Lok Sabha Election 2024 LIVE Updates: ಕರ್ನಾಟಕ ಲೋಕಸಭಾ ಚುನಾವಣೆ ಮೊದಲ ಹಂತದ ಚುನಾವಣೆ ಅಂತ್ಯ
Lok Sabha Poll 2024 Phase 2 Voting Live News and Updates in Kannada: ಇಂದು ದೇಶಾದ್ಯಂತ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ.
Lok Sabha Election 2024 Phase 2 Polling LIVE: ಇಂದು ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಕರುನಾಡಲ್ಲಿ ಇದು ಮೊದಲ ಹಂತದ ಚುನಾವಣೆಯಾಗಿದೆ. ಇಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಮತದಾನಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬೆಂಗಳೂರಿನ ನಾಲ್ಕು ಕ್ಷೇತ್ರಗಳು ಜೊತೆಗೆ ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕಾಂಗ್ರೆಸ್‌ನ 14, ಬಿಜೆಪಿಯ 11, ಜೆಡಿಎಸ್‌ನ ಮೂವರು ಸೇರಿದಂತೆ 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Latest Updates
Karnataka Lok Sabha Elections Phase 2 Live : ಪ್ರತಿಯೊಬ್ಬರು ಮತದಾನ ಮಾಡಬೇಕು : ಕಿಚ್ಚ ಸುದೀಪ್
ಬೆಂಗಳೂರಿನ ಪುಟ್ಟೇನಹಳ್ಳಿ ಆಕ್ಸ್‌ಫರ್ಡ್ ಶಾಲೆಯಲ್ಲಿ ಕುಟುಂಬ ಸಮೇತ ಕಿಚ್ಚ ಸುದೀಪ್ ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ದೇಶದ ಮೇಲೆ ಪ್ರೀತಿ ಇರುವ ಪ್ರತಿಯೊಬ್ಬರು ಮತದಾನ ಮಾಡಬೇಕು, ಎಷ್ಟೇ ಹೇಳಿದ್ರೂ ಕೆಲವರು ಮತ ಹಾಕುವುದಿಲ್ಲ. ಅಂತವರಿಗೆ ನಾವು ಏನು ಮಾಡೋಕೆ ಆಗುತ್ತೆ ಹೇಳಿ..? ಯಾರು ಮತದಾನ ಮಾಡ್ತಾರೆ ಅಂತಹವರಿಗೆ ಗೌರವ ಕೊಡೋಣ ಎಂದರು.
Karnataka Lok Sabha Election 2024 LIVE Updates : 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ 63.90ರಷ್ಟು ಮತದಾನ
ದಕ್ಷಿಣ ಕನ್ನಡ ಶೇ. 71.83ರಷ್ಟು ಮತದಾನ
ಹಾಸನ ಶೇ. 72.13ರಷ್ಟು ಮತದಾನ
ಕೋಲಾರ ಶೇ. 71.26ರಷ್ಟು ಮತದಾನ
ಚಾಮರಾಜನಗರ ಶೇ. 69.60ರಷ್ಟು ಮತದಾನ
ಚಿಕ್ಕಬಳ್ಳಾಪುರ ಶೇ. 70.97ರಷ್ಟು ಮತದಾನ
ಚಿತ್ರದುರ್ಗ ಶೇ. 67ರಷ್ಟು ಮತದಾನ
ಮಂಡ್ಯ ಶೇ. 74.87ರಷ್ಟು ಮತದಾನ
ಮೈಸೂರು-ಕೊಡಗು ಶೇ. 65.85ರಷ್ಟು ಮತದಾನ
ತುಮಕೂರು ಶೇ. 72.10ರಷ್ಟು ಮತದಾನ
ಉಡುಪಿ-ಚಿಕ್ಕಮಗಳೂರು ಶೇ. 72.13ರಷ್ಟು ಮತದಾನ
ಬೆಂಗಳೂರು ಸೆಂಟ್ರಲ್ ಶೇ. 48.61ರಷ್ಟು ಮತದಾನ
ಬೆಂಗಳೂರು ಉತ್ತರ ಶೇ. 50.04ರಷ್ಟು ಮತದಾನ
ಬೆಂಗಳೂರು ಗ್ರಾಮಾಂತರ ಶೇ. 61.78ರಷ್ಟು ಮತದಾನ
ಬೆಂಗಳೂರು ದಕ್ಷಿಣ ಶೇ. 49.37ರಷ್ಟು ಮತದಾನ
Karnataka Lok Sabha Election 2024 LIVE Updates : ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ ಮತದಾನದ ಶೇಖಡಾವಾರು ಪ್ರಮಾಣ
ಸಂಜೆ 05.00 ಗಂಟೆಯವರೆಗಿನ ವರದಿ
ಬೆಂಗಳೂರು ಕೇಂದ್ರ: ಶೇ. 48.61
ಬೆಂಗಳೂರು ದಕ್ಷಿಣ: ಶೇ. 49.37
ಬೆಂಗಳೂರು ಉತ್ತರ: ಶೇ. 50.04Karnataka Lok Sabha Elections Phase 2 Live Updates: ಮತದಾನ ಮಾಡಿ ಬಂದು ವೃದ್ಧ ಸಾವು
ಮತದಾನ ಮಾಡಿ ಬಂದು ವೃದ್ದ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಚನ್ನೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಕುಂದೂರಯ್ಯ(85) ಮೃತ ವೃದ್ದ. ಅನಾರೋಗ್ಯದಿಂದ ನರಳುತ್ತಿದ್ದ ಕುಂದೂರಯ್ಯ ಇಂದು ಕುಟುಂಬಸ್ಥರ ಜೊತೆ ಬಂದು ಮತದಾನ ಮಾಡಿದ್ದರು. ಮತದಾನ ಮಾಡಿ ಹೋದ ಕೆಲ ಸಮಯದಲ್ಲೆ ಸಾವನ್ನಪ್ಪಿದ್ದಾರೆ.
