Hijab Row:ಹಿಜಾಬ್ ನಿರ್ಬಂಧದ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್, Live Updates

Tue, 15 Mar 2022-2:17 pm,

Karnataka Hijab Judgement Live Updates: ಹಿಜಾಬ್ ಗೆ ಅವಕಾಶ ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

Karnataka Hijab Judgement Live Updates: ಹಿಜಾಬ್ ಗೆ ಅವಕಾಶ ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಹಿಜಾಬ್ ವಿವಾದ ತೀರ್ಪು ಪ್ರಕಟವಾದ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ರಾಜ್ಯಾದ್ಯಂತ  ಖಾಕಿ ಕಟ್ಟೆಚ್ಚರ ವಹಿಸಿದೆ. ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.

Latest Updates

  • ಐತಿಹಾಸಿಕ ತೀರ್ಮಾನವನ್ನು ಹೈಕೋರ್ಟ್ ನೀಡಿದೆ. ಸರ್ಕಾರ ರೂಪಿಸಿದ ನಿಯಮದ ಪರವಾಗಿ ತೀರ್ಪು ಬಂದಿದೆ. ಹೆಣ್ಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು  ಕೋರ್ಟ್ ಎತ್ತಿ ಹಿಡಿದಿದೆ. ನಮಗೆ ಸಂತೋಷ ಕೊಟ್ಟಿದೆ. ‌ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ತೀರ್ಪನ್ನು ದೇಶ-ವಿದೇಶಗಳು ಗಮನಿಸುತ್ತಿದ್ದವು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಧರ್ಮ, ಮತಾಂಧತೆ ಬೆಳೆಸಿಕೊಳ್ಳದೆ ಶಾಲೆಗಳಲ್ಲಿ ನಾವು ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹಾಗೂ ವಿಶೇಷವಾಗಿ ಭಾರತ ಮಾತೆಯ ಮಕ್ಕಳು ಎಂದು ಸಂಸ್ಕಾರದಿಂದರಬೇಕು. ಸಂಸ್ಕಾರ ನೀಡುವಲ್ಲಿ ಶಾಲೆಯ ಸಮವಸ್ತ್ರಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

  • ಹೈಕೋರ್ಟ್ ತೀರ್ಪುನ್ನು ಸ್ವಾಗತ ಮಾಡುತ್ತೇವೆ. ಮೂಲಭೂತವಾದಿಗಳು ದೇಶ ಒಡೆಯಲು ಇಸ್ಲಾಂ ಹೆಸರಲ್ಲಿ ಆಂತರಿಕ ಭಯೋತ್ಪಾದನೆ ಸೃಷ್ಟಿಸಿದ್ದಾರೆ. ಖಾದರ್, ಜಮೀರ್ ಹೇಳಿಕೆಗಳಿಗೆ ಬೆಲೆ ಇಲ್ಲ. ಅವರು ಎಲ್ಲಿ ಹೋಗ್ತಾರೆ ಹೋಗಲಿ. ನ್ಯಾಯಾಲಯ ಸಂವಿಧಾನಾತ್ಮಕ ವ್ಯವಸ್ಥೆ ಎತ್ತಿ ಹಿಡಿದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 
     

