ವಿಶ್ವಾಸ ಗೆದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ!

Mon, 29 Jul 2019-2:30 pm,

ವಿಶ್ವಾಸಮತದ ಪರವಾಗಿ ಮತ ಹಾಕಲು ಬಿಜೆಪಿ ಶಾಸಕರಿಗೆ `ವಿಪ್` ಜಾರಿ.

ಬೆಂಗಳೂರು: 15ನೇ ವಿಧಾನಸಭೆ ಮತ್ತೊಮ್ಮೆ ವಿಶ್ವಾಸಮತ ಯಾಚನೆಗೆ ಸಿದ್ದವಾಗಿದ್ದು, ಶುಕ್ರವಾರದಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪ ಇಂದು ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಜುಲೈ 25 ರಂದು ಮೂವರು ಶಾಸಕರನ್ನು ಅನರ್ಹತೆಗೊಳಿಸಿ ತೀರ್ಪು ಪ್ರಕಟಿಸಿದ್ದ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, ಭಾನುವಾರ 14 ಶಾಸಕರನ್ನು ಅನರ್ಹಗೊಳಿಸಿ ತೀರ್ಪು ಪ್ರಕಟಿಸಿದರು. ಇದರೊಂದಿಗೆ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್‌-ಜೆಡಿಎಸ್‌ನ ಎಲ್ಲಾ 17 ಶಾಸಕರನ್ನು ಈ ಅವಧಿಗೆ ಅನರ್ಹಗೊಂಡಿದ್ದಾರೆ. ಇದರಿಂದಾಗಿ 225 ಸದಸ್ಯ ಬಲವುಳ್ಳ ಸದನದ ಸದ್ಯದ ಬಲಾಬಲ 208 ಆಗಿದೆ. ಈ ಹಿನ್ನಲೆಯಲ್ಲಿ ಬಹುಮತ ಸಾಬೀತುಪಡಿಸಲು ನೂತನ ಸರ್ಕಾರಕ್ಕೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 104 ಆಗಿದೆ. ಈಗಾಗಲೇ ಬಿಜೆಪಿ 105 ಸಂಖ್ಯೆಯನ್ನು ಹೊಂದಿರುವದರಿಂದ ಬಿಜೆಪಿಗೆ ಬಹುಮತದ ಹಾದಿ ಸುಲಭವಾಗಿತ್ತು.


 

Latest Updates

  • ಸಂಜೆ 5 ಗಂಟೆಗೆ ವಿಧಾನಸಭೆ ಅಧಿವೇಶನ ಮುಂದೂಡಿಕೆ

    COMMERCIAL BREAK
    SCROLL TO CONTINUE READING

    ಸಂಜೆ 5 ಗಂಟೆಗೆ ಸದನದ ಕಲಾಪ ಮುಂದೂಡಿದ ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ.

