Lokasabha Election 2024 : ಹ್ಯಾಟ್ರಿಕ್ ವೀರ ರಮೇಶ್ ಜಿಣಜಿಣಗಿಗೆ ಮತ್ತೊಮ್ಮೆ ಒಲಿದಿತೆ ಗೆಲುವು?
ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ, ದೇಶಕ್ಕೆ ಪ್ರಧಾನ ಮಂತ್ರಿಯನ್ನು ಆರಿಸೋಕೆ, ಜನ ಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುವ ಈ ಕೆಲಸಕ್ಕೆ ನಾವು ನೀವು ಎಲ್ಲರೂ ಸಾಕ್ಷಿಯಾಗ್ತೀವಿ.ಯಾಕಂದ್ರೆ, ದೇಶದ ಪ್ರಧಾನ ಮಂತ್ರಿಯನ್ನು ಆರಿಸೋದು ನಾವೆ, ನಮ್ಮ ಕ್ಷೇತ್ರದಿಂದ ಆಯ್ಕೆಯಾಗಿ ಹೋಗುವ ಸಂಸದರು ಎಂಬ ಸ್ಥಾನಕ್ಕೆ ತನ್ನದೆ ಆದ ಗೌರವ ಮತ್ತು ಜವಾಬ್ದಾರಿಗಳಿವೆ. ಆದ್ದರಿಂದ ಸಂಸದರನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಮತದಾರರು ಎಚ್ಚರಿಕೆಯಿಂದ ಇರಬೇಕಾಗುತ್ತೆ. ನಾಯಕರು ಮತದಾರನ್ನ ತಮ್ಮತ್ತ ಸೆಳೆಯಲು, ರಾಜಕೀಯ ಲೆಕ್ಕಾಚಾರ ಹಾಕ್ತಾರೆ. ಇದೇ ಲೋಕಸಭೆ ಲೆಕ್ಕಾಚಾರ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಅಭಿವೃದ್ಧಿ ಜಟಾಪಟಿ
ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಕಾವೇರುತ್ತಿದೆ.ಲೋಕಸಭಾ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ವಿವಿಧ ರೀತಿಯಲ್ಲಿ ಕಸರತ್ತು ನಡೆಸಿದ್ದಾರೆ.ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಟಿಕೆಟ್ ಯಾರಿಗೆ ಕೊಡುತ್ತಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.ವಿಜಯಪುರ ಜಿಲ್ಲೆಯಲ್ಲಿ ಒಟ್ಟು 8 ಮತಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳಲ್ಲಿ ಜಾತಿವಾರು ಮತದಾನ ನಡೆಯುತ್ತದೆ.ಆದರೆ ವಿಜಯಪುರ ನಗರ ಕ್ಷೇತ್ರದಲ್ಲಿ ಮಾತ್ರ ಹಿಂದೂ ಮುಸ್ಲಿಂ ಆಧಾರದ ಮೇಲೆ ಮತ ಚಲಾವಣೆ ಆಗುತ್ತದೆ. ಅಂದಾಜು 20 ಲಕ್ಷ ಮತದಾರರು ಹಕ್ಕುಚಲಾಯಿಸಲಿದ್ದು ಲಿಂಗಾಯತ, ಮುಸ್ಲಿಂ ಮತ್ತು ಕುರುಬ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ವಿಜಯಪುರ ಜಿಲ್ಲೆ ತೋಟಗಾರಿಕಾ ಬೆಳೆಗಳಿಗೆ ಫೇಮಸ್.ಅದ್ರಲ್ಲೂ ದ್ರಾಕ್ಷಿ ಬೆಳೆಗೆ ಪ್ರಖ್ಯಾತಿ. ಇಂಥ ಲೋಕಸಭೆ ವ್ಯಾಪ್ತಿಯಲ್ಲಿ 8 ಅಸೆಂಬ್ಲಿ ಕ್ಷೇತ್ರಗಳನ್ನ ಒಳಗೊಂಡಿವೆ. ಮೇಲ್ನೋಟಕ್ಕೆ ಹಾಲಿ ಸಂಸದ ಹ್ಯಾಟ್ರಿಕ್ ವೀರ ರಮೇಶ್ ಜಿಣಜಿಣಗಿ ಪರವಾದ ಉತ್ತಮವಾದ ವಾತಾವರಣ ಕಂಡು ಬಂದಿದೆ. ಆದ್ರೆ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಮುಂದಿನ ತಂತ್ರಗಾರಿಕೆಗಳು ನಡೆಯಲಿವೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಜನ ಕೂಡ ಬಹು ಖುಷಿಯಾಗಿದ್ದಾರೆ.