  • ಹೈಕೋರ್ಟ್ ಹಿಜಾಬ್ ವಿಚಾರವಾಗಿ ತೀರ್ಪು ನೀಡಿದೆ. ಕೋರ್ಟ್ ತೀರ್ಪನ್ನ ಸ್ವಾಗತ ಮಾಡುತ್ತೇವೆ. ಸರ್ಕಾರದ ನಿಲುವನ್ನೇ ಪುನಃ ಕೋರ್ಟ್ ಹೇಳಿದೆ. ಯಾವುದೇ ತಾರತಮ್ಯವಿಲ್ಲದ ತೀರ್ಪು ಇದಾಗಿದೆ. ಕೆಲ ಸಂಘಟನೆಗಳು, ಪಕ್ಷಗಳಿಂದ ಬೇರೆ ಬೇರೆ ಬಣ್ಣಗಳನ್ನು ಕಟ್ಟುವ ಪ್ರಯತ್ನ ನಡೆದಿತ್ತು. ಆದರೆ ಕೋರ್ಟ್ ತೀರ್ಪಿನಿಂದಾಗಿ ಇದು ಎಲ್ಲರಿಗೂ ಸಮಾನ ಎಂದು ಹೇಳಿದೆ. ಸಮವಸ್ತ್ರದಿಂದ ವಿದ್ಯಾಭ್ಯಾಸ ಮಾಡಬೇಕು. ಇಡೀ ವಿಶ್ವಕ್ಕೆ ಮಾದರಿಯಾಗುವ ತೀರ್ಪು ಇದಾಗಿದೆ. ಯಾವುದೇ ಗೊಂದಲ ಆಗಬಾರದು. ಗೊಂದಲ ಸೃಷ್ಟಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಸುಪ್ರೀಂ ಕೋರ್ಟ್ ಗೆ ಹೋಗಲಿ, ಸಂವಿಧಾನನದಲ್ಲಿ ಅವಕಾಶ ಇದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು. 

  • ಹಿಜಾಬ್ ಕುರಿತು ಹೈಕೋರ್ಟ್ ನೀಡಿದ ತೀರ್ಪನ್ನು ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆ ಸ್ವಾಗತಿಸಿದೆ. ಸಂಘಟನೆ ಅಧ್ಯಕ್ಷ ಯೋಗಾನಂದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿಹಿಡಿದಿದೆ. ಈ ವಿವಾದ ಇಷ್ಟರ ಮಟ್ಟಿಗೆ ಹೋಗಬಾರದಿತ್ತು. ಕಾಲೇಜು, ಪೋಷಕರು, ವಿದ್ಯಾರ್ಥಿಗಳು ಇದರ ಪರಿಣಾಮ ಎದುರಿಸಬೇಕಾಯ್ತು. ಈಗ ಅಂತಿಮ ತೆರೆ ಎಳೆದಿರುವುದು ಆಶಾದಾಯಕವಾಗಿದೆ. ತೀರ್ಪು ಒಪ್ಪದವರು ಸುಪ್ರೀಂ ಕೋರ್ಟ್ ಗೆ ಹೋಗಲು ಅವಕಾಶ ಇದೆ. ಕಾಲೇಜು ಕ್ಯಾಂಪಸ್ ನಲ್ಲಿ ಶಾಂತಿ ಕಾಪಾಡಬೇಕಿದೆ ಎಂದು ಹೇಳಿದರು. 

  • ಕೋರ್ಟ್ ಏನ್ ಆದೇಶ ನೀಡಿದೆ ಎಂದು ಪೂರ್ಣವಾಗಿ ಗಮನಿಸಿಲ್ಲ. ನಾನು ಕೋರ್ಟ್ ಆದೇಶದ ಬಗ್ಗೆ ಕಾಮೆಂಟ್  ಮಾಡಲು ಹೋಗಲ್ಲ. ನಾನು ಹೈಕೋರ್ಟ್ ಏನು ಆದೇಶ ನೀಡಿದೆ ಎಂದು ಪೂರ್ಣವಾಗಿ ಓದಿಲ್ಲ. ಓದಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಕೋರ್ಟ್ ಆದೇಶಕ್ಕೆ ತಲೆಬಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

  • ಯಾದಗಿರಿ: ಹೈಕೊರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಪೊಲೀಸರಿಂದ ರೂಟ್ ಮಾರ್ಚ್. ಯಾದಗಿರಿ ನಗರದಾದ್ಯಂತ ಪಥ ಸಂಚಲನ ನಡೆಸಿದರು. ನಗರದ ಗಾಂಧಿ ವೃತ್ತದಿಂದ ಆರಂಭಿಸಿ ನಗರದಾದ್ಯಂತ ಪೊಲೀಸ್ ರೂಟ್ ಮಾರ್ಚ್ ಮಾದಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಹಕಾರ ನೀಡಲು ಎಸ್ಪಿ ವೇದಮೂರ್ತಿ ಮನವಿ ಮಾಡಿದರು. ಕಾನೂನಿಗೆ ಧಕ್ಕೆ ತಂದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು. 

