ಸದನದಲ್ಲಿ ಕೋಲಾಹಲ, ನಾಳೆ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಕಲಾಪ ಮುಂದೂಡಿಕೆ, ಅಹೋರಾತ್ರಿ ಧರಣಿಗೆ ಬಿಜೆಪಿ ನಿರ್ಧಾರ

Fri, 19 Jul 2019-7:02 am,

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾವ ಮಂಡನೆ

ಬೆಂಗಳೂರು: ಇಂದು ನಡೆಯುವ ಮುಂಗಾರು ಅಧಿವೇಶನದಲ್ಲಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಪಕ್ಷಗಳು ವಿಪ್ ಜಾರಿ ಮಾಡಿವೆ. ಇಂದು ನಡೆಯುವ ಅಧಿವೇಶನವು ಮೈತ್ರಿ ಸರ್ಕಾರದ ಅಳಿವು-ಉಳಿವನ್ನು ನಿರ್ಧರಿಸುವ ನಿರೀಕ್ಷೆಯಿದೆ.

Latest Updates

  • ಸದನದಲ್ಲಿ ಡೆಪ್ಯೂಟಿ ಸ್ಪೀಕರ್ ಮಾತಿಗೂ ಗೌರವ ಕೊಡದೆ, ವಿಪಕ್ಷ-ಆಡಳಿತ ಪಕ್ಷದ ಸದಸ್ಯರು ಗದ್ದಲ ಆರಂಭಿಸಿದ ಹಿನ್ನೆಲೆಯಲ್ಲಿ ಮತ್ತೆ ವಿಧಾನಸಭೆ ಕಲಾಪವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿದ ಡೆಪ್ಯೂಟಿ ಸ್ಪೀಕರ್.

  • ವಿಶ್ವಾಸ ಮತಯಾಚನೆ ಆಗುವವರೆಗೂ ಸದನದಲ್ಲೇ ಉಳಿಯುತ್ತೇವೆ. ಬಿಜೆಪಿ ಸದಸ್ಯರು ಹಗಲು-ರಾತ್ರಿ ಇಲ್ಲೇ ಉಳಿಯಲಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿಕೆ

  • ಕಲಾಪ ಆರಂಭವಾಗುತ್ತಿದ್ದಂತೆಯೇ ವಿಶ್ವಾಸಮತಯಾಚನೆಗೆ ಬಿಜೆಪಿ ಒತ್ತಾಯ. ಮತ್ತೊಂದೆಡೆ ಶಾಸಕ ಶ್ರೀಮಂತ ಪಾಟೀಲ ಫೋಟೋ ಹಿಡಿದು ನ್ಯಾಯ ಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ. ಈ ಮಧ್ಯೆ ಸದನದಲ್ಲಿ ಶಿಸ್ತು ಕಾಪಾಡುವಂತೆ ಡೆಪ್ಯೂಟಿ ಸ್ಪೀಕರ್ ಮನವಿಗೂ ಬಗ್ಗದ ಸದಸ್ಯರಿಂದ ಗದ್ದಲ.

  • ವಿಶ್ವಾಸಮತ ಯಾಚನೆ ಬಗ್ಗೆ ಸದನದಲ್ಲಿ ಭಾರೀ ಗದ್ದಲ. 10 ನಿಮಿಷಗಳವರೆಗೆ ಕಲಾಪ ಮುಂದೂಡಿಕೆ.

  • ಎಲ್ಲವನ್ನೂ ಮೌನವಾಗಿ ಗಮನಿಸುತ್ತಿರುವ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ. ಬಹುಮತ ಯಾಚನೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಹೇಳಿಕೆ ಕೊಡಿಸಿ ಎಂದು ಬಿಜೆಪಿ ನಾಯಕರಿಂದ ಒತ್ತಾಯ

  • ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ.

  • ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಫೋಟೋ ಹಿಡಿದುಬಿಜೆಪಿ ವಿರುದ್ಧ ಮೈತ್ರಿ ಪಕ್ಷದ ಶಾಸಕರಿಂದ ಧಿಕ್ಕಾರ, ಎಲ್ಲರೂ ಒಂದು ಕ್ಷಣ ಮೌನವಾಗಿರುವಂತೆ ಸ್ಪೀಕರ್ ಸ್ಥಾನದಲ್ಲಿರುವ ಡೆಪ್ಯೂಟಿ ಸ್ಪೀಕರ್ ಸೂಚನೆ

  • ಇಂದೇ ವಿಶ್ವಾಸಮತ ಯಾಚನೆ ಮಾಡಿ. ಎಷ್ಟು ಹೊತ್ತಾದರೂ ಚಿಂತೆಯಿಲ್ಲ: ಬಿಜೆಪಿ ಶಾಸಕರಾದ ಸಿ.ಟಿ.ರವಿ, ಮಾಧುಸ್ವಾಮಿ, ಈಶ್ವರಪ್ಪ ಅವರಿಂದ ಸ್ಪೀಕರ್ ಮೇಲೆ ಒತ್ತಡ

  • ನಾವೇನು ಸುಮ್ಮನೆ ಇಲ್ಲಿಗೆ ಬಂದಿಲ್ಲ. ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದಿದ್ದಕ್ಕೆ ಬಂದಿದ್ದೇವೆ. ರಾಜ್ಯಪಾಲರ ಸಂದೇಶದ ಬಗ್ಗೆ ನಿಮ್ಮ ನಿರ್ಣಯ ಏನು ಹೇಳಿ. ಮುಂದಿನ ಮಾತೇ ಇಲ್ಲ. ಯಾವ ರೀತಿ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂಬುದನ್ನು ಹೇಳಿ. ಅಲ್ಲಿಗೆ ಚರ್ಚೆಯೇ ಇರಲ್ಲ- ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಬಿಜೆಪಿ ನಾಯಕರ ಒತ್ತಾಯ

  • ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ಹೇಳಿದ್ದರು, ಗುರುವಾರಕ್ಕೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಅಂದು ಸುಪ್ರೀಂಕೋರ್ಟ್ ತೀರ್ಪು ಇರಲಿಲ್ಲ, ಆದರೆ ಈಗ ತೀರ್ಪು ಇದೆ. ಈ ತೀರ್ಪಿನ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಉತ್ತರ ಸಿಕ್ಕೊಂಕ ಬಳಿಕವೇ ವಿಶ್ಡವಾಸ ಮತ ಯಾಚನೆಗೆ ಮುಂದಾಗಬೇಕು- ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತಿಗೆ ಉತ್ತರಿಸಿದ ದಿನೇಶ್ ಗುಂಡೂರಾವ್

  • ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಕಳುಹಿಸಿರುವ ಸಂದೇಶದ ಬಗ್ಗೆ ಸದನದಲ್ಲಿ ಬಿಸಿ ಚರ್ಚೆ. ಆಡಳಿತ ಪಕ್ಷ-ವಿಪಕ್ಷ ನಾಯಕರಿಂದ ಮುಂದುವರೆದ ವಾಕ್ಸಮರ.

