ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ, ದೇಶಕ್ಕೆ ಪ್ರಧಾನ ಮಂತ್ರಿಯನ್ನು ಆರಿಸೋಕೆ, ಜನ ಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ, ಕಾನೂನು, ಆಡಳಿತ ಮತ್ತು ಸಂವಿಧಾನ ಬದ್ದ ಸಂಸದರ ಚುನಾವಣೆಯಲ್ಲಿ ಭಾಗಿಯಾಗೋದು ಒಂದು ಜವಾಬ್ದಾರಿಯುತ ಕೆಲಸ , ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುವ ಈ ಕೆಲಸಕ್ಕೆ ನಾವು ನೀವು ಎಲ್ಲರೂ ಸಾಕ್ಷಿಯಾಗತ್ತಿವಿ ಯಾಕಂದ್ರೆ, ದೇಶದ ಪ್ರಧಾನ ಮಂತ್ರಿಯನ್ನು ಆರಿಸೋದು ನಾವೆ, ನಮ್ಮ ಕ್ಷೇತ್ರದಿಂದ ಆಯ್ಕೆಯಾಗಿ ಹೋಗುವ ಸಂಸದರು ಎಂಬ ಸ್ಥಾನಕ್ಕೆ ತನ್ನದೆ ಆದ ಗೌರವ ಮತ್ತು ಜವಾಬ್ದಾರಿಗಳಿವೆ. ಆದ್ದರಿಂದ ಸಂಸದರನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಮತದಾರರು ಎಚ್ಚರಿಕೆಯಿಂದ ಇರಬೇಕಾಗುತ್ತೆ, ಜೊತೆಗೆ ಸಂಸದರಾಗಿ ಆಯ್ಕೆಯಾಗಲು ನಾನಾ ಪಕ್ಷಗಳ ರಾಜಕೀಯ ಮುಖಂಡರು ನಾನಾ ರೀತಿಯ ಲೆಕ್ಕಾಚಾರ ಹಾಕಿಕೊಂಡಿರ್ತಾರೆ, ತಮ್ಮ ರೀತಿಯಲ್ಲಿ ಮತದಾರ ಪ್ರಭುಗಳನ್ನು ತಮ್ಮತ್ತ ಸೆಳೆಯಲು, ರಾಜಕೀಯ ಲೆಕ್ಕಾಚಾರ ಮಾಡ್ತಾರೆ. ಇದೇ ಲೋಕಸಭೆ ಲೆಕ್ಕಾಚಾರ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'ಲಕ್ಷ್ಮಿ ನಿವಾಸ' ಧಾರಾವಾಹಿಯಿಂದ ಹೊರಬಂದ ಖ್ಯಾತ ನಟಿ... ಆ ಜಾಗಕ್ಕೆ ಈ ಬ್ಯೂಟಿ ಎಂಟ್ರಿ !!


ಲೋಕಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ, ದಿನಾಂಕ ಘೋಷಣೆಗೆ ದಿನಗಳು ಸಮೀಪಿಸುತ್ತಿರುವಂತೆ ಕಲಬುರಗಿ ಮೀಸಲು ಕ್ಷೇತ್ರಕ್ಕೆ  ಟಿಕೆಟ್ ಆಕಾಂಕ್ಷಿಗಳು ದಿನೇದಿನೇ ಹೆಚ್ಚುತ್ತಲೇ ಇದೆ, ಕಾಂಗ್ರೆಸ್, ಬಿಜೆಪಿ ಅಕಾಂಕ್ಷಿಗಳು ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಭಾರಿ ಪೈಪೋಟಿಯೂ ನಡೆಸುತ್ತಿದ್ದಾರೆ. ಬಿಸಿಲು ನಾಡು, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ತೊಗರಿ ಕಣಜ, ಸೂಫಿ ಶರಣರ ನಾಡು ಹಾಗೂ ರಾಜಕೀಯ ದಿಗ್ಗಜರಿಗೆ ಜನ್ಮ ಕೊಟ್ಟ, ಕಲಬುರಗಿ ಸಂಸತ್‌ ಮೀಸಲು ಕ್ಷೇತ್ರವು ಕಲಬುರಗಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಹಾಗೂ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನ ಸಭಾ ಕ್ಷೇತ್ರ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ಲಿಂಗಾಯತ, ಎಸ್ಸಿ ಮತ್ತು ಕೋಲಿ ಕಬ್ಬಲಿಗ ಮತಗಳು ನಿರ್ಣಾಯಕವಾಗಲಿವೆ. ಲೋಕಸಭಾ ಚುನಾವಣೆ ಘೊಷಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಕಣಕ್ಕಿಳಿತಾರೆ. ಯಾರು ಸೋಲ್ತಾರೆ ಯಾರು ಗೆಲ್ಲತಾರೆ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿ ಜೋರಾಗಿ ನಡೆದಿದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಈ ಎರಡು ಪಕ್ಷಗಳ ಅಭ್ಯರ್ಥಿಗಳ ನಡುವೆ ಚುನಾವಣಾ ಹಣಾಹಣಿ ನಡೆಯಲಿದೆ.


ಕ್ಷೇತ್ರ : ಕಲಬುರಗಿ
ಸಂಸದರು :ಡಾ.ಉಮೇಶ ಜಾದವ್
ಪಡೆದ ಮತಗಳು : 6,20,192
ಸಮೀಪದ ಸ್ಪರ್ಧಿ : ಮಲ್ಲಿಕಾರ್ಜುನ ಖರ್ಗೆ-ಕಾಂಗ್ರೆಸ್‌
ಅಸೆಂಬ್ಲಿ ಕ್ಷೇತ್ರಗಳ ಸಂಖ್ಯೆ : 08
ಒಟ್ಟು ಚಲಾವಣೆಯಾದ ಮತ : 11,89,361


ಕಾರ್ಯಕರ್ತರ ಅಭಿಪ್ರಾಯ ಕೇಳಿದ್ದೀವಿ. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರ ಅಂತರಾಳ ನಿಮ್ಮ ಮುಂದಿದೆ. ಇವಾಗ ಸೋಲಿಲ್ಲದ ಸರದಾರ ಅಂತಿದ್ದ ಖರ್ಗೆ ಅವರನ್ನ ಸೋಲಿಸಿ ಸಂಸತ್‌ ಪ್ರವೇಶಿಸಿದ ಹಾಲಿ ಸಂಸದ 
ಡಾ.ಉಮೇಶ್‌ ಜಾಧವ್‌ ಸಾಧನೆ ಏನು ಅಂತ ನೋಡೋಣ...


ಸಂಸದರ ಸಾಧನೆ
1. ಎರಡನೇ ಬಾರಿಗೆ ಕ್ಷೇತ್ರದಲ್ಲಿ BJP ಗೆಲುವು
2. ಕಲಾಪಗಳಲ್ಲಿ ಹೆಚ್ಚು ಪ್ರಶ್ನೆ ಕೇಳಿದ ಸಂಸದರು
3. ಹೆಚ್ಚು ಪ್ರಶ್ನೆ ಕೇಳಿದ ರಾಜ್ಯದ ಸಂಸದರಲ್ಲಿ 2ನೇ ಸ್ಥಾನ
4. ಜಿಲ್ಲೆಯಲ್ಲಿ ಭಾರತ ಮಾಲಾ ಯೋಜನೆಯ ಹೆದ್ದಾರಿ 
5. ಗಾಣಗಾಪೂರ ರೈಲ್ವೆ ಸ್ಟೇಷನ್ ವಿಸ್ತರಣೆ
6. ರೈಲು ನಿಲ್ದಾಣಗಳ ಅಭಿವೃದ್ಧಿಗೆ 6 ಕೋಟಿ ಅನುದಾನ
7. ಕಲಬುರಗಿ ರಿಂಗ್ ರಸ್ತೆಗೆ ಸರ್ವಿಸ್ ರಸ್ತೆಗೆ 16 ಕೋಟಿ
8. CNG ಪೈಪ್‌ಲೈನ್‌ಗೆ 500 ಕೋಟಿ ರೂಪಾಯಿ ಖರ್ಚು
9. ವಾಡಿ ರೈಲು ನಿಲ್ದಾಣ ಆಧುನೀಕರಣಕ್ಕೆ 30 ಕೋಟಿ 
10. ಮೆಗಾ ಜವಳಿ ಪಾರ್ಕ್‌, ಶೇ. 100 ಅನುದಾನ ಬಳಕೆ