  • ಚುನಾವಣೆಗಳು ಸುಧಾರಣೆಯಾಗದಿದ್ದರೆ, ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿಲ್ಲ: ಸ್ಪೀಕರ್ ರಮೇಶ್ ಕುಮಾರ್ ಮಾತು 
    - ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ.
    - ರಾಜಕಾರಣದಲ್ಲಿ ಕೆಲ ಘಟನೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ವಿವೇಚನೆಯಿಂದ ಕೆಲಸ ಮಾಡಬೇಕು.
    - ನಮ್ಮ ಸ್ಥಾನಕ್ಕೆ ಅಪಚಾರ ಮಾಡದಂತೆ ಕೆಲಸ ಮಾಡಬೇಕು.
    - ಕೆಲವು ಸಲ ನಾನು ಸಿಟ್ಟಿನಲ್ಲಿ ಮಾತನಾಡುತ್ತೇನೆ, ಆದರೆ ಯಾವುದೇ ದ್ವೇಷವಿಲ್ಲ ಎಂದು ಹೇಳಿದ 
    ಸ್ಪೀಕರ್.
    - ಸ್ಪೀಕರ್ ಕಚೇರಿ ಸಿಬ್ಬಂದಿಗೆ ಧನ್ಯವಾದ ತಿಳಿಸಿದ ರಮೇಶ್ ಕುಮಾರ್.
    - ಮಾಧ್ಯಮಗಳಿಗೆ ಋಣಿಯಾಗಿದ್ದೇನೆ ಎಂದ ಸ್ಪೀಕರ್ ರಮೇಶ್ ಕುಮಾರ್.
    - ನನ್ನ ಕೆಲಸದ ವೇಳೆ ಯಾರ ಒತ್ತಡಕ್ಕೂ ನಾನು ಮಣಿದಿಲ್ಲ.
    - ಈ ದೇಶದಲ್ಲಿ ಭ್ರಷ್ಟಾಚಾರದ ಮೂಲ ಚುನಾವಣೆಗಳು.
    - ಚುನಾವಣೆಗಳು ಸುಧಾರಣೆಯಾಗದಿದ್ದರೆ, ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿಲ್ಲ.
    - ಲೋಕಾಯುಕ್ತ ಕಾನೂನು ಸಹ ಸುಧಾರಣೆಯಾಗಬೇಕು.
    - ಜನಪ್ರತಿನಿಧಿಗಳ ಆಸ್ತಿ ವಿವರ ಕಡ್ಡಾಯ.
    - ಜನರಪ್ರತಿನಿಧಿಗಳು ಆಸ್ತಿವಿವರ ಸಲ್ಲಿಸದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು.

    COMMERCIAL BREAK
    SCROLL TO CONTINUE READING

    ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಆರ್. ರಮೇಶ್ ಕುಮಾರ್.

  • ಸಪ್ಲಿಮೆಂಟರಿ ಬಜೆಟ್ ವಿಚಾರ: ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದ
    ಹಣಕಾಸು ವಿಧೆಯಕದಂತೆ ಪೂರಕ ಬಜೆಟ್ ಗೂ ಅನುಮೋದನೆ ನೀಡುವಂತೆ ಕೋರಿದ ಮುಖ್ಯಮಂತ್ರಿ ನಡೆಗೆ ಸಿದ್ದರಾಮಯ್ಯ ಆಕ್ಷೇಪ.
    ಪೂರಕ ಬಜೆಟ್ ಮೇಲೆ ಚರ್ಚೆ ನಡೆಸಿಯೇ ಅಂಗೀಕರಿಸಬೇಕು: ಸಿದ್ದರಾಮಯ್ಯ ಆಗ್ರಹ.
     

  • ಧ್ವನಿಮತದ ಮೂಲಕ ಹಣಕಾಸು ವಿಧೇಯಕ ಅಂಗೀಕಾರ:

    COMMERCIAL BREAK
    SCROLL TO CONTINUE READING

    ಸಪ್ಲಿಮೆಂಟರಿ ಬಜೆಟ್ ಅನ್ನು ಚರ್ಚೆ ಇಲ್ಲದೆ ಹಾಗೆಯೇ ಪಾಸ್ ಮಾಡಲು ಸಾಧ್ಯವಿಲ್ಲ. 3,327 ಸಾವಿರ ಕೋಟಿ ಬಜೆಟ್ ಅನ್ನು ಚರ್ಚೆ ಮಾಡದೆ ಹಾಗೆಯೇ ಒಪ್ಪಿಕೊಳ್ಳಲು ಆಗುವುದಿಲ್ಲ. 

    ದ್ವೇಷ ರಾಜಕಾರಣ ಮಾಡೋದಿಲ್ಲ ಎನ್ನುತ್ತೀರಿ. ಆದರೆ, ಮೈತ್ರಿ ಸರ್ಕಾರದ ಎಲ್ಲ ಆದೇಶಗಳನ್ನೂ ತಡೆಹಿಡಿದಿದ್ದೀರಿ. ಇದು ದ್ವೇಷ ರಾಜಕಾರಣವಲ್ಲವೇ? ಸಿಎಂ ಬಿಎಸ್​. ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