  • ಕಲಾಪದಲ್ಲಿ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಸಚಿವ ಹೆಚ್.ಕೆ.ಪಾಟೀಲ್ ಆಕ್ಷೇಪ.

    COMMERCIAL BREAK
    SCROLL TO CONTINUE READING

    "ಪಕ್ಷ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ಸದನದ ಕಲಾಪಗಳಿಗೆ ಆದೇಶ ಅಥವಾ ಸೂಚನೆಗಳನ್ನು ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ. ಹಾಗಾಗಿ ರಾಜ್ಯಪಾಲರು ಸದನದ ಕಲಾಪದಲ್ಲಿ ದಯವಿಟ್ಟು ಮಧ್ಯಪ್ರವೆಶಿಸಬೇಡಿ ಎಂದು ವಿನಂತಿಸಿಕೊಳ್ಳುತ್ತೇನೆ" - ಸಚಿವ ಹೆಚ್.ಕೆ.ಪಾಟೀಲ್ 

  • ಸದನದ ಯಾವುದೇ ಸದಸ್ಯರು, ವಿಶೇಷವಾಗಿ ಪ್ರತಿಪಕ್ಷದವರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡುವುದರಲ್ಲಿ ತಪ್ಪಿಲ್ಲ. ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆ. ಒಂದು ವೇಳೆ ಪ್ರತಿಪಕ್ಷದವರು ರಾಜ್ಯಪಾಲರನ್ನು ಭೇಟಿ ಮಾಡದೇ, ಬಹುಮತ ಸಾಬೀತು ಮಾಡಲು ಸಂದೇಷ ಕಳುಹಿಸಿದ್ದರೆ, ಆಗ ಮೈತ್ರಿ ಪಕ್ಷಗಳ ಹೇಳಿಕೆ ಬಗ್ಗೆ ಯೋಚಿಸಬಹುದಿತ್ತು. ಆದರೆ ಬಿಜೆಪಿ ನಾಯಕರು ಭೇಟಿ ಮಾಡಿದ್ದಾರೆ. ಅದಕ್ಕೆ ಪ್ರಾಜ್ಯಪಾಲರು ಪ್ರತಿಕ್ರಿಯಿಸಿದ್ದಾರೆ- ಸ್ಪೀಕರ್ ರಮೇಶ್ ಕುಮಾರ್

  • ಸದನದಲ್ಲಿ ಒಬ್ಬೊಬ್ಬರಿಗೆ ಕನಿಷ್ಠ 5 ನಿಮಿಷ ಕಾಲಾವಕಾಶ ಕೊಡಿ, ಆದರೆ ಇವತ್ತು ರಾತ್ರಿ 12ಗಂಟೆಯೊಳಗೆ ಬಹುಮತ ಸಾಬೀತುಪಡಿಸಿ ಎಂದು ಮನವಿ ಮಾಡಿಕೊಂಡ ಬಿಎಸ್ ಯಡಿಯೂರಪ್ಪ

  • ಇಂದು ರಾತ್ರಿ 12 ಗಂಟೆಯಾದರೂ ಪರವಾಗಿಲ್ಲ. ಎಲ್ಲರ ಮಾತುಗಳನ್ನೂ ಆಲಿಸಿ. ಎಲ್ಲರೂ ಮಾತನಾಡಲಿ. ರಾಜ್ಯಪಾಲರ ಆದೇಶದಂತೆ ಇಂದು ರಾತ್ರಿ 12 ಗಂಟೆಯೊಳಗೆ ಬಹುಮತ ಸಾಬೀತುಪಡಿಸಿ- ಬಿ.ಎಸ್.ಯಡಿಯೂರಪ್ಪ

  • ರಾಜ್ಯಪಾಲರು ಕೇವಲ ಸಂದೇಶ ಮಾತ್ರ ನೀಡಿದ್ದಾರೆ. ಸದನದಲ್ಲಿ ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಬೇಕು. ಈ ಸದನದ ಸದಸ್ಯರ ಹಕ್ಕನ್ನು ನೀವು ರಕ್ಷಿಸಬೇಕು: ಸಚಿವ ಕೃಷ್ಣ ಬೈರೇಗೌಡ

  • ರಾಜ್ಯಪಾಲರ ಸಂದೇಶಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ.

  • ರಾಜ್ಯಪಾಲರಿಂದ ಆರ್ಟಿಕಲ್ 175ರ ಅಡಿಯಲ್ಲಿ ಸಂದೇಶ ಬಂದಿದೆ. ಈ ದಿನದ ಅಂತ್ಯದೊಳಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ಸಂದೇಶ ಕಳುಹಿಸಿದ್ದಾರೆ: ಸ್ಪೀಕರ್ ರಮೇಶ್ ಕುಮಾರ್

  • ರಾಜಭವನದ ವಿಶೇಷಾಧಿಕಾರಿ ಭೇಟಿ ಬಳಿಕ ಮತ್ತೆ ಕಲಾಪ ಆರಂಭ

  • ವಿಧಾನಸಭೆಯಲ್ಲಿ ಕೋಲಾಹಲದಿಂದ ಕಲಾಪ ಅರ್ಧ ಗಂಟೆ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್

  • ಅಜೆಂಡಾ ಪ್ರಕಾರವೇ ನಾನು ಕೆಲಸ ಮಾಡುವುದು- ವಿ. ಸೋಮಣ್ಣ ಮಾತಿಗೆ ಸ್ಪೀಕರ್ ಪ್ರತಿಕ್ರಿಯೆ

  • ಗೃಹ ಸಚಿವರೇ ಕೂಡಲೇ ಶ್ರೀಮಂತ ಪಾಟೀಲ್ ಅವರ ಮನೆಯವರನ್ನು ಸಂಪರ್ಕಿಸಿ ನಾಳೆಯವರೆಗೆ ಪೂರ್ಣ ವರದಿ ಸಲ್ಲಿಸಿ: 
    ಸಿದ್ದರಾಮಯ್ಯನವರು ಕೊಟ್ಟಿರುವ ಪತ್ರ ಹಾಗೂ ನೀಡಿರುವ ಪುರಾವೆಗಳ ಆಧಾರದ ಮೇಲೆ ಗೃಹ ಸಚಿವರು ಗಮನ ವಹಿಸುವಂತೆ ಹೇಳುತ್ತಿದ್ದೇನೆ. ಈಗಲೇ ಶ್ರೀಮಂತ ಪಾಟೀಲ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಕಲೆ ಹಾಕಿ. 