  • ಯಾದಗಿರಿ: ಹೈಕೋರ್ಟ್ ಆದೇಶ ಬಂದರು ಸಹ ನಾವು ಹಿಜಾಬ್ ಧರಿಸುತ್ತೇವೆ. ನಮಗೆ ಶಿಕ್ಷಣ ಹಾಗೂ ಹಿಜಾಬ್ ಎರಡೂ ಮುಖ್ಯ. ನಾವು ಹಿಜಾಬ್ ತೆಗೆಯಲ್ಲ ಎಂದು ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಅಸ್ರಾ ಹೇಳಿದ್ದಾರೆ.

  • ಶಿವಮೊಗ್ಗ:  ಹಿಜಾಬ್ ಕುರಿತ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಈ ವಿಷಯ ಕಳೆದ ಎರಡು ಮೂರು ತಿಂಗಳಿಂದ ದೇಶದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸಾಕಷ್ಟು ಪ್ರತಿಭಟನೆ ಕೂಡ ನಡೆದಿತ್ತು. ಇದೀಗ ಹೈಕೋರ್ಟ್ ನೀಡಿರುವ ತೀರ್ಪಿನಿಂದ ಎಲ್ಲ ಗೊಂದಲಗಳು ನಿವಾರಣೆ ಆದಂತಾಗಿದೆ. ಎಲ್ಲಾ ಧರ್ಮದ ವಿದ್ಯಾರ್ಥಿಗಳು ಇದನ್ನು ಪಾಲಿಸಬೇಕು. ಕಳೆದ ಎರಡು-ಮೂರು ತಿಂಗಳಿಂದ ಪಾಠ ಪ್ರವಚನಗಳಿಗೆ ಹಿನ್ನಡೆಯಾಗಿದೆ. ಈಗ ಅದನ್ನು ಸರಿದೂಗಿಸುವ ಕೆಲಸ ಆಗಬೇಕು. ಧರ್ಮದ ಆಚರಣೆ ಮತ್ತು ನಂಬಿಕೆಯನ್ನು ಮನೆಗೆ ಸೀಮಿತಗೊಳಿಸಿ ವಿದ್ಯಾರ್ಥಿಗಳು ಎಲ್ಲರಂತೆ ಕಾಲೇಜಿಗೆ ಬರಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಿ ಮುನ್ನಡೆಯಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. 

  • ಕಲಬುರಗಿ: ಹೈಕೋರ್ಟ್ ತೀರ್ಪು ಐತಿಹಾಸಿಕ ತೀರ್ಪಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಆದೇಶವನ್ನು ಗೌರವದಿಂದ ಪಾಲಿಸಬೇಕು. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕುಚೇಷ್ಟೆ ಮಾಡಿದ್ರೆ, ಅವರನ್ನು ಒದ್ದು ಹೊರಗೆ ಹಾಕಬೇಕು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. 

    COMMERCIAL BREAK
    SCROLL TO CONTINUE READING

    ಹಿಜಾಬ್ ವಿರುದ್ದದ ಹೋರಾಟದಲ್ಲಿ ಅನೇಕರ ಮೇಲೆ ಕೇಸ್ ಹಾಕಲಾಗಿದೆ. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಗಿದೆ. ಈ ತೀರ್ಪನಿಂದ ಹರ್ಷನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದಿದ್ದಾರೆ.

    ಹಿಂದು ಮತ್ತು ಮುಸ್ಲಿಂ ರು ಹೈಕೋರ್ಟ್ ಆದೇಶ ಪಾಲಿಸಬೇಕು. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕುಚೇಷ್ಟೆ ಮಾಡಿದ್ರೆ, ಅವರನ್ನು ಒದ್ದು ಹೊರಗೆ ಹಾಕಬೇಕು ಎಂದು ಹೇಳಿದ್ದಾರೆ. 