  • ವಿಧಾನಸಭೆಯಲ್ಲಿ ಧನ ವಿನಿಯೋಗ ಅಂಗೀಕಾರ

  • ಧನವಿನಿಯೋಗವನ್ನು ನಾನು ವಿರೋಧ ಮಾಡುತ್ತಿಲ್ಲ. ಇದರ ಮೇಲೆ ಯಾವುದೇ ಚರ್ಚೆ ಇಲ್ಲದೆ ಹಣಕಾಸು ವಿಧೆಯೇಕ ಅಂಗೀಕಾರ ಸರಿಯಲ್ಲ- ಹೆಚ್.ಕೆ. ಪಾಟೀಲ್

    COMMERCIAL BREAK
    SCROLL TO CONTINUE READING

    ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಮಧ್ಯಪ್ರವೇಶ: 
    - ಹಣಕಾಸು ಮಸೂದೆ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗಿಂತ ಹೆಚ್ಚಿನ ಅನುಭವಿ ಮತ್ತೊಬ್ಬರಿಲ್ಲ.
    - ಸಿದ್ದರಾಮಯ್ಯ 12 ಬಾರಿ ಈ ಹಣಕಾಸು ಮಸೂದೆ ಮಂಡಿಸಿದ್ದಾರೆ.

  • ಎಂಟು ತಿಂಗಳಿಗೆ ಲೇಖಾನುದಾನ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಸಲಹೆ.

  • ಧನವಿನಿಯೋಗ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ:
    - ಹಣಕಾಸು ವಿಧೇಯಕ ಮಂಡನೆಗೆ ಚಾಲನೆ ನೀಡಿದ ಯಡಿಯೂರಪ್ಪ, ಹಿಂದಿನ ಮುಖ್ಯಮಂತ್ರಿ ಮಂಡಿಸಿದ ಹಣಕಾಸು ಮಸೂದೆಯಲ್ಲಿ ಒಂದು ಅಕ್ಷರವೂ ಬದಲಿಸಿಲ್ಲ.
    - ಮುಂದಿನ ಮೂರು ತಿಂಗಳಿಗೆ ಲೇಖಾನುದಾನ ಪಡೆಯುವ ಅಗತ್ಯವಿದೆ ಎಂದು ತಿಳಿಸಿದ ಯಡಿಯೂರಪ್ಪ

  • ವಿಶ್ವಾಸಮತ ಗೆದ್ದ ಸಿಎಂ ಬಿ.ಎಸ್. ಯಡಿಯೂರಪ್ಪ!
    - ಧ್ವನಿ ಮತದ ಮೂಲಕ ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
    - ಮುಂದಿನ 6 ತಿಂಗಳು ಬಿ.ಎಸ್. ಯಡಿಯೂರಪ್ಪ ಸರ್ಕಾರ ಸೇಫ್
     

  • ಸ್ವಚ್ಛ, ದಕ್ಷ ಆಡಳಿತ ನೀಡಿದಾಗ ಮಾತ್ರ ಈ ಸ್ಥಾನದಲ್ಲಿ ಕೂರಲು ಸಾಧ್ಯ: ಸಿಎಂ ಬಿ.ಎಸ್. ಯಡಿಯೂರಪ್ಪ
    - ಸಾಧನೆ ಮಾತನಾಡಬೇಕು, ಮಾತನಾಡುವುದೇ ಸಾಧನೆಯಾಗಬಾರದು.
    - ನಮ್ಮ ಜವಾಬ್ದಾರಿ ಬಗ್ಗೆ ನಮಗೆ ಅರಿವಿದೆ.

  • ಹೆಚ್.ಡಿ. ಕುಮಾರಸ್ವಾಮಿ ಭಾಷಣ:

    COMMERCIAL BREAK
    SCROLL TO CONTINUE READING

    - ಅಧಿಕಾರಿಗಳನ್ನು ಸರಿಯಾಗಿ ಬಳಿಸಿಕೊಂಡು ಸರಿಯಾದ ಕೆಲಸ ಮಾಡಿ.
    - ನಾವು ನಿಮ್ಮ ಸ್ಥಾನ ಪಲ್ಲಟ ಮಾಡುವ ಕಾರ್ಯಕ್ಕೆ ಕೈ ಹಾಕುವುದಿಲ್ಲ.