    COMMERCIAL BREAK
    SCROLL TO CONTINUE READING

    ಇದು ನೈಸರ್ಗಿಕ ಅಲ್ಲ ಎಂದೇ ನನಗೆ ಅನಿಸುತ್ತದೆ. ಇದರ ಬಗ್ಗೆ ತನಿಖೆಯಾಗಬೇಕು- ಸ್ಪೀಕರ್ ರಮೇಶ್ ಕುಮಾರ್

  • ಶ್ರೀಮಂತ ಪಾಟೀಲ್ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಖಚಿತ ಮಾಹಿತಿ ತರಿಸಿ- ಗೃಹ ಇಲಾಖೆಗೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ
     

  • ಇಂದು ಬೆಳಿಗ್ಗೆ ಶ್ರೀಮಂತ ಪಾಟೀಲ್ ಹೆಸರಿನಲ್ಲಿ ಪತ್ರ ಬಂದಿದೆ.

    COMMERCIAL BREAK
    SCROLL TO CONTINUE READING

    ದಿನಾನ್ಕವೇನೂ ಹಾಕದ, ಶ್ರೀಮಂತ ಪಾಟೀಲ್ ಅವರ ಸಹಿ ಇರುವ ಪತ್ರ ನನಗೆ ಬಂದಿದೆ.

    ನಾನು ಆಸ್ಪತ್ರೆಗೆ ಸೇರಿರುವುದರಿಂದ ಸದನಕ್ಕೆ ಗೈರಾಗಲಿದ್ದೇನೆ ಎಂದು ಅವರು ಬರೆದಿದ್ದಾರೆ.

    ಅಪಹರಣವಾಗಿದ್ದರೆ ಅದು ಕ್ರಿಮಿನಲ್ ಕೇಸ್. ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ.

    ಇಲ್ಲಿ ಏನಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ.

    ನನಗೆ ಸಾಕಾಗಿ ಹೋಗಿದೆ- ಕಲಾಪದ ವೇಳೆ ಸ್ಪೀಕರ್ ರಮೇಶ್ ಕುಮಾರ್

    ಅಡ್ವೋಕೇಟ್ ಜನರಲ್ ನಾಲ್ಕು ಗಂಟೆಗೆ ಬರಲಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಿ ಸಿದ್ದರಾಮಯ್ಯ ಅವರು ಎತ್ತಿರುವ ವಿಚಾರದ ಬಗ್ಗೆ ಸಲಹೆ ಪಡೆದು ತೀರ್ಪು ನೀಡುತ್ತೇನೆ- ಸ್ಪೀಕರ್ ರಮೇಶ್ ಕುಮಾರ್ 

  •  

    COMMERCIAL BREAK
    SCROLL TO CONTINUE READING

     

  • ಸದಸ್ಯರನ್ನು ರಕ್ಷಿಸುವ ಅಧಿಕಾರ ನಿಮಗಿದೆ- ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಿಎಂ ಕುಮಾರ ಸ್ವಾಮಿ

  • ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರೋನಲ್ಲ. ನಾನು ಯಾರಿಗೂ ದಮ್ಮಯ್ಯ ಹಾಕಲ್ಲ- ವಿಧಾನಸಭೆಯಲ್ಲಿ ಸಿ.ಟಿ. ರವಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

  • ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ. ಇವರ ಬಳಿ ಬಹುಮತ ಇಲ್ಲ ಅದಕ್ಕೆ ವಿಶ್ವಾಸಮತ ವಿಳಂಬ ಮಾಡುತ್ತಿದ್ದಾರೆ- ಆಡಳಿತ ಪಕ್ಷದ ಮೇಲೆ ಹರಿಹಾಯ್ದ ಸಿ.ಟಿ. ರವಿ

  • ನಮ್ಮ ಶಾಸಕ ಶ್ರೀಮಂತ್ ಪಾಟೀಲ್ ಅಪಹರಣಗೊಂಡಿರುವ ಬಗ್ಗೆ ತನಿಖೆ ನಡೆಸಿ ಅವರನ್ನು ವಾಪಸ್ ಕರೆಸಲು ಸಭಾಧ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದರು.

  • ಮಧ್ಯಪ್ರವೇಶಿಸಿ ಮಾತನಾಡಿದ ದಿನೇಶ್ ಗುಂಡೂರಾವ್:
    - ನಿನ್ನೆ ರಾತ್ರಿ ಶ್ರೀಮಂತ ಪಾಟೀಲ್ ಆರೋಗ್ಯವಾಗಿಯೇ ಇದ್ದರು. ನಾವೆಲ್ಲರೂ ರೆಸಾರ್ಟ್ ನಲ್ಲಿ ಒಟ್ಟಿಗೆಯೇ ಇದ್ದೆವು. 
    - ರೆಸಾರ್ಟ್ ನಲ್ಲಿದ್ದವರನ್ನು ಬೆಂಗಳೂರಿನಿಂದ ಚೆನ್ನೈಗೆ ಕರೆದೊಯ್ದು, ಅಲ್ಲಿಂದ ಮುಂಬೈಗೆ ಹೋಗಿ ಆಸ್ಪತ್ರೆಯಲ್ಲಿ ಬಲವಂತವಾಗಿ ಮಲಗಿಸಲಾಗಿದೆ.
    - ಆ ಆಸ್ಪತ್ರೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲಿನ ಸರ್ಕಾರ ಇದಕ್ಕೆ ಬೆಂಬಲ ನೀಡುತ್ತಿದೆ. ಈ ಎಲ್ಲಾ ಕೃತ್ಯಗಳ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಹೇಳಿದರು.

