ಬೆಂಗಳೂರು: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭರ್ಜರಿ ತಯಾರಿ ನಡೆಸುತ್ತಿದೆ . ಈ ಹಿನ್ನಲೆ ಬೆಂಗಳೂರಿನಲ್ಲಿ 16 ಪಬ್ಲಿಕ್ ಸ್ಕೂಲ್ ಆರಂಭಿಸುವ ಯೋಜನೆಯಲ್ಲಿದೆ. ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.  ಸುಸಜ್ಜಿತ ಕಟ್ಟಡ, ಶೌಚಗೃಹ ಸೇರಿದಂತೆ ಖಾಸಗಿ ಶಾಲೆಗಳ ಹಂತಕ್ಕೆ ಸರಕಾರಿ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇದಕ್ಕಾಗಿ 90 ಕೋಟಿ ರೂ.ಅವಶ್ಯಕತೆ ಇದ್ದು, ಈಗಾಗಲೇ ಸರಕಾರ 20 ಕೋಟಿ  ಬಜೆಟ್‌ನಲ್ಲಿ ನೀಡಿದೆ. ಈ ಯೋಜನೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ದ್ವಿತೀಯ ಪಿಯುಸಿತರಗತಿಗಳ ವರೆಗೆ ಶಿಕ್ಷಣ ನೀಡಲಾಗುತ್ತದೆ. ಹಾಲಿ ಇರುವ ಶಾಲೆಗಳನ್ನು ಉನ್ನತೀಕರಿಸಿ ಹಾಗೂ ಕೆಲವು ಕಡೆ ಹೊಸ ಕಟ್ಟಡ ಒಳಗೊಂಡು ಬೆಂಗಳೂರು ಪಬ್ಲಿಕ್ ಶಾಲೆ ಆರಂಭಿಸುವ ನಿರ್ಧಾರದಲ್ಲಿದೆ.


ಇದನ್ನೂ ಓದಿ: NEP: 9 -10ನೇ ತರಗತಿ ಹಾಗೂ ಪಿಯು ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ 
ಅತಿ ಹೆಚ್ಚು ಬಡ ಜನರು ವಾಸಿಸುವ ಕಡೆ ಈ ಶಾಲೆಗಳು ಓಪನ್  ಮಾಡಲಾಗುತ್ತದೆ. ಬಹಳ ಮುಖ್ಯವಾಗಿ ಕೊಳೆಗೇರಿ ಅಂಥಹ  ಪ್ರದೇಶಗಳಲ್ಲಿ ಇದ ಅವಶ್ಯಕಥೆ ಹೆಚ್ಚಿದೆ. ಖಾಸಗಿ ಶಾಲೆಗಳ ಫೀಜ್ ಟಾರ್ಚರ್ ನಿಂದ ಮುಕ್ತಿ ಮಾಡಲು ಹಾಗೂ ಬಡ ಮಕ್ಕಳನ್ನು ಸರಕಾರಿ ಶಾಲೆಯತ್ತ ಸೆಳೆಯುವುದರ ಜತೆಗೆ ಮತ್ತಷ್ಟು ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗುತ್ತಿದೆ. 


ಇದನ್ನೂ ಓದಿ: Online Medicine: ಆನ್‌ಲೈನ್‌ನಲ್ಲಿ ಔಷಧಿ ಖರೀದಿಸುವವರೇ ಎಚ್ಚರ..!https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.