  • ಹೆಚ್.ಡಿ. ಕುಮಾರಸ್ವಾಮಿ ಭಾಷಣ:
    - ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ಬರಲು 14 ತಿಂಗಳಲ್ಲಿ  ನಡೆಸಿದ ಪ್ರಯತ್ನದ ಬಗ್ಗೆ ನಾನು
    ಮಾತನಾಡುವುದಿಲ್ಲ.
    - 14 ತಿಂಗಳಲ್ಲಿ ಆಡಳಿತ ಯಂತ್ರವೇ ಇರಲಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಕುಮಾರಸ್ವಾಮಿ ಭಾಷಣ.
    - ಬಾಯಿ ಚಪಲಕ್ಕಾಗಿ ಆಧಾರ ರಹಿತವಾಗಿ ಬಾಯಿಗೆ ಬಂದಂತೆ ಮಾತನಾಡುವುದು ಯಾರಿಗೂ ಶೋಭೆ
    ತರುವುದಿಲ್ಲ.
    - ದೋಸ್ತಿ ಸರ್ಕಾರದಲ್ಲಿ ಆಡಳಿತ ಹೇಗೆ ಕುಸಿದಿತ್ತು ಎಂಬುದನ್ನು ರುಜುವಾತು ಮಾಡಲಿ.
    - 14 ತಿಂಗಳು ನಾವು ಪಾಪದ ಕೆಲಸ ನಡೆಸಿದ್ದೇವೆ, ಇಂದು ಪವಿತ್ರ ಸರ್ಕಾರ ಬಂದಿದೆ ಎಂಬುದನ್ನು ಯಾರೋ
    ಹೇಳಿದ್ದಾರೆ. 
    - ರೈತರ ಸಾಲಮನ್ನಾಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ.
    - ನಾಡಿನ ರೈತರ ಸಾಲಮನ್ನಾ ಬಗ್ಗೆ ನೀವೇ ಪರಿಶೀಲನೆ ನಡೆಸಿ.
    - 'ಪಾಪದ ಸರಕಾರವನ್ನು ಕೆಡವಿ, ಪವಿತ್ರ ಸರ್ಕಾರ'ವನ್ನು ಚೆನ್ನಾಗಿ ನಡೆಸಿ

    COMMERCIAL BREAK
    SCROLL TO CONTINUE READING

    ಅತೃಪ್ತ ಶಾಸಕರ ಬಗ್ಗೆ ಹೆಚ್ ಡಿಕೆ ಲೇವಡಿ:
    - ಅವರೆಲ್ಲರೂ ಸ್ಪೆಷಲ್ ಫ್ಲೈಟ್ ನಲ್ಲಿ ಬಂದರೋ? ಸಾಮಾನ್ಯ ವಿಮಾನದಲ್ಲಿ ಬಂದರೋ?
    - 17 ಶಾಸಕರನ್ನು ನಡುನೀರಿನಲ್ಲಿ ಕೈ ಬಿಡಬೇಡಿ.
    - ನೀವು ಅಧಿಕಾರದಲ್ಲಿ ಕೂರುವುದಕ್ಕೆ ಅತೃಪ್ತ ಶಾಸಕರಿಗೆ ಮೊದಲು ಧನ್ಯವಾದ ತಿಳಿಸಿ.

