Lok Sabha Election 2024: ಮೊದಲ ಹಂತದ ಮತದಾನಕ್ಕೆ ಅಂತಿಮ ಸಿದ್ದತೆ
Lok Sabha Election 2024: ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ 983 ಮತಗಟ್ಟೆಗಳಲ್ಲಿ 197 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ.ಮೊಬೈಲ್ ನೆಟ್ ವರ್ಕ್ ಲಭ್ಯವಿಲ್ಲದ ಒಟ್ಟು 17 ಮತಗಟ್ಟೆಗಳು ಗುರುತಿಸಲಾಗಿದೆ.
ಚಾಮರಾಜನಗರ: ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನ ಬಾಕಿ ಇದ್ದು ಅಂತಿಮ ಹಂತದ ಸಿದ್ಧತೆಯನ್ನು ಚಾಮರಾಜನಗರ ಜಿಲ್ಲಾಡಳಿತ ನಡೆಸಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17,78,310 ಮಂದಿ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.
ಚಾಮರಾಜನಗರದಲ್ಲಿ ಮಂಗಳವಾರ ಚುನಾವಣಾ ಸಂಬಂಧ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, 8,78,702 ಪುರುಷ ಮತದಾರರು, 8,99,501 ಮಹಿಳೆಯರು ಹಾಗೂ 107 ಮಂದಿ ಲಿಂಗತ್ವ ಅಲ್ಪಸಂಖ್ಯಾತ ಮತದಾರರು, 377 ಸೇವಾ ಮತದಾರರು ಸೇರಿ ಒಟ್ಟು 17, 78, 310 ಮಂದಿ ಮತದಾರರು ಇದ್ದಾರೆ ಎಂದರು.ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2000 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು ಇವುಗಳಲ್ಲಿ 263 ನಗರ ಪ್ರದೇಶದಲ್ಲಿ 1737 ಮತಗಟ್ಟೆಗಳು ಗ್ರಾಮಾಂತರ ಭಾಗದಲ್ಲಿವೆ.
ಇದನ್ನೂ ಓದಿ : ಬಿಳಿಗಿರಿ ಬನದಲ್ಲಿ ಅದ್ದೂರಿಯಾಗಿ ನೆರವೇರಿದ ರಂಗನಾಥನ ರಥೋತ್ಸವ
ಮತದಾರರನ್ನು ಸೆಳೆಯಲು ಹಲವು ವಿಶೇಷ ಮತಗಟ್ಟೆಗಳು:
ಮತಗಟ್ಟೆಗಳತ್ತ ಮತದಾರರನ್ನು ಸೆಳೆಯಲು ಈ ಬಾರಿ ಹಲವು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮಹಿಳೆಯರನ್ನು ಮತಗಟ್ಟೆಗಳತ್ತ ಸೆಳೆಯಲು ಒಟ್ಟು 16 ಸಖಿ ಸೌರಭ ಮತಗಟ್ಟೆಗಳಿವೆ.ಬುಡಕಟ್ಟು ಮತದಾರರಿಗಾಗಿ ಗುಂಡ್ಲುಪೇಟೆ ತಾಲೂಕಿನಲ್ಲಿ 2 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ, ವಿಶೇಷ ಮತದಾರರಿಗಾಗಿ ಸಂಜ್ಞಾ ಭಾಷಾ ಅನುವಾದಕರಿರುವ ಒಟ್ಟು 4 ಮತಗಟ್ಟೆಗಳು, ಯುವ ಮತದಾರರು ಅತಿ ಹೆಚ್ಚು ಇರುವ ಕಡೆ ಒಟ್ಟು 8 ಮತಗಟ್ಟೆಗಳು, ಜಿಲ್ಲೆಯ ಸಾಂಸ್ಕೃತಿಕ ಕಲೆಗಳ ಬಗ್ಗೆ ತಿಳಿಸುವ 2 ಎಥ್ನಿಕ್ ಮತಗಟ್ಟೆಗಳು, ರೈತರ ಮಹತ್ವ ಸಾರುವ 8 ಅನ್ನದಾತ ಮತಗಟ್ಟೆಗಳು, ಅರಣ್ಯದ ಮಹತ್ವ ಸಾರುವ 6 ಹಸಿರು ಮತಗಟ್ಟೆಗಳು ಈ ಬಾರಿ ಇರಲಿವೆ.
ಜಿಲ್ಲಾ ವ್ಯಾಪ್ತಿಯಲ್ಲಿ 197 ಕ್ರಿಟಿಕಲ್ ಮತಗಟ್ಟೆ:
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ 983 ಮತಗಟ್ಟೆಗಳಲ್ಲಿ 197 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ.ಮೊಬೈಲ್ ನೆಟ್ ವರ್ಕ್ ಲಭ್ಯವಿಲ್ಲದ ಒಟ್ಟು 17 ಮತಗಟ್ಟೆಗಳು ಗುರುತಿಸಲಾಗಿದೆ.
1667 ಆರಕ್ಷಕ ಸಿಬ್ಬಂದಿ- ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ 4 ಡಿವೈಎಸ್ಪಿ, 13 ಮಂದಿ ಪಿಐ, 41 ಪಿಎಸ್ಐ, 67 ಎಎಸ್ಐ, 936 ಕಾನ್ಸ್‌ಟೇಬಲ್, 600 ಹೋಂ ಗಾರ್ಡ್, 6 ಮೀಸಲು ಪಡೆ, ಗುಜರಾತ್ ನ 2 ಮೀಸಲು ಪಡೆ ಈ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ರಾಜ್ಯದ ಖಜಾನೆ ಲೂಟಿ ಮಾಡಿದೆ : ಪ್ರಲ್ಹಾದ ಜೋಶಿ ಆರೋಪ
37 ಲಕ್ಷ ಹಣ, 2.7 ಕೆಜಿ ಚಿನ್ನ ವಶ:
ಅಧಿಸೂಚನೆ ಪ್ರಕಟಗೊಂಡ ಬಳಿಕ ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಇಲ್ಲದ 37,59,790 ರೂ. ಹಣ ವಶಪಡಿಸಿಕೊಳ್ಳಲಾಗಿದೆ. 106.60 ಕೋಟಿ ಮೌಲ್ಯದ 1.25 ಕೋಟಿ ಲೀಟರ್ ಮದ್ಯ, 4.44 ಕೆಜಿ ಗಾಂಜಾ, 2.17 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಎರಡು ದಿನ ಮದ್ಯ ಮಾರಾಟ ಇಲ್ಲ:
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಏ.24 ರ ಬೆಳಗ್ಗೆ 6 ರಿಂದ 26 ರ ಮಧ್ಯರಾತ್ರಿವರೆಗೆ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮುಚ್ಚುವಂತೆ ಹಾಗೂ ಯಾವುದೇ ರೀತಿಯ ಮದ್ಯ ಮಾರಾಟ ಮಾಡದಂತೆ ನಿಷೇಧಿಸಿ ಒಣದಿನಗಳು ಎಂದು ಘೋಷಿಸಿದೆ. ಮತದಾನದ ದಿನದಂದು ಎಲ್ಲಾ ರೀತಿಯ ಜಾತ್ರೆ, ಸಂತೆಗಳನ್ನು ನಿಷೇಧಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.