  • ಕಾಂಗ್ರೆಸ್ ನಾಯಕರ ಆರೋಪಕ್ಕೆ ಬಿಜೆಪಿ ನಾಯಕರ ಆಕ್ಷೇಪ
     

  • ಶ್ರೀಮಂತ ಪಾಟೀಲ್ ಅವರನ್ನು ಬಲವಂತವಾಗಿ ಆಸ್ಪತ್ರೆಯಲ್ಲಿ ಮಲಗಿಸಿದ್ದಾರೆ.

    COMMERCIAL BREAK
    SCROLL TO CONTINUE READING

    ಸದನಕ್ಕೆ ವಿಮಾನದ ಟಿಕೆಟ್ ಪ್ರತಿ ಒದಗಿಸಿದ ಡಿ.ಕೆ. ಶಿವಕುಮಾರ್

    ಮಲಗಿರೋ ಹಾಗೆ ಫೋಟೋ ತೆಗಿಸಿ ರಿಲೀಸ್ ಮಾಡಿದ್ದಾರೆ.

  • ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ ಬಿಜೆಪಿ ನಿಯೋಗ.

  • ವಿಧಾನಸಭೆ ಕಲಾಪ ಪುನರಾರಂಭ

  • ಭೋಜನ ವಿರಾಮ, ಮಧ್ಯಾಹ್ನ ಮೂರು ಗಂಟೆಯವರೆಗೆ​ ಕಲಾಪ ಮುಂದೂಡಿದ ಸ್ಪೀಕರ್

    COMMERCIAL BREAK
    SCROLL TO CONTINUE READING

    ಮಧ್ಯಾಹ್ನ ಮೂರು ಗಂಟೆಯವರೆಗೆ ಕಲಾಪ ಮುಂದೂಡಲಾಗಿದೆ. ಭೋಜನ ವಿರಾಮದ ಬಳಿಕ ಮತ್ತೆ ಸೇರೋಣ. ಈ ವೇಳೆ ನಾನು ಅಡ್ವೋಕೇಟ್ ಜನರಲ್ ಅವರಿಂದ ಸಲಹೆ ಪಡೆದುಕೊಳ್ಳುತ್ತೇನೆ- ಸ್ಪೀಕರ್ ರಮೇಶ್ ಕುಮಾರ್
     

  • ನನಗಿಂತ ಬೇರೆಯವರೇ ಹೆಚ್ಚು ಮಾತನಾಡಿದರು ಎಂದು ಮತ್ತೆ ಮುಂದುವರೆಸಿದ ಸಿದ್ದರಾಮಯ್ಯ:

    COMMERCIAL BREAK
    SCROLL TO CONTINUE READING

    - ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಅಂಗಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಈ ಪ್ರಕರಣದಲ್ಲಿ ಶಾಸಕಾಂಗವನ್ನು ನ್ಯಾಯಾಂಗ ಅತಿಕ್ರಮಣ ಮಾಡಿದಂತಾಗಿದೆ.

    - ಸುಪ್ರೀಂಕೋರ್ಟ್ ತೀರ್ಪಿನ ಪ್ರಭಾವಕ್ಕೆ ಒಳಗಾಗಿ ಅತೃಪ್ತ ಶಾಸಕರು ಸದನಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. 

    - ನಾನು ವಿಪ್ ನೀಡಲು ಸಹ ಆಗುವುದಿಲ್ಲ. ಒಂದುವೇಳೆ ವಿಪ್ ನೀಡಿದರೂ ಸಹ ಅವರು ಬರುವುದಿಲ್ಲ. ಹಾಗಾಗಿ 15 ಅತೃಪ್ತ ಶಾಸಕರ ರಾಜೀನಾಮೆ ಇತ್ಯರ್ಥವಾಗದೆ ವಿಶ್ವಾಸಮತ ತೆಗೆದುಕೊಳ್ಳುವುದು ಸರಿಯಿಲ್ಲ.

    ಈ ಹಿನ್ನೆಲೆಯಲ್ಲಿ ವಿಶ್ವಾಸಮತ್ ಪ್ರಸ್ತಾಪವನ್ನು ಮುಂದೂಡಬೇಕು. ನನ್ನ ಮಾತನ್ನು ಆಧರಿಸಿ ನಿಮ್ಮ ರೂಲಿಂಗ್ ಕೊಡಿ ಎಂದು ಸ್ಪೀಕರ್ ಬಳಿ ಮನವಿ ಮಾಡಿದ ಸಿದ್ದರಾಮಯ್ಯ
     

  • ಸಂವಿಧಾನದ 10ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದ್ದಾರೆ. ಈ ವಿಷಯ ಸೂಕ್ತ ಎಂಬ ಕಾರಣಕ್ಕೆ ಚರ್ಚೆಗೆ ಅವಕಾಶ ನೀಡಲಾಗಿದೆ- ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ

  • 10ನೇ ಶೆಡ್ಯೂಲ್ ಗೂ ಕ್ರಿಯಾಲೋಪಕ್ಕೂ ಏನು ಸಂಬಂಧ ಎಂದ ಮಾಧುಸ್ವಾಮಿ 

    COMMERCIAL BREAK
    SCROLL TO CONTINUE READING

    ಮಾಧುಸ್ವಾಮಿ ಹೇಳಿಕೆಗೆ ಗರಂ ಆದ ಸ್ಪೀಕರ್

  • ಕ್ರಿಯಾಲೋಪದ ಬದಲಿಗೆ ನೇರವಾಗಿ ವಿಶ್ವಾಸಮತಕ್ಕೆ ಹಾಕಿ ಎಂದ ಮಾಧುಸ್ವಾಮಿ

    COMMERCIAL BREAK
    SCROLL TO CONTINUE READING

    ಸ್ಪೀಕರ್ ಅವರೇ ಉದ್ದೇಶಪೂರ್ವಕವಾಗಿ ವಿಶ್ವಾಸಮತ ಯಾಚನೆ ಚರ್ಚೆಯನ್ನು ನಿಧಾನ ಪಡಿಸುತ್ತಿದ್ದಾರೆ ಎಂದ ಬಿಜೆಪಿಯ ಮಾಧುಸ್ವಾಮಿ