  • ಈಗಲೂ ನಿಮಗೆ ಜನಾದೇಶ ಸಿಕ್ಕಿಲ್ಲ: ಸಿದ್ದರಾಮಯ್ಯ
    - ಜನಾದೇಶ ನಮ್ಮ ಪಕ್ಷದ ಪರವಾಗಿತ್ತು. ಜನರ ಆದೇಶದಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಯಡಿಯೂರಪ್ಪನವರು ಹೇಳುತ್ತಾರೆ. ಆದರೆ ಯಡಿಯೂರಪ್ಪನವರೇ ಈಗಲೂ ನಿಮಗೆ ಜನಾದೇಶ ಸಿಕ್ಕಿಲ್ಲ- ಸಿದ್ದರಾಮಯ್ಯ
    - ಬಿಎಸ್‌ವೈ ಎಂದಿಗೂ ಜನಾದೇಶದಿಂದ ಮುಖ್ಯಮಂತ್ರಿಯಾಗಿಲ್ಲ.
    - ಈ ಅವಧಿ ಮುಗಿಯುವವರೆಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರಬೇಕು ಎಂಬುದು ನಮ್ಮ ಆಸೆ. ಆದರೆ ನೀವು ಸಿಎಂ ಆಗಿ ಇರುತ್ತಿರೋ, ಇಲ್ಲವೋ ನನಗೆ ಗೊತ್ತಿಲ್ಲ.

  • ಕಲಾಪದಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಭಾಷಣ:
    ಯಡಿಯೂರಪ್ಪನವರು ಯಾವ ಮಾರ್ಗವಾಗಿ ಅಧಿಕಾರ ಸ್ವೀಕರಿಸಿದರು ಎಂಬುದನ್ನು ಚರ್ಚೆ ಮಾಡಬಹುದಿತ್ತು. ಅದನ್ನು ನಾನೀಗ ಮಾಡುವುದಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ಅವರಿಗೆ ಅಭಿನಂದನೆಗಳು.
    - ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡ್ತೀನಿ ಅಂದಿದ್ದಾರೆ, ದ್ವೇಷದ ರಾಜಕಾರಣ ಮಾಡಲ್ಲ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಸ್ವಾಗತ.
    - ಆಡಳಿತ ಯಂತ್ರ ಕುಸಿದಿದೆ, ಸ್ಥಗಿತವಾಗಿದೆ ಎಂದು ಬಿಎಸ್‌ವೈ ಹೇಳಿದ್ದಾರೆ, ಆದರೆ ಆಡಳಿತ ಯಂತ್ರ ಸ್ಥಗಿತಗೊಂಡಿರಲಿಲ್ಲ.
    - ನಮ್ಮ ಅಧಿಕಾರದ ಅವಧಿಯಲ್ಲಿ ರೈತರಿಗೆ, ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡಿದ್ದೇವೆ.
    - 14 ತಿಂಗಳುಗಳ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ತರಲಾಗಿದೆ. ಕುಮಾರಸ್ವಾಮಿ ಒಳ್ಳೆಯ ಆಡಳಿತ ನಡೆಸಿದ್ದಾರೆ. 
    - ಮೈತ್ರಿ ಸರ್ಕಾರದಲ್ಲಿ ಆಡಳಿತ ಜನಪರ ಕೆಲಸ ಮಾಡಿದ್ದೇವೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆದಿದೆ.
    - ನನ್ನ ಕೊನೆಯ ಬಜೆಟ್ ನಲ್ಲಿ 'ರೈತ ಬೆಳಕು' ಜಾರಿಗೆ ತಂದಿದ್ದೆ.
    - ನನ್ನ ಆಡಳಿತ ಅವಧಿಯಲ್ಲಿ 'ನೇಕಾರರ' ಸಾಲವನ್ನೂ ಮನ್ನಾ ಮಾಡಿದ್ದೆ.
    - ರೈತರಿಗೆ ಸಹಕಾರ ನೀಡುವುದನ್ನು ನೀವು ಪುನರುಚ್ಚರಿಸಿದ್ದೀರಿ ಅದಕ್ಕೂ ಯಡಿಯೂರಪ್ಪನವರಿಗೆ ಅಭಿನಂದನೆ

    COMMERCIAL BREAK
    SCROLL TO CONTINUE READING

    ಇಂದು ಇಡೀ ದಿನ ಅಭಿನಂದರೆ, ಮುಂದಿನ ಕಲಾಪದಲ್ಲಿ ನಿಂದನೆ: ಸಿದ್ದರಾಮಯ್ಯ ಭಾಷಣದ ನಡುವೆ ಸ್ಪೀಕರ್ ರಮೇಶ್ ಕುಮಾರ್ ಹಾಸ್ಯ ಚಟಾಕಿ

