ಬೆಂಗಳೂರು: ಕಳೆದ ಒಂದು ತಿಂಗಳಿಂದ ಸೈಲೆಂಟ್ ಆಗಿದ್ದ ಧರ್ಮ‌ ದಂಗಲ್ ಮತ್ತೆ ಆರಂಭವಾಗಿದೆ. ಅನಧಿಕೃತ ಮಸೀದಿ ಮೇಲೆ ಇರುವ ಲೌಡ್ ಸ್ಪೀಕರ್‌ ತೆರವಿಗೆ ಸರ್ಕಾರಕ್ಕೆ ಕೊಟ್ಟ ಡೆಡ್ಲೈನ್ ಮುಗಿದ್ದು, ಇದೀಗ ಮತ್ತೆ ಹಿಂದೂ ಸಂಘಟನೆಗಳು ಹೋರಾಟಕ್ಕೆ‌ ಇಳಿದಿವೆ.ನಾಳೆ ಬೆಳಗ್ಗೆ 5:30ಕ್ಕೆ ಮನೆ, ದೇವಸ್ಥಾನಗಳಲ್ಲಿ ರಾಮಜಪ, ಹನುಮಾನ್ ಚಾಲೀಸ್ ಮಂತ್ರ ಜಪ ಮೂಳಗಲಿದೆ. ಸರ್ಕಾರಕ್ಕೆ ಸೆಡ್ಡು ಹೊಡೆದು ಆಝಾನ್ ವಿರುದ್ಧ ಶ್ರೀರಾಮಸೇನೆಯು ಅಭಿಯಾನವನ್ನು ಚುರುಕುಗೊಳಿಸಿದೆ.


COMMERCIAL BREAK
SCROLL TO CONTINUE READING

ಮೇ-3ಕ್ಕೆ ಅನಧಿಕೃತ ಮಸೀದಿ ಮೇಲೆ ಇರುವ ಲೌಡ್ ಸ್ಪೀಕರ್ ತೆಗೆಯಲು ಸರ್ಕಾರಕ್ಕೆ ಮನವಿ ಮಾಡಿದ್ರು‌. ಆದ್ರೆ ಇದುವರೆಗೆ ಸರ್ಕಾರ ಮಾತ್ರ ಲೌಡ್ ಸ್ಪೀಕರ್ ತೆರವುಗೊಳಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಹಿಂದೂ ಸಂಘಟನೆಗಳು ಕಿಡಿಕಾರಿವೆ.ಇದೆ ಕಾರಣಕ್ಕೆ ಮತ್ತೆ ಕೆರಳಿದ ಹಿಂದೂ ಸಂಘಟನೆಗಳು ಆಝಾನ್ ಗೆ ಟಕ್ಕರ್ ಕೊಡಲು ಮುಂದಾಗಿವೆ.Car Price Rise: TATAದ ಈ ಅಗ್ಗದ 2 ಕಾರುಗಳು ಮತ್ತಷ್ಟು ದುಬಾರಿ..!


ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಸವಾಲು.!


ಶ್ರೀರಾಮ ಸೇನೆ ಸೇರಿದಂತೆ ಆನೇಕ ಹಿಂದೂ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಕೆಂಡ ಕಾರ್ತಿವೆ.ಕೊಟ್ಟ ಡೆಡೈಲೈನ್ ಅಂತ್ಯವಾಗಿದ್ದು, ನಾಳೆ ಮನೆ, ದೇವಸ್ಥಾ‌ನಗಳಲ್ಲಿ ಬೆಳಗ್ಗೆ 5 ಗಂಟೆಗೆ ರಾಮಜಪ ಹನುಮಾನ್ ಚಾಲೀಸ್, ರಾಮ ಮಂತ್ರ ಮೊಳಗಲಿದೆ. ಆದ್ರೆ ಪೊಲೀಸರ ಭಯದಿಂದ ನಾಳೆ ನಡೆಯುವ ಕಾರ್ಯಕ್ರಮ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯನ್ನು ಬಿಟ್ಟು ಕೊಡದೆ ಗೌಪ್ಯವಾಗಿ ಇಟ್ಟಿದ್ದಾರೆ.


