Lokshabha Elections 2024 Updates: ರಾಜ್ಯದಲ್ಲಿ ಏಪ್ರಿಲ್ 26 ಅಂದರೆ ಶುಕ್ರವಾರ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾರರು ತಮ್ಮ ಹಕ್ಕು ಚಲಾಯಿಸಲು ಗುರುತು ಚೀಟಿಯನ್ನು ಹೊಂದಿರಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ವೋಟರ್‌ ಐಡಿ ಮಹತ್ವದ ಪಾತ್ರ ವಹಿಸುತ್ತದೆ. ಮತದಾರನ ಗುರುತು, ವಾಸಸ್ಥಳ, ಜನನ ಮತ್ತು ಇತರ ಸ್ವ-ವಿವರಗಳನ್ನು ದೃಢೀಕರಿಸುವ ವೋಟರ್‌ ಐಡಿ ಮಹತ್ವದ ಅಧಿಕೃತ ದಾಖಲೆಗಳಲ್ಲಿ ಒಂದಾಗಿದೆ. ಮತದಾನ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹೀಗಾಗಿಯೇ ಮತದಾನ ಮಾಡಲು ವೋಟರ್‌ ಐಡಿ ಮುಖ್ಯ ದಾಖಲೆಯಾಗಿದೆ. ವೋಟರ್‌ ಐಡಿ ಇದ್ದರೆ ಮತದಾರರ ಗುರುತು ಮತ್ತು ಸ್ವ-ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ಮತದಾನಕ್ಕೆ ಯಾರು ಅರ್ಹರು?


ಭಾರತದ ಚುನಾವಣಾ ಆಯೋಗದ ಪ್ರಕಾರ, 18 ವರ್ಷ ವಯಸ್ಸಿನ ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಲು ಮತ್ತು ಮತದಾರರ ಗುರುತಿನ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಮತದಾರನ ನಿವಾಸದ ಸ್ಥಳದಲ್ಲಿ ಮಾತ್ರ ಹೆಸರು ನೋಂದಣಿ ಮಾಡಿಸಬಹುದು.  


ಇದನ್ನೂ ಓದಿ: Lok Sabha Election 2024: "ಮುಂದಿನ ಐದು ವರ್ಷದವರೆಗೆ ಯಾವ ಪಕ್ಷ ಅಧಿಕಾರದಲ್ಲಿರಬೇಕೆಂಬ ತೀರ್ಮಾನ ಮಾಡಿ"


ವೋಟರ್ ಐಡಿ ಇಲ್ಲದೆ ಮತ ಚಲಾಯಿಸಬಹುದು!


ಹೌದು, ನೀವು ವೋಟರ್‌ ಐಡಿ ಇಲ್ಲದೆಯೂ ಮತದಾನದಲ್ಲಿ ಭಾಗವಹಿಸಬಹುದು. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಅಗತ್ಯವಿರುತ್ತದೆ. ಮತ ಚಲಾಯಿಸಲು ಚುನಾವಣಾ ಆಯೋಗ ನೀಡಿವ ವೋಟರ್ ಅಥವಾ ಅಧಿಕೃತ ಗುರುತಿನ ಯಾವುದಾದರೂ ಒಂದು ದಾಖಲೆಯನ್ನು ಒದಗಿಸಬೇಕು. ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರೆಗೂ ಮತ ಚಲಾಯಿಸಲು ಮತದಾರ ಅರ್ಹನಾಗಿರುತ್ತಾನೆ.


ನಿಮ್ಮ ಹೆಸರಿದೆಯೇ ಪರಿಶೀಲಿಸಿ


ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೊದಲು ಭಾರತದ ಚುನಾವಣಾ ಆಯೋಗದ ಅಧಿಕೃತ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬೇಕು. ವೋಟಿಂಗ್‌ ಮಾಡುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸುವುದು ನಿರ್ಣಾಯಕ. ಏಕೆಂದರೆ ಇದರಲ್ಲಿ ನೀವು ಮತ ಚಲಾಯಿಸುವ ಅರ್ಹತೆ ದೃಢೀಕರಿಸುತ್ತದೆ. ವೋಟರ್‌ ಐಡಿ ಇಲ್ಲದಿದ್ದರೆ ಚುನಾವಣಾ ಆಯೋಗ ತಿಳಿಸಿರುವ ಪರ್ಯಾಯ ದಾಖಲೆಗಳನ್ನು ಮತದಾರರು ಬಳಸಬಹುದು.


ಈ ದಾಖಲೆಗಳಿದ್ದರೆ ನೀವು ವೋಟ್‌ ಮಾಡಬಹುದು


ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಗುರುತಿಗಾಗಿ ಎಪಿಕ್ ಅಥವಾ ಮತದಾರರ ಐಡಿ ಹೊಂದಿಲ್ಲದಿದ್ದರೆ ಚುನಾವಣೆ ವೇಳೆ ವೋಟರ್ ಐಡಿ ಇಲ್ಲದೆಯೂ ನೀವು ಮತ ಚಲಾಯಿಸಬಹುದು. ಇಕಕ್ಕೆ ಬೇಕಾದ ದಾಖಲೆಗಳು ಇಲ್ಲಿವೆ ನೋಡಿ..


  • ಆಧಾರ್ ಕಾರ್ಡ್

  • MNREGA ಜಾಬ್‌ಕಾರ್ಡ್

  • ಬ್ಯಾಂಕ್/ಪೋಸ್ಟ್ ಆಫೀಸ್ ಪಾಸ್‌ಬುಕ್‌ಗಳು

  • ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಸ್ಮಾರ್ಟ್‌ಕಾರ್ಡ್

  • ಚಾಲನಾ ಪರವಾನಿಗೆ

  • ಪ್ಯಾನ್ ಕಾರ್ಡ್

  • NPR ಅಡಿ RGI ನೀಡಿದ ಸ್ಮಾರ್ಟ್ ಕಾರ್ಡ್

  • ಭಾರತೀಯ ಪಾಸ್‌ಪೋರ್ಟ್

  • ಭಾವಚಿತ್ರವಿರುವ ಪಿಂಚಣಿ ದಾಖಲೆ

  • ಕೇಂದ್ರ/ರಾಜ್ಯ ಸರ್ಕಾರ/PSU/ಪಬ್ಲಿಕ್ ಲಿಮಿಟೆಡ್ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ

  • ಎಂಪಿಗಳು/ಎಂಎಲ್‌ಎಗಳು/ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು

  • ವಿಶಿಷ್ಟ ಅಂಗವೈಕಲ್ಯ ಐಡಿ(UDID) ಕಾರ್ಡ್‌ಗಳು 


ನೋಂದಣಿ ಸ್ಥಿತಿ ಪರಿಶೀಲಿಸಿರಿ


ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ಮಾತ್ರ ಮತ ಚಲಾಯಿಸಬಹುದು. ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಅನ್ನೋದನ್ನು ನೀವು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ https://electoralsearch.eci.gov.in ಗೆ ಲಾಗಿನ್ ಆಗಿ ನೋಡಬಹುದು. ಮತದಾರರ ಸಹಾಯವಾಣಿ 1950ಕ್ಕೆ ಕರೆ ಮಾಡಿಯೂ ಪರಿಶೀಲನೆ ನಡೆಸಬಹುದು.


ಇದನ್ನೂ ಓದಿ: Lok Sabha Election 2024: "ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾಡಿಕೊಂಡ ಕಾಂಗ್ರೆಸ್..!"


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.