  • ವಿಧಾನಸಭೆ ಕಲಾಪದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಷಣ:
    - ಸಿದ್ದರಾಮಯ್ಯ, ಕುಮಾರಸ್ವಾಮಿ ಆಗಿದ್ದ ಸಂದರ್ಭದಲ್ಲಿ ಯಾವುದೇ ಸೇಡಿನ ರಾಜಕಾರಣ ಮಾಡಿಲ್ಲ ಇದು ಸ್ವಾಗತಾರ್ಹ.
    - ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಅದನ್ನು ಸರಿದಾರಿಗೆ ತರಬೇಕು.
    - ಮುಂದಿನ ನಾಲೈದು ತಿಂಗಳಲ್ಲಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡಬೇಕಿದೆ.
    - ನಾನು ಯಾವುದೇ ದ್ವೇಷದ ರಾಜಕಾರಣ ಮಾಡುವುದಿಲ್ಲ.
    - ಫರ್ಗೆಟ್ ಅಂಡ್ ಫಾರ್ಗಿವೆ ವಾಕ್ಯದಲ್ಲಿ ನಂಬಿಕೆ ಇಟ್ಟವನು ನಾನು.
    - ಯಾರೇ ನನ್ನನ್ನು ವಿರೋಧಿಸಿದರೂ ಅವರನ್ನು ಪ್ರೀತಿಯಿಂದ ಕಾಣುವೆ.
    - ರಾಜ್ಯದಲ್ಲಿ ಭೀಕರ ಬರಗಾಲ ಮಳೆ ಕೊರತೆ ಇದೆ.
    - ರಾಜ್ಯದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರುವೆ.

  • - ವಿಧಾನಸೌಧಕ್ಕೆ ಆಗಮಿಸಿದ ಪಕ್ಷೇತರ ಶಾಸಕ ನಾಗೇಶ್

    COMMERCIAL BREAK
    SCROLL TO CONTINUE READING

    - ಬಿಜೆಪಿ ಶಾಸಕರೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಪಕ್ಷೇತರ ಶಾಸಕ ನಾಗೇಶ್

  • ಎಂಟಿಬಿ ನಾಗರಾಜ್ ಹೇಳಿಕೆ:

    COMMERCIAL BREAK
    SCROLL TO CONTINUE READING

    - ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ಕುರಿತು ನ್ಯಾಯಾಲಯದ ಮೊರೆ ಹೋಗುತ್ತೇವೆ
    - ಕುದುರೆ ವ್ಯಾಪಾರಕ್ಕೆ ಬಲಿಯಾಗಿದ್ದಾರೆ. ಕೋಟಿ, ಕೋಟಿ ಹಣಕ್ಕೆ ಮಾರಾಟವಾಗಿದ್ದಾರೆ ಎಂದು ಹಲವರು ದೂರಿದ್ದಾರೆ. ಇದೆಲ್ಲವೂ ಸತ್ಯಕ್ಕೆ ದೂರವಾದದ್ದು. ರಾಜೀನಾಮೆ ನೀಡಿದ್ದ ಶಾಸಕರಿಗೆ ಹಣದ ಕೊರತೆ ಇರಲಿಲ್ಲ. ನಮಗ್ಯಾರಿಗೂ ಹಣದ ಕೊರತೆ ಇಲ್ಲ. ಎಲ್ಲರೂ ಹಣ, ಆಸ್ತಿ ಹೊಂದಿರುವವರೇ.
    - ನಾನು ಬಹಳ ಸಂತೋಷವಾಗಿ ಡಿ.ಕೆ. ಶಿವಕುಮಾರ್ ಸವಾಲನ್ನು ಸ್ವೀಕರಿಸುತ್ತೇನೆ.
    - ನನ್ನ ಉದ್ದೇಶ ನನ್ನ ತಾಲೂಕು ಅಭಿವೃದ್ಧಿಯಾಗಬೇಕು.
    - ಹೊಸಕೋಟೆ ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಆಗಬೇಕು.

  • ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ

  • ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕೃಷ್ಣಭೈರೇಗೌಡ ಸ್ಪರ್ಧೆ ವಿಚಾರ ಪ್ರಸ್ತಾಪಿಸಿದ ಎಸ್.ಟಿ. ಸೋಮಶೇಖರ್

    COMMERCIAL BREAK
    SCROLL TO CONTINUE READING

    ಪಕ್ಷದಲ್ಲಿ ಬೇರೆ ನಾಯಕರಿದ್ದರೂ ಕೂಡ ದೇವೇಗೌಡರ ಮಾತಿಗೆ ಕಟ್ಟುಬಿದ್ದು ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೃಷ್ಣಭೈರೇಗೌಡ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಎಸ್.ಟಿ. ಸೋಮಶೇಖರ್

  • ಕಾಂಗ್ರೆಸ್ ವಿರುದ್ಧ ಎಸ್.ಟಿ. ಸೋಮಶೇಖರ್ ಗುಡುಗು:

    COMMERCIAL BREAK
    SCROLL TO CONTINUE READING

    ನಾವು ರಾಜೀನಾಮೆ ನೀಡಿ ಹೋಗಲು ಯಾರೂ ಕಾರಣರಲ್ಲ. ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿಯಾಗಿರಲಿಲ್ಲ. ಹೆಚ್.ಡಿ. ಕುಮಾರಸ್ವಾಮಿಯವರು ನಮಗೆ ಸಹಕಾರ ನೀಡುತ್ತಿರಲಿಲ್ಲ. ನಮ್ಮ ಸಮಸ್ಯೆ ಕುರಿತು ಹಲವು ಬಾರಿ ಸಿಎಲ್‌ಪಿ ಸಭೆಯಲ್ಲಿ ಚರ್ಚಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಬಗ್ಗೆ ನಮ್ಮ ಸಮಸ್ಯೆ ಬಗ್ಗೆ ಹೇಳಿ ಕೊಂಡಿದ್ದೇವೆ. ಅದಾಗ್ಯೂ, ಲೋಕಸಭೆ ಚುನಾವಣೆಯಾಗಲಿ ಮುಂದೆ ಬೇರೆಯಾಗೋಣ ಎಂದಿದ್ದರು. ನಂತರವೂ ಯಾವುದೇ ಪ್ರಯೋಜನವಾಗಿಲ್ಲ. 

    ಡಿ.ಕೆ. ಶಿವಕುಮಾರ್ ಅವರು ಈಗ ಮಾತನಾಡುತ್ತಾರೆ, ಮುಂಬೈಗೆ ಬರುತ್ತಾರೆ ಆದರೆ ನಾವು ಅವರ ಬಳಿ ಹೋದ ಸಂದರ್ಭದಲ್ಲಿ ನಮ್ಮ ಕಷ್ಟಕ್ಕೆ ಸ್ಪಂದಿಸಲಿಲ್ಲ. 