Bengaluru Lok Sabha Election 2024 LIVE | ಮತದಾನ ಮಾಡಿದರೆ ಮುಂದೆ ಜನಪ್ರತಿನಿಧಿಗಳನ್ನು ಪ್ರಶ್ನಿಸಿಬಹುದು
ನಟ ಶಿವ ರಾಜ್‌ಕುಮಾರ್ ಮತ ಚಲಾಯಿಸಿದ್ದಾರೆ ಮಾಡಿದ್ದಾರೆ. ಮತದಾನದ ನಂತರ ಮಾತನಾಡಿದ ಅವರು, ನನಗೆ ತುಂಬಾ ಸಂತೋಷವಾಗಿದೆ ಏಕೆಂದರೆ ಮತದಾನ ಪ್ರತಿಯೊಬ್ಬರ ಹಕ್ಕು, ನಾವು ಮತ ಚಲಾಯಿಸಿದರೆ ಮಾತ್ರ ನಮಗೆ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುವ ಅಧಿಕಾರ ಇರುತ್ತವೆ. ಜನರ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಅವರು ಬದಲಾವಣೆ ಬಯಸುತ್ತಾರೆ ಅಂತ ನಾನು ಭಾವಿಸುತ್ತೇನೆ ಎಂದರು.
Karnataka Lok Sabha Elections Phase 2 Live Updates: ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿ ಸಾವು
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಕೆಲಸಕ್ಕೆ ನಿಯೋಜನೆಗೊಂಡಿದ್ದ, ಶಿಕ್ಷಕಿ ಯಶೋಧಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Karnataka Lok Sabha Elections Phase 2 Live : ಮಧ್ಯಾಹ್ನ 3 ಗಂಟೆವರೆ ರಾಜ್ಯದಲ್ಲಿ ಶೇ. 50.93%ರಷ್ಟು ಮತದಾನ
ದಕ್ಷಿಣ ಕನ್ನಡ ಶೇ. 58.76,
ಉಡುಪಿ-ಚಿಕ್ಕಮಗಳೂರು ಶೇ. 57.49,
ಮಂಡ್ಯ ಶೇ. 57.44,
ಮೈಸೂರು ಶೇ. 53.55,
ಚಾಮರಾಜನಗರ ಶೇ. 54.82,
ಬೆಂಗಳೂರು ಗ್ರಾಮಾಂತರ ಶೇ. 49.62,
ಬೆಂಗಳೂರು ಉತ್ತರ ಶೇ. 41.12,
ಬೆಂಗಳೂರು ಕೇಂದ್ರ ಶೇ. 40.10,
ಬೆಂಗಳೂರು ದಕ್ಷಿಣ ಶೇ. 40.77,
ಹಾಸನ ಶೇ. 55.92,
ಚಿತ್ರದುರ್ಗ ಶೇ. 52.14,
ತುಮಕೂರು ಶೇ. 56.62,
ಚಿಕ್ಕಬಳ್ಳಾಪುರ ಶೇ. 55.90 s
ಕೋಲಾರ ಶೇ. 54.66
Lok Sabha Election 2024 LIVE : ಬೆಂಗಳೂರು ಮತದಾನದ ಶೇಖಡಾವಾರು ಪ್ರಮಾಣ
ಮಧ್ಯಾಹ್ನ 03.00 ಗಂಟೆಯವರೆಗಿನ ಬೆಂಗಳೂರು ಶೇಖಡಾವಾರು ಮತದಾನದ ಪ್ರಮಾಣ ಹೀಗಿದೆ:
ಬೆಂಗಳೂರು ಕೇಂದ್ರ: ಶೇ. 40.10
ಬೆಂಗಳೂರು ದಕ್ಷಿಣ: ಶೇ. 40.77
ಬೆಂಗಳೂರು ಉತ್ತರ: ಶೇ. 41.12
Chamarajnagar Lok Sabha Election 2024 LIVE: ಮತಗಟ್ಟೆ ಧ್ವಂಸ
ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾ.ಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಘಟನೆ ಮತಗಟ್ಟೆ ಧ್ವಂಸ ಮಾಡಲಾಗಿದೆ. ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದರು. ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ ವ್ಯಾಪ್ತಿಯ 5 ಗ್ರಾಮಗಳ ಜನರ ಮನವೊಲಿಕೆಗೆ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಮತಗಟ್ಟೆಯನ್ನೇ ಧ್ವಂಸ ಮಾಡಿದ್ದಾರೆ. ಅಧಿಕಾರಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.
