Bengaluru bandh LIVE Updates: ಬೆಂಗಳೂರು ಬಂದ್​​ ಹಿಂಪಡೆದ ಖಾಸಗಿ ಸಾರಿಗೆ ಒಕ್ಕೂಟಗಳು

Mon, 11 Sep 2023-3:56 pm,

Bengaluru bandh LIVE Updates: ಶಕ್ತಿಯೋಜನೆ ಬಳಿಕ ಸರ್ಕಾರದ ಜೊತೆ ಮುಸುಕಿನ ಗುದ್ದಾಟ ನಡೆಸ್ತಿದ್ದ ಖಾಸಗಿ ಸಾರಿಗೆ ಒಕ್ಕೂಟ ಇಂದು ಪ್ರತಿಭಟನೆ ನಡೆಸಿದವು.

Bengaluru bandh LIVE Updates: ಶಕ್ತಿಯೋಜನೆ ಬಳಿಕ ಸರ್ಕಾರದ ಜೊತೆ ಮುಸುಕಿನ ಗುದ್ದಾಟ ನಡೆಸ್ತಿದ್ದ ಖಾಸಗಿ ಸಾರಿಗೆ ಒಕ್ಕೂಟ ಇಂದು ಪ್ರತಿಭಟನೆ ನಡೆಸಿದವು. ಬೈಕ್‌ ಟ್ಯಾಕ್ಸಿ ನಿರ್ಬಂಧ, ಚಾಲಕರಿಗೆ ಸಹಾಯಧನ ಸೇರಿದಂತೆ ಸರ್ಕಾರದ ಮುಂದೆ ಹತ್ತು ಹಲವು ಬೇಡಿಕೆ ಇಟ್ಟಿದ್ದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇಂದು ಬೆಂಗಳೂರು ಬಂದ್‌’ಗೆ ಕರೆಕೊಟ್ಟಿದ್ದವು. ಇದೀಗ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿವೆ. 

Latest Updates

  • ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ : 

    COMMERCIAL BREAK
    SCROLL TO CONTINUE READING

    - 32  ಬೇಡಿಕೆಗಳಲ್ಲಿ 27 ಬೇಡಿಕೆ ಈಡೇರಿಸುವುದಾಗಿ ಭರವಸೆ

    - ಹಾಗಾಗಿ ಬಂದ್​ ಹಿಂಪಡೆಯುತ್ತಿದ್ದೇವೆ

    - ಟ್ಯಾಕ್ಸ್​ ಕಡಿಮೆ ಬಗ್ಗೆಯೂ ಭರವಸೆ ನೀಡಿದ್ದಾರೆ

    - ಬೇಡಿಕೆ ಈಡೇರಿಸದಿದ್ದರೆ ನಾಡಿದ್ದು ಮತ್ತೆ ಹೋರಾಟ

    - ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿಕೆ 

  • ಬೆಂಗಳೂರು ಬಂದ್‌ ವಾಪಸ್‌ : 

    COMMERCIAL BREAK
    SCROLL TO CONTINUE READING

    - ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟ ಖಾಸಗಿ ಸಾರಿಗೆ ಒಕ್ಕೂಟಗಳು 

    - ಬೇಡಿಕೆ ಈಡೇರಿಸುವಂತೆ ಇಂದು ಪ್ರತಿಭಟನೆ ನಡೆಸಿದ ಖಾಸಗಿ ಸಾರಿಗೆ ಒಕ್ಕೂಟಗಳು 

    - ಬೆಂಗಳೂರು ಬಂದ್‌ಗೆ ಕರೆ ನೀಡಿದ್ದವು

    - ಇದೀಗ ಒಟ್ಟಕೂಟಗಳು ಬಂದ್​ ಕರೆ ಹಿಂಪಡೆದಿವೆ 

    - ಕೆಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಸಾರಿಗೆ ಸಚಿವರು 

    - ಪ್ರತಿಭಟನಾಕಾರರ ಮನವೊಲಿಸಲು ಯಶಸ್ವಿಯಾದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  
     

  • ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಭೇಟಿ : 