    ಮಾಧುಸ್ವಾಮಿ ಹೇಳಿಕೆಗೆ ಗರಂ ಆದ ಸ್ಪೀಕರ್

  • ಬಳಿಕ ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ ಬಿ.ಎಸ್. ಯಡಿಯೂರಪ್ಪ

    COMMERCIAL BREAK
    SCROLL TO CONTINUE READING

    ಕಾಂಗ್ರೆಸ್ ಪಕ್ಷದ ನಾಯಕರು ವಿಪ್ ಕೊಡುವುದಿದ್ದರೆ ಕೊಡಲಿ. ಅದಕ್ಕೆ ನಾವೇನೂ ಬೇಡ ಎಂದು ಹೇಳುವುದಿಲ್ಲ- ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ

  • ಮಾಜಿ ಮುಖ್ಯ ಮಂತ್ರಿಯಾಗಿ, ಸದನದ ವಿರೋಧ ಪಕ್ಷದ ನಾಯಕರಾಗಿ ಬಿಎಸ್ ವೈ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ- ಯಡಿಯೂರಪ್ಪ ಮಾತಿಗೆ ಡಿ.ಕೆ. ಶಿವಕುಮಾರ್ ಆಕ್ಷೇಪ

  • - ವಿಪ್ ಜಾರಿ ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದ ಯಡಿಯೂರಪ್ಪ. 

    COMMERCIAL BREAK
    SCROLL TO CONTINUE READING

    - ಹಾಗಂತ ಎಲ್ಲಿ ಕೇಳಿದ್ದಾರೆ ಎಂದು ಕೇಳಿದ ಸ್ಪೀಕರ್

    - ಯಡಿಯೂರಪ್ಪ ಹೇಳಿಕೆಗೆ ಆಡಳಿತ ಪಕ್ಷದ ನಾಯಕರ ಆಕ್ರೋಶ

  • ಕ್ರಿಯಾಲೋಪ ಚರ್ಚೆಗೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಆಕ್ಷೇಪ

  • ಇದು ಕ್ರಿಯಾಲೋಪ ಎತ್ತುವಂತಹ ಪ್ರಶ್ನೆಯೇ ಅಲ್ಲ. ಇದು ಉದ್ದೇಶಪೂರ್ವಕವಾದ ಕ್ರಿಯಾಲೋಪ ಪ್ರಸ್ತಾಪ- ಸದನದಲ್ಲಿ ಬಿಜೆಪಿ ಶಾಸಕರ ಆಕ್ರೋಶ

  • ಕ್ರಿಯಾಲೋಪದ ಬಗ್ಗೆ ಚರ್ಚೆಗೆ ಅವಕಾಶ ನೀಡಲಿ. ವಿಶ್ವಾಸಮತ ಯಾಚನೆ ಇಂದಿನ ಕಲಾಪದ ಪ್ರಮುಖ ಅಜೆಂಡಾ- ಜಗದೀಶ್ ಶೆಟ್ಟರ್ 
     

  • ಇದು ಉದ್ದೇಶ ಪೂರ್ವಕ ಕ್ರಿಯಾಲೋಪ-  ಸುರೇಶ್ ಕುಮಾರ್

    COMMERCIAL BREAK
    SCROLL TO CONTINUE READING

    ಸಿದ್ದರಾಮಯ್ಯ ಜೊತೆ ಚರ್ಚಿಸಿರುವುದಾಗಿ ಕೃಷ್ಣಭೈರೇಗೌಡ ಹೇಳುತ್ತಾರೆ.ಹೀಗಾಗಿ ಇದೊಂದು ಪೂರ್ವ ನಿಯೋಜಿತ ಪಾಯಿಂಟ್ ಆಫ್ ಆರ್ಡರ್ ಚರ್ಚೆ- ಸುರೇಶ್ ಕುಮಾರ್

  • ಬಿಜೆಪಿ ಸಸದ್ಯ ಮಾಧುಸ್ವಾಮಿಗೆ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ
    ಸಂವಿಧಾನದ ಪರಿಚ್ಛೇದ 10 ಇನ್ನೂ ಜೀವಂತವಾಗಿದೆ. ನಿಮಗೆ ಪ್ರೋತ್ಸಾಹ ಕೊಡುವುದು, ನಿರುತ್ಸಾಹ ತೋರುವುದು ನನ್ನ ಕೆಲಸವಲ್ಲ. ಪರಿಚ್ಛೇದ 10ರ ಬಗ್ಗೆ ಸ್ಪಷ್ಟನೆ ನೀಡಿದ ಸಭಾಪತಿ.

    COMMERCIAL BREAK
    SCROLL TO CONTINUE READING

     

    ಕ್ರಿಯಾಲೋಪದ ಬಗ್ಗೆ ಸ್ಪಷ್ಟನೆ ನೀಡಿದ ಸ್ಪೀಕರ್

  • ಸದಸ್ಯರು ಬರುವುದು, ಬಿಡುವುದು ನಮಗೆ ಸಂಬಂಧಿಸಿದ್ದಲ್ಲ. ಕಾಂಗ್ರೆಸ್ ಕ್ರಿಯಾಲೋಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಿಜೆಪಿ ಶಾಸಕ ಮಾಧುಸ್ವಾಮಿ ಹೇಳಿಕೆ

  • ಇದು ಕ್ರಿಯಾಲೋಪ ಎತ್ತುವಂತ ವಿಚಾರವೇ ಅಲ್ಲ- ಬಿಜೆಪಿ ಶಾಸಕ ಮಾಧುಸ್ವಾಮಿ 

  • ಕ್ರಿಯಾಲೋಪ ಮೇಲ್ನೋಟಕ್ಕೆ ಅರ್ಥವಾಗದೆ ಹೋಗಬಹುದು. ಹೀಗಾಗಿ ಸಿದ್ದರಾಮಯ್ಯನವರು ಕ್ರಿಯಾಲೋಪ ಎತ್ತಿದ್ದಾರೆ ಎಂದ ಸಚಿವ ಕೃಷ್ಣಭೈರೇಗೌಡ

  • ಸುಪ್ರೀಂಕೋರ್ಟ್ ತೀರ್ಪಿನಿಂದ ನಿರ್ಮಾಣವಾಗಿರುವ ಗೊಂದಲದ ಬಗ್ಗೆ ಸದನದ ಗಮನ ಸೆಳೆದ ಕೃಷ್ಣ ಬೈರೇಗೌಡ.