ಕ್ಷೇತ್ರ : ವಿಜಯಪುರ
ಸಂಸದ : ರಮೇಶ ಜಿಗಜಿಣಗಿ-ಬಿಜೆಪಿ
ವ್ಯಾಪ್ತಿ : ಒಟ್ಟು 8 ಅಸೆಂಬ್ಲಿ ಕ್ಷೇತ್ರ
2019ರಲ್ಲಿ ಪಡೆದ ಮತ : 6,33,868
ಪ್ರತಿಸ್ಪರ್ಧಿ : ಸುನಿತಾ ಚವ್ಹಾಣ 3,77,342
ಒಟ್ಟು ಮತದಾರರ ಸಂಖ್ಯೆ : 19,19,048
ಸಂಸದರ ಸಾಧನೆ:
1. ಸ್ಥಗಿತಗೊಂಡಿದ್ದ ವಿಜಯಪುರ-ಮುಂಬೈ ರೈಲು ಸಂಚಾರ
2. ವಿಜಯಪುರ-ಕುಕ್ಕೆ-ಮಂಗಳೂರು ನಡುವೆ ರೈಲು ಆರಂಭ
3. ಕೋಚಿಂಗ್ ಡಿಪೋ, ಶೆಡ್ ನಿರ್ಮಾಣ, 16 ಕೆಳ ಸೇತುವೆ
4. ವಿಜಯಪುರ-ಸೊಲ್ಲಾಪುರ 6 ಲೇನ್ ಪರಿವರ್ತನೆಗೆ ಮಂಜೂರು
5. ಕನಮಡಿ-ತಿಕೋಟಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
6. ವಿಜಯಪುರ-ಹುಬ್ಬಳ್ಳಿ ದ್ವಿಪಥವಾಗಿ ಪರಿವರ್ತನೆ ಕಾಮಗಾರಿ
7. 118 ಕೋಟಿ ರೂ.ವೆಚ್ಚದಲ್ಲಿ ಗ್ರಾಮ ಸಡಕ್ ಯೋಜನೆ ಜಾರಿ
8. ಸಂಸತ್ ಕಲಾಪದಲ್ಲಿ ಶೇ.74ರಷ್ಟು ಸಂಸದರ ಹಾಜರಾತಿ
9. ಸಂಸತ್‌ನಲ್ಲಿ ವಿವಿಧ ವಿಷಯಗಳ ಚರ್ಚೆಯಲ್ಲಿ ಕಡಿಮೆ ಭಾಗಿ
10. ಎಂಪಿ ಲಾಡ್ 25 ಕೋಟಿಯಲ್ಲಿ 16.75 ಕೋಟಿ ವಿವಿಧೆಡೆ ಬಳಕೆ
ಸಂಸದರ ರಿಪೋರ್ಟ್ ಕಾರ್ಡಿನ ಪ್ರಕಾರ ರಮೇಶ್ ಜಿಗಜಿಣಗಿ ಮುಂದಿದ್ದಾರೆ. ಟಿಕೆಟ್ ಸಿಕ್ರೆ ನಾಲ್ಕನೇ ಬಾರಿಯೂ ವಿಜಯಶೀಲರಾಗೋ ಅತಿ ವಿಶ್ವಾಸದಲ್ಲಿದ್ದಾರೆ.. ಆದ್ರೆ ಭಾರತೀಯ ಜನತಾ ಪಾರ್ಟಿಯ ಲೆಕ್ಕಾಚಾರ, ತಂತ್ರಗಾರಿಕೆ, ಪ್ರತಿಪಕ್ಷಗಳಿಗೆ ಠಕ್ಕರ್ ಕೊಡಲು ಸರ್ವ ರೀತಿಯಲ್ಲಿ ಸಜ್ಜಾಗಿದೆ. ಅಂದ್ ಹಾಗೆ ಬಿಜೆಪಿಯ ಪ್ಲಸ್ ಮತ್ತು ಮೈನಸ್ ಕುರಿತಾಗಿ ಗ್ರಾಫಿಕ್ಸ್ ನೋಡ್ಕೊಂಡು ಬರೋಣ ಬನ್ನಿ..
ಇದನ್ನೂ ಓದಿ: Daily GK Quiz: ರಷ್ಯಾದಲ್ಲಿ ಯಾವ ಕರೆನ್ಸಿಯನ್ನು ಬಳಸಲಾಗುತ್ತದೆ?