Lok Sabha Election 2024 LIVE : ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ; ಆಯೋಗಕ್ಕೆ ಸುಪ್ರೀಂ ನೋಟಿಸ್
ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ ನಡೆಸುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್ ಈ ಮನವಿಯನ್ನು ಪುರಸ್ಕರಿಸಿದ್ದು, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಚುನಾವಣೆಯಲ್ಲಿ ನೋಟಾಗೆ ಅತಿ ಹೆಚ್ಚು ಮತ ಬಂದ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸಬೇಕು ಎಂದು ಕೋರ್ಟ್ ಸೂಚಿಸಿದೆ. ಅಲ್ಲದೇ, ನೋಟಾಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿಗೆ ಮರುಚುನಾವಣೆಯಲ್ಲಿ ಅವಕಾಶ ನೀಡದಿರುವಂತೆ ತಿಳಿಸಿದೆ.
Lok Sabha Election 2024 LIVE : ಅರ್ಧದಲ್ಲೇ ಕೈ ಕೊಟ್ಟ ಇವಿಎಂ
ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದಿದೆ. ಇವಿಎಂ ಅರ್ಧದಲ್ಲೇ ಕೈ ಕೊಟ್ಟಿದೆ. ಇವಿಎಂ ಸರಿಪಡಿಸಲು ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
Lok Sabha Election 2024 LIVE : ಬಸ್ ಇಲ್ಲದೆ ಜನರ ಪರದಾಟ
ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ. ಬಸ್ ಇಲ್ಲದೆ ನಿಲ್ದಾಣದಲ್ಲಿ ಜನರ ಪರದಾಟ. ಬಸ್ ಇಲ್ಲದೆ ಬಿಕೋ ಅನ್ನುತ್ತಿರುವ ನಿಲ್ದಾಣ.
Bengaluru Lok Sabha Election 2024 LIVE : ಮತದಾನ ಮಾಡಿದ ನಟ ರವಿಚಂದ್ರನ್
ಓಟ್ ಹಾಕೋದು ಪ್ರತಿಯೊಬ್ಬರ ಜವಾಬ್ದಾರಿ. ನೀವ್ ಓಟ್ ಹಾಕಿಲ್ಲ ಅಂದ್ರೆ ವೇಸ್ಟ್ ಆಗೋಗುತ್ತೆ ಎಂದು ನಟ ರವಿಚಂದ್ರನ್ ಹೇಳಿದ್ದಾರೆ.
Lok Sabha Election 2024 LIVE: ಕುದುರೆ ಏರಿ ಬಂದು ಮತದಾನ
ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಡಾ.ಶ್ರೀಧರ್ ಕುದುರೆ ಏರಿ ಬಂದು ಮತದಾನ ಮಾಡಿದ್ದಾರೆ.Lok Sabha Elections Phase 2 Live: ನಟ ದರ್ಶನ್ ಮತದಾನ
ನಟ ದರ್ಶನ್ ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
Lok Sabha Elections Phase 2 Live: ನವವಿವಾಹಿತರಿಂದ ಮತದಾನ
ಬಿಹಾರದ ಕತಿಹಾರ್‌ನಲ್ಲಿ ನವವಿವಾಹಿತರು ಲೋಕಸಭಾ ಚುನಾವಣೆಗೆ ಮತ ಚಲಾಯಿಸಿದ್ದಾರೆ.
Karnataka Lok Sabha Elections Phase 2 Live: ಬೆಂಗಳೂರಿನಲ್ಲಿ 20ನೇ ಬಾರಿ ಮತ ಚಲಾಯಿಸಿದ 86 ರ ವೃದ್ಧ
ಬೆಂಗಳೂರಿನ ಸಿವಿ ರಾಮನ್ ನಗರದ ನಿವಾಸಿ ಶಿವರಾಮಕೃಷ್ಣ ಶಾಸ್ತ್ರಿ ಎಂಬ 86ನೇ ವಯಸ್ಸಿನ ವೃದ್ಧ 20ನೇ ಬಾರಿ ಮತ ಚಲಾಯಿಸುವ ಮೂಲಕ ಉತ್ಸಾಹವನ್ನು ಮೆರೆದಿದ್ದಾರೆ.