    COMMERCIAL BREAK
    SCROLL TO CONTINUE READING

    ರಾಜೀನಾಮೆ ನೀಡಿರುವ 15 ಅತೃಪ್ತ ಶಾಸಕರು ಸದನದ ಸದಸ್ಯರು ಹೌದೋ, ಅಲ್ಲವೋ? ಎಂಬ ಬಗ್ಗೆ ತೀರ್ಮಾನವಾಗಬೇಕಿದೆ.

    15 ಸದಸ್ಯರು ನಿಮಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ತೀರ್ಮಾನವಾಗದೆ ವಿಶ್ವಾಸಮತ ಯಾಚನೆ ಅಪೂರ್ಣ.

  • ವಿಶ್ವಾಸಮತ ಯಾಚನೆ ಚರ್ಚೆ ವೇಳೆ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಮಾತು:
    ನಮ್ಮ ಭಾವನೆಗಳನ್ನು ಅದುಮಿಟ್ಟುಕೊಂಡು ಕೂರೋದು ಕಷ್ಟ. ಹಾಗಾಗಿ ನಮ್ಮ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಕ್ರಿಯಾ ಲೋಪದ ಬಗ್ಗೆ ಪ್ರಸ್ತಾಪಿಸಿದ್ದಾರೆ.

  • ವಿಧಾನಸಭೆಯಲ್ಲಿ ಮತ್ತೆ ಭಾಷಣ ಆರಂಭಿಸಿದ ಎಚ್.ಕೆ. ಪಾಟೀಲ್:

    COMMERCIAL BREAK
    SCROLL TO CONTINUE READING

    ಹಕ್ಕು ಚ್ಯುತಿ ಆಗಿದೆ ಎಂದು ಸಿದ್ದರಾಮಯ್ಯನವರು ಹೇಳಿರುವುದು ಕೇವಲ ತಮಗೊಬ್ಬರಿಗೇ ಅಲ್ಲ. 

    ಸಿದ್ದರಾಮಯ್ಯ ಮಂಡಿಸಿರುವ ಹಕ್ಕು ಚ್ಯುತಿ ಎಲ್ಲರಿಗೂ ಸಂಬಂಧಿಸಿದೆ.

  • ಮತ್ತೆ ಆಕ್ಷೇಪ ವ್ಯಕ್ತಪಡಿಸಲು ಮುಂದಾದ ಜೆ.ಸಿ. ಮಾಧುಸ್ವಾಮಿ 

    COMMERCIAL BREAK
    SCROLL TO CONTINUE READING

    ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪನ್ನು ನಾವಿಲ್ಲ ಪ್ರಶ್ನಿಸುವಂತಿಲ್ಲ. ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡಬೇಕು.

  • ಎಚ್.ಕೆ. ಪಾಟೀಲ್ ಅವರಿಂದ ಭಾಷಣ:

    COMMERCIAL BREAK
    SCROLL TO CONTINUE READING

    ಮತ್ತೊಂದು ಪಾಯಿಂಟ್ ಆಫ್ ಆರ್ಡರ್ ಅನ್ನು ಸದನದ ಗಮನಕ್ಕೆ ತಂದ ಎಚ್.ಕೆ. ಪಾಟೀಲ್

    ಸಿದ್ದರಾಮಯ್ಯ ಗಂಭೀರ ವಿಚಾರವನ್ನು ಸಭೆ ಗಮನಕ್ಕೆ ತಂದಿದ್ದಾರೆ. 

  • ಯಾವುದು ಕ್ರಿಯಾಲೋಪ ಎಂದು ನಿರ್ಧಾರ ಕೈಗೊಳ್ಳೋಣ. ಇಲ್ಲಿನ ಚರ್ಚೆಯನ್ನು ಸುಪ್ರೀಂಕೋರ್ಟ್ ಗೆ ಇಂಗ್ಲೀಷ್ ನಲ್ಲಿ ನೀಡಬೇಕಿದೆ. ನಾನು ನನ್ನ ಹೇಳಿಕೆಯನ್ನು ತರ್ಜುಮೆ ಮಾಡಿ ಕೋರ್ಟ್ ಗೆ ಕೊಡುತ್ತೇನೆ- ಸ್ಪೀಕರ್ ರಮೇಶ್ ಕುಮಾರ್

  • ನಾನು ನನ್ನ ಕರ್ತವ್ಯವನ್ನು ನಿಭಾಯಿಸದೇ ಇರಲು ಸಾಧ್ಯವಿಲ್ಲ. ನಾನು ನನ್ನ ಕೆಲಸ ಮಾಡದೆ ಇದ್ದರೆ ನೀವು ಮಾತನಾಡಬಹುದು- ಸ್ಪೀಕರ್ ರಮೇಶ್ ಕುಮಾರ್
     

  • ಕ್ರಿಯಾಲೋಪದ ಬಗ್ಗೆ ಸ್ಪಷ್ಟನೆ ಕೇಳಿದ ಕೆ.ಎಸ್. ಈಶ್ವರಪ್ಪ

    COMMERCIAL BREAK
    SCROLL TO CONTINUE READING

    ಸಾರ್ವಜನಿಕ ಸಭೆಯಂತೆ ಇಲ್ಲೂ ಬಿಜೆಪಿಯನ್ನು ಟೀಕಿಸಬಾರದು- ಕೆ.ಎಸ್. ಈಶರಪ್ಪ

  • ಸದನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ- ಕೆ.ಎಸ್. ಈಶ್ವರಪ್ಪ ಅಕ್ರೋಶ 
     

  • ಸಿದ್ದರಾಮಯ್ಯ ಪಾಯಿಂಟ್ ಆಫ್ ಆರ್ಡರ್(ಕಾರ್ಯ ಚ್ಯುತಿ) ಯನ್ನು ಬಹಳ ಸುದೀರ್ಘವಾಗಿ ಮಾತನಾಡುತ್ತಿದ್ದಾರೆ- ಬಿಜೆಪಿ ಶಾಸಕರಿಂದ ಆಕ್ಷೇಪ

  • ವಿಪ್ ಕೊಡೋ ಆದೇಶದ ಬಗ್ಗೆ ಸುಪ್ರೀಂಕೋರ್ಟ್​ ಪ್ರಶ್ನೆ ಮಾಡಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ

  • ಕಾಂಗ್ರೆಸ್-ಜೆಡಿಎಸ್ ಶಾಸಕರು ಗುಂಪು ಗುಂಪಾಗಿ ಹೋಗುತ್ತಿದ್ದಾರೆ- ಸಿದ್ದರಾಮಯ್ಯ

  • ವಿಪ್ ಉಲ್ಲಂಘಿಸಿರುವ  ಕೆಲ ಸದಸ್ಯರು ಗುಂಪಾಗಿ ಹೋಗಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನವಿದು.

