ಲೋಕಸಭೆ ಚುನಾವಣೆ: ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ‘ಕಾವೇರಿ’ ಅಸ್ತ್ರ
Karnataka Political News: ಸೋಲಿನ ಬಳಿಕ ಬಿಜೆಪಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಉಳಿಸಲು ಹಾಗೂ ಹೈ ಕಮಾಂಡ್ ಟಾಸ್ಕ್ ನೆರವೇರಿಸಲು ಹಳೆ ಮೈಸೂರು ಭಾಗದಲ್ಲಿ ಬರುವ ಎಲ್ಲಾ ಲೋಕಸಭೆ ಕ್ಷೇತ್ರದಲ್ಲಿ ಸ್ಥಾನ ಉಳಿಸಿ ಮತ್ತೆ 25ಕ್ಕೂ ಹೆಚ್ಚು ಸ್ಥಾನ ಗಳಿಸಲು ವಿವಿಧ ಪ್ರಯೋಗಗಳನ್ನ ಮಾಡುತ್ತಿದೆ.
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಾವೇರಿ ಅಸ್ತ್ರವನ್ನ ಲೋಕಸಭೆ ಚುನಾವಣೆಯಲ್ಲಿ ಪ್ರಯೋಗಿಸಿ ಹಳೆ ಮೈಸೂರು ಭಾಗದಲ್ಲಿ ಸ್ಥಾನ ಉಳಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ.
ಇದನ್ನೂ ಓದಿ: “ನಾನು ಸೋತಿದ್ದೇನೆ…” 18 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ 34ರ ಹರೆಯದ ಬಲಗೈ ಫಾಸ್ಟ್ ಬೌಲರ್
ಸೋಲಿನ ಬಳಿಕ ಬಿಜೆಪಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಉಳಿಸಲು ಹಾಗೂ ಹೈ ಕಮಾಂಡ್ ಟಾಸ್ಕ್ ನೆರವೇರಿಸಲು ಹಳೆ ಮೈಸೂರು ಭಾಗದಲ್ಲಿ ಬರುವ ಎಲ್ಲಾ ಲೋಕಸಭೆ ಕ್ಷೇತ್ರದಲ್ಲಿ ಸ್ಥಾನ ಉಳಿಸಿ ಮತ್ತೆ 25ಕ್ಕೂ ಹೆಚ್ಚು ಸ್ಥಾನ ಗಳಿಸಲು ವಿವಿಧ ಪ್ರಯೋಗಗಳನ್ನ ಮಾಡುತ್ತಿದೆ. ಇತ್ತೀಚಿಗೆ ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಬಿಡುವ ವಿಚಾರ ಮತದಾರರಿಗೆ ತಲುಪಿಸಬೇಕು. ತಮಿಳುನಾಡು ರಾಜ್ಯಕ್ಕೆ ನೀರು ಬಿಟ್ಟು ಕಾಂಗ್ರೆಸ್ ರಾಜ್ಯಕ್ಕೆ ದ್ರೋಹ ಮಾಡುತ್ತಿದೆ ಎಂದು ಹಳೆ ಮೈಸೂರು ಭಾಗದ ಮತದಾರರಿಗೆ ಮುಟ್ಟಬೇಕು ಎಂದು ತೀರ್ಮಾನ ಮಾಡಿದೆ.
I. N. D. I. A ಮೈತ್ರಿ ಮೆಚ್ಚಿಸಲು ರಾಜ್ಯಕ್ಕೆ ದ್ರೋಹ: ಬಿಜೆಪಿ ಬೃಹತ್ ಅಭಿಯಾನ
ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕಾರ್ಯಕರ್ತರ ಮೂಲಕ ಕಾವೇರಿ ವಿಚಾರ ಕಾವೇರಿಸಲು ಮುಂದಾಗಿದೆ. ಈ ಪೈಕಿ ಜನರನ್ನ ತಲುಪಲು ಕೆಲ ವಿಚಾರಗಳನ್ನ ಹೇಳಲು ನಿರ್ಧರಿಸಿದೆ.