Lok Sabha Election 2024 LIVE: ಆಸ್ಪತ್ರೆಯಿಂದ ಮತಗಟ್ಟೆಗೆ ಬಂದು ಮತದಾನ
ವೃದ್ಧ ಮಹಿಳೆ ಆಕ್ಸಿಜನ್ ಹಾಕಿಕೊಂಡು ಬಂದು ಮತದಾನ ಮಾಡಿದ್ದಾರೆ. ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.ನೀಲಂ ಸಿನ್ಹಾ ಎಂಬುವರು ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಉಸಿರಾಟದ ತೊಂದರೆ ಇದ್ದರೂ ಸಹ ಆಕ್ಸಿಜನ್ ಹಾಕಿಕೊಂಡು ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಲ್ಲಿ ತನ್ನ ಮತ ಚಲಾಯಿಸಿದರು.
Lok Sabha Election 2024 LIVE: ಎಲ್ಲೆಲ್ಲಿ ಎಷ್ಟು ವೋಟಿಂಗ್?
ಬೆಂಗಳೂರು ಗ್ರಾಮಾಂತರ: 36.09%
ಬೆಂಗಳೂರು ಉತ್ತರ: 32.25%
ಬೆಂಗಳೂರು ಸೆಂಟ್ರಲ್: 30.10%
ಬೆಂಗಳೂರು ದಕ್ಷಿಣ: 31.51%
ದಕ್ಷಿಣ ಕನ್ನಡ: 48.10%
ಉಡುಪಿ ಚಿಕ್ಕಮಗಳೂರು: 46.43%
ತುಮಕೂರು: 41.91%
ಚಿಕ್ಕಬಳ್ಳಾಪುರ: 39.85%
ಕೋಲಾರ: 38.42%
ಮಂಡ್ಯ: 40.70%ಹಾಸನ: 40.99%
ಚಿತ್ರದುರ್ಗ: 39.05%
ಮೈಸೂರು: 41.58%
ಚಾಮರಾಜನಗರ : 39.57%Kolar Lok Sabha Election 2024 LIVE Updates: ಮದ್ಯದಂಗಡಿ ಶಿಫ್ಟ್ ನಾಡುವ ಭರವಸೆ ಮತದಾನ ಆರಂಭ. ಅಧಿಕಾರಿಗಳು, ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು. ಸಾಲುಗಟ್ಟಿ ನಿಂತು ಮತದಾನಕ್ಕೆ ಮುಂದಾದ ಗ್ರಾಮಸ್ಥರು. ಸುಮಾರು 567 ಮತದಾರರಿರುವ ಬೆಗ್ಲಿ ಬೆಣಜೇನಹಳ್ಳಿ. ಬೆಳಗಿನಿಂದಲೂ ಮತದಾನ ಮಾಡದೆ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರು. ಕೋಲಾರ ತಾಲ್ಲೂಕಿನ ಬೆಗ್ಲಿ ಬೆಣಜೇನಹಳ್ಳಿ ಗ್ರಾಮ.
Karnataka Lok Sabha Elections Phase 2 Live: ವಿವಿಪ್ಯಾಟ್ ಎಣಿಕೆಗೆ ಕೋರಿದ್ದ ಅರ್ಜಿ ವಜಾ
ಇವಿಎಂಗಳಲ್ಲಿ ಚಲಾವಣೆಯಾದ ಎಲ್ಲ ಮತಗಳನ್ನು ವಿವಿಪ್ಯಾಟ್ ಜೊತೆ ತುಲನೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Karnataka Lok Sabha Elections Phase 2 Live: ವಿವಿಪ್ಯಾಟ್ ಎಣಿಕೆಗೆ ಕೋರಿದ್ದ ಅರ್ಜಿ ವಜಾ
ಇವಿಎಂಗಳಲ್ಲಿ ಚಲಾವಣೆಯಾದ ಎಲ್ಲ ಮತಗಳನ್ನು ವಿವಿಪ್ಯಾಟ್ ಜೊತೆ ತುಲನೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Karnataka Lok Sabha Election 2024 Phase 2 Voting: ಮತದಾನ ಮಾಡಿದ ನಟ ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಪುಟ್ಟೇನಹಳ್ಳಿಯ ಆಕ್ಸ್‌ಫರ್ಡ್ ಇಂಗ್ಲೀಷ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಉಡುಪಿಯ ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲ ನಟ ರಕ್ಷಿತ್ ಶೆಟ್ಟಿ ಕೂಡ ಮತದಾನ ಮಾಡಿದರು.
