ಬೆಂಗಳೂರು: ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಕರ್ಮಗೊಳ್ಳಲು ಮುಂದಾಗಭಾರದು, ಅದಕ್ಕೆ ಹೈಕೋರ್ಟ್ ತಡೆಯನ್ನು ತರಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ  ಅರ್ಜಿಯನ್ನು ಹೈಕೋರ್ಟ್ ಸ್ಪಷ್ಟವಾಗಿ ತಳ್ಳಿಹಾಕಿದೆ .


COMMERCIAL BREAK
SCROLL TO CONTINUE READING

ಈ ವಿಷಯವಾಗಿ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಇದು ಶಾಸಕಾಂಗಕ್ಕೆ ಸಂಬಂಧಿಸಿದ ವಿಷಯ ಇದನ್ನು ಸರ್ಕಾರ ನಿರ್ಧರಿಸುತ್ತದೆ.ಒಂದು ವೇಳೆ ಇದರಲ್ಲಿ ಕಾನೂನಿನ ಯಾವುದೇ ತೊಡಕುಗಳಿದ್ದರೆ ಮಾತ್ರ  ಅದನ್ನು ಕೋರ್ಟ್ ನಿರ್ಧರಿಸುತ್ತದೆ ಎಂದು ಅವರು ತಿಳಿಸಿದರು.


ಸರ್ಕಾರ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಿದರೆ ಸಾಮಾಜಿಕ ಕಲಹಗಳು ಉಂಟಾಗುತ್ತೇವೆ ಎನ್ನುವ ಸಂಗತಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳು, ಇವು ಅತಿಯಾದ ಕಲ್ಪಿತ ನಂಬಿಕೆಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.