ಜೀವಜಲ ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಇದುವರೆಗೆ ಮಾಡಿದ ನಾಡದ್ರೋಹದ ಕೆಲಸಗಳು:
ಕಾಂಗ್ರೆಸ್’ಗೆ ರಾಜ್ಯದ ರೈತರ ಹಿತಕ್ಕಿಂತಲೂ ಮುಖ್ಯವಾದದ್ದು ರಾಹುಲ್ ಗಾಂಧಿಗಾಗಿ ತಮಿಳುನಾಡು ಸರ್ಕಾರದ ಓಲೈಕೆ.
ತಮಿಳುನಾಡು ಸರ್ಕಾರಕ್ಕೆ ರಾಜಕೀಯ ಲಾಭ ಮಾಡಿಕೊಡಲು ಕಾವೇರಿ ನ್ಯಾಯಾಧೀಕರಣದಲ್ಲಿ ಕರ್ನಾಟಕದ ವಾದವನ್ನು ಮಂಡಿಸದೆ ಪಲಾಯನ.
ಮೇಕೆದಾಟು ಯೋಜನೆ ವಿರೋಧಿಸಿದ ಸ್ಟಾಲಿನ್ ಅವರಿಗೆ ಬೆಂಗಳೂರಿನಲ್ಲಿ I.N.D.I.A. ಹೆಸರಲ್ಲಿ ಕೆಂಪು ಹಾಸಿನ ಸ್ವಾಗತ..!
ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿದ ಡಿಕೆ ಶಿವಕುಮಾರ್ ಅವರಿಂದು ತಮಿಳುನಾಡು ಸರ್ಕಾರ ಹಾಕಿದ ಗೆರೆಯನ್ನೂ ದಾಟುತ್ತಿಲ್ಲ..!
ಈಗಾಗಲೇ ಒಪ್ಪಂದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿಸಲಾಗಿದೆ...!
ಇವೆಲ್ಲದರ ಪರಿಣಾಮವಾಗಿ ರಾಜ್ಯದ ಅನ್ನದಾತರ ಬದುಕು ಕಸಿದುಕೊಂಡದ್ದೂ ಅಲ್ಲದೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರೂ ಇಲ್ಲದಂತಾಗುವ ಅಪಾಯ ಎದುರಾಗಿದೆ.
ಈ ರೀತಿ ಹಲವು ವಿಚಾರಗಳನ್ನ ಜನರಿಗೆ ಹೇಳಲು ಬಿಜೆಪಿ ಮುಂದಾಗಿದೆ.
ಇದನ್ನೂ ಓದಿ: ವಿಶ್ವಕಪ್ 2023ರ ವೇಳಾಪಟ್ಟಿಯಲ್ಲಿ ಮತ್ತೆ ಬದಲಾವಣೆಯಾಗುತ್ತಾ? ಬಿಸಿಸಿಐ ಉಪಾಧ್ಯಕ್ಷ ಹೇಳಿದ್ದು ಹೀಗೆ…
ಇನ್ನು ಸರ್ಕಾರ ಕಾವೇರಿ ನೀರು ಹಂಚಿಕೆ ವಿಚಾರ ಪರಿಹಾರಕ್ಕೆ ಸರ್ವ ಪಕ್ಷ ಸಭೆ ಕರೆದಿದೆ. ಇದರಲ್ಲಿ ಬಿಜೆಪಿ ನಿಲುವು ಹಾಗೂ ಸರ್ಕಾರಕ್ಕೆ ಸಹಕಾರ ಯಾವ ರೀತಿ ಇರಲಿದೆ? ಅಥವಾ ಸರ್ವ ಪಕ್ಷ ಸಭೆಗೆ ಗೈರು ಆಗುವ ಮೂಲಕ ಪ್ರತಿಭಟನೆ ಮಾಡಲಿದ್ಯಾ? ಜೊತೆಗೆ ಜೆಡಿಎಸ್ ಈ ವಿಚಾರದಲ್ಲಿ ಯಾವ ನಿಲುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.