Lok Sabha Election 2024 Phase 2 Voting Live: ನಟಿ ರಕ್ಷಿತಾ ಪ್ರೇಮ್ ಮತದಾನ
ರೈಟ್ ಪರ್ಸನ್ ಆಯ್ಕೆ ಮಾಡಿ. ಸರಿ ಯಾವ್ದು ತಪ್ಪು ಯಾವ್ದು ಅಂಥ ಎಲ್ಲರಿಗೂ ಗೊತ್ತಿದೆ. ದೇಶಕ್ಕಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಿದ ಎಂದು ನಟಿ ರಕ್ಷಿತಾ ಪ್ರೇಮ್ ಹೇಳಿದರು.Lok Sabha Election 2024 Phase 2 Voting Live: ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಕಲ್ಲಳ್ಳಿ ಗ್ರಾಮದಲ್ಲಿ ಮತದಾನ ಮಾಡಿ ಮನೆಗೆ ಬಂದ ವೃದ್ದೆ ಸಾವನ್ನಪ್ಪಿದ್ದಾರೆ. 90 ವರ್ಷದ ಪುಟ್ಟಮ್ಮ ಎಂಬ ಅಜ್ಜಿ ಕೊನೆಯುಸಿರೆಳೆದಿದ್ದಾರೆ.
Bengaluru Lok Sabha Election 2024 LIVE Updates: ಹಕ್ಕು ಚಲಾಯಿಸಿದ ನಟಿ ಸಪ್ತಮಿಗೌಡ
ನಟಿ ಸಪ್ತಮಿಗೌಡ ಇಂದು ಮತದಾನ ಮಾಡಿದ್ದಾರೆ. ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ನಲ್ಲಿ ಮತ ಚಲಾಯಿಸಿದರು.
Bengaluru Lok Sabha Election 2024 LIVE : ಮತದಾನಕ್ಕೆ ಆಗಮಿಸಿದ ಮಹಿಳೆಗೆ ಹೃದಯ ಸ್ತಂಭನ
ಮತದಾನಕ್ಕೆ ಆಗಮಿಸಿದ ಮಹಿಳೆಗೆ ಹೃದಯ ಸ್ತಂಭನವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿಣ್ಣೆ ಬಳಿ ಘಟನೆ ನಡೆದಿದೆ.ಸ್ಥಳದಲ್ಲೇ ಇದ್ದ ವೈದ್ಯರು ಮಹಿಳೆಯ ಪ್ರಾಣ ಉಳಿಸಿದ್ದಾರೆ.
Chikkamagaluru Lok Sabha Election 2024 : ಹಸೆಮಣೆ ಏರುವ ಮುನ್ನ ಹಕ್ಕು ಚಲಾಯಿಸಿದ ಮಧು ಮಗಳು
ಕಲ್ಯಾಣ ಮಂಟಪಕ್ಕೆ ತೆರಳುವ ವೇಳೆ ಮಧು ಮಗಳು ಮತದಾನ ಮಾಡಿ ಗಮನ ಸೆಳೆದಿರುವ ಘಟನೆ ಶೃಂಗೇರಿ ತಾಲ್ಲೂಕಿನ ಕೊತ್ತುಗೋಡು ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಸ್ಪಂದನ ಮತ ಚಲಾಯಿಸಿದ ಮಧು ಮಗಳು.
Lok Sabha Election 2024 LIVE : ಶೋಭಾ ಕರಂದ್ಲಾಜೆ ಮತದಾನ
ಶೋಭಾ ಕರಂದ್ಲಾಜೆ ಮತಚಲಾಯಿಸಿದ ಬಳಿಕ ಮಶಯಮಗಳ ಜೊತೆ ಮಾತನಾಡಿದರು. ಮೂರನೇ ಬಾರಿಗೆ ಮೋದಿ ಪ್ರಧಾನಿ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Karnataka Lok Sabha Election 2024 Phase 2 Polling LIVE: ರಾಜ್ಯದಲ್ಲಿ ಬೆಳಗ್ಗೆ 7 ರಿಂದ 11ರವರೆಗೆ ಎಲ್ಲೆಲ್ಲಿ ಎಷ್ಟು ಮತದಾನ ನಡೆದಿದೆ ಎಂಬ ಮಾಹಿತಿ ಇಲ್ಲಿದೆ...
ಬೆಂಗಳೂರು ಗ್ರಾಮಾಂತರ: 22.81%
ಬೆಂಗಳೂರು ಉತ್ತರ: 19.78%
ಬೆಂಗಳೂರು ಸೆಂಟ್ರಲ್: 19.21%
ಬೆಂಗಳೂರು ದಕ್ಷಿಣ: 19.81%
ಹಾಸನ: 22.03%
ಚಿಕ್ಕಬಳ್ಳಾಪುರ: 21.92%
ಕೋಲಾರ: 20.76%
ಮೈಸೂರು: 25.09%
ಚಾಮರಾಜನಗರ : 7.70%
ಮಂಡ್ಯ: 21.22%
ಉಡುಪಿ ಚಿಕ್ಕಮಗಳೂರು: 29.03%
ದಕ್ಷಿಣ ಕನ್ನಡ 30.98%
ಚಿತ್ರದುರ್ಗ: 21.75%
ತುಮಕೂರು: 23.32%Lok Sabha Election 2024 LIVE Updates: ಮತಚಲಾಯಿಸಿದ ಸಿಎಂ ಸಿದ್ದರಾಮಯ್ಯ
ಸಿದ್ದರಾಮನ ಹುಂಡಿ ಗ್ರಾಮದ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಚಲಾಯಿಸಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮನಹುಂಡಿಯಲ್ಲಿ ಸಿಎಂ ಮತ ಚಲಾಯಿಸಿದರು.
