Chikkaballapura Lok sabha constituency BJP Candidate: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ, ಡಾ. ಕೆ ಸುಧಾಕರ್ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಿದ್ದಾರೆ. 5,32,46,834 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಮಾಜಿ ಸಚಿವ ಡಾ. ಕೆ ಸುಧಾಕರ್‌ ಒಟ್ಟು ಆಸ್ತಿಯ ಮೌಲ್ಯ (Former Minister Dr. K Sudhakar Net Worth) 5,32,46,834 ರೂ.  ಎಂದು  ಘೋಷಿಸಿದ್ದಾರೆ. ಇದರಲ್ಲಿ ಚರಾಸ್ತಿ ಮೌಲ್ಯ  2,69,07,354 ರೂ.ಇದ್ದರೆ, ಸ್ಥಿರಾಸ್ತಿ ಮೌಲ್ಯ 2,63,39, 480 ರೂ. ಎಂದು ತಿಳಿದುಬಂದಿದೆ.  ಡಾ ಕೆ. ಸುಧಾಕರ್‌ ಅವರ ಪತ್ನಿ ಪ್ರೀತಿ ಜಿಎ ಅವರ ಚರಾಸ್ತಿ 5,52,10,023 ರೂ. ಹಾಗೂ ಸ್ಥಿರಾಸ್ತಿ 18,52,41,090 ರೂ. ಇದೆ. 


ಇದನ್ನೂ ಓದಿ- ಬೆಂಗಳೂರು ಜನರ ಬಳಿ ಮತ ಯಾಚಿಸುವ ಧೈರ್ಯ ಕಾಂಗ್ರೆಸ್‌ಗಿಲ್ಲ : ಆರ್‌.ಅಶೋಕ್‌


ಮಾಜಿ ಸಚಿವ ಡಾ ಕೆ ಸುಧಾಕರ್‌ (Former Minister Dr. K Sudhakar) ಅವರು 1,31,28,130 ರೂ. ಸಾಲ ಹೊಂದಿದ್ದರೆ ಅವರ ಪತ್ನಿ 5,52,10,023 ರೂ. ಸಾಲ ಹೊಂದಿದ್ದಾರೆ.  ಡಾ ಕೆ  ಇನ್ನೂಸುಧಾಕರ್‌ 160 ಗ್ರಾಂ ಚಿನ್ನವನ್ನು ಹೊಂದಿದ್ದು, 9 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಅವರ ಪತ್ನಿ 1 ಕೆಜಿ ಚಿನ್ನ ಹಾಗೂ 21 ಕೆಜಿ ಬೆಳ್ಳಿ ಹೊಂದಿದ್ದಾರೆ.


ಇದನ್ನೂ ಓದಿ- Lok Sabha Election 2024: ಈ ಆಪ್ ಗಳಿಂದ ಅಂಗೈಯಲ್ಲಿ ಸಿಗಲಿದೆ ಚುನಾವಣಾ ಮಾಹಿತಿ...!


ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ (Chikkaballapura Lok Sabha Constituency) ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ. ಈ ಲೋಕಸಭಾ ಕ್ಷೇತ್ರದಲ್ಲಿ ಡಾ ಕೆ ಸುಧಾಕರ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಎಂ.ಆರ್. ಸೀತಾರಾಂ (MR Sitaram) ಅವರ ಪುತ್ರ ಎಂ.ಎಸ್. ರಕ್ಷಾರಾಮಯ್ಯ (MS RakshaRamaiah) ಕಣದಲ್ಲಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.