ಶಾಸಕ ಮಾಡಳ್ ವಿರೂಪಾಕ್ಷಪ್ಪ ಪುತ್ರನ ವಿರುದ್ಧ ಮತ್ತೆ ಎರಡು ಎಪ್ಐಆರ್ ದಾಖಲಿಸಿದ ಲೋಕಾಯುಕ್ತ
ಪ್ರಶಾಂತ್ ಮಾಡಾಳ್ ಹೆಸರಿನಲ್ಲಿ ಬೇನಾಮಿ ಆಸ್ತಿಯಿರುವ ಬಗ್ಗೆ ಆರೋಪಿ ಸಿದ್ದೇಶ್ ಮಾಹಿತಿ ನೀಡಿದ್ದು ಇದರ ಬಗ್ಗೆ ತನಿಖೆ ಮಾಡಲು ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಪ್ರಶಾಂತ್ ಮಡಾಳ್, ಸುರೇಂದ್ರ, ಹಾಗೂ ಸಿದ್ದೇಶ್ ಆರೋಪಿಗಳಾಗಿದ್ದಾರೆ.
ಬೆಂಗಳೂರು: ಲೋಕಾಯುಕ್ತ ಪೊಲೀಸರಿಂದ ಶಾಸಕರ ಪುತ್ರನ ಟ್ರ್ಯಾಪ್ ಪ್ರಕರಣದಲ್ಲಿ ಮತ್ತೆರಡು ಎಫ್ಐಆರ್ ದಾಖಲಾಗಿದೆ. ಟ್ರ್ಯಾಪ್ ಪ್ರಕರಣವಲ್ಲದೆ ಇನ್ನೆರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದು, ಆರೋಪಿ ಸಿದ್ದೇಶ್ ಬಳಿ ಸಿಕ್ಕ 60 ಲಕ್ಷ ಹಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ.
ಪ್ರಶಾಂತ್ ಮಾಡಾಳ್ ಹೆಸರಿನಲ್ಲಿ ಬೇನಾಮಿ ಆಸ್ತಿಯಿರುವ ಬಗ್ಗೆ ಆರೋಪಿ ಸಿದ್ದೇಶ್ ಮಾಹಿತಿ ನೀಡಿದ್ದು ಇದರ ಬಗ್ಗೆ ತನಿಖೆ ಮಾಡಲು ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಪ್ರಶಾಂತ್ ಮಡಾಳ್, ಸುರೇಂದ್ರ, ಹಾಗೂ ಸಿದ್ದೇಶ್ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ- ಲೋಕಾಯುಕ್ತರು ತೆಗೆದುಕೊಂಡು ಹೋಗಿದ್ದು ಭ್ರಷ್ಟಾಚಾರದ ಹಣವಲ್ಲ, ನಮ್ಮ ಹಣ
ಮತ್ತೊಂದು ಎಫ್ ಐ ಆರ್ ಟ್ರಾಪ್ ವೇಳೆ ಟೆಂಡರ್ ಪಡೆಯಲು 90 ಲಕ್ಷ ಹಣ ತಂದಿದ್ದ ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಪ್ರಶಾಂತ್ ಮಾಡಾಳ್, ಅಲ್ಬರ್ಟ್ ನಿಕೋಲಸ್, ಗಂಗಾಧರ್ ಹೆಚ್, ದೀಪಕ್ ಜಾಧವ್, ಅರೋಮಸ್ ಕಂಪನಿ ಹಾಗೂ ಕೆ ಎಸ್ ಡಿಎಲ್ ಅಧಿಕಾರಿ ಸಿಬ್ಬಂದಿಯನ್ನ ಆರೋಪಿಗಳನ್ನಾಗಿ ತೋರಿಸಲಾಗಿದೆ.
ಇದನ್ನೂ ಓದಿ- ʼಮಾಡಾಳ್ ಲೋಕಾಯುಕ್ತ ದಾಳಿʼ... 18 ಗಂಟೆ ಶೋಧ, 8.12 ಕೋಟಿ ಹಣ ಸೀಜ್..!
ಆದರೆ ಒಂದು ಕೇಸ್ ನಲ್ಲಿ ಎಫ್ ಐ ಆರ್ ಆಗಿ ಟ್ರಾಪ್ ಆಗಿದ್ದು, ಈ ಪ್ರಕರಣದಲ್ಲಿ ಶಾಸಕರು ಎ1 ಆರೋಪಿಯಾಗಿದ್ದು ಉಳಿದ ಆರೋಪಿಗಳು ಅರೆಸ್ಟ್ ಆಗಿ ಜೈಲು ಸೇರಿದ್ದಾರೆ. ಹೀಗಿರುವಾಗ ಮತ್ತೆರಡು ಎಫ್ಐಆರ್ ಅವಶ್ಯಕತೆ ಇತ್ತಾ? ಇದೇ ಪ್ರಕರಣದಲ್ಲಿ ತನಿಖೆ ಮಾಡಬೇಕಿತ್ತು ಅನ್ನೋದು ಕಾನೂನು ತಜ್ಞರ ಅಭಿಪ್ರಾಯ. ಆದ್ರೆ ಸದ್ಯ ಎಫ್ ಐ ಆರ್ ಗಳಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಆರೋಪಿ ಮಾಡದ ಲೋಕಾಯುಕ್ತ ಪೊಲೀಸರ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.