ಇನ್ನೂ ಬಗ್ಗೆ ಮಂಡ್ಯದಲ್ಲಿ ಮಾತನಾಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ರಾಜ್ಯದ ಸಾವಿರ ದೇವಾಲಯಗಳ ಸಂಪರ್ಕ ಆಗಿದೆ. ದೇವಾಲಯದ ಅರ್ಚಕರು, ಟ್ರಸ್ಟ್‌ನವರು ಸಂತೋಷದಿಂದಲೇ ಒಪ್ಪಿದ್ದಾರೆ.ಬೆಳಿಗ್ಗಿನ ಜಾವ ಭಕ್ತಿ ಗೀತೆ, ಹನುಮಾನ್ ಚಾಲೀಸಾ ಹಾಕಲು ಒಪ್ಪಿಗೆ ನೀಡಿದ್ದಾರೆ.ಎಲ್ಲರಲ್ಲೂ ಸಂತೋಷ ಇದೆ, ಆಕ್ರೋಶವೂ ಇದೆ. ಸರ್ಕಾರ ಯಾವ ಕ್ರಮವನ್ನು ತೆಗೆದುಕೊಳ್ತಿಲ್ಲ, ಇದರಿಂದ ಮುಸ್ಲಿಂರ ಉದ್ಧಟತನ ಹೆಚ್ಚಾಗಿದೆ. ಹಿಂದೂಗಳಿಂದ ಗೆದ್ದ ಯೋಗಿ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ.ನಮ್ಮ ರಾಜ್ಯದಲ್ಲಿ ಯಾಕೆ ಆ ಕೆಲಸ ಆಗುತ್ತಿಲ್ಲ.ಯೋಗಿ ರೀತಿ ಗಟ್ಸ್ ಬೊಮ್ಮಾಯಿ, ಆರಗ ಅವರು ಯಾಕೆ ತೋರಿಸುತ್ತಿಲ್ಲ ಎಂದು ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.


ನಾಳೆ ಬೆಳಗ್ಗೆ 5ಗಂಟೆಗೆ ರಾಮಜಪ-ಬೈಕ್ ಗಳ ಹಾರನ್ ಮೂಲಕ‌ ಚಾಲನೆ


ಇತ್ತ ಬೆಂಗಳೂರಿನ ರಾಜಾಜಿನಗರ ಕೆಂಪೇಗೌಡ ಸಮುದಾಯಭವನದಲ್ಲಿ ಜನ ಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಅಧಿವೇಶನ ಸಭೆ ನಡೆಸಲಾಯ್ತು.ಧರ್ಮ ಹಾಗೂ ರಾಷ್ಟ್ರದ ರಕ್ಷಣೆಗಾಗಿ ಸಂಘಟಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಭಾರತ ದೇಶ ಹಿಂದೂ ರಾಷ್ಟ್ರ ಮಾಡಲು ಇಂದು ಚಿಂತನ-ಮಂಥನ ನಡೆಸಿದರು.


ಇದನ್ನೂ ಓದಿ : ಸಿದ್ದರಾಮಯ್ಯ ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ಮಜಾವಾದಿ ರಾಜಕಾರಣಿ: ಬಿಜೆಪಿ


ಈ ವೇಳೆ ಮಾತನಾಡಿದ ಪ್ರಶಾಂತ್ ಸಂಬರಗಿ, ಕಾನೂನು ಬಾಹಿರವಾಗಿ ಅನಧಿಕೃತ ಮಸೀದಿ ಮೇಲೆ ಲೌಡ್ ಸ್ಪೀಕರ್ ವಿರುದ್ಧ ಒಂದು ಸಾವಿರ ಪೆಟಿಷನ್ ದೂರು ಕೊಟ್ಟಿದ್ದೇವೆ.ಆದ್ರೆ ಹಿಂದೂ ದೇವಾಲಯಗಳು ಸರ್ಕಾರದ ಕಂಟ್ರೋಲ್ ನಲ್ಲಿವೆ. ಅಲ್ಲಿ ನಮಗೆ ಪರವಾನಿಗೆ ಸಿಕ್ಕಿಲ್ಲ.ನಮ್ಮದು ಕಾನೂನು ಚೌಕಟ್ಟಿನಲ್ಲಿ ಬದುಕುವ  ಸಮಾಜ.ನೂರು ಜನ ಸೇರಿ ಓಂಕಾರ, ರಾಮ ಜಪ, ಹನುಮಾನ್ ಚಾಲೀಸ್ ಜಪ ಮಾಡುವ ಮೂಲಕ ಅಭಿಯಾನ ಆರಂಭ ಮಾಡುತ್ತೇವೆ.ಈ ಹೋರಾಟವನ್ನು ಯಾವ ರೀತಿ ಮಾಡಬೇಕು ಎಂಬುದನ್ನು ಬ್ಲೂಪ್ರಿಂಟ್ ರೆಡಿ ಮಾಡಿದ್ದೇವೆ.ಯುವಕರು ಮೋಟಾರ್ ಬೈಕ್ ನಲ್ಲಿ ಹಾರನ್ ಹೊಡೆಯುವ ಮೂಲಕ ಆರಂಭಿಸುತ್ತೇವೆ ಎಂದರು.


ಒಟ್ನಲ್ಲಿ ಹಿಂದೂ ಸಂಘಟನೆಗಳು ಧ್ವನಿವರ್ಧಕ ಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕೆಂಬುದು ಪ್ರಮುಖ ಆಗ್ರಹ.ಆದ್ರೆ ಮುಸ್ಲಿಂ ಸಂಘಟನೆಗಳು ಇಂತಹ ಪ್ರಚೋದನಾಕಾರಿ ಬೆಳವಣಿಗೆ ಸರಿಯಲ್ಲ ಎನ್ನುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.