ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯಿತ ಸಮಾವೇಶದಲ್ಲಿ ಪಂಚಮ ಸಾಲಿ ಪೀಠದ ಶ್ರೀಗಳು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ಮಾತಿನ ಮೇಲೆ ನಿಯಂತ್ರಣ ಕಳೆದುಕೊಂಡು ಮಾತನಾಡಿರುವ ಸ್ವಾಮಿಜಿ ಶಬ್ದಗಳನ್ನು ಕೇಳಿದರೆ ಒಬ್ಬ ಸ್ವಾಮೀಜಿ ಹೀಗೂ ಮಾತನಾದಬಹುದೇ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ.


COMMERCIAL BREAK
SCROLL TO CONTINUE READING

"ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯಿತರು, ಐದು ಜನ ತಂದೆಯವರಿಗೆ ಹುಟ್ಟಿದವರು ವೀರಶೈವರು." ನಮ್ಮ‌ತಂದೆ ಒಬ್ಬನೇ ಎಂದು ಹೇಳಿರುವ ಸ್ವಾಮೀಜಿ... ನೀವು ಒಬ್ಬ ತಂದೆಗೆ ಹುಟ್ಟಿದವರು ಎಂದು ಹೇಳುತ್ತಿರೋ? ಅಥವಾ ಐದು ಜನ ತಂದೆಗೆ ಹುಟ್ಟಿದವರು ಎಂದು ಹೇಳಿಕೊಳ್ಳುತ್ತಿರೋ? ಎಂದು ಪಂಚಮ ಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಮಾವೇಶದಲ್ಲಿ ಪ್ರಶ್ನಿಸಿದ್ದಾರೆ.


ಅಲ್ಲದೆ, ಈ ಸಮಾವೇಶದಲ್ಲಿ ಸುಲಫಲ ಮಠದ ಸ್ವಾಮೀಜಿಗಳು ಕೂಡಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಮಾಜದಲ್ಲಿ ವಿಷ ಬಿತ್ತುವ ಕೆಲಸವನ್ನು ಪಂಚಾರ್ಯರೆ ಮಾಡುತ್ತಿದ್ದಾರೆ. ವೀರಶೈವ ಪಂಚಠಾಧೀಶ ಎಲ್ಲಿ ಹುಟ್ಟಿದ್ದಾರೆ? ಹೇಗೆ ಹುಟ್ಟಿದ್ದಾರೆ? ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.


ಈ ಮೂಲಕ ಲಿಂಗಾಯತ ಮತ್ತು ವೀರಶೈವ ಮಠಾಧೀಶರ ನಡುವಿನ ಬಿರುಕು ಈಗ ಸಮಾವೇಶಗಳಲ್ಲಿ ಎದ್ದು ಕಾಣಿಸುತ್ತಿದೆ.