ಬೆಂಗಳೂರು: ಭ್ರಷ್ಟಾಚಾರದ ಕೂಪವೆಂಬಂತೆ ಬಿಂಬಿತವಾಗಿರುವ ಬಿಡಿಎ ಪ್ರಧಾನ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟರಿಗೆ ಶಾಕ್ ನೀಡಿದೆ.


COMMERCIAL BREAK
SCROLL TO CONTINUE READING

ಬಿಡಿಎನಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಲೋಕಾಯುಕ್ತಕ್ಕೆ ಸಾಲು-ಸಾಲು ದೂರುಗಳು ಬರುತ್ತಿದ್ದವು. ಹೀಗಾಗಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ನೇತೃತ್ವದ ಆರು ತಂಡವಿರುವ 35 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ನೇತೃತ್ವದ ತಂಡ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: “ಸುಳ್ಳಿನ ಕಾರ್ಖಾನೆಯ ಮತ್ತೊಂದು ಹೆಸರು ಬಿಜೆಪಿ”-ಡಿಕೆಶಿ ವಾಗ್ದಾಳಿ


ಬಿಡಿಎ ಪ್ರಧಾನ ಕಚೇರಿ ಸೇರಿ ನಗರದಲ್ಲಿರುವ ವಿವಿಧ ಉಪ ಬಿಡಿಎ ಕಚೇರಿಗಳ ಮೇಲೆ ದಾಳಿ ನಡೆಸಿ ಎಸಿಬಿಯು ಕಳೆದ ವರ್ಷ ಮತ್ತೆ ಬಲವರ್ಧನೆಗೊಂಡಿದ್ದ ಲೋಕಾಯುಕ್ತರಿಗೆ ತನಿಖಾ ವರದಿ ನೀಡಿತ್ತು‌. ಈ ಬಗ್ಗೆಯೂ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ. ಸದ್ಯ ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆ ಈ ದಾಳಿ ನಡೆಸಲಾಗಿದೆ‌.ದಾಳಿ ಸಂಬಂಧ ಸ್ಥಳಕ್ಕೆ ಇದೇ ಮೊದಲ ಬಾರಿಗೆ ಖುದ್ದು ಸ್ಥಳಕ್ಕೆ ಬಂದು ಲೋಕಾಯುಕ್ತ ಬಿ‌.ಎಸ್.ಪಾಟೀಲ್ ಬಂದು ಪರಿಶೀಲನೆ ನಡೆಸಿದರು.‌ ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಕಡತಗಳನ್ನ ಪರಿಶೀಲನೆ ನಡೆಸುತ್ತಿದ್ದು ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ನೀಡಲಾಗುವುದು ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ್ ಹೇಳಿದ್ದಾರೆ.


ಇದನ್ನೂ ಓದಿ: ಬಿಜೆಪಿ ಜಾತಿ ಆಧಾರದ ಮೇಲೆ ಸಿಎಂ ಆಯ್ಕೆ ಮಾಡಲ್ಲ: ಶಾಸಕ ರಘುಪತಿ ಭಟ್


ಪ್ರಮುಖವಾಗಿ ಬಿಡಿಎನಲ್ಲಿರುವ ನಗರ ಯೋಜನಾ ವಿಭಾಗ, ಎಂಜಿನಿಯರಿಂಗ್, ಭೂಸ್ವಾಧೀನ ಹಾಗೂ ಪರಿಹಾರ ಮತ್ತು ಸೈಟ್ ಪ್ಲಾನಿಂಗ್ ವಿಭಾಗಗಳ ಮೇಲೆ ದಾಳಿ ನಡೆಸಲಾಗಿದೆ‌‌. ಬೇರೆಯವರಿಗೆ ನೋಂದಣಿಯಾಗಿರುವ ನಿವೇಶನ ಮಾರಾಟ, ಪರಿಹಾರ ವಿತರಿಸಲು ವಿಳಂಬ, ಸೈಟ್ ಪ್ಲಾನಿಂಗ್ ಪಡೆಯಲು ಲಂಚ ಹೀಗೆ ಅನೇಕ ದೂರುಗಳು ಕೇಳಿ ಬಂದಿದ್ದರಿಂದ ಈ ದಾಳಿ ನಡೆಸಲಾಗಿದೆ‌.  ದಾಳಿ ಹಿನ್ನೆಲೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಆಗಿರುವ ಅಕ್ರಮ ಬಗ್ಗೆ ಇಂಚಿಂಚೂ ಮಾಹಿತಿ ಪರಿಶೀಲಿಸಿ‌ ವರದಿ ನೀಡಬೇಕು. ಯಾವ ವಿಭಾಗದಲ್ಲಿ ದೂರುದಾರರಿಗೆ ವಂಚನೆಯಾಗಿದೆ.. ಈ ಬಗ್ಗೆ ದೂರುದಾರರನ್ನು ಸಂಪರ್ಕಿಸಿ ಹೇಳಿಕೆ ಪಡೆದುಕೊಳ್ಳಿ. ಸಾರ್ವಜನಿಕರಿಂದ ಆಗಿರುವ ಅನ್ಯಾಯ ಮುಂದೆ ಆಗಬಾರದು. ರಾತ್ರಿ 12 ಗಂಟೆಯಾದರೂ ಪರ್ವಾಗಿಲ್ಲ.. ಕೂಲಂಕುಷವಾಗಿ ಪರಿಶೀಲಿಸಿ ದಾಳಿ ಮುಕ್ತಾಯಗೊಳಿಸಬೇಕು ಎಂದು ಅಧಿಕಾರಿಗಳಿಗೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ‌.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.