆ ವೇತನ ಪಾವತಿಯಾಗಿಲ್ಲ. ಇದರಿಂದ ಅವರು ಈಗ ಕುಟುಂಬ ನಿರ್ವಹಣಿಗೂ ಕಷ್ಟಪಡುತ್ತಿದ್ದಾರೆ. ರಾಜ್ಯದಲ್ಲಿ 710 ಆಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಅಂದಾಜು 3,600 ಚಾಲಕರು ಹಾಗೂ ನರ್ಸ್‌ಗಳು, ಬ್ಯಾಕ್ ಆಫೀಸ್ ಸಿಬ್ಬಂದಿ ಜಿವಿಕೆ ಎಂಬ ಸಂಸ್ಥೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ನಂತರ ಸಿಬ್ಬಂದಿಗೆ ಹಲವು ಬಾರಿ ವೇತನ ಪಾವತಿ ಸಮಸ್ಯೆಯಾಗುತ್ತಲೇ ಇತ್ತು. 2022 ಸೆಪ್ಟೆಂಬರ್‌ನಲ್ಲಿ ಸಿಬ್ಬಂದಿ ನ್ಯಾಯಾಲಯದ ಮೊರೆ ಹೋಗಿದ್ದರು. ಕರ್ತವ್ಯ ನಿಲ್ಲಿಸಿ ಮುಷ್ಕರ ನಡೆಸಿದ ನಂತರ ಸಂಬಳ ನೀಡಿದ್ದರು. ಅದರೆ, ಮುಂದಿನ ಎರಡು ತಿಂಗಳಲ್ಲಿ ಸರಿಯಾಗಿ ವೇತನ ಪಾವತಿಯಾಯಿತು. ನಂತರ ಮತ್ತೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಅಂತಾರೆ ಸಿಬ್ಬಂದಿ.


ಇದನ್ನೂ ಓದಿ: Congress Government: 34 ಸಚಿವರು ಮತ್ತು ಖಾತೆ..! ಸಿದ್ದು ಸಂಪೂರ್ಣ ಸಂಪುಟ ಮಾಹಿತಿ ಇಲ್ಲಿದೆ


ಆದ್ರೆ ಸರ್ಕಾರದಿಂದ 14 ಕೋಟಿ ಬಿಲ್​ ಪಾವತಿ ಬಾಕಿಯಿದೆ ಹೀಗಾಗಿ ಪಾವತಿ ವಿಳಂಬ ಅಂತಿದೆ ಗುತ್ತಿಗೆ ವಹಿಸಿಕೊಂಡಿರುವ ಜಿವಿಕೆ ಸಂಸ್ಥೆ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೊಸ ವರ್ಷದ ಆರಂಭದಿಂದ ಇಂದಿನವರೆಗೂ ಜೀವರಕ್ಷಕರಿಗೆ ಸಂಬಳವೇ ಆಗಿಲ್ಲ. ಒಂದು ವೇಳೆ ಸಂಬಳ ಆದೆ ಸಿಬ್ಬಂದಿ ಮುಷ್ಕರ ಮಾಡಿದ್ರೆ ರಾಜ್ಯದಲ್ಲಿ ಹೆಲ್ತ್  ಎಮರ್ಜೆನ್ಸಿ ನಿರ್ಮಾಣವಾಗೋದು ಖಚಿತ.. ಆ ಪರಿಸ್ಥಿತಿಗೂ ಮುನ್ನವೇ ಸರ್ಕಾರ ಮಧ್ಯೆ ಪ್ರವೇಶ ಮಾಡಿದ್ರೆ, ಉಸಿರು ಉಳಿಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