Lok Sabha Elections 2024: ತೃತೀಯ ರಂಗ ಕೇಂದ್ರ ಸರ್ಕಾರ ರಚನೆಗೆ ಜೆಡಿಎಸ್ ತಂತ್ರ
Lok Sabha Elections 2024: 2024 ರ ಲೋಕಸಭಾ ಚುನಾವಣೆ ಹಿನ್ನಲೆ ಜಾತ್ಯತೀತ ಜನತಾ ದಳ, ಬಿಜೆಪಿ-ಕಾಂಗ್ರೆಸ್ ಪಕ್ಷ ಹೊರತುಪಡಿಸಿ ತೃತೀಯ ರಂಗ ಕೇಂದ್ರ ಸರ್ಕಾರ ರಚನೆಯ ತಂತ್ರಗಾರಿಕೆಗೆ ಕೈಜೋಡಿಸಿದೆ.
Lok Sabha Elections 2024: ಜೆಡಿಯುನ ನಿತೀಶ್ ಕುಮಾರ್ ಬಳಿಕ ಇದೀಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆಲಂಗಾಣ ಮುಖ್ಯಮಂತ್ರಿ ಕೆಸಿ ಆರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ, 2023ರ ವಿಧಾನಸಭಾ ಹಾಗೂ 2024ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಹಿನ್ನಲೆ ಈ ಭೇಟಿ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ. ಪಕ್ಷದ ಸಾಮರ್ಥ್ಯ ಹೆಚ್ಚಿಸಲು ತೃತೀಯ ರಂಗದ ಅಸ್ತ್ರ ಬಳಸುತ್ತಿರುವ ಜೆಡಿಎಸ್, ತೃತೀಯ ರಂಗದ ಮೂಲಕ ಜೆಡಿಎಸ್ ಬಿಡಲು ಸಿದ್ಧತೆ ನಡೆಸುತ್ತಿರುವ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-“ಮಳೆ ಅನಾಹುತಕ್ಕೆ ಪರಿಹಾರ ಕೈಗೊಳ್ಳಿ”: ಅಮೆರಿಕಾದಿಂದಲೇ ಸೂಚನೆ ನೀಡಿದ ಸಚಿವ ನಿರಾಣಿ
ಇದಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿಗೆ ಟಕ್ಕರ್ ನೀಡಲು ತೃತೀಯ ರಂಗದ ಅಸ್ತ್ರ ಬಳಕೆಗೆ ಅದು ಮುಂದಾಗಿದೆ.ರಾಷ್ಟ್ರೀಯ ಪಕ್ಷಗಳ ಜೊತೆ ಅಂತರ ಕಾಯ್ದುಕೊಂಡು ಮತ್ತೆ ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗದ ಸದ್ದು ಮಾಡುತ್ತಿದ್ದು, ಅಧಿವೇಶನದ ಸಮಯದಲ್ಲಿ ತೃತೀಯ ರಂಗದ ಈ ನಾಯಕರ ಈ ಭೇಟಿ ಮತ್ತಷ್ಟು ರಾಜಕೀಯ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ-“ಹಿಂದಿ ದಿವಸ್ ಆಚರಣೆಗೆ ರಾಜ್ಯ ಸರ್ಕಾರ ಹಣ ಬಳಕೆ ಮಾಡಬಾರದು!”
ತೃತೀಯ ರಂಗದ ಅಸ್ತ್ರ ಪ್ರಯೋಗದ ಮೂಲಕ ಜೆಡಿಎಸ್ ಬಲಿಷ್ಠವಾಗಿದೆ ಎಂಬ ಸಂದೇಶ ನೀಡುವ ಮೂಲಕ ಇತರೆ ನಾಯಕರನ್ನ ಪಕ್ಷಕ್ಕೆ ತರುವ ಲೆಕ್ಕಾಚಾರ ಇದೆ. ತನ್ಮೂಲಕ ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಮತ್ತೆ ಕಿಂಗ್ ಮೇಕರ್ ಆಗುವ ತಂತ್ರಕ್ಕೆ ಜೆಡಿಎಸ್ ಮುಂದಾಗಿದೆ. ಒಟ್ಟಾರೆ ಹೇಳುವುದಾದರೆ, ತೃತೀಯ ರಂಗದ ಮೂಲಕ ಮತ್ತೆ ರಾಜಕೀಯ ಮುನ್ನಲೆಗೆ ಬರುವ ಕನಸು ಕಾಣುತ್ತಿರುವ ಜೆಡಿಎಸ್ ಎಷ್ಟರ ಮಟ್ಟಿಗೆ ಸಫಲ ಆಗಲಿದೆ ಎಂಬುದನ್ನು ಸಮಯವೇ ನಿರ್ಧರಿಸಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.