  • ಮಂಡ್ಯ: ಮಂಡ್ಯದಲ್ಲಿ ವಿದ್ಯಾರ್ಥಿನಿ ಮುಸ್ಕಾನ್ ತಂದೆ ಮಹಮದ್ ಹುಸೇನ್ ಖಾನ್ ಹಿಜಾಬ್ ಕುರಿತು ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.  ಹೈಕೋರ್ಟ್ ಆದೇಶದ ಪ್ರತಿ ಬರಲಿ. ದೊಡ್ಡವರ ಜೊತೆ ಕೂತು ಮಾತುಕತೆ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ವಿವಾದ ಹಬ್ಬಿದ ನಂತರ ಮಗಳನ್ನ ಕಾಲೇಜಿಗೆ ಕಳಿಸಿಲ್ಲ. ಇದೇ ತಿಂಗಳು 24ಕ್ಕೆ ಎಕ್ಸಾಂ ಇದೆ. ಕಾಲೇಜು ಆಡಳಿತ ಮಂಡಳಿ ಜೊತೆ ಮಾತುಕತೆ ಬಳಿಕ ಪರೀಕ್ಷೆಗೆ ಕಳಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

    COMMERCIAL BREAK
    SCROLL TO CONTINUE READING

    ನಮಗೆ ಅನುಕೂಲ ಆಗಲಿಲ್ಲ ಅಂದ್ರೆ ಸುಪ್ರೀಂಕೋರ್ಟ್ ಗೆ ಹೋಗ್ತೀವಿ ಅಂದಿದ್ದಾರೆ. ಸುಪ್ರೀಂ ಕೋರ್ಟ್ ಗೆ ಹೋಗೋದಾಗಿ ಹೇಳ್ತಿದ್ದಾರೆ. ದೊಡ್ಡವರು ಏನು ನಿರ್ಧಾರ ಮಾಡ್ತಾರೆ ಅದರಂತೆ ನಡೆಯುತ್ತೇವೆ. ಶಿಕ್ಷಣ ಮತ್ತು ಧರ್ಮ ಎರಡು ಕಣ್ಣುಗಳಿದ್ದಂತೆ. ಎರಡನ್ನೂ ಒಟ್ಟಿಗೆ ತೆಗೆದುಕೊಂಡು ನಡೆಯಬೇಕು ಅನ್ನೋದು ನಮ್ಮ ಆಶಯ. ಗೊಂದಲ ಮಾಡಿಕೊಳ್ಳೋದು ಬೇಡ. ಒಂದು ಒಳ್ಳೆಯ ತೀರ್ಮಾನ ಆಗುತ್ತೆ. ಅದರಂತೆ ಎಲ್ಲರೂ ಒಟ್ಟಿಗೆ ನಡೆಯೋಣ ಎಂದು ಹೇಳಿದರು. 

  • ಬೆಂಗಳೂರು: ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ಬಂದಿದೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಸಮಾಜದ ಮುಖಂಡರು ತೀರ್ಮಾನ ತೆಗೆದುಕೊಳ್ತಾರೆ. ಇದನ್ನ‌ ಧರ್ಮದ ದೃಷ್ಟಿಯಿಂದ ನೋಡಬಾರದು. ಸಂವಿಧಾನದ ದೃಷ್ಟಿಯಿಂದ ನೋಡಬೇಕು. ಹೆಣ್ಣುಮಗಳು ತಿಲಕ, ವಿಭೂತಿ ‌ಇಡುವುದು ಧರ್ಮದಲ್ಲಿಲ್ಲ. ಆದರೆ ಅದು ನನಗೆ ಇಡಬೇಕೆಂಬ ಇಷ್ಟವಿದೆ. ನೀವು ಬೇಡ ಅನ್ನೋಕೆ ಸಾಧ್ಯವೇ?  ಎಂದು ಎಂಎಲ್ ಸಿ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ.