Lok Sabha Election 2024 LIVE : ದುನಿಯಾ ವಿಜಯ್ ಮತದಾನ
ಕತ್ರಿಗುಪ್ಪೆ ಸರಕಾರಿ ಶಾಲೆಯಲ್ಲಿ ದುನಿಯಾ ವಿಜಯ್ ಮತದಾನ ಮಾಡಿದರು. ಸರತಿ ಸಾಲಿನಲ್ಲಿ ನಿಂತು ದುನಿಯಾ ವಿಜಯ್ ಮತ ಚಲಾಯಿಸಿದರು.
Karnataka Lok Sabha Elections Phase 2 Live: ಮತದಾನಕ್ಕೆ ಆಗಮಿಸಿದ ಹಿರಿಯ ನಟಿ ಪ್ರೇಮ
ಹಿರಿಯ ನಟಿ ಪ್ರೇಮ ಮತದಾನಕ್ಕೆ ಆಗಮಿಸಿದರು. ಬೆಂಗಳೂರು ಮಂಗಮ್ಮನಪಾಳ್ಯದ ಜಾನ್ಸನ್ ಶಾಲೆಯಲ್ಲಿ ಮತ ಚಲಾಯಿಸಿದರು. ಮತದಾನಕ್ಕೆ ಬಂದ ನಟಿ ಜೊತೆಗೆ ಚುನಾವಣೆ ಸಿಬ್ಬಂಸಿ ಸೆಲ್ಫಿ ತೆಗೆದುಕೊಂಡರು.
Karnataka Lok Sabha Election 2024 Phase 2 Voting Live: ಬೆಂಗಳೂರಿನ ಮಲ್ಲೇಶ್ವರಂ ಎಂಇಎಸ್ ಕಾಲೇಜಿನಲ್ಲಿ ನವರಸ ನಾಯಕ ಜಗ್ಗೇಶ್ ಮತ ಚಲಾಯಿಸಿದರು.
Lok Sabha Election 2024 LIVE Updates: ಉಡುಪಿ - ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಮತದಾನ
ರಾಜ್ಯಾದ್ಯಂತ ಶೇ 9ರಷ್ಟು ಮತದಾನವಾಗಿದ್ದು, ಈ ಪೈಕಿ ಉಡುಪಿ - ಚಿಕ್ಕಮಗಳೂರಿನಲ್ಲಿ ಶೇ.12.8ರಷ್ಟು ಮತದಾನವಾಗಿದ್ದು, ಇಲ್ಲಿ ಅತಿ ಹೆಚ್ಚು ಮತದಾನ ನಡೆದಿದೆ. ಮಂಡ್ಯ ಮತ್ತು ಚಾಮರಾಜನಗರದಲ್ಲಿ ಶೇಕಡಾ 7.7 ರಷ್ಟು ಮತದಾನವಾಗಿದ್ದು, ಇದು ಅತಿ ಕಡಿಮೆ ಮತದಾನವಾಗಿದೆ.
Karnataka Lok Sabha Election 2024 Phase 2 Voting Live: ಮತದಾನಕ್ಕೆ ಆಗಮಿಸಿದ ಶಾಸಕ ಶರತ್ ಬಚ್ಚೇಗೌಡ.
ಶಾಸಕ ಶರತ್ ಬಚ್ಚೇಗೌಡ ತಮ್ಮ ಪತ್ನಿ ಪ್ರತಿಭಾ ಶರತ್ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಸರತಿ ಸಾಲಿನಲ್ಲಿ ನಿಂತು ಶಾಸಕ ಶರತ್ ಬಚ್ಚೇಗೌಡ ಮತ ಚಲಾಯಿಸಿದರು.
Bengaluru Lok Sabha Election 2024 Phase 2 Voting Live: ಯೂತ್ ಕಾಂಗ್ರೆಸ್ ನಿಂದ ಚೊಂಬು ಪ್ರದರ್ಶನ
ಯೂತ್ ಕಾಂಗ್ರೆಸ್ ನಿಂದ ಚೊಂಬು ಪ್ರದರ್ಶನ ಮಾಡಲಾಯಿತು. ರಾಜಾಜಿನಗರದ ಮತಗಟ್ಟೆ ಬಳಿ ಚೊಂಬು ಮತ್ತು ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದರು. ರಾಜಾಜಿನಗರದಲ್ಲಿನ ಮಂಜುನಾಥ್ ನಗರದಲ್ಲಿರುವ ಗೌತಮ್ ಕಾಲೇಜು ಬಳಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹಾಗೂ ಕಾರ್ಯಧ್ಯಕ್ಷ ಮಂಜುನಾಥ್ ರಿಂದ ಚೊಂಬು ಪ್ರದರ್ಶನ ಮಡಿದರು.