ಬಿಜೆಪಿ ಪ್ಲಸ್
* ಬಿಜೆಪಿಗೆ ಬಲಿಷ್ಠವಾದ ಕಾರ್ಯಕರ್ತರ ಪಡೆ
* ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂಬ ಅಭಿಪ್ರಾಯ
* ಯಾರೇ ಸ್ಪರ್ಧಿಸಲಿ ಮೋದಿಗಾಗಿ ಮತ ಎನ್ನುವ ಯುವರಂಗ
* ಎಲ್ಲ ಸಮಾಜದ ಜೊತೆಗೆ ಸಂಸದರ ಉತ್ತಮ ಸಂಬಂಧ
* ಅನಾವಶ್ಯಕ ವಿಚಾರದಿಂದ ದೂರ, ಗೊಂದಲಕ್ಕಿಲ್ಲ ಅವಕಾಶ
ಬಿಜೆಪಿ ಮೈನಸ್
* ಟಿಕೆಟ್‌ಗಾಗಿ ನಾಯಕರ ನಡುವೆ ಗೊಂದಲ
* ಜಿಲ್ಲೆಯಲ್ಲಿ ಯತ್ನಾಳ್ ಹೊರತು ಬೇರೆ ಬಿಜೆಪಿ ಶಾಸಕರಿಲ್ಲ
* ಯತ್ನಾಳ್ ಬೆಂಬಲಿಗರಿಂದ ಜಿಗಜಿಣಗಿಗೆ ವಿರೋಧ
* ಕಾರ್ಯಕರ್ತರಿಗೆ ಸಂಸದರು ಸಿಗಲ್ಲ ಅನ್ನೋ ಭಾವನೆ
* ನಾಯಕಲ್ಲಿ ಹೊಂದಾಣಿಕೆ ಕೊರತೆ, ಆಂತರಿಕ ಭಿನ್ನಾಭಿಪ್ರಾಯ
ಕೇಸರಿ ಕಲಿಯ ವಿಚಾರ ಬಿಡಿ. ಹೇಳಿ ಕೇಳಿ ರಮೇಶ್ ಜಿಗಜಿಣಗಿ ಜನತಾ ಪರಿವಾರದಿಂದ ರಾಜಕೀಯ ಶುರು ಮಾಡಿ ಈ ಹಂತಕ್ಕೆ ಬೆಳೆದಿದ್ದಾರೆ. ಸದಾ ವಿವಾದಗಳಿಂದ ದೂರವಿರುವ ಸಂಭಾವಿತ. ಹಾಗಂತ ಕಾಂಗ್ರೆಸ್ ಪಕ್ಷ ಮತ್ತು ನಾಯಕರು ಕೈ ಕಟ್ಟಿ ಕೂತಿಲ್ಲ. ತಮ್ಮದೇ ರೀತಿಯಲ್ಲಿ ಹಲವರು ತಂತ್ರಗಳನ್ನ ಹೆಣೆದಿದ್ದಾರೆ. ಕಳೆದ 15 ವರ್ಷಗಳಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಈ ಸಲವಾದರೂ ಗೆದ್ದೇ ಗೆಲ್ಲಬೇಕೆಂದ ಹಠಕ್ಕೆ ಬಿದ್ದಿದ್ದಾರೆ ಲೀಡರ್ಸ್. ಹೀಗಾಗಿ ಈ ಸಲ ಕಾಂಗ್ರೆಸ್ ಪಕ್ಷ ಕೂಡ ಬೂತ್‌ಮಟ್ಟದಲ್ಲಿ ಕಟ್ಟ ಕಡೆಯ
ಮತದಾರರನ್ನ ಮನವೊಲಿಸಲು ಮುಂದಾಗಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಸರ್ಕಾರ ನೀಡಿರುವ ಪಂಚ ಗ್ಯಾರೆಂಟಿ ಯೋಜನೆಗಳು.