    COMMERCIAL BREAK
    SCROLL TO CONTINUE READING

    ಇದರ ಬಗ್ಗೆ ಸುಪ್ರೀಂನಲ್ಲಿ ಚಾಲೆಂಜ್ ಆಗಬೇಕಿದೆ. ತಾಯಂದಿರು ಸೆರಗು ಹಾಕುವುದು ತಪ್ಪೇ? ತೀರ್ಪಿನಿಂದ ಬೀದಿಗಿಳಿಯಬೇಕಾದ ಅವಶ್ಯಕತೆಯಿಲ್ಲ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂಗೆ ಹೋಗುವುದಕ್ಕೆ ಅವಕಾಶವಿದೆ ಎಂದು ಹೇಳಿದ್ದಾರೆ.

    ಲಾಯರ್ ಮಜೀದ್ ಮೆಮನ್ ಬಾಂಬೆಯವರು. ಅವರ ಜೊತೆಯೂ ನಾನು ಚರ್ಚೆ ಮಾಡಿದ್ದೇನೆ. ಒಗ್ಗಟ್ಟಾಗಿ ಸುಪ್ರೀಂಗೆ ಹೋಗಲು ಪ್ರಯತ್ನ ಮಾಡ್ತಿದ್ದೇವೆ. ರಾಜ್ಯದಲ್ಲಿ ಶಾಂತಿ ಕಾಪಾಡುವುದಕ್ಕೆ ನೋಡ್ತಿದ್ದೇವೆ ಎಂದಿದ್ದಾರೆ.

    ಇದು ಇಲ್ಲಿಗೆ ನಿಲ್ಲುವುದಿಲ್ಲ. ನಾಳೆ ಜೀನ್ಸ್, ಬೇರೆ ಉಡುಪಿನ ಬಗ್ಗೆ ಚರ್ಚೆಯಾಗಬಹುದು. ಹೈಕೋರ್ಟ್ ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಿದೆ. ಅದಕ್ಕೆ ನಾವು ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ. ನಾಳೆ ನೀವು ವಿಭೂತಿ ಹಾಕಬಾರದು ಅಂತೀರ. ನನಗೆ ಹಾಕಬೇಕೆಂಬ ಇಷ್ಟವಿದೆ. ನನ್ನನ್ನ ತಡೆಯೋಕೆ ನಿಮಗೆ ಹೇಗೆ ಸಾಧ್ಯ ಎಂದು ಹೇಳಿದ್ದಾರೆ. 

  • ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ, ಹಿಜಾಬ್ ವಿಚಾರದಲ್ಲಿ ಸಾಕಷ್ಟು ವಿವಾದಗಳು ಎದ್ದಿದ್ದವು. ಇಂದು ಹೊರಬಿದ್ದ ತೀರ್ಪಿನ ಕುರಿತಂತೆ ಧರ್ಮದ ಮುಖಂಡರ ಜತೆ ಚರ್ಚೆ ನಡೆಯಲಿದೆ. ಎಲ್ಲರೂ ಶಾಂತ ರೀತಿಯಲ್ಲಿ ಇರುವಂತೆ ಕೋರಿಕೊಳ್ಳಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಲಾಗುತ್ತಿದೆ. ಶಾಂತಿಯುತವಾಗಿ ವರ್ತನೆ ಮಾಡುವಂತೆ ಎಲ್ಲರಿಗೂ ಮನವಿ ಮಾಡಿದ್ದೇವೆ. ಕಾನೂನಾತ್ಮಕವಾಗಿ ನಾವು ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದಿದ್ದಾರೆ.

  • ಬೆಂಗಳೂರು: ಕರ್ನಾಟಕ ಹೈಕೋರ್ಟ್ ಹಿಜಾಬ್ ಕುರಿತು ನೀಡಿರುವ ತೀರ್ಪು ಸ್ವಾಗತಾರ್ಹ. ಈ ತೀರ್ಪು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ಹಿಜಾಬ್ ಧರಿಸಬೇಕು ಎಂದು ಶಾಲೆಯಿಂದ ದೂರ ಉಳಿದಿರುವ ವಿದ್ಯಾರ್ಥಿನಿಯರು ಕೂಡಲೆ ಶಾಲೆಗೆ ತೆರಳಬೇಕು ಎಂದು ಕೋರುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

