ಬೆಂಗಳೂರು : 2023 ಚುನಾವಣೆಗೂ ಮುನ್ನ ತಂತ್ರಜ್ಞಾನ ಹಾಗೂ ಹೆದ್ದಾರಿ ಬಳಕೆಯಿಂದ ನಗರದ ಟ್ರಾಫಿಕ್ ಸಮಸ್ಯೆಗೆ ದೀರ್ಘಾವಧಿ ಪರಿಹಾರ ಮಾಡಿ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ, ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಸಭೆಯ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಮಾತಾನಾಡಿ, ಗಡ್ಕರಿ ಜೊತೆ ಬೆಂಗಳೂರಿನ ರಸ್ತೆ ಮತ್ತು ಟ್ರಾಫಿಕ್ ವಿಚಾರವಾಗಿ ಚರ್ಚೆ ಮಾಡಿದ್ದೇವೆ,ಜನದಟ್ಟಣೆ ವಿಚಾರವಾಗಿ ಅನೇಕ ಚರ್ಚೆ ಮಾಡಿದ್ದೇವೆ.ನ್ಯಾಷನಲ್ ಹೈವೇ,ರಾಜ್ಯ ಲೋಕೋಪಯೋಗಿ ಇಲಾಖೆ,ಬಿಬಿಎಂಪಿ,ಬಿಡಿಎ ಅನೇಕ ಕಾಮಗಾರಿ ಮಾಡುತ್ತದೆ.ಮಾಸ್ಟರ್ ಪ್ಲಾನ್ ಅಪ್ರೋಚ್‌ನಲ್ಲಿ ಹೋದರೇ ಅನೇಕ ಸಮಸ್ಯೆ ಬಗೆ ಹರಿಸಬಹದು.ಹಾಗಾಗಿ ಎಲ್ಲರನ್ನೂ ಒಳಗೊಂಡು ಒಂದು ಅಥಾರಿಟಿ ರಚಿಸಬೇಕು ಎಂದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 5 ದಿನ ಮಳೆರಾಯನ ಅರ್ಭಟ : 18 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ


ಏಕ ಅಧೀನ ಪ್ರಾಧಿಕಾರ ನಿರ್ಮಾಣ:


ಬೆಂಗಳೂರಿನ ಸುತ್ತಮುತ್ತಲಿನ ಟ್ರಾಫಿಕ್ ಕಡಿಮೆ ಮಾಡಲು ಒಂದು ಅಥಾರಿಟಿ ನಿರ್ಮಾಣ ಮಾಡ್ತೀವಿ,ಒಂದೇ ಅಥಾರಿಟಿಯಡಿ ಸಂಬಂಧಪಟ್ಟ ಎಲ್ಲಾ‌ ಇಲಾಖೆಗಳು ಬರುತ್ತದೆ.ಇದರ ಅಡಿಯಲ್ಲಿ ನ್ಯಾಷನಲ್ ಹೈವೆಗಳಿಗೆ ಒಂದುಕೊಂದು ಕನೆಕ್ಟ್ ಮಾಡಿಕೊಡುತ್ತೇವೆ ಎಂದು ಗಡ್ಕರಿ ಅವರು ಒಪ್ಪಿಕೊಂಡಿದ್ದಾರೆ.ರಿಂಗ್‌ರೋಡ್‌ಗಳನ್ನು ಮಾಡಲು ಚಿಂತನೆ ನಡೆಸಿದ್ದೇವೆ.ವಿನೂತನವಾಗಿ ತಂತ್ರಜ್ಞಾನ ಬಳಿಸಿಕೊಂಡು ಟ್ರಾಫಿಕ್ ಕಡಿಮೆ ಮಾಡಲು ಚಿಂತನೆ‌ ನಡೆಸಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.


ಸಂಚಾರ ದಟ್ಟನೆ ತಗ್ಗಿಸಲು ಯೋಜನೆಯಲ್ಲಿ ಏನಿರಲಿದೆ?


ಏಕ ಅಧೀನ ಪ್ರಾಧಿಕಾರ ಸ್ಥಾಪಿಸುವ ಮುಖ್ಯಮಂತ್ರಿ ಉದ್ದೇಶ, ನಗರ ಸಾರ್ವಜನಿಕ ಸಂಚಾರಕ್ಕೆ ಬಳಕೆ ಆಗುವ ಬಸ್, ಮೆಟ್ರೋ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನ ಒಂದೇ ಪ್ರಾಧಿಕಾರದಡಿ ನಿರ್ವಹಣೆ ಮಾಡಲಾಗುವುದು. ಇದಲ್ಲದೆ ಟೆಕ್ ಪಾರ್ಕ್ ಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಆಗುತ್ತಿರುವ ವಸ್ತುಸ್ಥಿತಿ ಸಮಸ್ಯೆಗಳ ಬಗ್ಗೆ ಪರಿಹಾರ ನೀಡುವ ಗುರಿಯನ್ನು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.


ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 5 ದಿನ ಮಳೆರಾಯನ ಅರ್ಭಟ : 18 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ


ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ವಿಸ್ತರಣೆ: 


ನಗರದಲ್ಲಿ ಕೆಲ ಸಂಸ್ಥೆಗಳ ಸುತ್ತಮುತ್ತಲು ಮೆಟ್ರೋ ನಿಲ್ದಾಣ ಇರುವ ಹಿನ್ನಲೆ, ಹೆಚ್ಚು ಪ್ರಯಾಣಿಕರು ಮೆಟ್ರೋ ಸೌಲಭ್ಯ ಬಳಕೆ ಮಾಡಲು ಅವರಿಗೆ ಪಾರ್ಕಿಂಗ್ ಸೌಲಭ್ಯ ಬೇಕು ಹೇಗಾಗಿದೆ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ವ್ಯವಸ್ಥೆಯನ್ನ ವಿಸ್ತಾರ ಮಾಡಲು ಗಡ್ಕರಿ ಸೂಚಿಸಿದ್ದಾರೆ.


ರಾಷ್ಟ್ರೀಯ ಹೆದ್ದಾರಿ ಬಳಕೆ- ಹೊರ  ವರ್ತುಲ ರಸ್ತೆ ನಿರ್ಮಾಣ:


ಟೆಕ್ ಪಾರ್ಕ್ ಗಳಿಗೆ ಸಮೀಪ ಇರುವ ರಾಷ್ಟ್ರೀಯ ಹೆದ್ದಾರಿಯನ್ನ ಬಳಕೆ ಮಾಡುವ ಜೊತೆಗೆ ಸರ್ಕಾರದ ಮುಂದಿರುವ ಹೊರ  ವರ್ತುಲ ರಸ್ತೆ ನಿರ್ಮಾಣ ಮಾಡಲು ಸೂಚಿಸಿದ್ದು, "ರಾಷ್ಟ್ರೀಯ ಹೆದ್ದಾರಿ ಇಂದ ಟೆಕ್ ಪಾರ್ಕ್ ಗಳಿಗೆ ರಸ್ತೆ ಸಂಪರ್ಕ ಒದಗಿಸಿದರೆ ಸಂಚಾರ ದಟ್ಟನೆ ಕ್ಷಿನಿಸುತ್ತದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಗಡ್ಕರಿ, ಆದಷ್ಟು ಬೇಗ ವರ್ತುಲ ರಸ್ತೆ ಕಾಮಗಾರಿ ಮುಗಿಸಿ ಎಂದು ಸಲಹೆ ನೀಡಿದರು.


ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೆಚ್ವಿಸಿ:


ನಗರದ ಡೈಮೆಂಡ್ ಡಿಸ್ಟ್ರಿಕ್ ಎಂದು ಕರೆಸಿಕೊಳ್ಳುವ ಭಾಗಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೆಚ್ಚಿಸಿ, ಈ ಮೂಲಕ ಪ್ರಯಾಣಿಕರು ಸ್ವಂತ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಆಯ್ದುಕೊಳ್ಳುತ್ತಾರೆ. ಈ ಮೂಲಕ ಒಂದು ಬಸ್ ಅಥವಾ ಮೆಟ್ರೋ ನಿಂದ ಅನೇಕರು ಏಕ ಕಾಲಕ್ಕೆ ಸಂಚಾರ ಮಾಡಬಹುದು. ಸದ್ಯ ಮಾರತ್ತಹಳ್ಳಿ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇನ್ನಷ್ಟು ಬೇಗ ಕಾಮಗಾರಿ ಪೂರ್ಣ ಮಾಡಿ ಎಂದು ಸೂಚನೆ ನೀಡಿದರು. ಒಟ್ಟಾರೆ ಸಭೆಯಲ್ಲಿ ಕೆಲ ಸಲಹೆ ಪಡೆದ ರಾಜ್ಯ ಸರ್ಕಾರ, ಇಷ್ಟರಮಟ್ಟಿಗೆ ಸಂಚಾರ ದಟ್ಟನೆ ಕಡಿಮೆ ಮಾಡಲು ಶ್ರಮಿಸುತ್ತದೆ ಎಂದು ಕಾದುನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.