ಇರಲಿ..ಕಳೆದ ಎರಡೂ ಅವಧಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ. ಕಲಬುರಗಿಯಲ್ಲೂ ಬಿಜೆಪಿ ಸಂಸದರು ಅನುದಾನ ತಂದು ಕೆಲಸ ಮಾಡಿದಾರೆ. ಆದ್ರೆ ಇನ್ನೂ ಮಾಡೋದು ಸಾಕಷ್ಟಿದೆ ಅನ್ನೋದು ಗ್ರೌಂಡ್‌ ರಿಪೋರ್ಟ್‌ನಲ್ಲಿ ಬಂದಿದೆ. ಹಾಗಿದ್ರೆ  ಡಾ.ಜಾಧವ್ ಪ್ಲಸ್‌ ಮತ್ತು ಮೈನಸ್‌ ಏನಿದೆ ಅಂತ ತಿಳಿಯೋಣ ಬನ್ನಿ.


ಬಿಜೆಪಿ ಪ್ಲಸ್ 


* ಪ್ರಧಾನಿ ಮೋದಿ ಅಭಿವೃದ್ಧಿ ಕಾರ್ಯಗಳು
* ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ
* ಹಿಂದುಗಳ ಭಾವನೆ ಕೆರಳಿಸುತ್ತಿರುವ ಕಾಂಗ್ರೆಸ್
* ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸ ಕುಂಠಿತ
* ಹಿರಿಯ ಶಾಸಕರ ಮಾತಿಗೆ ಬೆಲೆ ಕೊಡದೆ ಸಚಿವರು
* ಕೇಂದ್ರೀಯ ವಿವಿಯಲ್ಲಿ ಸರಸ್ವತಿ ಪೂಜೆಗೆ ಅಡ್ಡಿ


ಬಿಜೆಪಿ ಮೈನಸ್ 


* ಕಲಬುರಗಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಿನ್ನಡೆ
* ರೈಲ್ವೆ ವಿಭಾಗೀಯ ಕಚೇರಿಗೆ 1000 ರೂ. ಅನುದಾನ
* ಕಲಬುರಗಿ ಜಿಲ್ಲೆಯ ಮತದಾರರಿಗೆ ಅವಮಾನ
* ಘೋಷಿತ ಹೊಸ ಮಾರ್ಗದಲ್ಲಿ ಓಡದ ಸಂಚಾರ
* ಬೆಂಗಳೂರಿಗೆ ಹೋಗಲು ರೈಲ್ವೆ ಸೀಟು ಕೊರತೆ
* ಜವಳಿ ಪಾರ್ಕ್ ಕೇವಲ ಘೋಷಣೆಗೆ ಸೀಮಿತ
* ಕ್ಷೇತ್ರದ ಮತದಾರರೊಂದಿಗೆ ಸಂಪರ್ಕ ಕಡಿತ
* ಬೇಡಿಕೆಯಾಗಿ ಉಳಿದ ನಗರದ ಬೈಪಾಸ್ ರಸ್ತೆ
* ಜಿಲ್ಲಾ ಬಿಜೆಪಿಯಲ್ಲಿ ಆಂತರಿಕ ಗುಂಪುಗಾರಿಕೆ


