ಬೆಂಗಳೂರು : ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಎಸ್‌ಇಎಲ್) ಗುರುವಾರ ಕರ್ನಾಟಕದ 17,000 ಕ್ಕೂ ಹೆಚ್ಚು ಅಧಿಕೃತ ಖಾಸಗಿ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಈ ಪಟ್ಟಿ ಬಿಡುಗಡೆಯ ನಂತರ ಪೋಷಕರು ಕೂಡಾ ಗೊಂದಲಕ್ಕೆ ಈಡಾಗುವಂತಾಗಿದೆ.ಯಾಕೆಂದರೆ ಸರ್ಕಾರದ ಒಪ್ಪಿಗೆ ಇಲ್ಲದೆ ನಡೆಸುತ್ತಿರುವ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಡಿಎಸ್‌ಇಎಲ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಪಟ್ಟಿಯಲ್ಲಿ ಜಿಲ್ಲಾವಾರು ಶಾಲೆಗಳ ಹೆಸರನ್ನು ನೀಡಲಾಗಿದೆ.ಅದರ ಅಡಿಯಲ್ಲಿ ಒಬ್ಬರು ಬ್ಲಾಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.ಇಲ್ಲಿ ತಮ್ಮ ಮಗುವಿನ ಶಾಲೆಯು ಅಧಿಕೃತವಾಗಿದೆಯೇ ಎಂದು ನೋಡಲು ಪಟ್ಟಿ ಮಾಡಲಾದ ಹೆಸರುಗಳ ಸರಣಿಯನ್ನು ನೋಡಬೇಕು.ಈ ಶಾಲೆಗೆ  ಅನುಮತಿ ನೀಡಿದ ಅವಧಿಯನ್ನು ಕೂಡಾ ಪರಿಶೀಲಿಸಬಹುದು.ಈ ಲಿಸ್ಟ್ ಶಾಲೆಯು ನೀಡಬಹುದಾದ ಬೋರ್ಡ್‌ಗಳು ಮತ್ತು ತರಗತಿಗಳನ್ನು ಸಹ ಉಲ್ಲೇಖಿಸುತ್ತದೆ.


ಇದನ್ನೂ ಓದಿ : ದೆಹಲಿ ಸಿಎಂ ಆಗಿರೋ ಯೋಗ್ಯತೆ ಇಲ್ಲ ಕೇಜ್ರಿವಾಲ್ ಗೆ-ಕೇಂದ್ರ ಸಚಿವ ಪ್ರಲ್ಹಾದ ಜೋಶಿ


ಬೆಂಗಳೂರು ಒಂದರಲ್ಲೇ, 3,064 ಶಾಲೆಗಳು ಅನುಮೋದನೆ ಪಡೆದಿದೆ. ಈ ಪೈಕಿ ಬೆಂಗಳೂರು ದಕ್ಷಿಣ (1,312) ಉತ್ತರ (1,302) ಮತ್ತು ಗ್ರಾಮಾಂತರ (449)ಗಳಲ್ಲಿ ಅಧಿಕೃತ ಶಾಲೆಗಳಿವೆ. ಇನ್ನು ಎಷ್ಟು ಶಾಲೆಗಳು ಅನುಮತಿ ಇಲ್ಲದೆ ನಡೆಯುತ್ತಿದೆ ಎನ್ನುವುದರ ಬಗ್ಗೆ ನಿಖರ ಮಾಹಿತಿಯನ್ನು ಇಲಾಖೆ ಅಧಿಕಾರಿಗಳು ನೀಡಿಲ್ಲ.


ಈ ಬಗ್ಗೆ ಮಾತನಾಡಿದ ಡಿಎಸ್‌ಇಎಲ್‌ನ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಸಿಂಗ್, “ನಾವು ಅನಧಿಕೃತ ಶಾಲೆಯ ಪಟ್ಟಿಯನ್ನು ನೀಡುತ್ತಿಲ್ಲ.ಬದಲಾಗಿ ನಾವು ಸಕಾರಾತ್ಮಕ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದೇವೆ.ಇಲ್ಲಿ ಅಧಿಕೃತ ಶಾಲೆಗಳ ಪಟ್ಟಿ ನೋಡುವ ಮೂಲಕ ಪೋಷಕರಿಗೆ ಅವರ ಮಕ್ಕಳು ಓದುತ್ತಿರುವ ಶಾಲೆ ಅಧಿಕೃತವೇ, ಅನಧಿಕೃತವೆ ಎನ್ನುವುದು ತಿಳಿಯಲಿದೆ ಎಂದಿದ್ದಾರೆ. ಅಲ್ಲದೆ ಈ ಪಟ್ಟಿಯನ್ನು ಪರಿಶೀಲಿಸುವ ಮೂಲಕ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ. 


ಇದನ್ನೂ ಓದಿ : ಬಯಲಾಟ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಶ್ರೀರಾಮುಲು..!


ಪೋಷಕರಿಗೆ ಸಹಾಯವಾಣಿ :
ಇನ್ನು ಶಾಲೆಯು ಅಧಿಕೃತವೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸರ್ಕಾರ ಪೋಷಕರಿಗಾಗಿ ಸಹಾಯವಾಣಿಯನ್ನು ಪ್ರಾರಂಭಿಸಬೇಕು ಎಂದು NGO Child Rights Trust  ಸಲಹೆ ನೀಡಿದೆ. ‘ಗ್ರಾಮೀಣ ಪ್ರದೇಶದ ಅನೇಕ ಪಾಲಕರು ವೆಬ್‌ಸೈಟ್‌ಗೆ ಪ್ರವೇಶಿಸಲು ಮತ್ತು ತಾಲೂಕುವಾರು ಡೇಟಾವನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದು ಅದು ಹೇಳಿದೆ. ಅಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರವೂ ಶಾಲೆಗಳು ತಮ್ಮ ಶಾಲೆ ಅಧಿಕೃತ ಅನುಮತಿ ಪಡೆದಿದೆ ಎಂದು ಹೇಳುತ್ತಿವೆ ಎಂದು ಅನೇಕ ಪೋಷಕರು ಹೇಳುತ್ತಿದ್ದಾರೆ ಎಂದು ಸಿಆರ್‌ಟಿ ನಿರ್ದೇಶಕ ನಾಗಸಿಂಹರಾವ್‌ ಹೇಳಿದ್ದಾರೆ. ಪೋಷಕರು ತಮ್ಮ ಮಗುವಿನ ಶಾಲೆಯನ್ನು ಬದಲಾಯಿಸಬಾರದು ಎನ್ನುವಂತೆ ಶಾಲೆಗಳು ಪೋಷಕರಿಗೆ ಮನವಿ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ ಎಂದು ಅವರು ತಿಳಿಸಿದ್ದಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.