ಧಾರವಾಡ: ನಗರದ ವರೂರಿನ ಕಾಮತ್ ಉಪಹಾರ (Kamat Hotel) ಹೋಟೆಲ್​ವೊಂದರಲ್ಲಿ ಪೂರಿ-ಬಾಜಿಯಲ್ಲಿ ಬೆಂದ ಹಲ್ಲಿ (Lizard) ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಹಕರಿಗೆ ಒಟ್ಟು 90 ಸಾವಿರ ರೂ. ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆಸ್ಟ್ರೇಲಿಯಾ-ದಕ್ಷಿಣ ಭಾರತ ನಡುವೆ ಮೊದಲ ನೇರ ಮಾರ್ಗಗಳಿಗೆ ಚಾಲನೆ: ಇಂಡಿಗೊ ಜೊತೆ ಸಹಯೋಗ 


2018 ರಲ್ಲಿ ನಗರದ ವರೂರಿನ ಕಾಮತ್ ಉಪಹಾರ ಹೋಟೆಲ್​ವೊಂದರಲ್ಲಿ ಪೂರಿ-ಬಾಜಿಯಲ್ಲಿ (Poori Bhaji) ಬೆಂದ ಹಲ್ಲಿ ಸಿಕ್ಕಿದ್ದ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರು ಕುರಿತು ಆಯೋಗ ಈ ಆದೇಶ ಹೊರಡಿಸಿದೆ.


ಇಬ್ಬರು ಗ್ರಾಹಕರಿಗೆ ಒಟ್ಟು 90 ಸಾವಿರ ರೂ. ಪರಿಹಾರ ನೀಡುವಂತೆ ವರೂರಿನ ಕಾಮತ್ ಉಪಹಾರ ಹೋಟೆಲ್‌ನ ಮಾಲೀಕರಿಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ. 26ನೇ ಸೆಪ್ಟೆಂಬರ್ 2018 ರಂದು ಪೂರಿ-ಬಾಜಿಯಲ್ಲಿ ಹಲ್ಲಿ ಕಂಡುಬಂದ ನಂತರ ಇಬ್ಬರು ಗ್ರಾಹಕರಾದ ವಿನಾಯಕ ಮತ್ತು ಸಹನಾ ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿದ್ದರು.


ಇದನ್ನೂ ಓದಿ: Challenging Star Darsha: ಶಾಸಕ ಜಮೀರ್ ಅಹ್ಮದ್ ಖಾನ್ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್


ಫುಡ್ ಪಾಯ್ಸನ್ ನಿಂದ  (Food Poison) ಬಳಲುತ್ತಿದ್ದ ವಿನಾಯಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಇಬ್ಬರೂ ನ್ಯಾಯಕ್ಕಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದರು. ವಿಷಯವನ್ನು ಆಲಿಸಿದ ಆಯೋಗವು ಹೋಟೆಲ್ ಸಿಬ್ಬಂದಿ ವೃತ್ತಿಪರ ನಿರ್ಲಕ್ಷ್ಯವನ್ನು ಕಂಡು,  ದೂರುದಾರರಿಗೆ 90 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.