    COMMERCIAL BREAK
    SCROLL TO CONTINUE READING

    ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ. ನಮ್ಮ ಸದಸ್ಯರಿಗೆ ವಿಪ್ ಕೊಡುವ ಅಧಿಕಾರವಿದೆ- ಸಿದ್ದರಾಮಯ್ಯ

  • ಭಾಷಣ ಮುಂದುವರೆಸಿದ ಸಿದ್ದರಾಮಯ್ಯ:

    COMMERCIAL BREAK
    SCROLL TO CONTINUE READING

    - ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಉಲ್ಲೇಖಗಲಿರುವ ಶೆಡ್ಯೂಲ್ 10 ನ್ನು ಸಂವಿಧಾನದಿಂದ ಇನ್ನೂ ತೆಗೆದುಹಾಕಿಲ್ಲ. 
    - ಪಕ್ಷಾಂತರ ನಿಷೇಧ ಕಾಯ್ದೆ ಇನ್ನೂ ಅಸ್ತಿತ್ವದಲ್ಲಿದೆ. ಅದರಂತೆ ಪಕ್ಷಕ್ಕೆ ವಿಪ್ ನೀಡಲು ಅವಕಾಶವಿದೆ. 
    - ವಿಪ್ ಉಲ್ಲಂಘಿಸಿರುವ  ಕೆಲ ಸದಸ್ಯರು ಗುಂಪಾಗಿ ಹೋಗಿದ್ದಾರೆ.

  • ನಾನು ವಿಪಕ್ಷ ನಾಯಕ ಎಂದ ಸಿದ್ದರಾಮಯ್ಯ, ಬಾಯಿತಪ್ಪಿ ಬಂದ ಮಾತಿಗೆ ಸದನದಲ್ಲಿ ನಗು

    COMMERCIAL BREAK
    SCROLL TO CONTINUE READING

    ಬಳಿಕ ನಾನು ಈ ಹಿಂದೆ 4 ವರ್ಷ ವಿಪಕ್ಷ ನಾಯಕನಾಗಿದ್ದೆ ಬಾಯಿ ತಪ್ಪಿ ಬಂದ ಮಾತು ಎಂದ ಸಿದ್ದರಾಮಯ್ಯ

  • ಶೆಡ್ಯೂಲ್ 10ರ ಪಕ್ಷಾಂತರ ನಿಷೇಧದ ಕುರಿತು ಕಾನೂನುಗಳನ್ನು ಉಲ್ಲೇಖಿಸಿ ಭಾಷಣ ಮಾಡುತ್ತಿರುವ ಸಿದ್ದರಾಮಯ್ಯ

  • ಇದು ಶುದ್ಧ ರಾಜಕಾರಣದ ಯುಗವಾಗಿದೆ, ಇಡೀ ರಾಜಕಾರಣ ಶುದ್ಧಿಯಾಗಬೇಕಿದೆ.

    COMMERCIAL BREAK
    SCROLL TO CONTINUE READING

    ಮಧು ದಂಡವತೆ ಸೈದ್ಧಾಂತಿಕ ಆಧಾರದ ಮೇಲೆ ರಾಜಕಾರಣ ನಡೆಸಿದರು. ಈ ದೇಶ ಕಂಡ ಅಪರೂಪದ ರಾಜಕಾರಣಿ ಮಧು ದಂಡವತೆ- ಸಿದ್ದರಾಮಯ್ಯ

  • ಪಕ್ಷಾಂತರ ನಿಷೇಧ ಕಾಯ್ದೆ ಮಾಡಿದ ಕೀರ್ತಿ ರಾಜೀವ್ ಗಾಂಧಿಯವರಿಗೆ ಸಲ್ಲಬೇಕು- ಸಿದ್ದರಾಮಯ್ಯ

  • ಸ್ಪೀಕರ್ ವ್ಯಾಪ್ತಿಯೊಳಗೆ ಬರುವ ವಿಷಯಗಳ ಬಗ್ಗೆ ಚರ್ಚಿಸೋಣ. ನೀವೂ ಕೂಡ ಈ ವಿಚಾರಗಳ ಬಗ್ಗೆ ಚರ್ಚಿಸಬಹುದು ನಮ್ಮದೇನೂ ತಕರಾರಿಲ್ಲ- ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ

  • ಬಿಜೆಪಿಯ ಮಾಧುಸ್ವಾಮಿ, ಕೆ.ಜೆ. ಬೋಪಯ್ಯ ಮಾತಿಗೆ ಕೆಂಡಾಮಂಡಲರಾದ ಡಿ.ಕೆ. ಶಿವಕುಮಾರ್.

  • ಸಿದ್ದರಾಮಯ್ಯ ಮಾತಿಗೆ ಕೆ.ಜೆ. ಬೋಪಯ್ಯ ಆಕ್ಷೇಪ

  • ಪಕ್ಷಾಂತರ ಪಿಡುಗನ್ನು ನಿವಾರಿಸಿದಾಗಲೇ ಮಹಾತ್ಮ ಗಾಂಧಿ ಅವರಿಗೆ ಗೌರವ ನೀಡಿದಂತೆ- ಸಿದ್ದರಾಮಯ್ಯ
     