ಇದಿಷ್ಟು ಭಾರತೀಯ ಜನತಾ ಪಾರ್ಟಿಯ ಲೆಕ್ಕಾಚಾರ. ತಂತ್ರಗಾರಿಕೆ. ಹಾಗಂತ ಕಾಂಗ್ರೆಸ್‌ ಕೂಡ ಕೈ ಕಟ್ಟಿ ಕೂತಿಲ್ಲ. ಯಾಕಂದ್ರೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಕಲಬುರಗಿಯ ಕುವರ ಮಲ್ಲಿಕಾರ್ಜುನ ಖರ್ಗೆ. ಹಾಲಿ ರಾಜ್ಯಸಭಾ ಸದಸ್ಯರು. 
ಹಾಗಾಗಿ ಈ ಕ್ಷೇತ್ರಕ್ಕೆ ವೇಯ್ಟೇಜ್‌ ಕೂಡ ಜಾಸ್ತಿಯಿದೆ.


ಇದನ್ನೂ ಓದಿ: ಶ್ರೀಮುರಳಿ ಅವರಿಂದ ಅನಾವರಣವಾಯಿತು "ದಿಲ್ ಖುಷ್" ಟ್ರೇಲರ್!


ಕಾಂಗ್ರೆಸ್ ಪ್ಲಸ್ 


* ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು
* ಖರ್ಗೆ ಅವರು ಕೇಂದ್ರ ಸಚಿವರಾಗಿ ಅಭಿವೃದ್ಧಿ ಕೆಲಸ
* ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಂವಿಧಾನದ 371ಜೆ
* 371J ತಿದ್ದುಪಡಿಯಿಂದ ಸಾವಿರಾರು ಕೋಟಿ ರೂ. ಅನುದಾನ
* 371J ತಿದ್ದುಪಡಿಯಿಂದ ಸಾವಿರಾರು ಜನರಿಗೆ ಸರ್ಕಾರಿ ನೌಕರಿ
* ಕಲಬುರಗಿ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ನಿರಂತರ ಅನ್ಯಾಯ
* ಒಟ್ಟು 8 ಅಸೆಂಬ್ಲಿ ಕ್ಷೇತ್ರಗಳಲ್ಲಿ 6 ಕಾಂಗ್ರೆಸ್ ಶಾಸಕರು


ಕಾಂಗ್ರೆಸ್ ಮೈನಸ್


* ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಹಿನ್ನಡೆ
* ಭ್ರಷ್ಟಾಚಾರ ಸಹಿಸಿ ಮೌನಕ್ಕೆ ಜಾರಿದ ಸರ್ಕಾರ
* ಲಿಂಗಾಯತ ಶಾಸಕರಿಗೆ ದೊರಕದ ಸಚಿವ ಸ್ಥಾನ
* ಲಿಂಗಾಯತ ಅಧಿಕಾರಿಗಳಿಗೆ ಕಿರುಕುಳ ಆರೋಪ
* ಸಚಿವರ ವಿರುದ್ಧ ಹೆಚ್ಚಿದ ಶಾಸಕರ ಅಸಮಧಾನ
* ರಾಮ ಮಂದಿರ ನಿರ್ಮಾಣದಿಂದ ಮೋದಿ ಅಲೆ


ಇದಿಷ್ಟು ಎರಡೂ ಪಕ್ಷಗಳ ರಾಜಕೀಯ. ಹಂಗಾದ್ರೆ ಕೇಸರಿ ಕಲಿ ಯಾರಾಗ್ತಾರೆ. ಕಾಂಗ್ರೆಸ್‌ನಿಂದ ಖರ್ಗೆ ಮತ್ತೆ ಸ್ಪರ್ಧೆ ಮಾಡ್ತಾರಾ.. ಅಥವಾ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಂಟೆಸ್ಟ್‌ ಮಾಡ್ತಾರಾ ಅನ್ನೋದು ಬಹುಚರ್ಚಿತ ವಿಷಯ. 
ಅಸಲಿಗೆ ಡಾ.ಜಾಧವ್‌ ಅವರಿಗೂ ಟಿಕೆಟ್‌ ನಿಕ್ಕಿ ಅಂತಲೂ ಗಟ್ಟಿ ದನಿ ಕೇಳಿಸ್ತಿಲ್ಲ. ಹಾಗಿದ್ರೆ ರಣಕಣ ಹೇಗಿದೆ ಅಂತ ನೀವೇ ನೋಡಿ..


