ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.  ಬೆಳಗ್ಗೆ 10.30 ರಿಂದ 11.30 ರ ರೊಳಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಂಪುಟದ ಹೊಸ 17 ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 
ಯಡಿಯೂರಪ್ಪ ಸಂಪುಟದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಇಂದು ಒಟ್ಟು 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಜಾತಿ ಲೆಕ್ಕಾಚಾರದಲ್ಲಿ 7 ಲಿಂಗಾಯತ ಶಾಸಕರು, 3 ಒಕ್ಕಲಿಗ ಶಾಸಕರು,  4 ಎಸ್‌ಸಿ ಎಸ್‌ಟಿ ಶಾಸಕರು, 2 ಹಿಂದುಳಿದ ವರ್ಗದ ಶಾಸಕರು ಹಾಗೂ 1 ಬ್ರಾಹ್ಮಣ ಶಾಸಕರಿಗೆ ಮಣೆ ಹಾಕಲಾಗಿದೆ.


ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವವರ ಸಂಪೂರ್ಣ ಪಟ್ಟಿ ಇಲ್ಲಿದೆ:


7 ಲಿಂಗಾಯತ ಸಚಿವರು


  • 1. ಲಕ್ಷ್ಮಣ್ ಸವಧಿ

  • 2. ಜಗದೀಶ್ ಶೆಟ್ಟರ್

  • 3. ವಿ. ಸೋಮಣ್ಣ

  • 4. ಬಸವರಾಜ್ ಬೊಮ್ಮಾಯಿ

  • 5. ಜೆ.ಸಿ. ಮಾಧುಸ್ವಾಮಿ

  • 6. ಸಿ.ಸಿ. ಪಾಟೀಲ್

  • 7. ಶಶಿಕಲಾ ಜೊಲ್ಲೆ 


 3 ಒಕ್ಕಲಿಗ


  • 1. ಆರ್. ಅಶೋಕ್

  • 2. ಡಾ. ಅಶ್ವತ್ಥ ನಾರಾಯಣ

  • 3. ಸಿ.ಟಿ.ರವಿ


4 ಎಸ್‌ಸಿ ಎಸ್‌ಟಿ


  • 1. ಶ್ರೀರಾಮುಲು

  • 2. ಗೋವಿಂದ ಕಾರಜೋಳ

  • 3. ನಾಗೇಶ್

  • 4. ಪ್ರಭು ಚೌವ್ಹಾಣ್


2 ಹಿಂದುಳಿದ ವರ್ಗ


  • 1. ಎಸ್.ಈಶ್ವರಪ್ಪ

  • 2. ಕೋಟಾ ಶ್ರೀನಿವಾಸ್ ಪೂಜಾರಿ


1 ಬ್ರಾಹ್ಮಣ


  • 1. ಸುರೇಶ್ ಕುಮಾರ್