  • 1960ರ ವರೆಗೆ ದೇಶದಲ್ಲಿ ಪಕ್ಷಾಂತರಗಳ ಬಗ್ಗೆ ಹೆಚ್ಚು ಚರ್ಚೆಯೇ ಆಗುತ್ತಿರಲಿಲ್ಲ. 1963ರಲ್ಲಿ ಗಯಾಲಾಲ್ ಎಂಬುವವರು ಒಂದೇ ದಿನದಲ್ಲಿ ಮೂರು ಬಾರಿ ಪಕ್ಷಾಂತರ ಮಾಡಿದ್ದರು. ಕಾಂಗ್ರೆಸ್‌ನಿಂದ ಸಂಯುಕ್ತರಂಗ, ಅಲ್ಲಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡುತ್ತಾರೆ. ಆಗ ದೇಶದಲಿ ಪಕ್ಷಾಂತರದ ಬಗ್ಗೆ ದೇಶದಲ್ಲಿ ಗಂಭೀರವಾಗಿ ಚರ್ಚೆ ನಡೆಸಿತು.  ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವದ ಅಡಿಗಲ್ಲನ್ನು ಅಲ್ಲಾಡಿಸುತ್ತಿದೆ- ಸಿದ್ದರಾಮಯ್ಯ

  • ಅವಿಶ್ವಾಸವನ್ನು ಅಡ್ಡಿಪಡಿಸಲು ನಾನು ಎದ್ದು ನಿಂತಿಲ್ಲ. ಸದನದ ಪ್ರಕ್ರಿಯೆ ಬಗ್ಗೆ ಸ್ಪಷ್ಟೀಕರಣ ಬೇಕೆಂದು ಮಾತನಾಡುತ್ತಿದ್ದೇನೆ ಎಂದು ಪಾಯಿಂಟ್ ಆಫ್ ಆರ್ಡರ್ ಅನ್ನು ಸದನದ ಗಮನಕ್ಕೆ ತರಲು ಮುಂದಾದ ಸಿದ್ದರಾಮಯ್ಯ

  • ಕೆಲವು ವಿಷಯಗಳ ಬಗ್ಗೆ ಸ್ಪಷ್ಟನೆ ಸಿಗಬೇಕು ಎಂದು ಭಾಷಣ ಆರಂಭಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ

  • ಯಾರಿಗೂ ಅಧಿಕಾರ ಶಾಶ್ವತವಲ್ಲ. ನನಗಾಗಲಿ, ನನ್ನ ನಂತರದ ಸರ್ಕಾರಗಳಿಗಾಗಲಿ ಅಧಿಕಾರ ಶಾಶ್ವತವಲ್ಲ. ದೇವರಾಜ ಅರಸು ಅವರ ಆಡಳಿತವನ್ನೂ ನಾವೂ ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದಿದ್ದೇವೆ.  ದೇವರಾಜ ಅರಸು ಅವರಿಗೆ ಅವರು ಬೆಳೆಸಿದ ನಾಯಕರೆ ಮೋಸ ಮಾಡಿದ್ದರು ಎಂಬುದನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
     

  • ನಮ್ಮ ತಂದೆ ಸಿಎಂ ಆಗಿದ್ದಾಗ ನೀವು ಸ್ಪೀಕರ್ ಆಗಿದ್ದೀರಿ, ಈಗ ನಾನು ಮುಖ್ಯಮಂತ್ರಿಯಾಗಿರುವಾಗಲೂ ನೀವು ಸ್ಪೀಕರ್. ನೀವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ್ದೀರಿ- ಸಿಎಂ ಹೆಚ್.ಡಿ. ಕುಮಾರಸ್ವಾಮಿ

  • ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿದ್ದ ವೇಳೆ ಸರ್ಕಾರದ ವಿರುದ್ಧ ಆಡಿದ ಮಾತುಗಳನ್ನು ಉಲ್ಲೇಖಸಿ, ಕಲಬೆರಕೆ ಸರ್ಕಾರ ಎಂಬ ಹೇಳಿಕೆ ನೀಡಿದ್ದ ಪ್ರಧಾನಿ ವಿರುದ್ಧ ಮುಖ್ಯಮಂತ್ರಿ ಕಿಡಿ

  • ಸಮಯ ನಿಗದಿ ಮಾಡದೇ, ಚರ್ಚೆ ನಡೆಸದೇ ವಿಶ್ವಾಸಮತ ಯಾಚನೆಗೆ ಹೋಗುವುದು ಎಷ್ಟರ ಮಟ್ಟಿಗೆ ಸರಿ? ಭದ್ರವಾದ ಸರ್ಕಾರ ಅಸ್ಥಿರಗೊಳಿಸುತ್ತಿರುವವರು ಯಾರು ಎಂಬ ಚರ್ಚೆ ನಡೆಯಬೇಕು. ವಿರೋಧ ಪಕ್ಷದ ನಾಯಕರು, ಸದಸ್ಯರಿಗೆ ಹೇಳುತ್ತೇನೆ. ನಮ್ಮದು ಲೂಟಿ ಸರ್ಕಾರವಲ್ಲ. ನಾನು ಮಾನ, ಮರ್ಯಾದೆ ಇಟ್ಟುಕೊಂಡು ಬದುಕಿರುವವನು. ಅಂದಿನ ಬೆಳವಣಿಗೆ ಬೇರೆ, ಇಂದಿನ ಬೆಳವಣಿಗೆ ಬೇರೆ, ಸ್ಪೀಕರ್ ಬಗ್ಗೆಯೂ ಅವಿಶ್ವಾಸದ ವಾತಾವರಣ ನಿರ್ಮಿಸಿದ್ದಾರೆ. ಇದರ ಬಗ್ಗೆ ಚರ್ಚೆ ನಡೆಯಲಿ- ಸಿಎಂ ಹೆಚ್.ಡಿ. ಕುಮಾರಸ್ವಾಮಿ

  • ವಿರೋಧ ಪಕ್ಷದ ನಾಯಕರು ಅವಸರದಲ್ಲಿದ್ದಾರೆ- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

  • ಮುಂಗಾರು ಅಧಿವೇಶನದಲ್ಲಿ ವಿಧಾನಸಭೆ ಕಲಾಪ ಆರಂಭ, ಸ್ಪೀಕರ್ ರಮೇಶ್ ಕುಮಾರ್ ಸಭಾಧ್ಯಕ್ಷತೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಚಾಲನೆ. ಪ್ರಸ್ತಾವನೆ ಮಂಡಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಸ್ಪೀಕರ್ ಸೂಚನೆ.

  • ಅಧಿವೇಶನಕ್ಕೆ ಆಗಮಿಸಿದ ಶಾಸಕರು, ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್

ZEENEWS TRENDING STORIES

By continuing to use the site, you agree to the use of cookies. You can find out more by Tapping this link