Lok Sabha Election 2024 Live News : ಮತ ಚಲಾಯಿಸಿದ ನಟ ಶ್ರೀ ಮುರಳಿ
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರದ ಮೌಂಟ್ ಕಾರಮೆಲ್ ಮತದಾನ ಕೇಂದ್ರಕ್ಕೆ ಆಗಮಿಸಿ ನಟ ಶ್ರೀ ಮುರಳಿ ಮತದಾನ ಮಾಡಿದರು. ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು.
Karnataka Lok Sabha Election 2024 Phase 2 Voting Live: ಮತದಾನ ಮಾಡಿದ ನಟಿ ಅಮೂಲ್ಯ
ನಟಿ ಅಮೂಲ್ಯ ಆರ್.ಆರ್.ನಗರದ ಬಿಇಟಿ ಕಾನ್ವೆಂಟ್ ಸ್ಕೂಲ್ ಬೂತ್ ನಲ್ಲಿ ಮತದಾನ ಮಾಡಿದರು. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು ಎಂದು ನಟಿ ಅಮೂಲ್ಯ ಹೇಳಿದರು.
Bengaluru Lok Sabha Election 2024 LIVE News: ಅಶ್ವಿನಿ ಪುನೀತ್ ರಾಜಕುಮಾರ್ ವೋಟಿಂಗ್
ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ದಂಪತಿ ಸದಾಶಿವ ನಗರದ ಪೂರ್ಣ ಪ್ರಜ್ಞ ಎಜುಕೇಶನ್ ಸೆಂಟರ್‌ನಲ್ಲಿ ಮತದಾನ ಮಾಡಿದರು. ಮತಗಟ್ಟೆ ಸಂಖ್ಯೆ 152ರಲ್ಲಿ ತಮ್ಮ ಹಕ್ಕು ಚಾಯಿಸಿದರು.
Karnataka Lok Sabha Elections Live : ಕರ್ನಾಟಕದಲ್ಲಿ ರಾಜ್ಯದಲ್ಲಿ ಇಲ್ಲಿಯವರೆಗೂ 9.21% ರಷ್ಟು ಮತದಾನ ನಡೆದಿದೆ.
Bengaluru Lok Sabha Election 2024 LIVE News: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಬೆಂಗಳೂರು ಸೆಂಟ್ರಲ್, ಗ್ರಾಮಾಂತರ, ದಕ್ಷಿಣ, ಉತ್ತರದಲ್ಲಿ ಚುನಾವಣಾ ಕದನ ಆರಂಭವಾಗಿದೆ. ಬಿಜೆಪಿಯ ತೇಜಸ್ವಿ ಸೂರ್ಯ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಮತದಾನ ಮಾಡಿದರು.
Bengaluru Lok Sabha Election 2024 LIVE News: ಬಿಜೆಪಿಯ ತೇಜಸ್ವಿ ಸೂರ್ಯ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಮತದಾನ
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಬೆಂಗಳೂರು ಸೆಂಟ್ರಲ್, ಗ್ರಾಮಾಂತರ, ದಕ್ಷಿಣ, ಉತ್ತರದಲ್ಲಿ ಚುನಾವಣಾ ಕದನ ಆರಂಭವಾಗಿದೆ. ಬಿಜೆಪಿಯ ತೇಜಸ್ವಿ ಸೂರ್ಯ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಮತದಾನ ಮಾಡಿದರು.
Bengaluru Lok Sabha Election 2024 LIVE : ಮತ ಚಲಾಯಿಸಿದ ಆರ್.ಅಶೋಕ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತಗಟ್ಟೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ ಚಲಾಯಿಸಿದರು. ಎರಡನೇ ಹಂತದ ಲೋಕಸಭೆ ಚುನಾವಣೆಗೆ ಇಂದು ಕರ್ನಾಟಕದ 14 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
Karnataka Lok Sabha Election 2024 LIVE Updates: ಮೊದಲ ಬಾರಿ ಮತ ಚಲಾಯಿಸಲು ಬಂದ ಯುವಕರು
ಬೆಂಗಳೂರಿನ ಬಿಇಎಸ್ ಮತಗಟ್ಟೆಗೆ ಮೊದಲ ಬಾರಿ ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದ ಯುವಕರ ಜೊತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಂವಾದ ನಡೆಸಿದರು.
Hassan Lok Sabha Election 2024 LIVE: ಹಾಸನದಲ್ಲಿ ಮತದಾನ ಸ್ಥಗಿತ
ಹಾಸನ ನಗರದ ಸಂತೇಪೇಟೆಯ ಶಾಲೆಯ ಮತಗಟ್ಟೆ ಸಂಖ್ಯೆ 189 ರಲ್ಲಿ ಮತದಾನ ಸ್ಥಗಿತಗೊಂಡಿದೆ. ಇವಿಎಂ ನಲ್ಲಿ ತಾಂತ್ರಿಕ ದೋಷದ ಕಾರಣ ಮತದಾನ ಪ್ರಕ್ರಿಯೆ ಸ್ಥಗಿತವಾಗಿದೆ.