ಈ ಬಾರಿಯ ರಣಕಣ 


* ಮಲ್ಲಿಕಾರ್ಜುನ ಖರ್ಗೆ-ಕಾಂಗ್ರೆಸ್
* ರಾಧಾಕೃಷ್ಣ ದೊಡ್ಡಮನಿ-ಕಾಂಗ್ರೆಸ್
* ಡಾ.ಉಮೇಶ ಜಾದವ್‌- ಬಿಜೆಪಿ
* ಬಸವರಾಜ ಮತ್ತಿಮೂಡ್‌-ಬಿಜೆಪಿ
* ಜಯಶ್ರೀ ಮತ್ತಿಮೂಡ್ -ಬಿಜೆಪಿ


14 ಮತ್ತು 15ನೇ ಶತಮಾನದಲ್ಲಿ ಬಹುಮನಿ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಲಬುರಗಿಯಲ್ಲಿ ನೃಪತುಂಗನ ಕವಿರಾಜಮಾರ್ಗದಂತಹ ಶ್ರೇಷ್ಠ ಸಾಹಿತ್ಯ ಕೃತಿಗಳು ಹಾಗೂ ಶರಣ, ಸೂಫಿ ಸಂತರ ಸಾಮಾಜಿಕ ಚಳವಳಿಗಳು ಜರುಗಿವೆ. ಸಾಮಾಜಿಕ ಚಳವಳಿಯ ಶಕ್ತಿ ಕೇಂದ್ರ. ಕಲಬುರಗಿ ಲೋಕಸಭಾ ಕ್ಷೇತ್ರ ಯಾಕೆ ಹೈವೋಲ್ಟೇಜ್‌ ಅಂತ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆಯಿಂದ ಭಾರೀ ತೂಕ ಬಂದಿದೆ. ಕೊನೆಯ ಕ್ಷಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಕಣಕ್ಕೆ ಇಳಿತಾರಾ? ಇಲ್ಲ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ಕೊಡ್ತಾರಾ ಎನ್ನುವದನ್ನು ಕಾದು ನೋಡಬೇಕು.


ಕಲಬುರಗಿ ಜಿಲ್ಲೆಯದ್ದು ರಕ್ತ ಸಿಕ್ತ ಇತಿಹಾಸ:


ವಾರಂಗಲ್‌ನ ಕಾಕತೀಯರ ಆಳ್ವಿಕೆ ಕಾಲದಲ್ಲಿ ಬಂದ ಈ ಪ್ರದೇಶ ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರ ಈ ಪ್ರದೇಶವನ್ನು ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಯಾದವರು, ಹೊಯ್ಸಳರು, ದೆಹಲಿ ಹಾಗೂ ಬಹುಮನಿ ಸುಲ್ತಾನರು, ನಾಯಕ ದೊರೆಗಳು ಹಾಗೂ ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿತ್ತು. 