  • ಅನರ್ಹ ಶಾಸಕ ಮುನಿರತ್ನ ಹೇಳಿಕೆ:
    ನಾವು ತಪ್ಪು ಮಾಡಿದ್ದೇವೆ ಎಂದು ನಮಗೆ ಅನಿಸುತ್ತಿಲ್ಲ. ಪ್ರತಿ ಶಾಸಕನಿಗೂ ಅವರ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯವಾಗಿರುತ್ತದೆ. ನಮ್ಮ ರಾಜೀನಾಮೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕಾಗಿಯೇ ಹೊರತು, ನನ್ನ ಕುಟುಂಬಕ್ಕಾಗಿ ಅಲ್ಲ ಅಥವಾ ಯಾವುದೇ ಸ್ವಾರ್ಥಕ್ಕಾಗಿ ಅಲ್ಲ. ರಾಮಲಿಂಗ ರೆಡ್ಡಿಯವರಿಗೆ ಸಚಿವ ಸ್ಥಾನ ನೀಡದೇ ಇದ್ದದ್ದಕ್ಕೆ ನಾವು ಬೇಸರಗೊಂಡಿದ್ದೆವು. ರಾಜ್ಯಕ್ಕೆ ಹೆಚ್ಚು ಲಾಭ ಬರುವುದು ಬೆಂಗಳೂರಿನಿಂದ, ಆದರೆ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ನಿರ್ಲಕ್ಷಿಸಲಾಗಿದೆ. ಅನರ್ಹತೆ ಕುರಿತು ನಾವು ನ್ಯಾಯಯುತ ಹೋರಾಟ ನಡೆಸುತ್ತೇವೆ. ಸುಪ್ರೀಂಕೋರ್ಟ್ ನಲ್ಲಿ ನಮ್ಮ ಅನರ್ಹತೆ ಬಗ್ಗೆ ಪ್ರಶ್ನಿಸುತ್ತೇವೆ.

  • ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ
     

  • ಬೆಂಗಳೂರಿನ ಆಂಜನೇಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ

  • - ಡಾಲರ್ಸ್ ಕಾಲೋನಿ ದವಳಗಿರಿ ನಿವಾಸದಿಂದ ಹೊರಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

    COMMERCIAL BREAK
    SCROLL TO CONTINUE READING

    - ವಿಧಾನಸೌಧಕ್ಕೆ ತೆರಳುವ ಮೊದಲು ಸಂಜಯನಗರದ ಆಂಜನೇಯ ದೇವಸ್ಥಾನಕ್ಕೆ ತೆರಳಿದ ಬಿಎಸ್‌ವೈ

  • ಬೆಳಿಗ್ಗೆ 10 ಗಂಟೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ:
    - ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ಜೆಡಿಎಲ್ಪಿ ಸಭೆ
    - ಜೆಡಿಎಲ್ಪಿ ನಾಯಕ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಸಭೆ
    - ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಜೆಡಿಎಲ್ಪಿ ಸಭೆ

  • ಬೆಳಿಗ್ಗೆ 9 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ:
    - ವಿಧಾನಸಭೆಯ ಮೊದಲ ಮಹಡಿಯ ಕೊಠಡಿ ಸಂಖ್ಯೆ 133ರಲ್ಲಿ ಸಭೆ
    - ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
    - ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರಿಗೆ, ವಿಧಾನಪರಿಷತ್ ಸದಸ್ಯರಿಗೆ ಸಭೆಗೆ ಆಹ್ವಾನ
    - ಕಾಂಗ್ರೆಸ್ ಪಕ್ಷದ ಲೋಕಸಭೆ, ರಾಜ್ಯಸಭೆ ಸದಸ್ಯರಿಗೆ ಸಭೆಗೆ ಆಹ್ವಾನ

  • ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸಮತ ಯಾಚನೆ ಹಿನ್ನೆಲೆ ಎಲ್ಲಾ ಶಾಸಕರು ಸದನಕ್ಕೆ ಹಾಜರಾಗುವಂತೆ ಬಿಜೆಪಿ ಸೂಚನೆ.
    - ಬೆಳಿಗ್ಗೆ 10:30ಕ್ಕೆ ಸಿಎಂ ಕಚೇರಿಯಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಲಿರುವ ಸಿಎಂ.
    - ಎಲ್ಲಾ ಶಾಸಕರನ್ನು ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ 'ವಿಪ್' ಜಾರಿ.
    - ಶಾಸಕರನ್ನು ಸದನಕ್ಕೆ ಕರೆತರುವ ಜವಾಬ್ದಾರಿ 12 ಮಂದಿ ನಾಯಕರ ಹೆಗಲಿಗೆ.

  • ವಿಶ್ವಾಸಮತ ಸಾಬೀತು ಹಿನ್ನೆಲೆ, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌಧದ ಸುತ್ತಮುತ್ತ ಸೆಕ್ಷನ್ 144 ಜಾರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link