Mangaluru Lok Sabha Election 2024 LIVE: ಮತ ಯಂತ್ರದಲ್ಲಿ ದೋಷ
ಬಂಟ್ವಾಳ ತಾಲೂಕಿನ ಕರೋಪಾಡಿಯಲ್ಲಿಯೂ ಮತ ಯಂತ್ರದಲ್ಲಿ ದೋಷ ಕಂಡುಬಂದು ಮತದಾನ ವಿಳಂಬವಾಯಿತು. ಬೂತ್ ಸಂಖ್ಯೆ 240 ಪದ್ಯಾಣ ಕರೋಪಡಿಯಲ್ಲಿ ತಾಂತ್ರಿಕ ದೋಷ ಕಾಣಿಸಿತ್ತು. ಸದ್ಯ ಮತಯಂತ್ರ ಸರಿಪಡಿಸಲಾಗಿದ್ದು, ಮತದಾನ ಆರಂಭಗೊಂಡಿದೆ.
Mysuru Lok Sabha Election 2024 LIVE: ಹಕ್ಕು ಚಲಾಯಿಸಿದ ಶತಾಯುಷಿ ಅಜ್ಜಿ
ಮೈಸೂರಿನಲ್ಲಿ ಶತಾಯುಷಿ ಅಜ್ಜಿ ಮತದಾನ ಮಾಡಿದರು. 101 ವರ್ಷದ ಅಜ್ಜಿ ಬಂದು ಮತ ಚಲಾಯಿಸಿದರು.
Bengaluru Lok Sabha Election 2024 LIVE: ಮತದಾನ ಮಾಡಿದ ಆಯುಕ್ತ ದಯಾನಂದ್
ಇಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿರುವ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸಹ ತಮ್ಮ ಹಕ್ಕು ಚಲಾಯಿಸಿದರು. ಇಂದಿರಾನಗರದ ನ್ಯೂ ಹಾರಿಸನ್ ಶಾಲೆಗೆ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.
Karantaka Lok Sabha Elections Phase 2 Live Updates: ಮತಚಲಾಯಿಸಿದ ನಿರ್ಮಲಾ ಸೀತಾರಾಮನ್
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನ ಬಿಇಎಸ್ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
Lok Sabha Election Voting LIVE: ಕನ್ನಡದಲ್ಲೇ ಪ್ರಧಾನಿ ಮೋದಿ ಸಂದೇಶ
"ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಹೆಚ್ಚಿನ ಪ್ರಮಾಣದ ಮತದಾನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನಮ್ಮ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿಶೇಷವಾಗಿ ಕೋರುತ್ತೇನೆ. ನಿಮ್ಮ ಮತ ನಿಮ್ಮ ಧ್ವನಿ!" ಎಂದು ನ್ನಡದಲ್ಲೇ ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ.
Lok Sabha Chunavane 2024: 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ
ಇಂದು ದೇಶಾದ್ಯಂತ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ.
Lok Sabha Election Voting LIVE: ರಾಹುಲ್ ದ್ರಾವಿಡ್ ಅವರಿಂದ ಮತದಾನ
Rahul Dravid : ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿ ಮತದಾನ ಮಾಡಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಆಗಮಿಸಬೇಕು ಎಂದು ಮನವಿ ಮಾಡಿದರು.
Lok Sabha Election Voting LIVE: ಮತದಾನ ಮಾಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಬೆಂಗಳೂರಿನ ಬಿಇಎಸ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕರ್ನಾಟಕದಲ್ಲಿ ಇಂದು 14 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
Lok Sabha Election Voting LIVE: ಮತದಾನ ಮಾಡಿದ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ
ಪತಿ ನಾರಾಯಣ ಮೂರ್ತಿ ಜೊತೆಗೆ ಬಂದು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮತ ಚಲಾಯಿಸಿದರು. ಇದೇ ವೇಳೆ ಮಾತನಾಡಿದ ಅವರು, ಮನೆಯಲ್ಲಿ ಕುಳಿತುಕೊಳ್ಳಬೇಡಿ, ಹೊರಗೆ ಬಂದು ಮತ ಚಲಾಯಿಸಿ. ನಿಮ್ಮ ನಾಯಕನನ್ನು ಆರಿಸಿಕೊಳ್ಳಿ ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ. ಗ್ರಾಮೀಣ ಪ್ರದೇಶದವರಿಗೆ ಹೋಲಿಸಿದರೆ ನಗರವಾಸಿಗಳು ಕಡಿಮೆ ಮತ ಚಲಾಯಿಸುತ್ತಾರೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಯುವಕ, ಯುವತಿಯರು ಹೆಚ್ಚಾಗಿ ಮತದಾನ ಮಾಡಬೇಕು ಎಂದು ಸುಧಾಮೂರ್ತಿ ಹೇಳಿದರು.