  • ಬೆಂಗಳೂರು: ಕರ್ನಾಟಕ ಹೈಕೋರ್ಟ್ ಹಿಜಾಬ್ ಕುರಿತು ನೀಡಿರುವ ತೀರ್ಪು ಸ್ವಾಗತಾರ್ಹ. ಈ ತೀರ್ಪು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ಹಿಜಾಬ್ ಧರಿಸಬೇಕು ಎಂದು ಶಾಲೆಯಿಂದ ದೂರ ಉಳಿದಿರುವ ವಿದ್ಯಾರ್ಥಿನಿಯರು ಕೂಡಲೆ ಶಾಲೆಗೆ ತೆರಳಬೇಕು ಎಂದು ಕೋರುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

  • ವಿಜಯನಗರ: ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಪ್ರಕಟ ಹಿನ್ನೆಲೆ  ಹೂವಿನಹಡಗಲಿ ತಾಲೂಕಿನ ಹಿರೇ ಹಡಗಲಿಯ ಅಭಿನವ ಹಾಲಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಾಲಸ್ವಾಮಿ ಮಠದ ಶ್ರೀಗಳು, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ಎಲ್ಲರೂ ಪಾಲಿಸಲೇಬೇಕು. ಯಾವುದೇ ಧಾರ್ಮಿಕ ಸೂಚಕ ವಸ್ತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಧರಿಸುವಂತಿಲ್ಲ ಎಂದು ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಸ್ವಾಗತಿಸಿ ಪಾಲಿಸಬೇಕು. ದೇಶದಲ್ಲಿ ಯಾವುದೇ ಜಾತಿ, ಮತ, ಪಂಥಗಳಲ್ಲಿ ಹೆಚ್ಚು ಕಡಿಮೆ ಎನ್ನೋದಿಲ್ಲ. ಪ್ರತಿಯೊಬ್ಬ ವ್ಯಕ್ತಿ ಸಂವಿಧಾನದ ಆಧಾರದಲ್ಲಿಯೇ ಬದುಕಬೇಕು. ನ್ಯಾಯಾಲಯದ ವ್ಯವಸ್ಥೆ ಅಡಿಯಲ್ಲಿ ಎಲ್ಲರೂ ಬದುಕಬೇಕು ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ. 

  • ಯಾದಗಿರಿ: ಹಿಜಾಬ್ ಕುರಿತು ಹೈಕೋರ್ಟ್ ವಿಸ್ತೃತ ಪೀಠ ಮಹತ್ವದ ಆದೇಶ ಹಿನ್ನೆಲೆ ಯಾದಗಿರಿಯಲ್ಲಿ ಕಾಲೇಜ್ ಬಿಟ್ಟು ವಿದ್ಯಾರ್ಥಿಗಳು ಮನೆಗೆ ತೆರಳಿದ್ದಾರೆ. ಪರೀಕ್ಷೆ ಬಿಟ್ಟು 08 ವಿದ್ಯಾರ್ಥಿಗಳು ಹೊರ ನಡೆದಿದ್ದಾರೆ. ಹಿಜಾಬ್ ಬಿಟ್ಟು ಕ್ಲಾಸ್ ಗೆ ಬರಲ್ಲ ಎಂದು ಮನೆಗೆ ತೆರಳಿದ್ದಾರೆ. ಹಿಜಾಬ್ ತೆಗೆಯದೆ ಬೆಳಿಗ್ಗೆಯಿಂದ ಕೋರ್ಟ್ ಆದೇಶಕ್ಕೆ ವಿದ್ಯಾರ್ಥಿನಿಯರು ಕಾದು ಕುಳಿತಿದ್ದರು. ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪದವಿ ಪೂರ್ವ ಕಾಲೇಜ್ ನಲ್ಲಿ ಈ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಪೂರ್ವಭಾವಿ ಪರಿಕ್ಷೆ ಬಿಟ್ಟು ವಿದ್ಯಾರ್ಥಿಗಳು ಹೊರನಡೆದಿದ್ದಾರೆ.  

