ಬೆಂಗಳೂರು: ನಗರದ ಕೋಣನಕುಂಟೆ ವೃತ್ತದ ಬಳಿಯಿರುವ ಅಶೋಕ್ ರೆಡ್ಡಿ ಎಂಬುವವರಿಗೆ ಸೇರಿದ 25 ವರ್ಷದ ಲೋವೆಬಲ್ ಲಾಂಜರಿ ಗಾರ್ಮೆಂಟ್ಸ್ ಕಳೆದ ರಾತ್ರಿ 08:30ಕ್ಕೆ ಬೆಂಕಿಗೆ ಆಹುತಿಯಾಗಿದೆ.


COMMERCIAL BREAK
SCROLL TO CONTINUE READING

ಕುಮಾರ ಸ್ವಾಮಿ ಲೇಔಟ್ ಬಳಿ ಘಟನೆ ಸಂಭವಿಸಿದ್ದು, ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಗಢ ಸಂಭವಿಸಿದ್ದು, ಮೂರು ಅಂತಸ್ಥಿನ ಕಟ್ಟಡವನ್ನು ಬೆಂಕಿ ಆವರಿಸಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.


ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.


ಕೋಣನಕುಂಟೆ ಕ್ರಾಸ್ ಬಳಿಯ ಮೆಟ್ರೋ ಹಿಂಭಾಗದಲ್ಲಿರುವ ಈ ಗಾರ್ಮೇಂಟ್ಸ್ ನಲ್ಲಿ 300ಕ್ಕೂ ಹೆಚ್ಚು ಮಂದಿಗೆ ಕೆಲಸ ಒದಗಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.