Lok Adalat: ಕರ್ನಾಟಕ ಉಚ್ಛ ನ್ಯಾಯಾಲಯ: ಲೋಕ ಅದಾಲತ್ನಲ್ಲಿ 200 ಪ್ರಕರಣಗಳು ಇತ್ಯರ್ಥ
ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಮಾರ್ಚ್ 16 ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್‍ದಲ್ಲಿ ಒಟ್ಟು 583 ಪ್ರಕರಣಗಳ ಪೈಕಿ 200 ಪ್ರಕರಣಗಳನ್ನು ರೂ.4,16,68,242/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಧಾರವಾಡ: ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಮಾರ್ಚ್ 16 ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್‍ದಲ್ಲಿ ಒಟ್ಟು 583 ಪ್ರಕರಣಗಳ ಪೈಕಿ 200 ಪ್ರಕರಣಗಳನ್ನು ರೂ.4,16,68,242/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿ ಎಮ್. ಐ. ಅರುಣ್ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು. ಅದಾಲತನಲ್ಲಿ ನ್ಯಾಯಮೂರ್ತಿಗಳಾದ ಇ. ಎಸ್. ಇಂದಿರೇಶ್ ಮತ್ತು ಅನಿಲ ಬಿ. ಕಟ್ಟಿ ಹಾಗೂ ಇವರೊಂದಿಗೆ ಲೋಕ ಅದಾಲತ್‍ನ ಸದಸ್ಯರುಗಳಾದ ಎಮ್. ಸಿ. ಹುಕ್ಕೇರಿ ಮತ್ತು ಜಿ. ಎಮ್. ಭಟ್ಟ್ ಸೇರಿ ಒಟ್ಟು ಎರಡು ಪೀಠಗಳನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ: Lokasabha Election 2024: ಗಣಿನಾಡಿನಲ್ಲಿ ಗರಿಗೆದರಿದ ಲೋಕ ಲೆಕ್ಕಾಚಾರ..! ಸಂಸತ್ತಿನ ಗದ್ದುಗೆ ಏರುವವರ್ಯಾರು?
ಸುಮಾರು 19 ವರ್ಷದ ಹಳೆಯ ದಿವಾಣಿ ಪ್ರಕರಣವನ್ನು ನ್ಯಾಯಮೂರ್ತಿ ಇ. ಎಸ್. ಇಂದಿರೇಶ್ ಹಾಗೂ ಎಮ್. ಸಿ. ಹುಕ್ಕೇರಿ, ಸದಸ್ಯರು ಮತ್ತು ಪಕ್ಷಗಾರರ ವಕೀಲರುಗಳಾದ ಪದ್ಮಜಾ ತಾಡಪತ್ರಿ ಮತ್ತು ಎಸ್. ಎಲ್. ಮಟ್ಟಿ, ಎಸ್. ಎ. ಸಂಡೂರ ಇವರ ಸಹಕಾರದಿಂದ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಹಿತು. ಮುಂದುವರೆದ ಲೋಕ ಅದಾಲತ್‍ನಲಿ ಸುಮಾರು 5 ವರ್ಷದಿಂದ ದೂರವಾಗಿದ್ದ ದಂಪತಿಗಳ ವ್ಯಾಜ್ಯವನ್ನು ನ್ಯಾಯಮೂರ್ತಿ ಅನಿಲ ಬಿ. ಕಟ್ಟಿ ಮತ್ತು ಜಿ. ಎಮ್. ಭಟ್, ಸದಸ್ಯರು ರಾಜಿ ಸಂಧಾನದ ಮೂಲಕ ಒಂದು ಗೂಡಿಸಿದ್ದಾರೆ ಎಂದು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಧಾರವಾಡ ಪೀಠದ ಅಧೀಕ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಮತ್ತು ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