Demand shutdown of Yalahanka power plant unit : ಯಲಹಂಕ ಸಯುಕ್ತ ಆವರ್ತ ವಿದ್ಯುತ್ ಸ್ಥಾವರ ಘಟಕ ಬುಧವಾರ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದ್ದು, ಘಟಕದಿಂದ ಹೊರ ಹೊಮ್ಮುತ್ತಿರುವ ಹೊಗೆ ಮತ್ತು ಬಾರಿ ಶಬ್ದ ಸುತ್ತಲಿನ ನಿವಾಸಿಗಳಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ


COMMERCIAL BREAK
SCROLL TO CONTINUE READING

ಪುಟ್ಟೇನಹಳ್ಳಿ ಕೆಂಚೇನಹಳ್ಳಿ ಹಾರೋಹಳ್ಳಿ ಅನಂತಪುರ ಗೇಟ್ ಬಾಲಾಜಿ ಬಡಾವಣೆ ಸೇರಿದಂತೆ ಹಲವಾರು ಅಪಾರ್ಟ್ಮೆಂಟ್ ಗಳ ನಿವಾಸಿಗಳಿಗೆ ಈ ಘಟಕದಿಂದ ಉಂಟಾಗುತ್ತಿರುವ ಶಬ್ದ ಮತ್ತು ವಾಯು ಮಾಲಿನ್ಯ ತೊಂದರೆಗಳು ಈದುಮಾಡಿವೆ ಎಂದು ನಿವಾಸಿಗಳು ಆರೂಪಿಸಿದ್ದಾರೆ


ಇದನ್ನು ಓದಿ :WPL 2024 : 42 ರನ್ ಗಳ ಅಂತರದಿಂದ ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ 


ಗುರುವಾರ ರಾತ್ರಿ ಘಟಕದ ಮುಂಭಾಗದಲ್ಲಿ ಶಬ್ದ ಮತ್ತು ಹೊಗೆಯಿಂದ ಬೇಸತ್ತ ನಿವಾಸಿಗಳು ಒಗ್ಗಟ್ಟಾಗಿ ಕೂಡಲೇ ಘಟಕದ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ


ಘಟಕದಿಂದ ಹೊರ ಸೂಸುವ ಅಪಾಯಕಾರಿ ಹೊಗೆ ಸುಮಾರು 2 km ದೂರದವರೆಗೆ ಆವರಿಸುತ್ತದೆ ಇದರಿಂದ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಎಂದು ಮತ್ತು ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಷಣ ಘಟಕದ ಕಾರ್ಯವನ್ನ ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ


ಇದನ್ನು ಓದಿ :KEA: ಕೆಐಎಯಿಂದ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 15 ರವರೆಗೆ ಅವಕಾಶ


ಘಟಕವು ಪ್ರಾಯೋಗಿಕವಾಗಿ ಆರಂಭಗೊಂಡಿದ್ದು ಪ್ರಾರಂಭದ ಹಂತದಲ್ಲಿ ಇಷ್ಟು ಸಮಸ್ಯೆ ಆಗುತ್ತದೆ ಮತ್ತು ಪೂರ್ಣ ಪ್ರಮಾಣದಲ್ಲಿ ಘಟಕ ಆರಂಭವಾದರೆ ವಾತಾವರಣ ಸಂಪೂರ್ಣ ಹದಗೆಡುತ್ತದೆ ಆದ್ದರಿಂದ ಘಟಕವನ್ನು ಕೂಡಲೇ ಬಂದ್ ಮಾಡಬೇಕು ಎಂದು ಅಗ್ರಹಿಸಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.