ಸ್ವಾತಂತ್ರ್ಯ ಪೂರ್ವದಲ್ಲಿ ಕಲಬುರಗಿ, ಹೈದ್ರಾಬಾದ ನಿಜಾಮನ ಆಳ್ವಿಕೆಗೆ ಒಳಪಟ್ಟಿತ್ತು. ನಮ್ಮ ಭಾರತ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದ ಒಂದು ವರ್ಷ ತಡವಾಗಿ ನಿಜಾಮನಿಂದ ಮುಕ್ತಿ ಪಡೆದು  1948 ಸೆಪ್ಟೆಂಬರ್ 17 ರಂದು ಭಾರತದ ಒಕ್ಕೂಟದ ಒಳಗೆ ಸೇರ್ಪಡೆಯಾಯಿತು. ಇದಾದ ಬಳಿಕ ಹೈದ್ರಾಬಾದ ರಾಜ್ಯದಲ್ಲಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದಿಂದ 1952ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ವಾಮಿ ರಮಾನಂದ ತೀರ್ಥರು ಸಂಸದರಾಗಿ ಆಯ್ಕೆಯಾದರು. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಕಲಬುರಗಿ ಅಂದಿನ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಯಿತು.  ಅಂದಿನಿಂದ ಕಲಬುರಗಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. ಆದರೆ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ  ಜನತಾ ದಳದ ಅಭ್ಯರ್ಥಿ ದಿವಂಗತ ಖಮರುಲ್ ಇಸ್ಲಾಂ ಅವರು  ಗೆಲುವು ಸಾಧಿಸಿದ್ದರು. ಇನ್ನೂ 1998ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಈ ಕ್ಷೇತ್ರ 2019ರ ವರೆಗೆ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿತ್ತು. 2019ರಲ್ಲಿ ಬಿಜೆಪಿಯ ಡಾ. ಉಮೇಶ ಜಾದವ್ ಗೆಲುವು ಸಾಧಿಸಿ ಕಾಂಗ್ರೆಸ್ ಭದ್ರೆ ಕೋಟೆಯನ್ನು ಚಿದ್ರ ಮಾಡಿದ್ದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಮಾಜಿ ಮುಖ್ಯಮಂತ್ರಿ ದಿವಂಗತ ವಿರೇಂದ್ರ ಪಾಟೀಲ್, ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಧರ್ಮಸಿಂಗ್ ಅವರಿಗೆ ಜನ್ಮ ಕೊಟ್ಟ ಪುಣ್ಯ ಭೂಮಿ ಕಲಬುರಗಿ.  ಕಲಬುರಗಿ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ, ಆದರೆ ಕಳೆದ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಬೀಸಿದ ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ವಶಪಡಿಸಿಕೊಂಡಿತು. ಆದರೆ ಈಗ ಕಾಲ ಬದಲಾಗಿದೆ ಮತ್ತೆ 2024ರ ಲೋಕಸಭಾ ಚುನಾವಣೆ ಬಂದಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಡುವೆ ಚುನಾವಣಾ ಕದನ ರಂಗೇರಲಿದೆ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿಯಲ್ಲಿ ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ,  ಗೆಲುವು ಸಾಧಿಸಿದ ಬಿಜೆಪಿ ಡಾ. ಉಮೇಶ ಜಾದವ್ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡದ ಹಿನ್ನಲೆಯಲ್ಲಿ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಡಾ. ಉಮೇಶ ಜಾದವ್ ಅವರಿಗೆ ಟಿಕೆಟ್ ಕೊಡುತ್ತಾ ಅಥವಾ ಮತ್ತೊಬ್ಬರಿಗೆ ಮಣೆ ಹಾಕುತ್ತಾ ಎನ್ನುವ ಚರ್ಚೆ ಕ್ಷೇತ್ರದಾದ್ಯಂತ ನಡೆಯುತ್ತಿದೆ. 


ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ, ಬಿಜೆಪಿಯ ಡಾ. ಉಮೇಶ ಜಾದವ್ ಸಂಸದರಾದ ನಂತರ ಕಲಬುರಗಿ ಜಿಲ್ಲೆಗೆ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ತೆಗೆದುಕೊಂಡು ಬಂದಿರುವ ಹಲವಾರು ಯೋಜನೆಗೆ ಜಾರಿಯಾಗದೆ ಮರಳಿ ಹೋಗಿರುವುದೆ ಇವರು ಮಾಡಿರುವ ಸಾಧನೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದಾಗ ಕಲಬುರಗಿಗೆ ರೈಲ್ವೆ ವಿಭಾಗೀಯ ಕೇಂದ್ರವನ್ನು ಮಂಜೂರು ಮಾಡಿದ್ದರು. ಈಗ ಅದು ಅಸ್ಥಿತ್ವ ಕಳೆದುಕೊಂಡಿದೆ. ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಗೆ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಒಂದು ಸಾವಿರ ರೂಪಾಯಿ ಅನುದಾನ ಮೀಸಲಿಟ್ಟಿದೆ. 
ಚಿತ್ತಾಪೂರ ತಾಲೂಕಿಗೆ ನ್ಯಾಶನಲ್ ಜವಳಿ ಪಾರ್ಕ್ ಮಂಜೂರಾಗಿತ್ತು. ಇದರಿಂದ ಜಿಲ್ಲೆಯ ಹತ್ತು ಸಾವಿರ ಜನರಿಗೆ ಉದ್ಯೋಗ ಅವಕಾಶ ದೊರಕುತ್ತಿತ್ತು. ಆದರೆ ಈ ಯೋಜನೆ ವಾಪಸ್ ಹೋಗಿರುವ ಕಾರಣ ಕ್ಷೇತ್ರದ ಜನ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.


ಇಡಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಇದ್ದರೆ,  ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕ, ಕನ್ನಡಿಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹವಾ ಜೋರಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ನಂತರ ನಡೆದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಿಂದ ಅತಿ ಹೆಚ್ಚು ಜನ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಜೊತೆಗೆ ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ.


ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಣಕ್ಕಿಳಿಯುವುದು ಡೌಟ್ ಎಂದೇ ಹೇಳಲಾಗುತ್ತಿದೆ. ಯಾಕಂದ್ರೆ ಇಡಿ ದೇಶವನ್ನು ಸುತ್ತಿ ಕಾಂಗ್ರೆಸ್ ಪಕ್ಷದ ಹಾಗೂ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ, ಅವರನ್ನು ಗೆಲ್ಲಿಸಿಕೊಂಡು ಬರುವ ಬಹುದೊಡ್ಡ ಗುರುತರವಾದ ಜವಾಬ್ದಾರಿ ಖರ್ಗೆ ಅವರ ಮೇಲಿದೆ, ಆದ್ದರಿಂದ ಈ ಬಾರಿ ಅವರು ಲೋಕಸಭಾ ಚುನಾವಣಾ ಕಣ್ಣಕ್ಕಿಳಿಯುವುದು ಡೌಟ್, ಆದ್ದರಿಂದ ಅವರು ಚುನಾವಣೆಗೆ ಸ್ಪರ್ಧಿಸದಿದ್ದರೆ, ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಣಕ್ಕಿಳಿಲಿದ್ದಾರೆ ಎನ್ನುವ ಮಾತು ಕಲಬುರಗಿ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.


ಇದನ್ನೂ ಓದಿ: ಇಂದು ಸಂಜೆ ವೇಳೆಗೆ ಕಾಂಗ್ರೆಸ್ ಎರಡನೇ ಪಟ್ಟಿ ರಿಲೀಸ್, ಅಭ್ಯರ್ಥಿಗಳ ಹೆಸರು ರಿವೀಲ್‌


ಯಾರು ಈ ರಾಧಾಕೃಷ್ಣ? ಈ ಹಿಂದೆ ಯಾವೊಂದು ಚುನಾವಣೆಯನ್ನು ಎದುರಿಸದ ಇವರು ಈಗ ಏಕಾಏಕಿ ಲೋಕಸಭಾ ಚುನಾವಣೆಗೆ ನಿಂತರೆ ಗೆದ್ದು ಬಿಡ್ತಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಬಹುದು, ಆದರೆ ಇವರ ಹಿನ್ನಲೆಯಲ್ಲಿ ನೋಡಿದ್ರೆ ಕಾಂಗ್ರೆಸ್ ಪಕ್ಷದಲ್ಲಿ ಕಲಬುರಗಿ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತು ಪಡಿಸಿದ್ರೆ ರಾಧಾಕೃಷ್ಣ ಅವರೆ ಸೂಕ್ತ ಅಭ್ಯರ್ಥಿ ಎಂಬ ಮಾತಿದೆ. ಹಾಗಾದ್ರೆ ಯಾರು ಈ ರಾಧಾಕೃಷ್ಣ ಅಂತೀರಾ ಬನ್ನಿ ನೋಡೋಣ.


ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಆರ್,ಕೆ ಎಂದೇ ಹೆಸರು ಮಾಡಿರುವ ರಾಧಾಕೃಷ್ಣ ಅವರು ಚುನಾವಣಾ ಚತುರ, ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರ ಚುನಾವಣೆಗಳ ಗೆಲುವಿನ ಹಿಂದಿನ ರಾಜಕೀಯ ಶಕ್ತಿ ಈ ರಾಧಾಕೃಷ್ಣ ಅವರು, ಆದ್ದರಿಂದ ಈ ಬಾರಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮುಖಂಡರು ತೊಡಗಿದ್ದಾರೆ. 


ಬಿಜೆಪಿಯಲ್ಲಿಯೂ ಈ ಬಾರಿ ಹಾಲಿ ಸಂಸದ ಡಾ. ಉಮೇಶ್ ಜಾದವ್ ಅವರಿಗೆ ಟಿಕೆಟ್ ಪೈನಲ್ ಆಗುವ ಸಾದ್ಯತೆಗಳಿವೆ ಎಂಬ ಮಾತು ಬಿಜೆಪಿ ರಾಜಕೀಯ ವಲಯದಲ್ಲಿ ಕೇಳಿಬುರುತ್ತಿದೆ. ಯಾಕಂದ್ರೆ ಕಳೆದ ಬಾರಿ 2019ರಲ್ಲಿ ಬಿಜೆಪಿ ಪಕ್ಷದಲ್ಲಿ ಯಾರೊಬ್ಬರು ಅಭ್ಯರ್ಥಿಗಳು ಇಲ್ಲದ ಕಾರಣ, ಕಾಂಗ್ರೆಸ್ ಪಕ್ಷದಲ್ಲಿದ್ದ ಡಾ. ಉಮೇಶ ಜಾದವ್ ಅವರನ್ನು ಬಿಜೆಪಿಗೆ ಕರೆತಂದು ಎಂಪಿ ಟಿಕೆಟ್ ಕೊಡಿಸಿ, ಮಲ್ಲಿಕಾರ್ಜು ಖರ್ಗೆ ಅವರ ವಿರುದ್ಧ ನಿಲ್ಲಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿಯಲ್ಲಿ ಗೆಲ್ಲಿಸಿಕೊಂಡು ಬರಲಾಗಿತ್ತು. ಆದರೆ ಡಾ. ಉಮೇಶ ಜಾದವ್ ಅವರು ಸಂಸದರಾದ ನಂತರ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಕೆಲಸಗಳು ಆಗದ ಕಾರಣ, ಬಿಜೆಪಿಯಲ್ಲಿಯೇ ಒಂದು ಬಣ ಡಾ. ಉಮೇಶ ಜಾದವ್ ಅವರಿಗೆ ಟಿಕೆಟ್ ನೀಡದಿರಲು ಒತ್ತಡ ಹಾಕುತ್ತಿದೆ. ಅಲ್ಲದೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಅಥವಾ ಅವರ ಪತ್ನಿ ಜಯಶ್ರೀ ಮತ್ತಿಮೂಡ್ ಅವರಿಗೆ ಟಿಕೆಟ್ ಕೊಡಬೇಕು ಎಂಬ ಒತ್ತಡವು ಇದೆ. ಆದರೆ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಅನ್ನುವುದನ್ನು ಕಾದು ನೋಡಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.