ಈತ ಬಿಬಿಎಂಪಿ ಅಧಿಕಾರಿನಾ..? ಇಲ್ಲಾ ಕುಬೇರನಾ...? : ಸಂಪತ್ತು ಕಂಡು ಲೋಕಾ ಅಧಿಕಾರಿಗಳು ಶಾಕ್
ಕಂತೆ ಕಂತೆ ಹಣದ ರಾಶಿ, ಪಳ ಪಳ ಅಂತ ಹೊಳೆಯುತ್ತಿರುವ ಬೆಳ್ಳಿ ಬಂಗಾರಗಳು, ಪಕ್ಕದಲ್ಲಿಯೇ ಫಾರಿನ್ ಕರೆನ್ಸಿ, ಬೇಕಾದಷ್ಟು ಲೆಕ್ಕದ ಪತ್ರಗಳು, ಆಸ್ತಿ ಪತ್ರಗಳು. ಇದೆಲ್ಲವನ್ನು ನೋಡ್ತಾಯಿದ್ರೆ ಯಲಹಂಕ ಬಿಬಿಎಂಪಿಯಲ್ಲಿ ಟೌನ್ ಪ್ಲ್ಯಾನಿಂಗ್ ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಗಂಗಾಧರಯ್ಯ, ಅಲ್ಲಿ ಕೆಲಸ ಮಾಡ್ತಾನೋ ಅಥವಾ ಬರೀ ವಸೂಲಿ ಮಾಡ್ತಾನೋ ಅಂತ ಅನುಮಾನ ಬಂದೆ ಬರುತ್ತೆ.
ಬೆಂಗಳೂರು : ಆತ ಹೇಳಿಕೋಳ್ಳೋದಕ್ಕೆ ಸರ್ಕಾರಿ ನೌಕರ. ಆದ್ರೆ ಆತನ ಲೈಫ್ ಸ್ಟೈಲ್, ಆತನ ಬಳಿಯಿರುವ ಹಣ ಸಂಪತ್ತು ಮಾತ್ರ ಯಾವ ಕುಬೇರನಿಗು ಕಮ್ಮಿ ಇಲ್ಲ ಬಿಡಿ. ಆತನ ಮನೆಗೆ ರೇಡ್‌ಗೆ ಬಂದಂತಹ ಅಧಿಕಾರಿಗಳು ಈತನ ಸಂಪತ್ತನ್ನು ನೋಡಿ ಒಮ್ಮೆಲೆ ನೋಡಿ ಬೆಚ್ಚಿ ಬಿದ್ದಿದ್ದಾರೆ.
ಕಂತೆ ಕಂತೆ ಹಣದ ರಾಶಿ, ಪಳ ಪಳ ಅಂತ ಹೊಳೆಯುತ್ತಿರುವ ಬೆಳ್ಳಿ ಬಂಗಾರಗಳು, ಪಕ್ಕದಲ್ಲಿಯೇ ಫಾರಿನ್ ಕರೆನ್ಸಿ, ಬೇಕಾದಷ್ಟು ಲೆಕ್ಕದ ಪತ್ರಗಳು, ಆಸ್ತಿ ಪತ್ರಗಳು. ಇದೆಲ್ಲವನ್ನು ನೋಡ್ತಾಯಿದ್ರೆ ನಮ್ಗೆ ಬ್ಯಾಂಕ್ ಲಾಕರ್ ನಿಂದ ಇದನ್ನು ತೆಗೆದು ಹೊರಗಡೆ ಇಟ್ಟಿದ್ದಾರಾ ಅಂತ ಅನ್ನಿಸತ್ತೆ ಅಲ್ವಾ..!! ಹಾಗೇನಾದ್ರು ಅಂದುಕೊಂಡ್ರೆ ಅದು ಸುಳ್ಳು ಬಿಡಿ.. ಇದೆಲ್ಲಾ ಒಬ್ಬ ಸರ್ಕಾರಿ ನೌಕರನ ಮನೆಯಲ್ಲಿ ಸಿಕ್ಕಂತಹ ವಸ್ತುಗಳು.
ಇದನ್ನೂ ಓದಿ: ಕೋಲಾರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ
ಹೌದು.. ಈ ಫೋಟೋದಲ್ಲಿರುವ ಈ ಪುಣ್ಯಾತ್ಮನದ್ದೆ ನೋಡಿ ಈ ಎಲ್ಲಾ ಸಂಪತ್ತು. ಈತನ ನಾಮಧ್ಯೇಯ ಗಂಗಾಧರಯ್ಯ. ಯಲಹಂಕ ಬಿಬಿಎಂಪಿಯಲ್ಲಿ ಟೌನ್ ಪ್ಲ್ಯಾನಿಂಗ್ ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಾನೆ ಈ ಗಂಗಾಧರಯ್ಯ. ಅಲ್ಲಿ ಕೆಲಸ ಮಾಡ್ತಾನೋ ಅಥವಾ ಬರೀ ವಸೂಲಿ ಮಾಡ್ತಾನೋ ಅಂತ ನಿಜಕ್ಕು ಈ ಸಂಪತ್ತನ್ನು ನೋಡಿದ್ಮೇಲೆ ಅನುಮಾನ ಬಂದೆ ಬರುತ್ತೆ.
