Lok Sabha Election 2024: ಮತದಾರರನ್ನು ಕೈ ಬೀಸಿ ಕರೆಯುವ ವಿಶೇಷ ಮತಗಟ್ಟೆಗಳು...!
Lok Sabha Election 2024: ಲಿಂಗ ಸಮಾನತೆ ಹಾಗೂ ಮತದಾನದಲ್ಲಿ ಮಹಿಳೆಯರ ಭಾಗವಹಿಸುವಿಕೆ ಉತ್ತೇಜಿಸಲು `ಸಖಿ ಸೌರಭ ಶೀರ್ಷಿಕೆಯಡಿ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಿ ಮಹಿಳೆಯರನ್ನು ಮತದಾನಕ್ಕೆ ಪ್ರೇರೆಪಿಸಲಾಗಿದ್ದು ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 16 ಸಖಿ ಸೌರಭ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.
Lok Sabha Election 2024: ಚಾಮರಾಜನಗರ: ಮತದಾನಕ್ಕೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿದೆ.
ಲಿಂಗ ಸಮಾನತೆ ಹಾಗೂ ಮತದಾನದಲ್ಲಿ ಮಹಿಳೆಯರ ಭಾಗವಹಿಸುವಿಕೆ ಉತ್ತೇಜಿಸಲು 'ಸಖಿ ಸೌರಭ ಶೀರ್ಷಿಕೆಯಡಿ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಿ ಮಹಿಳೆಯರನ್ನು ಮತದಾನಕ್ಕೆ ಪ್ರೇರೆಪಿಸಲಾಗಿದ್ದು ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 16 ಸಖಿ ಸೌರಭ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಸಾಂಸ್ಕೃತಿಕ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು ಮತಗಟ್ಟೆ ಮುಂಭಾಗ ಭರಚುಕ್ಕಿ ಜಲಪಾತದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ.
ಸತ್ತೆಗಾಲ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿನ ಪ್ರೇಕ್ಷಣೀಯ ಸ್ಥಳವಾದ ಭರಚುಕ್ಕಿ ಜಲಪಾತದ ಸೊಬಗನ್ನು ಬಹಳ ವಿಶಿಷ್ಟವಾಗಿ ಮತಗಟ್ಟೆಯಲ್ಲಿ ಸೃಷ್ಟಿಸಲಾಗಿದೆ.ಸಾಂಸ್ಕೃತಿಕ ಮತಗಟ್ಟೆ ಕಲ್ಪನೆಯಲ್ಲಿ ಬಹು ವಿಶಿಷ್ಟವಾಗಿ ಸದರಿ ಬೂತ್ ಅನ್ನು ರಚಿಸಲಾಗಿದ್ದು, ಮತದಾರರನ್ನು ಆಕರ್ಷಿಸುತಿದೆ.
ಚಾಮರಾಜನಗರ ಜಿಲ್ಲೆಯು ಶೇಕಡ 48 ರಷ್ಟು ಅರಣ್ಯ ಸಂಪತ್ತನ್ನು ಹೊಂದಿರುವ ಜಿಲ್ಲೆಯಾಗಿದ್ದು, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಬುಡಕಟ್ಟು ಸಮುದಾಯವನ್ನು ಹೊಂದಿದೆ. ಅರಣ್ಯ ಮಹತ್ವ ಹಾಗೂ ಬುಡಕಟ್ಟು ಸಂಸ್ಕೃತಿ ತೋರಿಸುವ ಸಲುವಾಗಿ ಹಲವು ಮತಗಟ್ಟೆಗಳನ್ನು ಸುಂದರವಾಗಿ ಸಿದ್ಧಪಡಿಸಲಾಗಿದೆ. ಅರಣ್ಯ ವಾಸಿಗಳು ಬಳಸುವ ವಸ್ತುಗಳು, ಆಹಾರಪದ್ಧತಿ, ಆಚಾರ ವ್ಯವಸ್ಥೆ ಇತ್ಯಾದಿಗಳನ್ನು ಹಸಿರು ಮತಗಟ್ಟೆ ಮತ್ತು ಬುಡಕಟ್ಟು ಮತಗಟ್ಟೆಗಳಲ್ಲಿ ಚಿತ್ರಿಸಲಾಗಿದೆ.
'ಜಾನಪದ ಕಲೆಗಳ ತವರೂರು ಚಾಮರಾಜನಗರ ' ಚಲುವ ಚಾಮರಾಜ ನಗರ ಹೆಸರಿಗೆ ಸರಿಸಾಟಿಯಾಗಿ ಜಿಲ್ಲೆಯ ಸಾಂಸ್ಕೃತಿಕ ಮಹತ್ವ ಸಾರುವ ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿದ್ದು ಚಾಮರಾಜನಗರದ ರಾಮಸಮುದ್ರದ ಮತಗಟ್ಟೆಯಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಬೀಸುವಕಲ್ಲು, ಒಣಕೆ, ಜನಪದ ಸಂಗೀತ ಪರಿಕರಗಳಿದ್ದು ಜನಪದ ಕಲಾವಿದರು ಕೂಡ ಇರಲಿದ್ದಾರೆ.
ಇದನ್ನೂ ಓದಿ: ಮುಸ್ಲಿಮರಿಗೆ ಒಬಿಸಿ, ದಲಿತರಿಗೆ ಅನ್ಯಾಯ: ಕಾಂಗ್ರೆಸ್ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ಆರೋಪ
ಜಿಲ್ಲೆಯಲ್ಲಿ ಯುವ ಮತದಾರರನ್ನು ಮತದಾನದತ್ತ ಸೆಳೆಯಲು,ನೈತಿಕ ಮತದಾನ ಬೆಂಬಲಿಸಲು ಪ್ರೇರೆಪಿಸುವ ಸದುದ್ದೇಶದಿಂದ ಯುವ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ರಾಹುಲ್ ದ್ರಾವಿಡ್ ಸೇರಿದಂತೆ ಖ್ಯಾತನಾಮರ ಭಾವಚಿತ್ರಗಳನ್ನು ಅಳವಡಿಸಿ ಮತದಾನದ ಮಹತ್ವ ಸಾರಲಾಗಿದೆ.
ಒಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ವಿಶೇಷ, ವಿಶಿಷ್ಟ ಮತಗಟ್ಟೆಗಳು ಮತದಾರರನ್ನು ಸೆಳೆಯುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.