  • ಯಾದಗಿರಿ: ಹಿಜಾಬ್ ಕುರಿತು ಹೈಕೋರ್ಟ್ ವಿಸ್ತೃತ ಪೀಠ ಮಹತ್ವದ ಆದೇಶ ಹಿನ್ನೆಲೆ ಯಾದಗಿರಿಯಲ್ಲಿ ಕಾಲೇಜ್ ಬಿಟ್ಟು ವಿದ್ಯಾರ್ಥಿಗಳು ಮನೆಗೆ ತೆರಳಿದ್ದಾರೆ. ಪರೀಕ್ಷೆ ಬಿಟ್ಟು 08 ವಿದ್ಯಾರ್ಥಿಗಳು ಹೊರ ನಡೆದಿದ್ದಾರೆ. ಹಿಜಾಬ್ ಬಿಟ್ಟು ಕ್ಲಾಸ್ ಗೆ ಬರಲ್ಲ ಎಂದು ಮನೆಗೆ ತೆರಳಿದ್ದಾರೆ. ಹಿಜಾಬ್ ತೆಗೆಯದೆ ಬೆಳಿಗ್ಗೆಯಿಂದ ಕೋರ್ಟ್ ಆದೇಶಕ್ಕೆ ವಿದ್ಯಾರ್ಥಿನಿಯರು ಕಾದು ಕುಳಿತಿದ್ದರು. ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪದವಿ ಪೂರ್ವ ಕಾಲೇಜ್ ನಲ್ಲಿ ಈ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಪೂರ್ವಭಾವಿ ಪರಿಕ್ಷೆ ಬಿಟ್ಟು ವಿದ್ಯಾರ್ಥಿಗಳು ಹೊರನಡೆದಿದ್ದಾರೆ.  

  • ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು, ಸಮವಸ್ತ್ರದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುತ್ತದೆ. ಈ ತೀರ್ಪು ಮಹತ್ವದ್ದಾಗಿದೆ. ನಾನು ತೀರ್ಪನ್ನು ಸ್ವಾಗತಿಸುತ್ತೇನೆ - ಸಚಿವ ಸುಧಾಕರ್  

  • ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇನೆ. ಈ ನೆಲ, ನೆಲದ ಕಾನೂನು ಅಂತಿಮ ಎಂದು ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮಾಡಿದ್ದಾರೆ. 

    COMMERCIAL BREAK
    SCROLL TO CONTINUE READING

     

     

  • ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು

    COMMERCIAL BREAK
    SCROLL TO CONTINUE READING

    ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತೆ ವಿದ್ಯಾರ್ಥಿ, ಪೋಷಕರಿಗೆ ಮನವಿ ಮಾಡುತ್ತಿದ್ದೇನೆ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ 

  • ಹೈಕೋರ್ಟ್ ತ್ರೀಸದಸ್ಯ ಪೀಠದಿಂದ ಮಹತ್ವದ ತೀರ್ಪು

    COMMERCIAL BREAK
    SCROLL TO CONTINUE READING

    ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ ಪೀಠ

    ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಅತ್ಯಗತ್ಯ ಭಾಗವಲ್ಲ 

    ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ

    ಸಮವಸ್ತ್ರ ನಿಗದಿಪಡಿಸುವುದು ಸೂಕ್ತವಾದ ನಿರ್ಬಂಧನೆ

    ಸರ್ಕಾರದ ಆದೇಶ ಕಾನೂನುಬದ್ದವಾಗಿದೆ

    ಉಡುಪಿ ಕಾಲೇಜಿಗೆ ನಿರ್ದೇಶನ ಹೇರುವ ಅಗತ್ಯವಿಲ್ಲ

    ಹಿಜಾಬ್ ಕೋರಿದ್ದ ರಿಟ್ ಅರ್ಜಿಗಳ ವಜಾ ಮಾಡಲಾಗಿದೆ

    ಪ್ರತಿ ಪುಟಕ್ಕೂ ಸಹಿ ಹಾಕಿದ ಸಿಜೆ ರಿತುರಾಜ್ ಅವಸ್ತಿ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link