ಇಂದು ಬೆಳ್ಳಂಬೆಳಿಗ್ಗೆ ಆರು ಘಂಟೆಗೆ ಕುರುಬರಹಳ್ಳಿಯಲ್ಲಿನ ಗಂಗಾಧರಯ್ಯನ ಮನೆಗೆ ಎಂಟ್ರಿ ಕೊಟ್ಟಿದ್ದ ಲೋಕಾಯುಕ್ತ ಅಧಿಕಾರಿಗಳು ನಿದ್ದೆಯ ಮಂಪರಿನಲ್ಲಿದ್ದ ಈತನನ್ನು ಎಚ್ಚರಿಸಿದ್ರು. ಈತನ ಸ್ವಂತ ಬಂಗಲೆಯಾದ ಕುರುಬರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಯಲಹಂಕದಲ್ಲಿ ಒಟ್ಟು ಮೂರು ಕಡೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ರು. ಇನ್ನು ಈತನ ಮೇಲೆ ಸಾಕಷ್ಟು ದೂರುಗಳು ಸಹ ಕೇಳಿ ಬರುತ್ತಲೇ ಇತ್ತಂತೆ. ಭ್ರಷ್ಟಾಚಾರ ಅನ್ನೋದನ್ನ ಈತ ತನ್ನ ಜೇಬಿನಲ್ಲಿಯೇ ಇರಿಸಿದ್ದ ಅಂತಲು ಹೇಳ್ತಾರೆ.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ: ಹಲವು ಕಡೆ ಲೋಕಾಯುಕ್ತ ದಾಳಿ
ಇದ್ರಿಂದ ಇಂದು ಬರೋಬ್ಬರಿ ಮೂರು ಕಡೆಗಳಲ್ಲಿಯು ಲೋಕಾಯುಕ್ತ ಎಸ್ಪಿ ಅಶೋಕ್ ನೇತೃತ್ವದಲ್ಲಿ ಸುಮಾರು 20 ಕ್ಕು ಹೆಚ್ಚು ಅಧಿಕಾರಿಗಳು ರೇಡ್ ಮಾಡಿದ್ರು. ದಾಳಿ ವೇಳೆ ಕೋಟ್ಯಾಂತರ ಮೌಲ್ಯದ ಆಸ್ತಿಪಾಸ್ತಿಗಳು ಪತ್ತೆಯಾಗಿದ್ದು, ಇದು ಎಲ್ಲಾರು ಹುಬ್ಬೇರಿಸುವಂತಿದೆ. ಒಟ್ಟು ಬೆಂಗಳೂರಿನಲ್ಲಿ 12 ಫ್ಲಾಟ್‌ಗಳು ಮತ್ತು ಮನೆಗಳು, ಯಲಹಂಕ, ಜೆಸಿ ನಗರ ಮತ್ತು ಹೆಬ್ಬಾಳದಲ್ಲಿ ಮನೆ ಮತ್ತು ಫ್ಲ್ಯಾಟ್ ಹೊಂದಿರುವ ಗಂಗಾಧರಯ್ಯ, ನೆಲಮಂಗಲದಲ್ಲಿ 1.5 ಕೋಟಿ ಮೌಲ್ಯದ 5 ಎಕರೆ ಜಮೀನು, 3.65 ಕೋಟಿ ಮೌಲ್ಯದ ಮಲ್ಲೇಶ್ವರಂನಲ್ಲಿರುವ ನಿವೇಶನ, 1 ಕೋಟಿ ಮೌಲ್ಯದ ಚಿನ್ನಾಭರಣ, 1ಕೋಟಿ 40 ಲಕ್ಷ ಹಣದ ಒಡೆಯ ಈ ಅಧಿಕಾರಿ.
ಹೀಗೆ ಅನೇಕ ಬೇನಾಮಿ ಆಸ್ತಿಯನ್ನು ಸಹ ಈತ ಹೊಂದಿದ್ದಾನೆ ಎಂದು ಅಂದಾಜಿಸಲಾಗಿದೆ. ಇನ್ನು ಗಂಗಾಧರಯ್ಯನನ್ನು ಬ್ಯಾಟರಾಯನಪುರ ಚುನಾವಣೆಯ ಸಲುವಾಗಿಯು ಸಹ ಕೆಲ ಕೆಲಸ ಕಾರ್ಯಕ್ಕಾಗಿ ನೇಮಕ ಮಾಡಲಾಗಿದ್ದು, ಆತನ ಕಾರಿನ ಮೇಲೆ ಚುನಾವಣೆಯ ಸ್ಟಿಕ್ಕರ್ ಸಹ ಅಂಟಿಸಲಾಗಿದೆ. ಇದ್ರಿಂದ ಇನ್ನಷ್ಟು ಅನುಮಾನಗಳು ಸಹ ವ್ಯಕ್ತವಾಗುತ್ತಿದೆ. ಅದೇನೆ ಇದ್ರು ಸಹ ತಿನ್ನೋದಕ್ಕೆ ಒಂದು ಇಡಿ ಅನ್ನ ಸಾಕು ಆದ್ರೆ ಇಷ್ಟೆಲ್ಲಾ ಸಂಪತ್ತು ಮಾಡಿ ಅದೆಲ್ಲಿಗೆ ಹೊತ್ತೋಯ್ತಾರೋ ಗೊತ್ತಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.