ಕಾಂಗ್ರೆಸ್ ಪ್ಲಸ್
* ರಾಜ್ಯದಲ್ಲಿ ಸರ್ಕಾರ ಇರುವುದು ಅಭ್ಯರ್ಥಿಗೆ ಲಾಭ
* ಜಿಲ್ಲೆಯಲ್ಲಿ 6 ಕಾಂಗ್ರೆಸ್ ಶಾಸಕರು, ಇಬ್ಬರು ಸಚಿವರು
* ಗ್ಯಾರಂಟಿ ಯೋಜನೆ ಪ್ರಸ್ತಾಪಿಸಿ ಮತ ಪಡೆಯುವ ಸಾಧ್ಯತೆ
* ಅಭ್ಯರ್ಥಿ ಕಾರಣ ಬದಲಾವಣೆ ಬಯಕೆಯ ಮತದಾನದ ಲಾಭ
* ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ವರವಾಗುವ ಸಂಭವ
ಕಾಂಗ್ರೆಸ್ ಮೈಮಸ್
* ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಕೊರತೆ
* ಪಕ್ಷದಲ್ಲಿ 2 ಬಣ.. ಹೊಂದಾಣಿಕೆ ಕಷ್ಟ
* 3 ಬಾರಿ ಸೋತು ಕಾರ್ಯಕರ್ತರ ನಿರಾಸಕ್ತಿ
* ಅಭ್ಯರ್ಥಿ ಯಾರೆಂದು ಕಾರ್ಯಕರ್ತರಲ್ಲಿ ಗೊಂದಲ
* ಹೊಂದಾಣಿಕೆ ರಾಜಕಾರಣದಿಂದ ಅಭ್ಯರ್ಥಿಗಳಿಗೆ ಅತಂಕ
ಹಾಗ್ ನೋಡಿದ್ರೆ ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್ ಅಷ್ಟಾಗಿ ಬಲಿಷ್ಠವಾಗಿಲ್ಲ. ಈ ಕಾರಣ ಬಿಜೆಪಿ ಜೊತೆಗಿನ ಮೈತ್ರಿ ಹೆಚ್ಚೇನು ಪರಿಣಾಮ ಬೀರಲ್ಲ. ಆದ್ರೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಜರೂರು ಅಂತಿಮವಾಗಬೇಕಿದೆ. ಕನಿಷ್ಠ ಮೂರು ತಿಂಗಳು ಫೀಲ್ಡ್‌ಗೆ ಇಳಿದು ನಾಯಕರು, ಕಾರ್ಯಕರ್ತರ ವಿಶ್ವಾಸ ಗಳಿಸೋ ಕೆಲಸವಾಗಬೇಕಿದೆ. ಜೊತೆಗೆ ಪ್ರಭಾವಿ ಸಚಿವರಾಗಿರೋ ಎಂ.ಬಿ.ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಬಣ ಪಾಲಿಟಿಕ್ಸ್ ಬಿಟ್ಟು ಪಕ್ಷಕ್ಕಾಗಿ ಒಟ್ಟಾಗಿ ದುಡಿಯಬೇಕಿದೆ.
ಯಾರು ರಣಕಲಿಗಳು?
ರಮೇಶ ಜಿಗಜಿಣಗಿ : ಹಾಲಿ ಸಂಸದರು-ಬಿಜೆಪಿ
ಡಾ. ಬಾಬು ರಾಜೇಂದ್ರ ನಾಯಕ್ : ಖ್ಯಾತ ವೈದ್ಯರು-ಬಿಜೆಪಿ
ಉಮೇಶ ಕಾರಜೋಳ : ಗೋವಿಂದ ಕಾರಜೋಳ ಪುತ್ರ-ಬಿಜೆಪಿ
ಮಹೇಂದ್ರ ನಾಯಕ : ಹಿರಿಯ ಪೋಲಿಸ್ ಅಧಿಕಾರಿ-ಬಿಜೆಪಿ
ಮಂಜುನಾಥ ಮೀಸಿ : ಸಮಾಜ ಸೇವೆ-ಬಿಜೆಪಿ
ರಾಜು ಆಲಗೂರ : ಹಾಲಿ ಜಿಲ್ಲಾ ಅಧ್ಯಕ್ಷ-ಕಾಂಗ್ರೆಸ್
ಶ್ರೀನಾಥ್ ಪೂಜಾರಿ : ಯುವ ನಾಯಕ-ಕಾಂಗ್ರೆಸ್
ಮನೋಹರ್ ಐನಾಪುರ : ಮಾಜಿ ಶಾಸಕ-ಕಾಂಗ್ರೆಸ್
ಅಸಲಿಗೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚು. ಯಾಕಂದ್ರೆ ಹಾಲಿ ಬಿಜೆಪಿ ಸಂಸದರು ಇರೋದು. ಅಲ್ದೆ ಕಳೆದ ಮೂರು ಬಾರಿ ಗೆದ್ದಿರೋ ಕಾರಣ ಹಾಗೂ ಮೋದಿ ಅಲೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ ಎಲ್ಲರೂ ಒಂದು ಕೈ ನೋಡೇ ಬಿಡೋಣ ಅನ್ನೋ ನಿರ್ಧಾರಕ್ಕೆ ಬಂದಂತಿದೆ. ಆದ್ರೆ ಭಾಜಪ ಟಿಕೆಟ್ ಗ್ಯಾರಂಟಿ ಅಂತಲೇ ಮಹೇಂದ್ರಕುಮಾರ್ ನಾಯಕ್ ಸರ್ಕಲ್ ಇನ್ಸ್‌ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದಿದ್ದಾರೆ. ಇನ್ನೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಸುಪುತ್ರ ಉಮೇಶ ಕಾರಜೋಳ ಕೂಡಾ ಮತಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡಿದ್ದು ಟಿಕೇಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ, ಇದರ ಜೊತೆಗೆ ಮಂಜುನಾಥ ಮೀಸಿ ಕೂಡಾ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದು ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಮೂಡಿದೆ. ಈ ಕಡೆ ಕಾಂಗ್ರೆಸ್ ಪಕ್ಷದಲ್ಲೂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಉದ್ದಾಗಿದೆ.ಕಳೆದ ಮೂರು ಅವಧಿಗೆ ಹಾಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಸ್ಪರ್ಧೆ ಮಾಡಿ ಸೋಲು ಕಂಡಿದ್ದಾರೆ.ಹೀಗಾಗಿ ಈ ಸಲ ಹೊಸಬರಿಗೆ ಅವಕಾಶ ಜಾಸ್ತಿ. ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ, ಯುವ ನಾಯಕ ಶ್ರೀನಾಥ್ ಪೂಜಾರಿ, ಕಾಂತಾ ನಾಯಕ ಮಾಜಿ ಶಾಸಕ ಮನೋಹರ್ ಐನಾಪುರ ಕೂಡಾ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಸದ್ಯ ಕಾಂಗ್ರೆಸ್ ಪಾಳೆಯದಲ್ಲಿ ರಾಜು ಆಲಗೂರ ಪರವಾಗಿ ಉತ್ತಮ ಬೆಂಬಲ ಇದೆ. ಇದರ ಜೊತೆಗೆ ಯುವ ನಾಯಕ ಶ್ರೀನಾಥ್ ಪೂಜಾರಿ ನಿರಂತರ ಮತಕ್ಷೇತ್ರದಲ್ಲಿ ಓಡಾಟ ಮಾಡಿಕೊಂಡು ಬರುತ್ತಿದ್ದಾರೆ ಹೀಗಾಗಿ ಇವರ ಪರವಾಗಿ ಮತಕ್ಷೇತ್ರದಲ್ಲಿ ಹೆಚ್ಚಿನ ಒಲವು ಇದೆ ಆದರೆ ಯಾರಿಗೆ ಟಿಕೆಟ್ ಅನ್ನೋದು ಕಾಂಗ್ರೆಸ್ ಕಾರ್ಯಕರ್ತರಲ್ಲೇ ಗೊಂದಲ ಇದೆ. ಹೊರಗಿನ ಅಭ್ಯರ್ಥಿಗೆ ಮಣೆ ಹಾಕುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ: Lokasabha Election 2024: ಕರಾವಳಿಯಲ್ಲಿ ಬಿಜೆಪಿಯ ಭದ್ರಕೋಟೆ ಭೇದಿಸುತ್ತಾ ಕೈ ಪಡೆ?
ಒಟ್ನಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಾಜಕೀಯವು ಬಿಸಿಲಿನ ತಾಪದಷ್ಟೇ ಭಾರೀ ಕಾವನ್ನ ಏರಿಸಿದೆ. ಹಾಲಿ ಸಂಸದ ರಮೇಶ್ ಜಿಗಜಿಗಣಿ ಪರವಾಗಿ ಮತದಾರ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ ಅಂತ ಮೇಲ್ನೋಟಕ್ಕೆ ಕಾಣಿಸ್ತಿದೆ.ಆದ್ರೂ ಇನ್ನೂ ಎರಡು ತಿಂಗಳ ಕಾಲ ಟೈಮಿದೆ. ರಾಜಕೀಯ ಪಕ್ಷಗಳಲ್ಲಿ ಭಾರೀ ಬದಲಾವಣೆಗಳು ಜರುಗಬಹುದು. ಹೀಗಾಗಿ ಯಾವ ಪಕ್ಷಕ್ಕೆ ಮುಂದೆ ಹೇಗೆ ಲಾಭ ಮತ್ತು ನಷ್ಟ ಸಂಭವಿಸಬಹುದು ಅಂತ ಈಗಲೇ ನಿರ್ಧಾರ ಮಾಡೋದು ಕಷ್ಟಕರ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.