    COMMERCIAL BREAK
    SCROLL TO CONTINUE READING

    - ಫ್ರೀಡಂಪಾರ್ಕ್‌ನಲ್ಲಿ ಖಾಸಗಿ ವಾಹನ ಸಂಘಟನೆಗಳ ಸದಸ್ಯರ ಪ್ರತಿಭಟನೆ

    - ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಭೇಟಿ

    - ಸಾರಿಗೆ ಇಲಾಖೆ ಅಧಿಕಾರಿಗಳಾದ ಯೋಗೇಶ್​, ಎನ್​​.ವಿ.ಪ್ರಸಾದ್ ಸಾಥ್‌

  • Bengaluru bandh LIVE Updates: ”ರಾಜ್ಯ ಸರಕಾರದ ಗ್ಯಾರಂಟಿಗಳ 'ಅಡ್ಡ ಪರಿಣಾಮ'ದ ತೀವ್ರತೆ ಜನರಿಗೆ ತಟ್ಟುತ್ತಿದೆ. ಸರಕಾರಿ ಸೌಲಭ್ಯಗಳ ಹಂಚಿಕೆಯಲ್ಲಿನ ಅಸಮಾನತೆ, ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ 'ಶಕ್ತಿ' ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ. ಸಾಲಸೋಲ ಮಾಡಿ ಕ್ಯಾಬ್, ಆಟೋ ಓಡಿಸಿಕೊಂಡು ಬದುಕುತ್ತಿದ್ದವರು ಬೀದಿ ಪಾಲಾಗಿದ್ದಾರೆ. ನಿತ್ಯದ ಬದುಕು ಸಾಗಿಸುವುದೇ ದುಸ್ತರ ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ. ಇನ್ನು, ಸರ್ಕಾರಿ ಸಾರಿಗೆಯಷ್ಟೇ ಉತ್ತಮವಾಗಿ ಸೇವೆ ಒದಗಿಸುತ್ತಿರುವ ಖಾಸಗಿ ಬಸ್ ಜಾಲವನ್ನು ಸರಕಾರ ಹಾಳು ಮಾಡಿದೆ. ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತೆ ಮಾಡಿದೆ” ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

    COMMERCIAL BREAK
    SCROLL TO CONTINUE READING

     

     

    • ಅಣಕು ಶವಯಾತ್ರೆ ಮೂಲಕ ಸರ್ಕಾರ ವಿರುದ್ದ ಪ್ರತಿಭಟನೆ

    • COMMERCIAL BREAK
      SCROLL TO CONTINUE READING

      ರ್ಯಾಪಿಡೋ ಬೈಕ್. ಟ್ಯಾಕ್ಸಿ ಪೋಟೋ ಇಟ್ಟು ಪ್ರತಿಭಟನೆ

    • ಓಲಾ ಊಬರ್, ರ್ಯಾಪಿಡೋ ಫೋಟೋ ಇಟ್ಟು ಅಣಕು ಶವಯಾತ್ರೆ

    • ಪೋಲೀಸರ ಮಾತಿನಂತೆ 20 ಜನ ಹೋಗಲು ಸಿದ್ದತೆ

    • COMMERCIAL BREAK
      SCROLL TO CONTINUE READING

      ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಡುತ್ತಿರುವ ಚಾಲಕರು-ಮಾಲೀಕರು

    • ಒಂದು ತಂಡ ಫ್ರೀಡಂ ಪಾರ್ಕ್ ತಲುಪಿದ ಬಳಿಕ ಮತ್ತೊಂದು ತಂಡವನ್ನು ಕಳುಹಿಸಿರುವ ಪೊಲೀಸರು

    • ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೋಲೀಸರ ತಯಾರಿ

    • ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಒಟ್ಟಿಗೆ ರ್ಯಾಲಿ ಮಾಡಲು ಅವಕಾಶ ಇಲ್ಲ

    • ಯಾವುದೇ ಕಾರಣಕ್ಕೂ ದೊಡ್ಡ ಮಟ್ಟದ ರ್ಯಾಲಿ ಮಾಡಲು ಅವಕಾಶ ಮಾಡಿಕೊಡಲ್ಲ ಎನ್ನುತ್ತಿರುವ ಪೋಲೀಸರು

  • Bengaluru bandh LIVE Updates: ​ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್‌ ಹಿನ್ನೆಲೆಯಲ್ಲಿ ನಗರದಲ್ಲಿ 3 ಲಕ್ಷ ಆಟೋ, 1.5 ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್ ಗಳು ಬಂದ್ ಆಗಲಿದ್ದು ಸಿಲಿಕಾನ್‌ ಸಿಟಿ ಜನರಿಗೆ ಬಂದ್‌ ಬಿಸಿ ತಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಇಂದು ಯಾವೆಲ್ಲಾ ಸೇವೆಗಳಲ್ಲಿ ವ್ಯತ್ಯಯವಾಗಲಿವೆ ಎಂಬುದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿ ನೀಡಲಾಗಿದೆ

  • Bengaluru bandh LIVE Updates: ​ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್‌ ಹಿನ್ನೆಲೆಯಲ್ಲಿ ನಗರದಲ್ಲಿ 3 ಲಕ್ಷ ಆಟೋ, 1.5 ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್ ಗಳು ಬಂದ್ ಆಗಲಿದ್ದು ಸಿಲಿಕಾನ್‌ ಸಿಟಿ ಜನರಿಗೆ ಬಂದ್‌ ಬಿಸಿ ತಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಇಂದು ಯಾವೆಲ್ಲಾ ಸೇವೆಗಳಲ್ಲಿ ವ್ಯತ್ಯಯವಾಗಲಿವೆ ಎಂಬುದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿ ನೀಡಲಾಗಿದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link